Astrology Tips : ಮದುವೆಯಾಗ್ತಿಲ್ಲವೆಂದ್ರೆ ಕತ್ತಿಗೆ ಹಳದಿ ದಾರ ಕಟ್ಟಿ ನೋಡಿ

By Suvarna News  |  First Published Jan 6, 2023, 12:56 PM IST

ಹಳದಿ, ಕೆಂಪು, ಕಪ್ಪು ಹೀಗೆ ಬಗೆ ಬಗೆಯ ಬಣ್ಣದ ದಾರವನ್ನು ನಾವು ಕುತ್ತಿಗೆಗೆ ಕಟ್ಟಿಕೊಳ್ತೇವೆ. ಒಂದೊಂದು ಬಣ್ಣದ ದಾರಕ್ಕೂ ಒಂದೊಂದು ವಿಶೇಷತೆಯಿದೆ. ಹಳದಿ ಬಣ್ಣದ ದಾರ ಕೂಡ ಸಾಕಷ್ಟು ಮಹತ್ವಪಡೆದಿದೆ. ಅದನ್ನು ಧರಿಸುವುದ್ರಿಂದ ಲಾಭ ಹೆಚ್ಚು.
 


ಕುತ್ತಿಗೆಗೆ ವಿವಿಧ ಬಣ್ಣದ ದಾರವನ್ನು ಧರಿಸಲಾಗುತ್ತೆ. ಬಹುತೇಕರು ಕಪ್ಪು ಬಣ್ಣದ ದಾರವನ್ನು ಕುತ್ತಿಗೆಗೆ ಹಾಕಿಕೊಳ್ತಾರೆ. ದೃಷ್ಟಿ ದೋಷವನ್ನು ಕಡಿಮೆ ಮಾಡಲು ಹಾಗೆ ಯಾವುದೇ ದುಷ್ಟ ಶಕ್ತಿಯ ದೃಷ್ಟಿ ನಮ್ಮ ಮೇಲೆ ಬೀಳದಿರಲಿ ಎನ್ನುವ ಕಾರಣಕ್ಕೆ ಕಪ್ಪು ದಾರವನ್ನು ಹಾಕಲಾಗುತ್ತದೆ. ವಿಶೇಷವಾಗಿ ಮಕ್ಕಳ ಕತ್ತಿಗೆ ನೀವು ಕಪ್ಪು ದಾರವನ್ನು ನೋಡಿರ್ತಿರಿ. ಕೆಲವರು ಕಪ್ಪು ಸೇರಿದಂತೆ ಬಣ್ಣ ಮಿಶ್ರಿತ ದಾರವನ್ನು ಹಾಕಿಕೊಂಡಿರುತ್ತಾರೆ. ಬರೀ ಕಪ್ಪು ಬಣ್ಣದ ದಾರಕ್ಕೆ ಮಾತ್ರವಲ್ಲ ಜ್ಯೋತಿಷ್ಯದಲ್ಲಿ ಹಳದಿ ಬಣ್ಣದ ದಾರಕ್ಕೂ ವಿಶೇಷ ಮಹತ್ವವಿದೆ.

ಕೆಲವರಿಗೆ ಹಳದಿ (Yellow) ದಾರ ಕಟ್ಟುವಂತೆ ಸಲಹೆ ನೀಡಲಾಗುತ್ತದೆ. ಹಳದಿ ದಾರವು ಗುರು ಗ್ರಹ (Planet) ಕ್ಕೆ ಸಂಬಂಧಿಸಿದೆ. ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದರೆ ಹಳದಿ ದಾರ (Thread) ಕಟ್ಟುವಂತೆ ಸಲಹೆ ನೀಡಲಾಗುತ್ತದೆ. ನಾವಿಂದು ಹಳದಿ ದಾರವನ್ನು ಕುತ್ತಿಗೆಗೆ ಕಟ್ಟುವುದ್ರಿಂದ ಏನೆಲ್ಲ ಪ್ರಯೋಜನವಿದೆ ಹಾಗೆ ಅದನ್ನು ಹೇಗೆ ಧರಿಸಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.   

Tap to resize

Latest Videos

ಹಳದಿ ಹಾಗೂ ಗುರು (Jupiter) : ಹಳದಿ ಬಣ್ಣವು ಗುರುವಿಗೆ ಸಂಬಂಧಿಸಿದೆ. ಹಾಗಾಗಿಯೇ ಹಳದಿ ಬಣ್ಣವನ್ನು ಗುರುವಿನ ಬಣ್ಣ ಎಂದೂ ಕರೆಯುತ್ತಾರೆ. ಕುತ್ತಿಗೆ (Neck) ಗೆ ಹಳದಿ ದಾರವನ್ನು ಹಾಕುವುದ್ರಿಂದ ಜಾತಕದಲ್ಲಿ ಗುರುವಿನ ಸ್ಥಾನ ಬಲ ಪಡೆಯುತ್ತದೆ. ಇದ್ರಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತವೆ. 

Culture : ಪಿರಿಯಡ್ಸ್ ಟೈಮಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗ್ಬಾರದು?

