ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

By Suvarna News  |  First Published Sep 27, 2021, 7:00 PM IST

ಪ್ರತಿಯೊಬ್ಬರು ಜೀವನವನ್ನು ನೋಡುವ ದೃಷ್ಟಿ ಕೋನಗಳು ಬೇರೆ ಬೇರೆ. ಅಭಿಪ್ರಾಯಗಳು ಸ್ವಭಾವಗಳು ಸಹ ಬೇರೆಯಾಗಿರುತ್ತವೆ. ಅದು ಅಣ್ಣ ತಮ್ಮ, ಅಕ್ಕ ತಂಗಿ, ಪೋಷಕರು ಮಕ್ಕಳು ಹೀಗೆ ಒಬ್ಬರ ಅಭಿಪ್ರಾಯ ಮತ್ತೊಬ್ಬರ  ಅಭಿಪ್ರಾಯಕ್ಕೆ ಹೊಂದಿಕೆಯಾಗುವುದಿಲ್ಲ. ಹಾಗೆಯೇ ಇಲ್ಲಿ ಸ್ವಭಾವದಲ್ಲಿ  ಹೊಂದಿಕೆಯಾಗದ ಪೋಷಕರು ಮತ್ತು ಮಕ್ಕಳ ರಾಶಿಚಕ್ರಗಳ ವಿವರಗಳನ್ನು ನೀಡಲಾಗಿದೆ. ಅವುಗಳ ಬಗ್ಗೆ ತಿಳಿಯೋಣ....
 


ಜಗತ್ತಿನ ಪವಿತ್ರವಾದ ಅನುಬಂಧಗಳಲ್ಲಿ ತಂದೆ-ತಾಯಿ ಮತ್ತು ಮಗುವಿನ (Child) ಬಂಧವೂ ಒಂದು. ಅದರಲ್ಲಿ ಯಾವುದೇ ಕೆಟ್ಟ ಭಾವನೆಯಾಗಲಿ, ಅಸೂಯೆಯಾಗಲಿ ಇರುವುದಿಲ್ಲ. ಮಕ್ಕಳ ಶ್ರೇಯೋಭಿವೃದ್ಧಿಯೇ ಪೋಷಕರ ಗುರಿಯಾಗಿರುತ್ತದೆ. ಹಾಗೆಯೇ ಮಗುವಿಗೆ ಪೋಷಕರೇ ಪ್ರಪಂಚವಾಗಿರುತ್ತಾರೆ. ಹಾಗಾಗಿ ತಂದೆ-ತಾಯಿ ಮತ್ತು ಮಕ್ಕಳ ಬಾಂಧವ್ಯ ಅತ್ಯಂತ ಪವಿತ್ರವಾದದ್ದಾಗಿದೆ. 

ಮನೆಯಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಪ್ರೀತಿ (love), ಸ್ನೇಹ (Friendship) ಮತ್ತು ವಿಶ್ವಾಸ (Confidence)ವು ಗಟ್ಟಿಯಾಗಿ ಬೇರೂರಿರುತ್ತದೆ. ಹಾಗಂತ ಪೋಷಕರು ಮಕ್ಕಳ ನಡುವೆ ಆಗಾಗ ಜಗಳಗಳು, ವಿವಾದಗಳು ಆಗುತ್ತಿರುತ್ತವೆ. ಭವಿಷ್ಯದಲ್ಲಿ ಎದುರಿಸಬೇಕಾದ ಸವಾಲುಗಳಿಗೆ ಮಕ್ಕಳು ಸಜ್ಜಾಗಿರಬೇಕೆಂಬುದು ಪೋಷಕರ ಆಶಯವಾಗಿರುತ್ತದೆ. ಹಾಗಾಗಿ ಮಕ್ಕಳನ್ನು ಚೆನ್ನಾಗಿ ಓದಿಸುತ್ತಾರೆ. ಅಷ್ಟೇ ಅಲ್ಲದೆ ಶಿಕ್ಷಣದಲ್ಲಿ ಮುನ್ನಡೆ ಸಾಧಿಸಬೇಕೆಂದು ಸದಾ ಯೋಚಿಸಿ ಅದಕ್ಕೆ ಮಕ್ಕಳನ್ನು ತಯಾರು ಮಾಡಲು ಹರಸಾಹಸ ಪಡುತ್ತಾರೆ. ಹಾಗಂತ ಎಲ್ಲ ಪೋಷಕರ ಮತ್ತು ಮಕ್ಕಳ ಬಾಂಧವ್ಯ ಒಂದೇ ರೀತಿಯಾಗಿ ಇರುವುದಿಲ್ಲ.

