ಈ ರಾಶಿಯವರಿಗೆ ಸೆಕ್ಸ್ ಊಟದಷ್ಟೇ ಇಂಪಾರ್ಟೆಂಟು!

By Suvarna News  |  First Published Feb 6, 2021, 4:45 PM IST

ಸೆಕ್ಸ್ ವಿಚಾರದಲ್ಲಿ ಕೆಲವರು ಸದಾ ಮುಂದು. ಕೆಲವರಿಗೆ ಅದು ಜನ್ಮಕ್ಕಂಟಿಕೊಂಡೇ ಬಂದಿರುತ್ತದೆ. ಕೆಲವರಿಗೆ ಅದು ಊಟದಷ್ಟೇ ಮುಖ್ಯ. ಹಾಗಿದ್ದರೆ ಯಾವ ರಾಶಿಗೆ ಅದು ಮುಖ್ಯ? ನೋಡೋಣ.


ಕೆಲವು ಜನ್ಮರಾಶಿಯವರು ಸಾಕಷ್ಟು ಜೀವನಾಸಕ್ತಿ ಇಟ್ಟುಕೊಂಡು ಲೈಂಗಿಕ ಜೀವನವನ್ನು ಚೆನ್ನಾಗಿ ನಡೆಸುತ್ತಿರುವುದನ್ನು ನೀವು ನೋಡಬಹುದು. ನಿಮ್ಮ ಜನ್ಮರಾಶಿ ಹಾಗೂ ಗ್ರಹಗತಿಗಳೂ ನಿಮ್ಮ ಲೈಂಗಿಕ ಶಕ್ತಿ, ಆಸಕ್ತಿಗಳನ್ನು ತೀರ್ಮಾನ ಮಾಡುತ್ತೆ. ಹಾಗಿದ್ರೆ ಯಾವ್ಯಾವ ರಾಶಿಯವರು ಕಾಮವನ್ನು ಊಟದಷ್ಟೇ ಇಂಪಾರ್ಟೆಂಟು ಅಂತ ತಿಳೀತಾರೆ ನೋಡೋಣ.

ಮೇಷ ರಾಶಿ
ಇವರು ಸಂಗಾತಿಗಳ ಕಾಲ ಸದಾ ಒಂದಿಲ್ಲ ಒಂದು ಸಾಂಗತ್ಯವನ್ನು ಹೊಂದಿರಲು ಬಯಸುತ್ತಾರೆ. ಸೆಕ್ಸ್ ಕ್ರಿಯೆ ಇವರಿಗೆ ತುಂಬಾ ಇಷ್ಟ. ಹೊಸ ಹೊಸ ಸ್ಥಳಗಳಲ್ಲಿ, ಹೊಸ ವಿಧಾನಗಳಲ್ಲಿ ಲೈಂಗಿಕ ಸುಖ ಹೊಂದಲು ಬಯಸುತ್ತಾರೆ. ಹೊಸ ಸಂಗಾತಿಗಳನ್ನು ಸೃಷ್ಟಿಸಿಕೊಳ್ಳಲೂ ಹಾತೊರೆಯಬಹುದು. ಆದರೆ ಒಂದು ಪ್ರಾಯದ ಬಳಿಕ ಹೊಸ ಸಂಗಾತಿಗಳನ್ನು ಸೃಷ್ಟಿಸಿಕೊಳ್ಳುವುದು ಅಸಾಧ್ಯ. ಆದರೆ ಇವರು ಎಷ್ಟು ಚಾಲಾಕು ಎಂದರೆ, ತಮ್ಮ ಇಳಿಪ್ರಾಯದಲ್ಲೂ ಸಂಗಾತಿಗಳನ್ನು ಉಂಟುಮಾಡಿಕೊಳ್ಳಬಲ್ಲ ಜಾಣರು.

