ಸುಬ್ರಹ್ಮಣ್ಯ ಹಾಗೂ ಗಣಪತಿ ಪರಶಿವನ ಇಬ್ಬರು ಮಕ್ಕಳೆಂಬುದು ಜಗಜ್ಜನಿತ. ಅವರ ಹೊರತಾಗಿ ಇನ್ನೂ ಏಳು ಮಕ್ಕಳು ಶಿವನಿಗಿದ್ದಾರೆ. ಅವರಲ್ಲಿ ಒಬ್ಬಳು ಮಗಳೂ ಇದ್ದಾಳೆ. ಯಾರು ಅವರೆಲ್ಲ ಗೊತ್ತಾ..
ಶಿವನ ಮಕ್ಕಳಾದ ಗಣೇಶ ಹಾಗೂ ಸುಬ್ರಹ್ಮಣ್ಯ ಜನಪ್ರಿಯರಷ್ಟೇ ಅಲ್ಲ, ಬಹಳ ಪ್ರಾಮುಖ್ಯತೆ ಪಡೆದ ದೇವರಾಗಿದ್ದಾರೆ. ಆದರೆ, ಶಿವನಿಗೆ ಇನ್ನೂ ಏಳು ಮಂದಿ ಮಕ್ಕಳಿದ್ದಾರೆ. ಅವರಲ್ಲೊಬ್ಬ ಮಗಳೂ ಇದ್ದಾಳೆ. ಅವರಲ್ಲಿ ಕೆಲವರನ್ನು ಈಶ್ವರ ದತ್ತು ಪಡೆದಿದ್ದರೆ, ಮತ್ತೆ ಕೆಲವರು ಪವಾಡಗಳ ಫಲವಾಗಿದ್ದಾರೆ. ಹಾಗಿದ್ದರೆ ಮಕ್ಕಳ ಬಗ್ಗೆ ತಿಳಿವ ಮೊದಲು ಶಿವನಿಗೆಷ್ಟು ಪತ್ನಿಯರೆಂದು ತಿಳಿಯೋಣ.
ಶಿವನ ಮೊದಲ ಪತ್ನಿ ರಾಜ ದಕ್ಷನ ಪುತ್ರಿ ಸತಿ(Sati). ಸತಿ ಯಜ್ಞಕುಂಡಕ್ಕೆ ಹಾರಿ ಜೀವ ಬಿಡುತ್ತಾಳೆ. ನಂತರ ಪಾರ್ವತಿ(Parvati)ಯಾಗಿ ಪುನರ್ಜನ್ಮ ಪಡೆಯುತ್ತಾಳೆ. ಪಾರ್ವತಿ ಕೂಡಾ ಶಿವನನ್ನೇ ವರಿಸುತ್ತಾಳೆ. ಶಿವನ ಮೂರನೇ ಪತ್ನಿ ಕಾಳಿ, ನಾಲ್ಕನೇ ಪತ್ನಿ ಉಮಾ ಹಾಗೂ ಐದನೇ ಪತ್ನಿ ಗಂಗಾ ಮಾತೆ(Ganga Mata)ಯಾಗಿದ್ದಾರೆ. ಪಾರ್ವತಿಗೆ ಕಾರ್ತಿಕೇಯ, ಗಣಪತಿ- ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳು. ಹೆಸರು ಅಶೋಕ ಸುಂದರಿ. ತನ್ನ ಒಂಟಿತನದ ಕಾರಣಕ್ಕಾಗಿ ಪಾರ್ವತಿ ಮಗಳನ್ನು ಸೃಷ್ಟಿಸಿದಳೆನ್ನಲಾಗುತ್ತದೆ. ಹಾಗಿದ್ದರೆ, ಶಿವನ ಮಕ್ಕಳು ಯಾರ್ಯಾರು ನೋಡೋಣ.
