Ways To Please Saturn : ಕೋಪಗೊಂಡ ಶನಿ ದೇವರನ್ನು ಒಲಿಸಿಕೊಳ್ಳುವ ದಾರಿ ಇಲ್ಲಿದೆ..

By Suvarna News  |  First Published Dec 19, 2021, 9:28 AM IST

ಸನಾತನ ಧರ್ಮದಲ್ಲಿ ಪ್ರತಿ ದೇವರಿಗೂ ಒಂದೊಂದು ದಿನ ಮೀಸಲಿದೆ. ಆ ದಿನ ದೇವರ ಪೂಜೆ ಮಾಡಿದ್ರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಎಲ್ಲರ ನಡುಕಕ್ಕೆ ಕಾರಣವಾಗುವ ಶನಿ ದೇವರಿಗೂ ಒಂದು ದಿನವಿದೆ. ಆ ದಿನ ಶನಿಯ ವಿಶೇಷ ಕೆಲಸ ಮಾಡಿದ್ರೆ ಸಂಕಷ್ಟ ದೂರವಾಗಿ ನೆಮ್ಮದಿ ನಿಮ್ಮದಾಗುತ್ತದೆ. 
 


ಶನಿ(Shani)ಯನ್ನು ನ್ಯಾಯದೇವ ಎಂದೇ ಕರೆಯಲಾಗುತ್ತದೆ. ಶನಿ ಎಂಬ ಹೆಸರು ಕೇಳುತ್ತಿದ್ದಂತೆ ಅನೇಕರು ಬೆಚ್ಚಿ ಬೀಳುತ್ತಾರೆ. ಆದರೆ ವಾಸ್ತವದಲ್ಲಿ ಶನಿದೇವ ಕೆಟ್ಟವನಲ್ಲ. ಶನಿ ಸತ್ಯವಂತ, ನ್ಯಾಯವಂತ. ನ್ಯಾಯದಲ್ಲಿ ನಡೆಯುವ ಜನರ ಜೊತೆ ಶನಿ ಸದಾ ಇರುತ್ತಾನೆ. ಪ್ರಾಮಾಣಿಕರ ಯಶಸ್ಸಿಗೆ ಶನಿ ನೆರವಾಗುತ್ತಾನೆ. ಹಾಗಾಗಿ ಸತ್ಯ, ನಿಷ್ಠೆಗೆ ವಿರುದ್ಧವಾಗಿ ನಡೆದವರಿಗೆ ಆತ ಕೆಟ್ಟವನು.  ಶನಿಯ ವಕ್ರದೃಷ್ಟಿಗೆ ಒಳಗಾದವರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿಯ ಕೋಪದಿಂದಾಗಿ ಜೀವನದಲ್ಲಿ ಉದ್ಯೋಗ, ವ್ಯಾಪಾರ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತಿಗೆ ಬರುತ್ತಲೇ ಇರುತ್ತವೆ. ಹಿಂದೂ ಧರ್ಮ(Hinduism)ದಲ್ಲಿ ಶನಿದೇವರಿಗೆ ಮಹತ್ವದ ಸ್ಥಾನವಿದೆ. ಧಾರ್ಮಿಕ ಗ್ರಂಥಗಳಲ್ಲಿ, ಶನಿ ದೇವನನ್ನು ಸೂರ್ಯನ ಮಗ ಎಂದು ಹೇಳಲಾಗಿದೆ. ಜ್ಯೋತಿಷ್ಯಶಾಸ್ತ್ರ(Astrology)ದ ಪ್ರಕಾರ, ಶನಿಯ ಕೃಪೆಗೆ ಪಾತ್ರರಾದ್ರೆ ಭಿಕ್ಷುಕ (Beggar) ಕೂಡ ಕೋಟ್ಯಾಧಿಪತಿಯಾಗಬಲ್ಲ.ಬಡವನನ್ನು ರಾಜನನ್ನಾಗಿ ಮಾಡುವ ಶಕ್ತಿ ಶನಿಗಿದೆ. ಹಾಗೆ ಶ್ರೀಮಂತನನ್ನು ಬೀದಿಗೆ ತರುವ ಶಕ್ತಿಯೂ ಆತನಿಗಿದೆ. ಸಾಡೇಸಾತಿ ಶನಿಶುರುವಾದರೆ  ಜನರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.ಶನಿಯನ್ನು ಸದಾ ಶಾಂತವಾಗಿಟ್ಟುಕೊಳ್ಳುವುದು ಒಳ್ಳೆಯದು. ಶನಿವಾರದಂದು ಶನಿ ದೇವರ ವಿಶೇಷ ಪೂಜೆ ಮಾಡಬೇಕಾಗುತ್ತದೆ. ಕೆಳಗಿನ ಐದು ಕೆಲಸಗಳನ್ನು ಮಾಡುವುದರಿಂದ ಶನಿ ಎಂದೂ ಭಕ್ತರ ಮೇಲೆ ಮುನಿಸಿಕೊಳ್ಳುವುದಿಲ್ಲ. ಭಕ್ತರು ಬಯಸಿದ್ದನ್ನು ಶನಿದೇವ ಕೊಡುತ್ತಾನೆಂದು ನಂಬಲಾಗಿದೆ.