ಕೆಲವು ಪೋಷಕರು ಮಕ್ಕಳನ್ನು ಅವರ ಇಚ್ಛೆಯಂತೆ ಓದಿಕೊಂಡು ಇರಲು ಬಿಡುತ್ತಾರೆ.  ಇನ್ನೂ ಕೆಲವರು ಕೆಲವಷ್ಟು ನಿಯಮಗಳನ್ನು ಹಾಕಿ ಮಕ್ಕಳನ್ನು ಒಂದು ಚೌಕಟ್ಟಿನೊಳಗೆ ಇಡಲು ಪ್ರಯತ್ನಿಸುತ್ತಾರೆ. ಹಾಗಾಗಿ ಕೆಲವೊಮ್ಮೆ ಮಕ್ಕಳು(Children) ಮತ್ತು ಪೋಷಕರ( Parents) ನಡುವೆ ವಾದ - ವಿವಾದಗಳು ನಡೆಯುತ್ತಿರುತ್ತವೆ. ಇದೇ ರೀತಿ ದಿನವೂ ಮನೆಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಕಾರಣವಿದೆ.
    
ಇದನ್ನು ಓದಿ: ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಕೆಲವು ರಾಶಿಚಕ್ರಗಳ (Zodiac sign) ಮಕ್ಕಳು ಮತ್ತು ಪೋಷಕರ ಹೊಂದಾಣಿಕೆ ಆಗಿ ಬರುವುದಿಲ್ಲ. ತಂದೆ - ತಾಯಿ ಮತ್ತು ಮಗುವಿನ ನಡುವೆ ಪ್ರತಿ ಮಾತಿಗೂ ವಿವಾದಗಳು, ಜಗಳಗಳು ಇತ್ಯಾದಿ ನಡೆಯುತ್ತಲೇ ಇದೆ ಎಂದಾದರೆ ಅದಕ್ಕೆ ರಾಶಿಚಕ್ರಗಳ ಹೊಂದಾಣಿಕೆಯೂ ಕಾರಣವಾಗಿರುತ್ತದೆ. ಅಂತಹ ರಾಶಿಚಕ್ರಗಳು ಯಾವುವು ತಿಳಿಯೋಣ....

ಮೇಷ (Aries) ಮತ್ತು ಕರ್ಕಾಟಕ (Cancer)
ಮೇಷ ರಾಶಿಯ ವ್ಯಕ್ತಿಗಳು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮಕ್ಕಳು ಯಶಸ್ಸನ್ನು ಗಳಿಸಲಿ ಎಂದು ಹೆಚ್ಚಿನ ಒತ್ತು ಕೊಟ್ಟು ಅವರಿಗೆ ಅವಕಾಶಗಳು ಲಭಿಸುವಂತೆ ಮಾಡುತ್ತಾರೆ. ಕರ್ಕಾಟಕ ರಾಶಿ ಸ್ವಭಾವದ ಪ್ರಕಾರ ಯಶಸ್ಸು ಗಳಿಸುವ ಉತ್ಸಾಹ ಮತ್ತು ಆಕಾಂಕ್ಷೆ ಮೇಷ ರಾಶಿಯ ವ್ಯಕ್ತಿಗಳಷ್ಟು ಇರುವುದಿಲ್ಲ. ಕರ್ಕಾಟಕ ರಾಶಿಯವರು ಭಾವನಾ ಜೀವಿಗಳು ಅವರು ತಮ್ಮದೇ ಆದ ಸಮಯವನ್ನು ಮತ್ತು ಮಾರ್ಗವನ್ನು ಕಂಡುಕೊಳ್ಳಲು ಇಚ್ಛಿಸುತ್ತಾರೆ. ಇದರಿಂದಾಗಿ ಹೆಚ್ಚು ವಾದ ವಿವಾದಗಳು ನಡೆಯುತ್ತಿರುತ್ತವೆ. ಹಾಗಾಗಿ ಮೇಷ ಮತ್ತು ಕರ್ಕಾಟಕ ರಾಶಿಯ ಪೋಷಕ ಮತ್ತು ಮಕ್ಕಳ ಬಾಂಧವ್ಯ ಅಷ್ಟಾಗಿ ಚೆನ್ನಾಗಿರುವುದಿಲ್ಲ.

