ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...‍!

By Suvarna News  |  First Published Feb 4, 2021, 5:52 PM IST

ದೇವರ ಕೃಪೆ ಪಡೆಯಲು ಅನೇಕ ಮಾರ್ಗಗಳಿವೆ. ತಪಸ್ಸನ್ನಾಚರಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದ ಬಗ್ಗೆ ಪುರಾಣಗಳಲ್ಲಿ ತಿಳಿಸಿದ್ದಾರೆ. ಅದೇ ರೀತಿ ಜಪಮಾಲೆಯನ್ನು ಉಪಯೋಗಿಸಿ ಜಪ ಮಾಡಿ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ. 108 ಮಣಿಗಳನ್ನು ಹೊಂದಿರುವ ಜಪಮಾಲೆಯು ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದು, ದೇವರ ಕೃಪೆ ಪಡೆಯಲು ಜಪಮಾಲೆಯು ಒಂದು ಉತ್ತಮ ಸಾಧನವಾಗಿದೆ. ಈ ಜಪಮಾಲೆಗಳಲ್ಲಿ ಅನೇಕ ವಿಧಗಳಿವೆ. ಜಪಮಾಲೆಯ ವಿಧಗಳು ಮತ್ತು ಫಲಗಳ ಬಗ್ಗೆ ತಿಳಿಯೋಣ...


ದೇವರ ಕೃಪೆ ಪಡೆಯಲು ಹಲವಾರು ಬಗೆಗಳಿವೆ. ಪೂಜೆ ಮಾಡುವುದರ ಜೊತೆಗೆ ಭಜನೆ, ಪ್ರದಕ್ಷಿಣೆ, ಹೋಮ-ಹವನ, ಜಪ-ತಪಗಳಿಂದ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ. ಹಾಗೆಯೆ ಶಾಸ್ತ್ರಗಳಲ್ಲಿ ಬೇರೆ ಬೇರೆ ರೀತಿಯ ಜಪಮಾಲೆಗಳ ಬಗ್ಗೆ ತಿಳಿಸಿದ್ದಾರೆ. ಬೇರೆ ಬೇರೆ ಬಗೆಯ ಜಪಮಾಲೆಗಳಿಂದ ವಿವಿಧ ರೀತಿಯ ಫಲವನ್ನು ಪಡೆಯಬಹುದಾಗಿದೆ. 

ಜಪಮಾಲೆಯನ್ನು ಧರಿಸುವುದಷ್ಟೆ ಅಲ್ಲದೆ, ಜಪಮಾಲೆಯನ್ನು ಉಪಯೋಗಿಸಿ ಮಂತ್ರವನ್ನು ಜಪಿಸುವುದರಿಂದ ವಿಶೇಷ ಫಲ ಸಿಗುತ್ತದೆ. ಜಪಮಾಲೆಯಲ್ಲಿ 108 ಮಣಿಗಳಿರುತ್ತವೆ. ಜಪಮಣಿಗಳು ಉಪನಿಷತ್ತುನ್ನು ಪ್ರತಿನಿಧಿಸುತ್ತವೆ. ಉಪನಿಷತ್ತಿನಲ್ಲಿ ಋಷಿಮುನಿಗಳು ಹೇಳಿರುವ ಪ್ರಕಾರ 108 ಮುಖ್ಯ ಗ್ರಂಥಗಳಿವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ 12 ನಕ್ಷತ್ರಪುಂಜಗಳು ಮತ್ತು ಅದರ 9 ವಿಭಾಗಗಳಿಗೆ ಚಂದ್ರಕಲಗಳೆಂದು ಕರೆಯಲಾಗುತ್ತದೆ.

ಇದನ್ನು ಓದಿ: ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಈ 6 ರಾಶಿಯವರಿಗೆ ದೊಡ್ಡ ಬದಲಾವಣೆ..! 