ಶನಿಯ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು ? :

Latest Videos

undefined

ಶನಿವಾರ ದಾನ : ಶನಿವಾರದಂದು ಅನೇಕರು ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಶನಿವಾರ ದೇವಸ್ಥಾನಕ್ಕೆ ಹೋಗುವುದು ಮಾತ್ರವಲ್ಲ ದಾನ ಕೂಡ ಮಾಡಬೇಕಾಗುತ್ತದೆ. ಸಾಡೇ ಸಾಥ್ ಶನಿ ಅಥವಾ ಶನಿಗ್ರಹ ಸಮಸ್ಯೆಯಿಂದ ಬಳಲುತ್ತಿರುವವರು ಅರ್ಧ ಕೆ.ಜಿ ಕರಿ ಎಳ್ಳು, ಒಂದು ಕೆ,ಜಿ ಸಪ್ತ ಧಾನ್ಯ, ಅರ್ಧ ಕೆ.ಜಿ ಕಾಳು, ಸ್ವಲ್ಪ ಕಬ್ಬಿಣದ ಮೊಳೆಗಳು, ಸಾಸಿವೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ತುಂಬಿ ನೀಲಿ ಬಟ್ಟೆಯಲ್ಲಿ ಕಟ್ಟಬೇಕು. ಅದನ್ನು ಶನಿ ದೇವಸ್ಥಾನದಲ್ಲಿ ದಾನ ನೀಡಬೇಕು. ದಾನ ಮಾಡುವಾಗ, ನೋವು ಕಳೆದು ಸುಖ ನೀಡು ಎಂದು ಪ್ರಾರ್ಥನೆ (Prayer )ಮಾಡಬೇಕು. 

2022 Horoscope: ಹೊಸ ವರ್ಷದಲ್ಲಿ ನಿಮ್ಮ ರಾಶಿಗೆ ಭವಿಷ್ಯ ಏನಿದೆ ನೋಡಿ..

ಶನಿವಾರ ನೆರಳು ದಾನ : ಶನಿವಾರದಂದು ಛಾಯಾ ದಾನ ವಿಶೇಷ. ಇದರಿಂದ ಶನಿಯ ದೋಷಗಳು ದೂರವಾಗುತ್ತವೆ. ಶನಿವಾರದಂದು ಕಬ್ಬಿಣದ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ನಂತರ ಯಾವುದೇ ಶನಿ ದೇವಸ್ಥಾನಕ್ಕೆ ಈ ಎಣ್ಣೆಯನ್ನು ದಾನ ಮಾಡಿ. ಕೆಲವು ಶನಿವಾರಗಳ ಕಾಲ ನಿರಂತರವಾಗಿ ಛಾಯಾದಾನ ಮಾಡುವುದರಿಂದ ಶನಿದೋಷ ನಿವಾರಣೆಯಾಗುತ್ತದೆ. ಇದಲ್ಲದೆ, ಶನಿವಾರದಂದು ರೊಟ್ಟಿಗೆ ಸಾಸಿವೆ ಎಣ್ಣೆ (Mustard oil)ಯನ್ನು ಹಚ್ಚಿ ಕಪ್ಪು ನಾಯಿಗೆ ನೀಡಿದರೆ ಶನಿ ಕೃಪೆ ಪ್ರಾಪ್ತವಾಗುತ್ತದೆ. 