Tap to resize

Latest Videos

undefined

ಮಿಥುನ ರಾಶಿ
ಇವರಲ್ಲಿ ಸೆಕ್ಸ್ ಬಗ್ಗೆ ಆಸಕ್ತಿಯೂ ಇರುತ್ತೆ, ಶಕ್ತಿಯೂ ಸಾಕಷ್ಟು ಇರುತ್ತದೆ. ಇವರು ಲೈಂಗಿಕ ಸುಖವನ್ನು ಊಟದಂತೆ, ನಿದ್ರೆಯಂತೆ, ಪಾನೀಯದಂತೆ ದೇಹದ ಒಂದು ಪ್ರಮುಖ ಅವಶ್ಯಕತೆಯಾಗಿ ಪರಿಗಣಿಸುತ್ತಾರೆ. ಐವತ್ತು ವರ್ಷ ಪ್ರಾಯದ ನಂತರ ಇವರ ಮಾತುಗಳು ಹೆಚ್ಚು ಹೆಚ್ಚು ಸೆಕ್ಸ್ ಸಂಬಂಧಿ ಆಗುವುದನ್ನು ಗಮನಿಸಬಹುದು. ಮಾತು ಮಾತಿಗೂ ನಾಟಿ ಜೋಕ್‌ಗಳನ್ನು ಸಿಡಿಸಬಹುದು. ಮಹಿಳೆಯರೂ ಇದರಲ್ಲಿ ಕಮ್ಮಿ ಏನಿಲ್ಲ. ಹುಣಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಗಾದೆ ಮಾತು ಇವರಿಗೆ ಚೆನ್ನಾಗಿ ಹೊಂದುತ್ತದೆ.

ಶನಿಮಹಾತ್ಮನಿಗೆ ಈ ಕೆಲವು ರಾಶಿಗಳು ತುಂಬಾ ಇಷ್ಟ ...

ವೃಷಭ ರಾಶಿ
ಇವರು ದಾಂಪತ್ಯಕ್ಕಿಂತ ಆಚೆಗೆ ಸೆಕ್ಸ್ ಹೊಂದಲು ಹೆಚ್ಚಾಗಿ ಆಸೆ ಪಡುತ್ತಾ ಇರುತ್ತಾರೆ. ಇವರು ತಮ್ಮ ಅಧಿಕಾರವನ್ನು ಸೆಕ್ಸ್ ಪಡೆದುಕೊಳ್ಳಲು ವಿನಿಯೋಗ ಮಾಡುತ್ತಿರುತ್ತಾರೆ. ಇವರು ಪ್ರಭಾವಿಗಳಾಗಿರುವುದರಿಂದ, ಇವರು ಹೇಳಿದಂತೆ ಸೆಕ್ಸ್ ಒದಗಿಸುವವರೂ ಇವರ ಬಳಿ ಇರುತ್ತಾರೆ. ಸೆಕ್ಸ್‌ಗೆ ಬದಲಾಗಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿರುತ್ತಾರೆ. ಈ ರಾಶಿಯವರು ಪ್ರಭಾವಿಗಳಲ್ಲದಿದ್ದರೆ ಸೆಕ್ಸ್‌ಗಾಗಿ ಮಾತಿನ ಮೊರೆ ಹೋಗುತ್ತಾರೆ.

ಕುಂಭ ರಾಶಿ
ಇವರಿಗೆ ಸದಾ ಸೆಕ್ಸ್‌ನಲ್ಲಿ ವಿಜೃಂಭಿಸಲು ಆಶೆ. ವಿಜೃಂಭಿಸುವುದು ಎಂದರೆ ತಾನು ಸಂಗಾತಿಯನ್ನು ಖುಷಿಪಡಿಸಬಲ್ಲೆ ಎಂಬ ಅಹಂಕಾರ, ಖುಷಿಪಡಿಸುವ ಸಾಮರ್ಥ್ಯವೂ ಒಂದು ಮಟ್ಟದಲ್ಲಿ ಇರುತ್ತದೆ ಎನ್ನಿ. ಇವರ ಸೆಕ್ಸ್ ಅಂಗಗಳು ಚಟುವಟಿಕೆ ಕಳೆದುಕೊಂಡರೂ, ಆ ಕೊರತೆಯನ್ನು ಮಾತಿನ ಮೂಲಕ ತುಂಬಿಕೊಳ್ಳಲು ನೋಡುತ್ತಾರೆ. ಮಾತಿನ ಮೂಲಕ ಪರರನ್ನು ಉದ್ರೇಕಿಸುವ, ಚಕಿತಗೊಳಿಸುವ, ಟೆಂಪ್ಟ್ ಮಾಡುವ ಕಲೆ ಇವರಿಗೆ ಒಲಿದಿದೆ. ಪಾರ್ಟಿಗಳಲ್ಲಿ ಇವರು ತಮ್ಮ ಹಳೆಯ ಸೆಕ್ಸ್ ಅನುಭವಗಳನ್ನು ಶೇರ್ ಮಾಡಿಕೊಳ್ಳುತ್ತ ಮಿಂಚುತ್ತಾರೆ. 



