ಬಚ್ಚಿಡುವ ಸ್ವಭಾವದ ವೃಶ್ಚಿಕ ರಾಶಿಯವರು ಸಂಗಾತಿ ಹೇಗಿರಬೇಕು ಎಂದು ಬಯಸುತ್ತಾರೆ ಗೊತ್ತೇ?

By Suvarna NewsFirst Published Sep 27, 2021, 3:19 PM IST
Highlights

ರಹಸ್ಯ ಕಾಪಾಡುವ ಸ್ವಭಾವದ ವೃಶ್ಚಿಕ ಜನ್ಮರಾಶಿಯವರು ತಮ್ಮ ಬಾಳಸಂಗಾತಿಯಲ್ಲಿ ಅನೇಕ ಸಕಾರಾತ್ಮಕ ಸ್ವಭಾವಗಳನ್ನು ಕಾಣಲು ಇಷ್ಟಪಡುತ್ತಾರೆ. ಇದು ಇಲ್ಲಿವೆ ನೋಡಿ.

ವೃಶ್ಚಿಕ ರಾಶಿಯು ಕಟಕ (Cancer) ಮತ್ತು ಮೀನ (Pisces) ರಾಶಿಗಳಂತೆ ನೀರಿನ ವರ್ಗಕ್ಕೆ ಸೇರಿದೆ. ಇದು ರಾಶಿಚಕ್ರದ ಎಂಟನೇ ಚಿಹ್ನೆ. ಈ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ರಹಸ್ಯಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುವ ಸ್ವಭಾವದವರು. ಇವರು ಅತ್ಯಂತ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಷ್ಟಪಡುವ ಸ್ವಭಾವದವರೂ ಆಗಿರುತ್ತಾರೆ. ವೃಶ್ಚಿಕ ರಾಶಿಯನ್ನು ಪ್ಲುಟೊ ಮತ್ತು ಮಂಗಳ ಎಂಬ ಎರಡು ಗ್ರಹಗಳು ಆಳುತ್ತವೆ. ಮಂಗಳ ಗ್ರಹ ಚಟುವಟಿಕೆಗಳನ್ನು ಪ್ರತಿನಿಧಿಸಿದರೆ, ಪ್ಲುಟೊ ಇಚ್ಚಾಶಕ್ತಿ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ವೃಶ್ಚಿಕ ರಾಶಿಯವರು ರಹಸ್ಯವಾಗಿರಲು ಕಾರಣ ಇದೇ. ವೃಶ್ಚಿಕ ರಾಶಿಯ ಜಾತಕದ ಪ್ರಕಾರ, ಇವರು ಅತ್ಯಂತ ಭಾವುಕರು ಹೀಗಾಗಿ, ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಜನರನ್ನು ಸಂಗಾತಿಯಾಗಿ ಬಯಸುತ್ತಾರೆ. ಕೆಲವೊಮ್ಮೆ ನಿಮ್ಮನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಠಿಣವೆಂದು ಕಂಡರೂ, ಅವರೊಂದಿಗೆ ಸ್ನೇಹ ಬೆಳೆಸಿದರೆ, ಅವರು ತಮ್ಮ ಜೀವನದ ಪ್ರತಿಯೊಂದು ಸನ್ನಿವೇಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. 

ರಹಸ್ಯಮಯತೆಯನ್ನು ಕಾಪಾಡಿಕೊಳ್ಳಬೇಕು
ವೃಶ್ಚಿಕ ರಾಶಿ (Scorpio Sun Sign)ಯವರ ಗುಣಲಕ್ಷಣಗಳನ್ನು ನೋಡಿದರೆ, ಇವರು ಸಾಕಷ್ಟು ರಹಸ್ಯವಾಗಿರುತ್ತಾರೆ. ವಿಷಯಗಳನ್ನು ಮರೆಮಾಚುವುದು ಅಥವಾ ರಹಸ್ಯವಾಗಿಡುವುದು ಅವರ ಸ್ವಭಾವ. ನಿಜವಾಗಿಯೂ ಇವರಿಂದ ಸತ್ಯವನ್ನು ಹೊರಸೆಳೆದು ಬಟಾಬಯಲು ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ತಮ್ಮ ಸಂಗಾತಿಗಳು, ತಮ್ಮ ರಹಸ್ಯವನ್ನು ಕಾಪಾಡುವವರೂ ಆಗಿರಲಿ ಎಂದು ಇವರು ಬಯಸುತ್ತಾರೆ. ವೃಶ್ಚಿಕ ರಾಶಿಯವರು ಮಾತಿನ ಮಲ್ಲರು. ತಮ್ಮ ಮಾತುಗನ್ನು ಸಂಗಾತಿ ಆಲಿಸಿದರೆ ಇವರಿಗೆ ಖುಷಿ. ತಾವು ಮಾಡುವ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಸಂಗಾತಿಗಳು ಅದನ್ನು ಉಲ್ಲಂಘಿಸದಿರಲಿ ಎಂದುಕೊಳ್ಳುತ್ತಾರೆ. ಇವರ ವೈಯಕ್ತಿಕತೆಯನ್ನು ಗೌರವಿಸುವ ಸಂಗಾತಿ ಇವರಿಗಿಷ್ಟ. 

