ಸೌಂದರ್ಯ ಹಾಗೂ ಕಲಾತ್ಮಕ ಜೀವನವನ್ನು ಇಷ್ಟಪಡುವ ತುಲಾ ರಾಶಿಯವರು ಸಂಗಾತಿಯಲ್ಲಿ ಹಲವಾರು ಧನಾತ್ಮಕ ಗುಣಗಳನ್ನು ಕಾಣಲು ಇಷ್ಟಪಡುತ್ತಾರೆ. ಅವು ಹೀಗಿವೆ.
ತುಲಾ ರಾಶಿ (Libra) ಶುಕ್ರ(Venus)ನಿಂದ ಆಳಲ್ಪಡುವಂತಹ ರಾಶಿಯಾಗಿದ್ದು ವಾಯುವಿನ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. ಈ ರಾಶಿಯಲ್ಲಿ ಜನಿಸಿದವರ ಮುಖ್ಯ ಲಕ್ಷಣವೆಂದರೆ ಸಮತೋಲನ ಹಾಗೂ ಸಾಮರಸ್ಯ. ಇದು ಇವರ ಸಂಕೇತವೂ ಹೌದು. ಜೀವನದ ಎಲ್ಲಾ ಆಯಾಮಗಳಲ್ಲೂ ಸಮತೋಲನವನ್ನು ಸಾಧಿಸಲು ಶ್ರಮಿಸುತ್ತಾರೆ. ಇವರು ಕಲೆಯ ಗೀಳನ್ನು ಹೊಂದಿರುವವರು, ಇವರು ಗಾಯಕರಾಗಿರಬಹುದು, ನಟರು ಅಥವಾ ಸಂಗೀತಗಾರರೂ ಆಗಿರಬಹುದು, ಆದರೂ ಇತರ ಕಲಾವಿದರೆಡೆಗೆ ಆಕರ್ಷಿತರಾಗಬಹುದು.
ಸಕಾರಾತ್ಮಕತೆ ಶೋಧ
ತುಲಾ ರಾಶಿಯನ್ನು ಅತ್ಯಂತ ಆಕರ್ಷಕ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇವರು ಸಾಮಾನ್ಯವಾಗಿ ಸಾಮಾಜಿಕವಾಗಿ ಬೆರೆಯುವವರು ಹಾಗೂ ಸ್ನೇಹಪರರು (friendly). ತಮ್ಮ ಪ್ರೀತಿಪಾತ್ರರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಇವರು ಬಹಳ ಸಹಕಾರಿ ಮನೋಭಾವ (Co-operative) ಹಾಗೂ ನ್ಯಾಯಯುತವಾಗಿರುವವರು. ಇತರರ ಆಂತರಿಕ ಸೌಂದರ್ಯವನ್ನು (inner beauty) ಪ್ರಶಂಸಿಸುತ್ತಾರೆ. ಹೀಗಾಗಿ ಇವರಿಗೆ ಸಂಗಾತಿಯಾಗಲು ಇತರರು ಕ್ಯೂನಲ್ಲಿ ನಿಂತರೆ ಅಚ್ಚರಿಯಿಲ್ಲ. ಇವರು ವ್ಯಕ್ತಿಗಳ ನಕಾರಾತ್ಮಕ ಗುಣಗಳ (Negaitve Qualities) ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಸಕಾರಾತ್ಮಕ ಅಂಶಗಳನ್ನೇ ಒಪ್ಪಿಕೊಳ್ಳುತ್ತಾರೆ. ಸಂಗಾತಿಗಳಲ್ಲೂ ಸಕಾರಾತ್ಮಕತೆಯನ್ನೇ ಹುಡುಕುತ್ತಾರೆ.
ಸಂಗಾತಿ ಸಿಗದೇ ಹೋಗಬಹುದು
ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ತಮ್ಮನ್ನು ಕಡಿಮೆ ಎಂದು ಪರಿಗಣಿಸಿಕೊಳ್ಳುವುದರಿಂದ, ತಮ್ಮನ್ನು ಡಾಮಿನೇಟ್ ಮಾಡುವ ಸಂಗಾತಿಯನ್ನು ಅಪೇಕ್ಷಿಸುವುದಿಲ್ಲ. ಇವರು ತಮ್ಮ ಭಾವನೆಗಳನ್ನು (Emotions) ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ, ಇವರನ್ನು ಇಷ್ಟಪಡುವವರು ಕೂಡ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು (express) ಹಿಂಜರಿಯುತ್ತಾರೆ. ಆದ್ದರಿಂದ ಇವರು ಬಯಸಿದ ಸಂಗಾತಿ (Companion) ಇವರಿಗೆ ಸಿಗದೇ ಹೋಗಬಹುದು.