ಸಿಂಹ ರಾಶಿ
ಇವರು ತಾರುಣ್ಯದಲ್ಲಿ ಸಾಕಷ್ಟು ಮೋಜು ಮಜಾ ಮಸ್ತಿ ಅನುಭವಿಸಿರುತ್ತಾರೆ. ಅದರ ನೆನಪು ಇಳಿವಯಸ್ಸಿನಲ್ಲೂ ಅವರನ್ನು ಲೈಂಗಿಕ ಸಾಹಸಗಳನ್ನು ಮಾಡುವಂತೆ ಪ್ರಚೋದಿಸುತ್ತಾ ಇರುತ್ತೆ. ಹೀಗಾಗಿ ಸಂಗಾತಿಯ ಮೂಲಕವೂ, ಸಂಗಾತಿಯನ್ನು ಹೊರತುಪಡಿಸಿಯೂ ಸೆಕ್ಸ್ ಅಡ್ವೆಂಚರ್‌ಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ. ಹೆಚ್ಚಿನ ವೇಳೆಯಲ್ಲಿ ಯಶಸ್ವಿಯೂ ಆಗುತ್ತಾರೆ. ಇವರ ಆರೋಗ್ಯವೂ ಅದಕ್ಕೆ ಪೂರಕವಾಗಿಯೇ ಇರುತ್ತದೆ. ಹೀಗಾಗಿ ವೃದ್ಧರಾದರೂ ಇವರ ಸೆಕ್ಸ್ ಡ್ರೈವ್ ಕುಂದುವುದಿಲ್ಲ. 

ಧನು ರಾಶಿ
ಬಿಲ್ಲು ಸದಾ ಹೆದೆ ಏರಿಯೇ ಇರುವಂತೆ ಇವರೂ ಹೆದೆ ಏರಿಸಿಯೇ ಇರುತ್ತಾರೆ! ಬಾಣ ಬಿಡಲು ಸಿದ್ಧರಾಗಿಯೇ ಇರುತ್ತಾರೆ. ಬಾಣ ಬಿಡಲು ಇವರಿಗೆ ಇಂಥವರೇ ಬೇಕೆಂದೇನಿಲ್ಲ. ಅದು ಸಂಗಾತಿಯೇ ಆಗಿದ್ದರೂ ಆಯಿತು, ಬೇರೆಯವರಾದರೂ ಆಯಿತು. ಇವರದು ಅನುಭವ ಆಧಾರಿತವಾದ ಸೆಕ್ಸ್ ಶಕ್ತಿ. ಅನುಭವವೇ ಇವರಿಗೆ ಮುಖ್ಯ. ಸಂಗಾತಿ ಅಮುಖ್ಯ. ತಾರುಣ್ಯದಲ್ಲಿ ಸಾಕಷ್ಟು ಸೆಕ್ಸ್ ಪಡೆಯದ ಇವರು ಅದೇ ಹಸಿವಿನಿಂದಲೇ ವೃದ್ಧಾಪ್ಯದಲ್ಲಿ ಅದನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ.

ರಾಶಿಯ ಅನುಸಾರ ಈ ವಸ್ತುಗಳನ್ನು ಮನೆಯಲ್ಲಿಡಿ: ಸಂಪತ್ತು ವೃದ್ಧಿ ಖಚಿತ ...

 

click me!