Zodiac Sign: ಮಗುವನ್ನ ಬೆಳೆಸೋಕೆ ಸಂಗಾತಿಗೆ ಸಹಕಾರ ನೀಡೋದ್ರಲ್ಲಿ ಇವ್ರು ಗ್ರೇಟ್

By Suvarna News  |  First Published Jan 6, 2023, 5:38 PM IST

ಪಾಲಕರಾಗುವುದು ಸುಲಭವಲ್ಲ. ಮಗುವಿನ ಲಾಲನೆ-ಪಾಲನೆಯೊಂದಿಗೆ ಮನೆ, ಸಂಗಾತಿಯಾಗಿ ಜವಾಬ್ದಾರಿ, ಕೆಲಸಕಾರ್ಯಗಳನ್ನು ನಿರ್ವಹಿಸಬೇಕಾಗಿ ಬರುತ್ತದೆ. ಮಗುವನ್ನು ಬೆಳೆಸುವಲ್ಲಿ ಸಂಗಾತಿಗೆ  ಸಹಯೋಗ ನೀಡುವುದು ಕೆಲವೇ ರಾಶಿಗಳ ಜನರಿಗೆ ಸುಲಭಸಾಧ್ಯ.
 


ಹಾಯಾಗಿ ಜೋಡಿ ಹಕ್ಕಿಗಳಾಗಿ ಮೆರೆಯುತ್ತಿದ್ದವರು ಒಂದು ದಿನ ಪಾಲಕರಾಗುತ್ತಾರೆ. ಪುಟ್ಟ ಮಗುವಿನ ಅಪ್ಪ-ಅಮ್ಮನಾಗಿ ಭಡ್ತಿ ಪಡೆಯುತ್ತಾರೆ. ಆ ಮನೆಯ ಚಿತ್ರಣವೇ ಬದಲಾಗುತ್ತದೆ. ಅಮ್ಮನಿಗೆ ಸಾಕುಸಾಕಾಗಬಹುದು ಅಥವಾ ಸಂಗಾತಿಯ ಸಹಾಯ ದೊರೆತರೆ ಮಗುವಿನ ಲಾಲನೆ ಪಾಲನೆ ಸುಲಭವೆನ್ನಿಸಬಹುದು. ಅಪ್ಪ ಅಥವಾ ಅಮ್ಮನಾದ ಮಾತ್ರಕ್ಕೆ ಎಲ್ಲರಲ್ಲೂ ಆ ಪಾಲಕತನದ ಜವಾಬ್ದಾರಿ ಮೂಡುವುದಿಲ್ಲ. ಉತ್ತಮ ಪಾಲಕರಾಗಲು ಎಲ್ಲರಿಂದಲೂ ಸಾಧ್ಯವೂ ಇಲ್ಲ. ಕೆಲವೇ ರಾಶಿಗಳ ಜನ ಮಾತ್ರ ಉತ್ತಮ ಪಾಲಕರಾಗುವ ಜತೆಗೆ ಉತ್ತಮ ಸಂಗಾತಿಯೂ ಆಗಿರುತ್ತಾರೆ. ಗ್ರೇಟ್‌ ಪೇರೆಂಟಿಂಗ್‌ ಪಾರ್ಟನರ್‌ ಎನ್ನಿಸಿಕೊಳ್ಳಲು ಎಲ್ಲರೂ ಆಸೆಪಡಬಹುದು. ಆದರೆ ಖಂಡಿತವಾಗಿ ಆ ಗುಣ ಕೆಲವೇ ರಾಶಿಗಳಲ್ಲಿ ಕಂಡುಬರುತ್ತದೆ. ಕೆಲವು ಪಾಲಕರನ್ನು ನೋಡಿರಬಹುದು, ಅವರು ಮಗುವಿನ ಲಾಲನೆ-ಪಾಲನೆಯಿಂದ ದೂರವುಳಿಯುತ್ತಾರೆ. ಮನೆಯಲ್ಲಿ ಹಿರಿಯರಿದ್ದರೆ ಅದನ್ನು ಅವರಿಗೆ ವಹಿಸಿ ತಾವು ನುಣುಚಿಕೊಳ್ಳುತ್ತಾರೆ. ಅನಿವಾರ್ಯವಾಗಿ ಮಗುವನ್ನು ಇನ್ನೊಬ್ಬರ ಕೈಗೆ ಒಪ್ಪಿಸುವುದು ಬೇರೆ. ಮಗುವಿನ ಪೋಷಣೆಯಿಂದ ದೂರವಿರುವ ಜನರಲ್ಲಿ ಈ ಗುಣ ಜನ್ಮಜಾತವಾಗಿ ಇರುವುದೇ ಇಲ್ಲ. ಆದರೆ, ಕೆಲವರು ಮಾತ್ರ ಇದಕ್ಕೆ ತದ್ವಿರುದ್ಧ. ಅವರು ಪಾಲಕತನದ ಜವಾಬ್ದಾರಿ ಹೊರುವ ಮೂಲಕ ಸಂಗಾತಿಗೆ ಒಳ್ಳೆಯ ಜತೆಗಾರರೂ ಆಗುತ್ತಾರೆ. ಇವರು ಸಂಗಾತಿಯ ಅಗತ್ಯಗಳನ್ನು ಪೂರೈಸುವ ಜತೆಗೆ ಮಗುವಿನ ಪೋಷಣೆಯತ್ತಲೂ ಗಮನ ಹರಿಸುತ್ತಾರೆ. ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಮಗುವಿನ ಬೆಳವಣಿಗೆಯಲ್ಲಿ ಆಸಕ್ತಿ ವಹಿಸುತ್ತಾರೆ. ಸಂಗಾತಿ ಹಾಗೂ ಮಗು ಆರೋಗ್ಯಕರ ಅನುಭವ ಮತ್ತು ಸಮತೋಲನದ ಬೆಳವಣಿಗೆ ಕಾಣಬೇಕೆಂದು ಶ್ರಮ ವಹಿಸುತ್ತಾರೆ. ಅಂತಹ ರಾಶಿಗಳು ಇವು.