ಸಾಮರಸ್ಯ ಇಷ್ಟಪಡುತ್ತಾರ
ಸಾಮರಸ್ಯವನ್ನು ಇಷ್ಟಪಡುವ ತುಲಾ ರಾಶಿಯವರು, ಹೆಚ್ಚು ಕಾರ್ಯನಿರತವಾಗಿರುವ ಸ್ಥಳ, ಜನದಟ್ಟಣೆ ಇರುವ ಸ್ಥಳವನ್ನು ಇಷ್ಟಪಡುವುದಿಲ್ಲ. ಇದರಿಂದ ದೂರವಿರಲು ಬಯಸುತ್ತಾರೆ. ಹೀಗಾಗಿ ಸಂಗಾತಿ ಕೂಡ ಶಾಂತಿಪ್ರಿಯರಾಗಿದ್ದರೆ ಹೆಚ್ಚು ಖುಷಿ. ಇದನ್ನು ಹೊರತು ಪಡಿಸಿ ತಮ್ಮ ಭಾವನೆಗಳನ್ನು ನಿರಾಳವಾಗಿ ಎಲ್ಲರೊಂದಿಗೂ ಹಂಚಿಕೊಳ್ಳಲು ಬಯಸುತ್ತಾರೆ. ಹೆಚ್ಚು ವಿಶ್ರಾಂತಿ ಪಡೆಯುವುದು ಇವರಿಗಿಷ್ಟ ಇದು ಇವರ ಮನಃಸ್ಥಿತಿಯನ್ನು ಹಗುರಗೊಳಿಸುತ್ತದೆ. ತುಲಾ ರಾಶಿಯವರು ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡಲು ಇಷ್ಟಪಡುತ್ತಾರೆ, ಜೊತೆಗೆ ಹೊಸ ಸಂಗತಿಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ.
ಸ್ವಯಂ ಗೀಳು ಇಷ್ಟಪಡುವುದಿಲ್ಲ
ತಮ್ಮನ್ನು ತಾವು ಹೊಗಳಿಕೊಳ್ಳುವ, ಸ್ವಯಂ ಗೀಳು (Self praise) ಹೊಂದಿರುವ ಜನರನ್ನು ಇವರು ದ್ವೇಷಿಸುತ್ತಾರೆ. ಆದ್ದರಿಂದ ಅಂಥವರನ್ನು ಸಂಗಾತಿ ಆಗಿಸಿಕೊಳ್ಳುವುದಿಲ್ಲ. ಇವರು ತಾವು ತಮ್ಮನ್ನು ಇತರರಿಗಿಂತ ಕಡಿಮೆ ಎಂದು ಭಾವಿಸಿದಂತೆ, ಅವರಿಗೆ ವಿರುದ್ಧವಾಗಿರುವ ಯಾರಾದರೂ ಸಂಗಾತಿಯ ಜತೆ ಇರುವುದು ಇವರಿಗೆ ಕಿರಿಕಿರು ಉಂಟುಮಾಡುತ್ತದೆ. ಇವರು ಹೆಚ್ಚು ಸಮಯ ಒಂದೇ ಸ್ಥಳದಲ್ಲಿರಲು ಇಷ್ಟಪಡುವುದಿಲ್ಲ. ತಮ್ಮ ಮನೋಸ್ಥಿತಿಯನ್ನು ಹಗುರಗೊಳಿಸಲು ಕುಟುಂಬದೊಂದಿಗೆ ಆಗಾಗ್ಗೆ ಸುತ್ತಾಡುವುದನ್ನು ಇಷ್ಟಪಡುತ್ತಾರೆ.