ವಿಷ್ಣು (Vishnu) ವಿಗೂ ಪ್ರಿಯ ಹಳದಿ ದಾರ : ಹಳದಿ ಬಣ್ಣ ಭಗವಂತ ವಿಷ್ಣುವಿಗೆ ತುಂಬಾ ಪ್ರಿಯ. ಅದಕ್ಕಾಗಿಯೇ ಕುತ್ತಿಗೆಗೆ ಹಳದಿ ದಾರವನ್ನು ಧರಿಸುವಂತೆ ಹೇಳಲಾಗುತ್ತದೆ.  ವಿಷ್ಣುವಿನ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರಬೇಕೆಂದ್ರೆ ನೀವು ಹಳದಿ ದಾರವನ್ನು ಕಟ್ಟಿಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಷ್ಣುವಿನ ಪೂಜೆ ವೇಳೆ ಹಳದಿ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ.   

ಹಳದಿ ದಾರ ಧರಿಸುವುದ್ರಿಂದ ಆಗುವ ಲಾಭ : ಕುತ್ತಿಗೆಗೆ ಹಳದಿ ದಾರವನ್ನು ಕಟ್ಟುವುದ್ರಿಂದ ಗುರುವಿನ ಶುಭ ಯೋಗ  ರೂಪುಗೊಳ್ಳುತ್ತದೆ. ಜೀವನದಲ್ಲಿ ಯಶಸ್ಸು ಸಿಗುತ್ತದೆ. ಹಳದಿ ದಾರವನ್ನು ಧರಿಸುವುದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ. ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮದುವೆಯಲ್ಲಿ ವಿಳಂಬವಾಗ್ತಿದ್ದರೆ ಅಂಥವರು ಕುತ್ತಿಗೆಗೆ ಹಳದಿ ದಾರವನ್ನು ಧರಿಸಬೇಕು. ಇದ್ರಿಂದ ವಿವಾಹಕ್ಕೆ ಬಂದ ಎಲ್ಲ ವಿಘ್ನ ದೂರವಾಗುತ್ತದೆ.  ಈಗಾಗಲೇ ಮದುವೆಯಾಗಿದ್ದವರು  ಕುತ್ತಿಗೆಗೆ ಹಳದಿ ದಾರ ಕಟ್ಟುವುದ್ರಿಂದ ದಾಂಪತ್ಯ ಜೀವನದಲ್ಲಿ ಕಾಣಿಸಿಕೊಂಡ ಸಮಸ್ಯೆ ದೂರವಾಗಿ, ಸಂಸಾರದಲ್ಲಿ ಸಂತೋಷ ಕಾಣಬಹುದಾಗಿದೆ.   

ಕುತ್ತಿಗೆಗೆ ಹಳದಿ ದಾರವನ್ನು ಹೀಗೆ ಧರಿಸಿ : ಕುತ್ತಿಗೆಗೆ ಹಳದಿ ದಾರವನ್ನು ಕಟ್ಟಲು ಕೆಲ ನಿಯಮಗಳಿವೆ. ಅವುಗಳನ್ನು ಪಾಲನೆ ಮಾಡಬೇಕು. ಹಳದಿ ಬಣ್ಣದ ದಾರವನ್ನು ಧರಿಸುವವರು  ಗುರುವಾರದಂದು ಧರಿಸಬೇಕು. ಮೊದಲ ಬಾರಿ ನೀವು ಕುತ್ತಿಗೆಗೆ ಹಳದಿ ದಾರವನ್ನು ಕಟ್ಟುವಾಗ ಹಳೆಯ ದಾರವನ್ನು ಬಳಸಬೇಡಿ. ಹೊಸ ದಾರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. 

ಪ್ರತಿ ತಲೆ ಕೂದಲನ್ನೂ ಕೈಯಿಂದಲೇ ಕಿತ್ತುಕೊಳ್ಳುವ ಮಹಿಳಾ ನಾಗಾ ಸಾಧುಗಳು!

ಹಾಗೆಯೇ ನೀವು ಕತ್ತಿಗೆ ಕಟ್ಟಿಕೊಂಡ ದಾರದ ಬಣ್ಣ ಮಾಸುತ್ತಿದ್ದರೆ ಅದನ್ನು ತಕ್ಷಣ ಬದಲಿಸಿ. ಶುದ್ಧವಾದ ಹೊಸ ದಾರವನ್ನು ಮತ್ತೆ ಧರಿಸಿ. ಮದುವೆ ವಿಳಂಬವಾಗ್ತಿದೆ ಎನ್ನುವ ಕಾರಣಕ್ಕೆ ನೀವು ಹಳದಿ ಬಣ್ಣದ ದಾರ ಧರಿಸಿದ್ದು, ಅದರ ಬಣ್ಣ ಮಾಸಿದ್ದರೆ ನಿಮಗೆ ತೊಂದರೆಯಾಗುತ್ತದೆ. ಹಾಗಾಗಿ ಬಣ್ಣ ಮಾಸುತ್ತಿದ್ದೆ ಅಥವಾ ಮಧ್ಯೆ ಎಲ್ಲೂ ದಾರ ತುಂಡಾಗ್ತಿದೆ ಎಂದಾದ್ರೆ ತಕ್ಷಣ ಅದನ್ನು ಬದಲಿಸಿ.    
ನೀವು ಹಳದಿ ದಾರವನ್ನು ಕುತ್ತಿಗೆಗೆ ಧರಿಸುವ ಮೊದಲು ದಾರವನ್ನು ವಿಷ್ಣುವಿಗೆ ಅರ್ಪಿಸಿ . ಇದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ. 

click me!