ಸೂರ್ಯೋದಯ-ಸೂರ್ಯಾಸ್ತದ ಸಮಯದಲ್ಲಿ ಅಶ್ವತ್ಥ ಪೂಜೆ : ಶನಿವಾರ ಸೂರ್ಯೋದಯದ ಸಮಯದಲ್ಲಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಅಶ್ವತ್ಥ ಮರದ ಪೂಜೆ ಮಾಡಬೇಕು.ಹೀಗೆ ಮಾಡುವುದ್ರಿಂದ ಶನಿದೇವನ ಕೃಪೆಯೊಂದಿಗೆ ಮಾತೆ ಲಕ್ಷ್ಮಿ(Laxmi)ಯ ಅನುಗ್ರಹವೂ ದೊರೆಯುತ್ತದೆ. ಅಶ್ವತ್ಥ ಮರ ಕೃಷ್ಣನ ರೂಪವಾಗಿದೆ. ಶನಿ ದೇವನನ್ನು ಶ್ರೀ ಕೃಷ್ಣ(Krishna)ನ ಭಕ್ತನೆಂದು ಪರಿಗಣಿಸಲಾಗಿದೆ. ಹಾಗಾಗಿ ಅಶ್ವತ್ಥ ಮರಕ್ಕೆ ಪೂಜೆ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ.

ಹನುಮಾನ್ ಚಾಲೀಸಾ(Hanuman Chalisa)ದಲ್ಲಿದೆ ಯಶಸ್ಸಿನ ಗುಟ್ಟು : ಶನಿದೇವರ ಕೃಪೆಗೆ ಪಾತ್ರರಾಗಲು ಪ್ರತಿಯೊಬ್ಬರೂ ಹನುಮಾನ್ ಚಾಲೀಸಾ ಓದಬೇಕು. ವಿಶೇಷವಾಗಿ ಶನಿವಾರದಂದು ಹನುಮಾನ್ ಚಾಲೀಸಾವನ್ನು ಓದಬೇಕು. ಸೂರ್ಯಾಸ್ತದ ನಂತರ ಹನುಮಾನ್ ಚಾಲೀಸಾ ಓದುವುದು ಒಳ್ಳೆಯ ಫಲಿತಾಂಶ ಸಿಗುತ್ತದೆ. ಹನುಮಾನ್ ಚಾಲೀಸಾ ಜೊತೆ ಸುಂದರ ಕಾಂಡ(Sundara Kanda)ವನ್ನು ಕೂಡ ಓದಬಹುದು. 

Vaastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿಟ್ಟುಕೊಂಡಿದ್ದರೆ ಕಾಡುವುದು ಸಮಸ್ಯೆ!

ಶನಿದೇವ ಕಾಲಕಾಲಕ್ಕೆ ಪರೀಕ್ಷೆ ಮಾಡುತ್ತಿರುತ್ತಾನೆ. ಮೂಳೆಗಳ ಸಮಸ್ಯೆ,ಮೂಳೆ ಮುರಿತ, ಕೀಲು ನೋವು ಶನಿದೇವನ ಪರೀಕ್ಷೆಯ ಒಂದು ಭಾಗ ಎನ್ನಲಾಗುತ್ತದೆ. ಒಂದು ವೇಳೆ ನಿಮಗೂ ಈ ಸಮಸ್ಯೆ ಕಾಡಿದ್ದರೆ ಶನಿ ನಿಮ್ಮ ಮೇಲೆ ಕಣ್ಣಿಟ್ಟಿದ್ದಾನೆ ಎಂದುಕೊಳ್ಳಿ.  

click me!