ಪರಿಪೂರ್ಣತೆ ಬಯಸುವ ಕನ್ಯಾ ರಾಶಿಯವರು ತಮ್ಮ ಬಾಳಸಂಗಾತಿಗಳಲ್ಲಿ ಏನಿಷ್ಟಪಡುತ್ತಾರೆ ಗೊತ್ತೇ?

ನಂಬಲು ಸಮಯ ಬೇಕು
ವೃಶ್ಚಿಕ ರಾಶಿಯವರು ಇತರರನ್ನು ನಂಬಲು ಮತ್ತು ಅವರೊಂದಿಗೆ ಆತ್ಮೀಯವಾಗಿರಲು ಕೆಲವು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಸಂಗಾತಿಗಳ ಆಯ್ಕೆಯೂ ಇವರಿಗೆ ಕಠಿಣವೇ. ಯಾರಾದರೂ ಇವರ ಸಂಗಾತಿಯಾಗಲು ತೀವ್ರವಾಗಿ ಬಯಸಿದರೆ, ಯಾಕೆ ಇನ್ನೂ ನನ್ನನ್ನು ನಂಬುತ್ತಿಲ್ಲ ಎಂದು ಯೋಚಿಸುವಂತೆ ಆಗಬಹುದು. ಆದರೆ ಒಮ್ಮೆ ಅವರು ನಿಮ್ಮೊಂದಿಗೆ ಆಪ್ತರಾದರೆ, ಅವರು ಭಾವನೆಗಳ ತೆರೆದ ಪುಸ್ತಕ (Open Book)ದಂತೆ. ಸಂಗಾತಿಯು ಹಂಚಿಕೊಳ್ಳುವ ಗುಟ್ಟುಗಳು, ಆಪ್ತ ಭಾವನೆಗಳನ್ನು ಎಂದೆಂದೂ ಇವರು ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ. 
 

ಏಕಾಂಗಿತನ ಇಷ್ಟ
ನೀವು ವೃಶ್ಚಿಕ ರಾಶಿಯವರನ್ನು ಭೇಟಿಯಾದಾಗ, ಅವರು ನಿಮ್ಮೊಂದಿಗೆ ಸುತ್ತಾಡಿ ಆನಂದಿಸಿದರೂ, ವಾಸ್ತವವಾಗಿ ಅವರು ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಅವರು ತಮ್ಮೊಳಗೇ ಇರಲು ಇಷ್ಟಪಡುತ್ತಾರೆ. ತುಂಬಾ ಸ್ಪಷ್ಟವಾಗಿ ಹೇಳುವುದಾದರೆ, ಇವರು ಅಷ್ಟು ಸಾಮಾಜಿಕವಲ್ಲ. ಇವರು ಪಾರ್ಟಿಗಳು, ಆಚರಣೆಗಳಿಗೆ ಹೋಗುವುದನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲ. ಅದಕ್ಕಾಗಿಯೇ ಇವರನ್ನು ರಹಸ್ಯವಾಗಿರುವವರು ಎಂದೇ ಬಿಂಬಿಸಲಾಗಿದೆ. ಸಂಗಾತಿಗಳು ಪಾರ್ಟಿಪ್ರಿಯರಾಗಿದ್ದರೆ ಇವರು ಅಷ್ಟಾಗಿ ಇಷ್ಟಪಡುವುದಿಲ್ಲ. ಸಂಗಾತಿ ತಮ್ಮ ಏಕಾಂತಪ್ರಿಯತೆಗೆ ಸಹಕಾರಿಯಾಗಬೇಕು ಎಂದುಕೊಳ್ಳುತ್ತಾರೆ. ಆಧ್ಯಾತ್ಮಿಕವಾಗಿ ಇತರರೊಂದಿಗೆ ಸಂಪರ್ಕ ಸಾಧಿಸುವುದನ್ನು ಬಯಸುತ್ತಾರೆ. 