ಕಾರ್ತಿಕೇಯ(Kartikeya)
ಸುಬ್ರಹ್ಮಣ್ಯ, ಸ್ಕಂದ ಹಾಗೂ ಮುರುಗನ್ ಹೆಸರಿಂದಲೂ ಕಾರ್ತಿಕೇಯ ಜನಪ್ರಿಯ.
ಗಣೇಶ(Ganesha)
ಪ್ರಥಮ ಪೂಜಿತನಾದ ಗಣಪತಿಯ ಹುಟ್ಟಿನ ಕತೆ ಎಲ್ಲರಿಗೂ ತಿಳಿದೇ ಇದೆ.
undefined
ಸುಖೇಶ್(Sukesh)
ಶಿವನ ಮೂರನೇ ಪುತ್ರ ಸುಖೇಶ್. ಹಯತಿ ಹಾಗೂ ಪ್ರಹೆತಿ ಎಂಬಿಬ್ಬರು ರಾಕ್ಷಸರಿದ್ದರು. ಪ್ರಹೆತಿ ನಿಧಾನವಾಗಿ ದೇವತೆಯಾದ, ಹಯತಿ ಕಾಳನ ಪುತ್ರಿ ಭಯಳನ್ನು ವಿವಾಹವಾದ. ಭಯಳಿಂದ ಆತನಿಗೆ ವಿದ್ಯುತ್ಕೇಶ್ ಹುಟ್ಟಿದ. ಈತ ಸಂಧ್ಯಾಳ ಪುತ್ರಿಯಾದ ಸಾಲ್ಕಟಳನ್ನು ವಿವಾಹವಾದ. ಇವರಿಗೆ ಹುಟ್ಟಿದ ಮಗನನ್ನು ಇಬ್ಬರೂ ಅನಾಥನನ್ನಾಗಿ ಬಿಟ್ಟರು. ಇದನ್ನು ಗಮನಿಸಿದ ಶಿವ ಹಾಗೂ ಪಾರ್ವತಿ ಆ ಅನಾಥ ಮಗುವನ್ನು ರಕ್ಷಿಸಿ ದತ್ತು ತೆಗೆದುಕೊಂಡರು. ಅದಕ್ಕೆ ಸುಖೇಶ ಎಂದು ಹೆಸರಿಟ್ಟರು.
Weekly Horoscope: ಈ ರಾಶಿಗೆ ಪಾಲುದಾರಿಕೆ ಕೆಲಸಗಳಲ್ಲಿ ಎಚ್ಚರ ಅಗತ್ಯ, ನಿಮ್ಮ ರಾಶಿಗೇನಿದೆ ನೋಡಿ..
ಜಲಂಧರ್(Jalandhar)
ಶಿವನ ನಾಲ್ಕನೇ ಪುತ್ರ ಜಲಂಧರ. ಭಗವದ್ಗೀತೆಯಂತೆ, ಶಿವನು ಒಮ್ಮೆ ಸಮುದ್ರಕ್ಕೆ ಹಾರಿದ. ಆಗ ಆತನ ಪವಾಡದಿಂದ ಹುಟ್ಟಿದವನೇ ಜಲಂಧರ್. ಜಲಂಧರ್ ಬಹಳ ಶಕ್ತಿಶಾಲಿಯಾಗಿದ್ದ. ಆತನ ಪತ್ನಿ ಬೃಂದ. ಬೃಂದಾಳ ತಂದೆಯ ಕಡೆಯಿಂದ ಜಲಂಧರ್‌ಗೆ ಅಪಾರ ಶಕ್ತಿ ಲಭಿಸಿತ್ತು. ಹೀಗಾಗಿ, ಯಾವ ದೇವಾನುದೇವತೆಗಳಿಗೂ ಆತನನ್ನು ಸೋಲಿಸುವುದು ಸಾಧ್ಯವಾಗುತ್ತಿರಲಿಲ್ಲ. ವಿಷ್ಣುವನ್ನು ಸೋಲಿಸಿ ಲಕ್ಷ್ಮೀಯನ್ನು ಎತ್ತಿಕೊಂಡು ಹೋಗಲು ಜಲಂಧರ್ ಯೋಜಿಸಿದ. ನಂತರದಲ್ಲಿ ಶಿವನೇ ಜಲಂಧರ್‌ನನ್ನು ಸಂಹರಿಸಿದ.