•    ವೃಷಭ (Taurus)
ಮಕ್ಕಳ (Children) ಜೀವನದಲ್ಲಿ (Life) ಶಾಂತವಾದ ರೀತಿಯಲ್ಲಿ ಪ್ರಭಾವ ಬೀರುವವರೆಂದರೆ ಎಂದರೆ ವೃಷಭ ರಾಶಿಯ ಪಾಲಕರು (Parents). ತಮ್ಮ ಮಕ್ಕಳಿಗೆ ಏನಾದರೂ ಒದಗಿಸಬೇಕೆಂದರೆ ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಪ್ರೀತಿ (Love) ಮಾಡುತ್ತಾರೆ. ಮಕ್ಕಳ ಬೆಳವಣಿಗೆ (Development), ಅಗತ್ಯಗಳ ಕುರಿತು ಸಂಗಾತಿಯ ನಿಲುವನ್ನೂ ಪರಿಗಣಿಸಿ ಮುನ್ನಡೆಯುತ್ತಾರೆ. ಮುಖ್ಯವಾದ ನಿರ್ಧಾರ (Decision) ಕೈಗೊಳ್ಳುವ ಸಮಯದಲ್ಲಿ ಸಂಗಾತಿಯ (Partner) ಅಭಿಪ್ರಾಯವನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಇವರ ವಿಶೇಷ.

Tap to resize

Latest Videos

ಈ ನಾಲ್ಕು ರಾಶಿಗಳಿಗೆ 2023ರಲ್ಲಿ ರಾಹು ಕಾಟ ತಪ್ಪಿದ್ದಲ್ಲ, ಹಾಗಾದರೆ ಏನು ಮಾಡಬೇಕು?