Tap to resize

Latest Videos

undefined

ಜಾತಕದ ಹನ್ನೆರಡು ಮನೆಗಳು ಮತ್ತು ಒಂಭತ್ತು ಗ್ರಹಗಳು ಹನ್ನೆರಡು ಬಾರಿ ಲೆಕ್ಕಹಾಕಿದಾಗ 108ಕ್ಕೆ ಸಮನಾಗಿರುತ್ತದೆಂದು ಹೇಳಲಾಗುತ್ತದೆ. ದೇವತೆಗಳ 108 ನಾಮಾವಳಿಗಳು ಸಹ 108ರ ಶಕ್ತಿಯನ್ನು ತೋರಿಸುತ್ತದೆ. 108ರಲ್ಲಿ ಸಂಖ್ಯೆ ಒಂದು ಉನ್ನತ ಮತ್ತು ಸತ್ಯವನ್ನು ಸೂಚಿಸುತ್ತದೆ. ಸೊನ್ನೆಯು ಆಧ್ಯಾತ್ಮಿಕ ಭಾವನೆ ಮತ್ತು ನಿರ್ಲಿಪ್ತತೆಯನ್ನು ಸೂಚಿಸಿದರೆ, ಸಂಖ್ಯೆ ಎಂಟು ಎನ್ನುವುದು ಶಾಶ್ವತ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಜಪಮಾಲೆಯಲ್ಲಿ 108 ಮಣಿಗಳಿರುತ್ತವೆ.
 
ಜಪಮಾಲೆಯು ಒಂದು ಸಕಾರಾತ್ಮಕ ಶಕ್ತಿಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಜಪಮಾಲೆಯ ಬಗ್ಗೆ ಮತ್ತು ಅದನ್ನು ಉಪಯೋಗಿಸುವಾಗ ಇರುವ ನಿಯಮಗಳ ಬಗ್ಗೆ ತಿಳಿಯುವುದು ಅವಶ್ಯಕ. ವಿವಿಧ ಪ್ರಕಾರಗಳ ಜಪಮಾಲೆ ಇದ್ದು, ಪ್ರತ್ಯೇಕ ಜಪಮಾಲೆಯಿಂದ ಬೇರೆ ಬೇರೆ ರೀತಿಯ ಫಲವನ್ನು ಪಡೆಯಬಹುದಾಗಿದೆ. ಯಾವ ಜಪಮಾಲೆಯಿಂದ ಯಾವ ಫಲ? ತಿಳಿಯೋಣ..

ಸ್ಪಟಿಕ ಮಾಲೆ

ಸ್ಪಟಿಕ ಮಾಲೆಯು ಅತ್ಯಂತ ಶಕ್ತಿಯುತ ಜಪಮಾಲೆಯಾಗಿದ್ದು, ಇದನ್ನು ಹೆಚ್ಚಾಗಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವಾಗ ಮಾಡುವ ಜಪಕ್ಕೆ ಈ ಮಾಲೆಯನ್ನು ಉಪಯೋಗಿಸಲಾಗುತ್ತದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಶುಕ್ರ ಗ್ರಹದ ಸ್ಥಿತಿಯು ಸರಿಯಿಲ್ಲದೆ, ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಂಥವರು ಸ್ಪಟಿಕ ಮಾಲೆಯನ್ನು ಧರಿಸುವುದು ಉತ್ತಮ. ಇದರಿಂದ ಸಮಸ್ಯೆಯು ನಿವಾರಣೆಯಾಗುವ ಸಂಭವವಿರುತ್ತದೆ. ಸ್ಪಟಿಕ ಮಾಲೆಯನ್ನು ಧರಿಸಿ, ಶುಕ್ರ ಗ್ರಹದ ಮತ್ತು ಲಕ್ಷ್ಮೀ ದೇವಿಗೆ ಸಂಬಂಧಪಟ್ಟ ಮಂತ್ರಗಳನ್ನು ಜಪಿಸಬೇಕು. ಇದರಿಂದ ಧನಲಾಭವಾಗುವುದಲ್ಲದೆ, ಸಂಪತ್ತು ವೃದ್ಧಿಸುತ್ತದೆ.

ತುಳಸಿ ಮಾಲೆ (ತುಳಸಿ ಮಣಿ ಮಾಲೆ)