ಅಯ್ಯಪ್ಪ(Ayyappa)
ಅಯ್ಯಪ್ಪನು ಶಿವ ಹಾಗೂ ಮಾತೆ ಇಶೆರಿನಿಯ ಪುತ್ರ. ವಿಷ್ಣುವಿನ ಮಹಿಳಾ ರೂಪವನ್ನು ನೋಡಿ ಶಿವ ಉದ್ರೇಕಗೊಂಡ. ಆಗ ಅವನ ವೀರ್ಯದಿಂದ ಜನಿಸಿದವನೇ ಅಯ್ಯಪ್ಪ. ಶಿವ ಹಾಗೂ ವಷ್ಣುವಿನ ಅಂಶಗಳನ್ನು ಹೊತ್ತು ಹುಟ್ಟಿದ್ದರಿಂದಲೇ ಅಯ್ಯಪ್ಪನಿಗೆ ಹರಿಹರ ಪುತ್ರ ಎಂದೂ ಹೇಳುತ್ತಾರೆ. ಶಬರಿಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪನಿಗೆ ಅಪಾರ ಭಕ್ತವರ್ಗವಿದೆ.
2022 Horoscope: ಹೊಸ ವರ್ಷದಲ್ಲಿ ನಿಮ್ಮ ರಾಶಿಗೆ ಭವಿಷ್ಯ ಏನಿದೆ ನೋಡಿ..
ಭೂಮ(Bhuma)
ಶಿವ ಕೈಲಾಶ ಪರ್ವತದ ಮೇಲೆ ಸಮಾಧಿ ಸ್ಥಿತಿಯಲ್ಲಿದ್ದಾಗ ಅವನ ಮೈಯಿಂದ ಭೂದೇವಿಯ ಮೇಲೆ ಬೆವರ ಹನಿಗಳು ಬಿದ್ದವು. ಭೂಮಿ ಈ ಬೆವರಿನಿಂದ ಹಡೆದ ಮಗುವೇ ಭೂಮ. ನಾಲ್ಕು ಕೈಗಳು ಹಾಗೂ ಕೆಂಪು ಬಣ್ಣದ ಭೂಮನಿಗೆ ಶಿವನು ಮಂಗಳ ಲೋಕವನ್ನು ವರವಾಗಿ ನೀಡಿದ.
ಅನ್ಧಕ್(Andhak)
ಅಂಧಕ್ ಶಿವನ ಏಳನೇ ಪುತ್ರ.
ಕುಜ(Khuja)
ಶಿವನ ಎಂಟನೇ ಪುತ್ರನಾಗಿರುವ ಕುಜ, ಭೂಮಿಯಿಂದ ಕಿರಣಗಳಾಗಿ ಹೊರ ಬಂದು ಆಕಾಶ ಮುಟ್ಟುತ್ತಾನೆ.
ಅಶೋಕ ಸುಂದರಿ(Ashok Sundari)
ಅಶೋಕ ಸುಂದರಿಯ ಜನನದ ಬಗ್ಗೆ ಪದ್ಮಪುರಾಣದಲ್ಲಿ ಹೇಳಲಾಗಿದೆ. ಒಮ್ಮೆ ಶಿವನು ಪಾರ್ವತಿಯನ್ನು ನಂದನವನಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿದ್ದ ಕಲ್ಪವೃಕ್ಷದ ಬಳಿ ಪಾರ್ವತಿ ತನ್ನ ಒಂಟಿತನ ನೀಗಿಸಲು ಮಗಳೊಬ್ಬಳನ್ನು ಕರುಣಿಸಲು ಕೋರುತ್ತಾಳೆ. ಹಾಗೆ ಹುಟ್ಟಿದವಳೇ ಅಶೋಕ ಸುಂದರಿ.