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

ಮಿಥುನ (Gemini) ಮತ್ತು ವೃಷಭ (Tarus)
ಮಿಥುನ ಮತ್ತು ವೃಷಭ ರಾಶಿಯ ವ್ಯಕ್ತಿಗಳ ಸ್ವಭಾವ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಮಿಥುನ ರಾಶಿಯ ವ್ಯಕ್ತಿಗಳಿಗೆ ಹೆಚ್ಚು ಮಾತನಾಡುವುದು ಮತ್ತು ಜನರೊಂದಿಗೆ ಬೆರೆಯುವ ಸ್ವಭಾವ ಹೆಚ್ಚು. ಅದೇ ವೃಷಭ ರಾಶಿಯವರು ಅಂತರ್ಮುಖಿಗಳು (introvert) ಮತ್ತು ತಮ್ಮದೇ ಆದ ಸಮಯವನ್ನು ಕಳೆಯಲು ಹೆಚ್ಚು ಇಷ್ಟಪಡುತ್ತಾರೆ. ಇದರ ಪರಿಣಾಮ ಈ ಪೋಷಕರು ಮಕ್ಕಳು ಜನರೊಂದಿಗೆ ಹೆಚ್ಚು ಬೆರೆಯಬೇಕೆಂದು ಇಷ್ಟಪಡುತ್ತಾರೆ. ಈ ವಿಚಾರಕ್ಕೆ ಕಲಹಗಳು ಆಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಿಥುನ ರಾಶಿಯ ಪೋಷಕರಿಗೆ ವೃಷಭ ರಾಶಿಯ ಮಕ್ಕಳಿದ್ದರೆ ಹೊಂದಾಣಿಕೆ ಆಗುವ ಸಾಧ್ಯತೆ ಕಡಿಮೆ. 

ಸಿಂಹ (Leo) ಮತ್ತು ಕುಂಭ ( Aquaries)
ಸಿಂಹ ರಾಶಿಯ ವ್ಯಕ್ತಿಗಳು ಎಲ್ಲರೂ ತಮ್ಮನ್ನು ಗಮನಿಸಬೇಕೆಂದು ಇಷ್ಟಪಡುತ್ತಾರೆ. ಸಮಾಜದಲ್ಲಿ ಕೇಂದ್ರಬಿಂದುವಾಗಿರಲು ಬಯಸುತ್ತಾರೆ. ತಮ್ಮನ್ನು ಇಷ್ಟಪಡುವ ಜನರ ಜೊತೆ ಇರಲು ಬಯಸುತ್ತಾರೆ ಮತ್ತು ಅವರಿಂದ ಪ್ರಶಂಸೆಯನ್ನು ಇಚ್ಛಿಸುತ್ತಾರೆ. ಕುಂಭ ರಾಶಿಯವರು ಇದಕ್ಕೆ ತದ್ವಿರುದ್ಧ. ಅಂದರೆ ಇತರರ ಅಭಿಪ್ರಾಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಇಚ್ಛೆ ಮತ್ತು ಅನಿಸಿಕೆಗಳಿಗೆ ಹೆಚ್ಚು ಬೆಲೆ ಕೊಟ್ಟು ಜೀವಿಸುತ್ತಾರೆ. ಸಮಾಜದಲ್ಲಿ ಎಲ್ಲರೂ ಗುರುತಿಸಬೇಕೆಂಬ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಕುಂಭ ರಾಶಿಯ ಮಕ್ಕಳು ತಮ್ಮ ಸ್ವಂತಿಕೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಸಿಂಹ ರಾಶಿಯ ಪೋಷಕರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಸಿಂಹ ಮತ್ತು ಕುಂಭ ರಾಶಿಯ ಪೋಷಕ - ಮಕ್ಕಳ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ. 

ತುಲಾ (Libra) ಮತ್ತು ಕನ್ಯಾ (Virgo)
ತುಲಾ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಸುರಕ್ಷಿತವಾಗಿರಲು ಬಯಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಶಾಂತಿಪ್ರಿಯರು, ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸಿರಬೇಕೆಂದು ಬಯಸುತ್ತಾರೆ. ಕನ್ಯಾ ರಾಶಿಯವರು ತುಲಾ ರಾಶಿಯವರ ಸಮತೋಲನವನ್ನು ಕಾಯ್ದುಕೊಳ್ಳುವ ಸ್ವಭಾವವನ್ನು ಇಷ್ಟಪಡುತ್ತಾರೆ . ಹಾಗಂತ ಅವರ ಯಾವುದಕ್ಕೂ ಹೆಚ್ಚು ಶ್ರಮಿಸದೆ ಬಂದ ಹಾಗೆ ನಡೆದುಕೊಳ್ಳುವ ಗುಣವನ್ನು ಮೆಚ್ಚುವುದಿಲ್ಲ. ಕನ್ಯಾ ರಾಶಿಯವರು ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸುತ್ತಾರೆ. ಯಾವ ಕಾರಣಕ್ಕೂ ತಪ್ಪುಗಳು ಆಗದಂತೆ ಎಚ್ಚರ ವಹಿಸುತ್ತಾರೆ. ಹಾಗಾಗಿ ಈ ಭಿನ್ನವಾದ ಸ್ವಭಾವದ ಕಾರಣದಿಂದಾಗಿ ತುಲಾ ಮತ್ತು ಕನ್ಯಾ ರಾಶಿಯ ಪೋಷಕರು ಮತ್ತು ಮಕ್ಕಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇರುತ್ತದೆ.   