ಉಡುಗೊರೆಗಳು ಇಷ್ಟ
ತುಲಾ ರಾಶಿಯ ಪುರುಷರಿಗೆ ಸಂಗಾತಿ ನೀಡುವ ಉಡುಗೊರೆಗಳೆಂದರೆ ತುಂಬಾ ಇಷ್ಟ. ಕಾದಂಬರಿಗಳು, ಸ್ಟೈಲಿಷ್ ಬ್ಯಾಗ್ ಅದರಲ್ಲೂ ಟ್ರಾವೆಲ್ ಬ್ಯಾಗ್ (Travel Bag), ಸಂಗೀತ ಪ್ರಿಯ (Music Lovers)ರಾಗಿರುವುದರಿಂದ ಹೆಡ್‌ಫೋನ್ (Headphone), ಗೇಮಿಂಗ್ (Gaming), ಸುಧಾರಿತ ತಂತ್ರಜ್ಞಾನಗಳು, ಬಟ್ಟೆ, ಕೈಗಡಿಯಾರಗಳನ್ನು ಇಷ್ಟಪಡುತ್ತಾರೆ. ಸಂಗಾತಿ ಏನೇ ಕೊಟ್ಟರೂ ಇಷ್ಟ. ಈ ರಾಶಿಯ ಸ್ತ್ರೀಯರಿಗೆ ಮುದ್ದಾದ ಸಣ್ಣ ಆಭರಣಗಳು, ಕೈಚೀಲ, ಪಾದರಕ್ಷೆ, ಕೈಗಡಿಯಾರ, ನೈಲ್ ಪಾಲೀಷ್, ಲೈನರ್, ಲಿಪ್‌ಸ್ಟಿಕ್‌ಗಳು ಇಷ್ಟ.
ನೇರ ಸ್ವಭಾವದ ಸಿಂಹ ರಾಶಿಯವರಿಗೆ ಸಂಗಾತಿ ಹೇಗಿರಬೇಕತ್ತಂತೆ ಗೊತ್ತಾ?
ಹೊಂದಾಣಿಕೆಯಾಗುವವರು
ತುಲಾ ರಾಶಿಯವರು ನಿಸ್ವಾರ್ಥಿಗಳಾಗಿರುವುದರಿಂದ ಸ್ವಾರ್ಥ ಸ್ವಭಾವದ ಮೇಷ ರಾಶಿ (Aries)ಯವರನ್ನು ದ್ವೇಷಿಸುತ್ತಾರೆ. ವೃಶ್ಚಿಕ ರಾಶಿ (Scorpio)ಯವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ, ಇತರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಿರಾಕರಿಸುವುದರಿಂದ ಇಷ್ಟವಾಗುವುದಿಲ್ಲ. ಕನ್ಯಾ (Libra) ರಾಶಿಯವರು ಹೆಚ್ಚು ನಾಟಕೀಯ ವ್ಯಕ್ತಿಗಳು. ಇವರು ತುಲಾ ರಾಶಿಯವರಿಗೆ ನಕಲಿಯಂತೆ ಅನಿಸುತ್ತದೆ. ತುಲಾ ರಾಶಿಯವರಿಗೆ ಹೆಚ್ಚು ಹೊಂದಾಣಿಕೆಯಾಗುವ ರಾಶಿಗಳೆಂದರೆ ಮಿಥುನ (Taurus), ಸಿಂಹ (Leo) ಹಾಗೂ ಮಕರ (Capricorn) ರಾಶಿ. ಸಾಮಾನ್ಯವಾಗಿ ಮಿಥುನ ರಾಶಿಯವರು ಸಂಬಂಧಗಳನ್ನು ಗೌರವಿಸುತ್ತಾರೆ. ಸಿಂಹ ರಾಶಿಯವರು ಉದಾರಿಗಳು, ಇತರರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮುಂದಿರುತ್ತಾರೆ. ಆದ್ದರಿಂದ ಎರಡೂ ರಾಶಿಯವರು ತಮ್ಮ ಸಾಂಗತ್ಯವನ್ನು ಇಷ್ಟಪಡುತ್ತಾರೆ.
ಪರಿಪೂರ್ಣತೆ ಬಯಸುವ ಕನ್ಯಾ ರಾಶಿಯವರು ತಮ್ಮ ಬಾಳಸಂಗಾತಿಗಳಲ್ಲಿ ಏನಿಷ್ಟಪಡುತ್ತಾರೆ ಗೊತ್ತೇ?