•    ಕರ್ಕಾಟಕ (Cancer)
ಮಕ್ಕಳನ್ನು ಬೆಳೆಸುವಾಗ ಅತ್ಯುತ್ತಮ ರೀತಿಯಲ್ಲಿ ಸಹಯೋಗ ನೀಡುವವರೆಂದರೆ ಎಂದರೆ ಕರ್ಕಾಟಕ ರಾಶಿಯ ಜನ. ಮಗು ಇನ್ನೂ ಹೊಟ್ಟೆಯಲ್ಲಿರುವಾಗಲೀ ಪಾಲನೆ-ಪೋಷಣೆಯ (Parenting) ಬಗ್ಗೆ ಅಗತ್ಯ ಮಾಹಿತಿ ಅರಿತುಕೊಳ್ಳುತ್ತಾರೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಾರೆ, ಮಾನಸಿಕವಾಗಿ ಮಗುವನ್ನು ಬರಮಾಡಿಕೊಳ್ಳಲು ಸಿದ್ಧರಾಗುತ್ತಾರೆ. ಮಕ್ಕಳ ಅಗತ್ಯವನ್ನು ಚೆನ್ನಾಗಿ ಸುಲಭವಾಗಿ ಅರಿತುಕೊಳ್ಳುತ್ತಾರೆ. ತಾವು ಇಚ್ಛಿಸಿದ ರೀತಿಯಲ್ಲಿ ಮಕ್ಕಳ ಬೆಳವಣಿಗೆಯಾಗಲು ಸರ್ವರೀತಿಯಲ್ಲೂ ಸಹಕಾರ (Help) ನೀಡುತ್ತಾರೆ. ಮಕ್ಕಳಿಗೆ ಯಾವುದೇ ರೀತಿಯಲ್ಲೂ ಒತ್ತಡ (Stress) ಹೇರುವುದಿಲ್ಲ. 

•    ಧನು (Sagittarius)
ಧನು ರಾಶಿಯ ಪಾಲಕರು ಮಕ್ಕಳಲ್ಲಿ ಖುಷಿ (Happy) ಹಾಗೂ ಸಕಾರಾತ್ಮಕತೆ (Positivity) ತುಂಬುತ್ತಾರೆ. ಮಕ್ಕಳೊಂದಿಗೆ ಆಟವಾಡುವುದು ಇವರಿಗೆ ಭಾರೀ ಇಷ್ಟ. ಇವರ ಜತೆಯಲ್ಲಿ ಮಕ್ಕಳು ಸಂತಸದಿಂದ ನಲಿಯುತ್ತಾರೆ. ವಿನೂತನ ರೀತಿಯ, ಅಪೂರ್ವ ಮಾದರಿಯ ಪಾಲಕತನ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಜವಾಬ್ದಾರಿ (Responsibility) ವಹಿಸಲು ಹಿಂದೇಟು ಹಾಕುವುದಿಲ್ಲ. ಈ ವಿಚಾರದಲ್ಲಿ ತಮ್ಮ ಸಂಗಾತಿಯಿಂದಲೂ ಸಹಕಾರ ಪಡೆದುಕೊಳ್ಳುತ್ತಾರೆ. ಸದಾ ಧನಾತ್ಮಕ ಧೋರಣೆ ಹೊಂದಿರುವ ಧನು ರಾಶಿಯ ಮಕ್ಕಳೂ ಸಹ ಧನಾತ್ಮಕ ಭಾವನೆಯಿಂದ ಕೂಡಿರುವುದರಲ್ಲಿ ಅಚ್ಚರಿ ಇಲ್ಲ.

Adventures ಸಂಗಾತಿಯ ಜೊತೆಗೆ ಡೇಟಿಂಗ್ ಹೋಗುವುದೆಂದರೆ ಇವರಿಗೆ ಇಷ್ಟ!

•    ಮೀನ (Pisces)
ಈ ರಾಶಿಯ ಜನ ಸಿಕ್ಕಾಪಟ್ಟೆ ಕೇರ್‌ (Care) ಮಾಡುತ್ತಾರೆ. ಸೂಕ್ಷ್ಮತೆ ಹೊಂದಿದ್ದು, ಪಾಲಕರಾಗಿ ಮಕ್ಕಳ ಅಗತ್ಯವನ್ನು ಅರಿತುಕೊಳ್ಳುತ್ತಾರೆ. ಮಕ್ಕಳಲ್ಲಿ ಮೌಲ್ಯ (Values) ಬೆಳೆಸಲು ತಮ್ಮ ಸಂಗಾತಿಯೊಂದಿಗೆ ಕೂಡಿ ಪ್ರಯತ್ನಿಸುತ್ತಾರೆ. ಸಂಗಾತಿಯ ಉತ್ತಮ ನಂಬಿಕೆ, ಧೋರಣೆಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾರೆ. ಮಕ್ಕಳನ್ನು ಬೆಳೆಸುವಲ್ಲಿ ಈ ಸಂಗಾತಿಗಳು ಟೀಮ್‌ ವರ್ಕ್‌ (Team Work) ನಂತೆ ಕಾರ್ಯನಿರ್ವಹಿಸುತ್ತಾರೆ. 

click me!