ಸೌಂದರ್ಯ, ಕಲೆ ಎಂದರೆ ತುಲಾ ರಾಶಿಯವರಿಗಿಷ್ಟ, ಜೀವನಸಂಗಾತಿಯಲ್ಲಿ ಏನಿಷ್ಟ?

ಸಂಪ್ರದಾಯವಾದಿಗಳಲ್ಲ 
ವೃಶ್ಚಿಕ ರಾಶಿಯವರ ಏಕಾಂತಪ್ರಿಯತೆ ಹಾಗೂ ರಹಸ್ಯಪ್ರಿಯತೆಯನ್ನು ಕಂಡು ಇವರು ಸಂಪ್ರದಾಯವಾದಿಗಳು ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ಇವರು ಆಧುನಿಕರೂ ಹೌದು. ವೃಶ್ಚಿಕ ರಾಶಿಯವರದ್ದು, ತುಂಬ ಸ್ಪಷ್ಟ ಮತ್ತು ಮುಕ್ತ ಮನಸ್ಸು. ವೃಶ್ಚಿಕ ರಾಶಿಯವರು ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಎಲ್ಲಾ ಚಿಂತೆಗಳನ್ನು ಮರೆತು, ಎಲ್ಲಾ ಗಡಿಗಳನ್ನು ದಾಟಿ ಎತ್ತರಕ್ಕೆ ಹಾರಿ ತಮ್ಮ ಜೀವನವನ್ನು ಆನಂದಿಸಲು ಬಯಸುತ್ತಾರೆ. ಆದ್ದರಿಂದ, ಸಂಗಾತಿಯಲ್ಲಿ ಇಂಥ ಆಧುನಿಕ, ಆದರೆ ಎಚ್ಚರ ತಪ್ಪದ ಮನಸ್ಸನ್ನು ಬಯಸುತ್ತಾರೆ. ತಮಗೆ ಹೊಸ ಸಂಗತಿಗಳನ್ನು ಕಲಿಸುವ ಸಂಗಾತಿಗಳನ್ನು ಇಷ್ಟಪಡುತ್ತಾರೆ. 

ಟೀಕೆಯನ್ನು ಇಷ್ಟಪಡುತ್ತಾರೆ
ವೃಶ್ಚಿಕ ರಾಶಿಯವರು ಕಟುವಾದ ವಿಮರ್ಶಕರು ಸಹ ಹೌದು. ಬೇರೆಯವರು ಏನಾದರೂ ತಪ್ಪು ಮಾಡುತ್ತಿದ್ದರೆ, ವೃಶ್ಚಿಕ ರಾಶಿಯವರು ಖಂಡಿತವಾಗಿಯೂ ತಡೆಯುತ್ತಾರೆ. ಇದರರ್ಥ ಅವರು ಎಲ್ಲವನ್ನು ನಿರ್ಣಯಿಸುತ್ತಾರೆ ಎಂದಲ್ಲ. ಅವರು ಸಲಹೆಯನ್ನು ಮಾತ್ರ ನೀಡುತ್ತಾರೆ. ವೃಶ್ಚಿಕ ರಾಶಿ ಚೇಳಿನ ಸಂಕೇತವಾಗಿದ್ದು, ಅವರು ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಮಾತನಾಡುವುದನ್ನು ನಂಬುತ್ತಾರೆ. ನಿಸ್ಸಂದೇಹವಾಗಿ, ಏನಾದರೂ ತಪ್ಪಾದಾಗ ಅವರು ಅದರ ವಿರುದ್ಧ ಮಾತನಾಡುತ್ತಾರೆ. ತಮ್ಮಲ್ಲೂ ನಕಾರಾತ್ಮಕ ಸಂಗತಿ ಕಂಡರೆ ಸಂಗಾತಿಗಳಾದವರು ಅದನ್ನು ಮುಕ್ತವಾಗಿ ವಿಮರ್ಶಿಸಬೇಕು ಎಂಧು ಬಯಸುತ್ತಾರೆ.

click me!