ತುಳಸಿ ಮಾಲೆಯು ಅತ್ಯಂತ ಪವಿತ್ರವಾದ ಜಪಮಾಲೆಗಳಲ್ಲಿ ಒಂದಾಗಿದೆ. ಈ ಜಪಮಾಲೆಯನ್ನು ಧರಿಸುವುದರಿಂದ  ಶ್ರೀಹರಿಯ ಕೃಪೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಮಾಲೆಯನ್ನು ಹಾಕಿಕೊಳ್ಳುವುದರಿಂದ ಜೀವನದಲ್ಲಿ ದುಃಖ-ದುಮ್ಮಾನಗಳು ದೂರವಾಗಿ, ಯಶಸ್ಸು ಮತ್ತು ಕೀರ್ತಿ ಲಭಿಸುತ್ತದೆ. ಆದರೆ ಈ ಜಪಮಾಲೆಯನ್ನು ಧರಿಸಿದಾಗ ತಾಮಸ ಆಹಾರಗಳನ್ನು ಸೇವಿಸುವುದಾಗಲಿ ಅಥವಾ ಅನೈತಿಕ ಕಾರ್ಯಗಳನ್ನು ಮಾಡುವುದಾಗಲಿ ನಿಷಿದ್ಧವೆಂದು ಹೇಳಲಾಗುತ್ತದೆ. ಇದರಿಂದ ಗಳಿಸಿದ ಪುಣ್ಯ ನಷ್ಟವಾಗುವುದಲ್ಲದೆ, ಪಾಪ ತಗುಲುತ್ತದೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ರಾಶಿಯವ್ರು ತುಂಬಾ ಮೃದು, ನಿಮ್ಮದು-ನಿಮ್ಮವರ ರಾಶಿಯೂ ಇದೆಯಾ ನೋಡಿ…! 

ರುದ್ರಾಕ್ಷಿ ಮಾಲೆ

ರುದ್ರಾಕ್ಷಿಯು ಮಹಾದೇವನ ಕಣ್ಣಿನಿಂದ ಬಿದ್ದ ಬಿಂದುವಿನಿಂದ ಉದ್ಭವಿಸಿದೆ ಎಂದು ಹೇಳಲಾಗುತ್ತದೆ. ರುದ್ರಾಕ್ಷಿ ಧಾರಣೆಯು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯವನ್ನು ಕಾಪಾಡುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಈಶ್ವರನ ಕೃಪೆ ಪ್ರಾಪ್ತವಾಗುವುದಲ್ಲದೆ. ಎಲ್ಲ ಪ್ರಕಾರದ ಗ್ರಹದೋಷಗಳು ನಿವಾರಣೆಯಾಗುತ್ತದೆ. ರುದ್ರಾಕ್ಷಿಯ ಜಪಮಾಲೆಯಿಂದ ಜಪ ಮಾಡುವುದರಿಂದ ಏಕಾಗ್ರತೆ ಹೆಚ್ಚುವುದಲ್ಲದೆ, ಒತ್ತಡದಿಂದ ಉಂಟಾಗುವ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ.

ಕೆಂಪು ಶ್ರೀಗಂಧದ ಜಪಮಾಲೆ

ಮಂಗಳ ಗ್ರಹದ ದೋಷವಿದ್ದಾಗ ಕೆಂಪು ಶ್ರೀಗಂಧದ ಜಪಮಾಲೆಯನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ಮಾಲೆಯನ್ನು ಧರಿಸುವುದರಿಂದ ಮಂಗಳ ಗ್ರಹದ ಶುಭ ಪ್ರಭಾವವು ಉಂಟಾಗುತ್ತದೆ. ದುರ್ಗಾ ದೇವಿಯ ಬೀಜಮಂತ್ರವನ್ನು ಈ ಮಾಲೆಯನ್ನು ಉಪಯೋಗಿಸಿ ಪಠಿಸುವುದರಿಂದ ದುರ್ಗೆಯ ಕೃಪೆ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಶತ್ರುಗಳ ನಾಶವಾಗುತ್ತದೆ.

ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..! 

ಕಮಲಾಕ್ಷ ಮಾಲೆ
ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದ ಜಪಮಾಲೆ ಕಮಲಾಕ್ಷ ಜಪಮಾಲೆ ಎಂದು ಹೇಳಲಾಗುತ್ತದೆ. ಈ ಮಾಲೆಯಿಂದ ಲಕ್ಷ್ಮೀಗೆ ಸಂಬಂಧಿಸಿದ ಮಂತ್ರವನ್ನು ಜಪ ಮಾಡುವುದರಿಂದ ಐಶ್ವರ್ಯ ವೃದ್ಧಿಸುವುದಲ್ಲದೆ, ಧನಲಾಭವು ಉಂಟಾಗುತ್ತದೆ. ಇದರಿಂದ ಭೌತಿಕ ಸುಖವು ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.

click me!