ಇದನ್ನು ಓದಿ: ಈ ಮೂರು ರಾಶಿಯವರಿಗೆ ಕಷ್ಟದ ಕೆಲಸ ಇಷ್ಟವಿಲ್ಲ!!!

ಮಕರ (Capricorn) ಮತ್ತು ಧನು (Sagittarius)
ಮಕರ ಮತ್ತು ಧನು ರಾಶಿಯ ವ್ಯಕ್ತಿಗಳ ಸ್ವಭಾವ ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತದೆ. ಮಕರ ರಾಶಿಯವರು ತನ್ನ ಕಾರ್ಯ ವೈಖರಿಗಳಲ್ಲಿ ಹೆಚ್ಚು ವ್ಯಾವಹಾರಿಕವಾಗಿರುತ್ತಾರೆ. ಅದೇ ಧನುರಾಶಿಯವರು ಸರಳವಾಗಿದ್ದರೂ, ಸಾಹಸ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಹಾಗಾಗಿ ಈ ಇಬ್ಬರ ನಡುವೆ ಸದಾ ವಿವಾದಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ಒಬ್ಬರ ಅಭಿಪ್ರಾಯಗಳನ್ನು ಇನ್ನೊಬ್ಬರು ಗೌರವಿಸುವುದಿಲ್ಲ. ಹಾಗಾಗಿ ಮಕರ ಮತ್ತು ಧನು ರಾಶಿಯ ಪೋಷಕರು ಮಕ್ಕಳ  ಹೊಂದಾಣಿಕೆ ಕಷ್ಟ.

ವೃಶ್ಚಿಕ (Scorpio) ಮತ್ತು ಸಿಂಹ (Leo) 
ಈ ರಾಶಿಗಳಲ್ಲಿ ಇಬ್ಬರ ಸ್ವಭಾವವು ಒಂದೇ ರೀತಿ ಇರುತ್ತದೆ. ವೃಶ್ಚಿಕ ಮತ್ತು ಸಿಂಹ ರಾಶಿಯ ವ್ಯಕ್ತಿಗಳು ಗಮನವನ್ನು ಬಯಸುವುದಲ್ಲದೆ, ನಾಯಕತ್ವ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಇಬ್ಬರೂ ತಮ್ಮದೇ ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕೆಂದು ಬಯಸುತ್ತಾರೆ. ಹಾಗಾಗಿ ಈ ರಾಶಿಗಳ ಪೋಷಕ ಮಕ್ಕಳ ನಡುವೆ ಕಲಹಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ.

Tap to resize

Latest Videos



ಮೀನ (Pisces ) ಮತ್ತು ಧನು (Sagittarius)
ಈ ಎರಡೂ ರಾಶಿಗಳ ವ್ಯಕ್ತಿಗಳು ಕಲ್ಪನಾ ಜೀವಿಗಳು. ಹೆಚ್ಚು ಕನಸು ಕಾಣುವ ಸ್ವಭಾವ ಇವರದ್ದಾಗಿರುತ್ತದೆ. ಮೀನ ರಾಶಿಯವರು ಯಾವುದೇ ವಿಷಯವಾಗಲಿ ಪರಿಣಾಮದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮೀನ ಮತ್ತು ಧನು ರಾಶಿಯವರು ಒಂದೇ ವಿಷಯವಾದರೂ ಅದನ್ನು ವ್ಯಕ್ತಪಡಿಸುವ ರೀತಿ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇಬ್ಬರಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ.

ಈ ಮೇಲೆ ತಿಳಿಸಿದ ಪೋಷಕ ಮತ್ತು ಮಕ್ಕಳ ರಾಶಿಚಕ್ರಗಳ ಹೊಂದಾಣಿಕೆ ವಿವರಗಳು ರಾಶಿ ಚಕ್ರಗಳ ಸ್ವಭಾವದ ಆಧಾರದ ಮೇಲೆ ತಿಳಿಸಲಾಗಿರುತ್ತದೆ. ಅಷ್ಟೆ ಅಲ್ಲದೆ ಈ ಹೊಂದಾಣಿಕೆಗಳು ಅವರವರ ಜಾತಕದ ಆಧಾರದ ಮೇಲೆ ಸರಿಯಾಗಿ ನಿರ್ಧರಿತವಾಗಿರುತ್ತದೆ. ಹಾಗಾಗಿ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. 

click me!