ಅವಿಭಕ್ತ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸೋಕೆ ಇಷ್ಟ ಪಡೋ ಜನ ಇವ್ರು!

By Suvarna NewsFirst Published Jan 27, 2023, 5:13 PM IST
Highlights

ಅವಿಭಕ್ತ ಕುಟುಂಬಗಳು ಇಂದು ಬಹುತೇಕ ಮರೆಯಾಗಿವೆ. ಕೂಡು ಕುಟುಂಬದಲ್ಲಿ ಬೆಳೆಯುವ ಮಕ್ಕಳ ಮನಸ್ಥಿತಿ ವಿಭಕ್ತ ಕುಟುಂಬಕ್ಕಿಂತ ಉತ್ತಮವಾಗಿರುತ್ತದೆ ಎನ್ನುವುದು ಸಾಬೀತಾಗಿರುವ ಸಂಗತಿ. ಆದರೆ, ಎಲ್ಲರೂ ತಮ್ಮ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿ ಬೆಳೆಯಬೇಕೆಂದು ಇಷ್ಟಪಡುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ತಮ್ಮ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿ ಎಲ್ಲರೊಂದಿಗೆ ಬೆಳೆಸಲು ಬಯಸುತ್ತಾರೆ.
 

ಕೂಡು ಕುಟುಂಬದ ಸೊಗಸೇ ಬೇರೆ. ಅಜ್ಜ-ಅಜ್ಜಿಯರೊಂದಿಗೆ ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದೆಡೆ ಜೀವಿಸುವ ಮನೆಯಲ್ಲಿ ಮಕ್ಕಳ ಬಗ್ಗೆ ನಿಗಾ ಇಡುವುದೇ ಬೇಕಾಗಿರಲಿಲ್ಲ. ಇಂದಿನ ವಿಭಕ್ತ ಕುಟುಂಬದಲ್ಲಿ ಪಾಲಕರು ಮಕ್ಕಳನ್ನು ಬೆಳೆಸುವುದಕ್ಕಾಗಿ ಹೆಣಗಾಡುತ್ತಾರೆ. ಮಕ್ಕಳೊಂದಿಗೆ ತಾವೂ ಮಕ್ಕಳಾಗಿದ್ದು ಅವರನ್ನು ಲಾಲಿಸಲು ಸಮಯ ಹಾಕುತ್ತಾರೆ. ಇದು ತಪ್ಪೆಂದಲ್ಲ. ಆದರೆ, ಹಿರಿಯರು ಮಕ್ಕಳಾಗುವುದಕ್ಕೂ, ಮಕ್ಕಳು ತಮ್ಮದೇ ವಾರಗೆಯ ಮಕ್ಕಳೊಂದಿಗೆ ಬೆಳೆಯುವುದಕ್ಕೂ ಅಗಾಧ ವ್ಯತ್ಯಾಸವಿದೆ. ಅವಿಭಕ್ತ ಕುಟುಂಬದ ಮಕ್ಕಳಿಗೆ ಮನೆಯಲ್ಲೇ ಹಲವಾರು ರೀತಿಯ ಜೀವನ ಪಾಠಗಳು ಸಿಗುತ್ತವೆ. ಮಕ್ಕಳ ಪೈಕಿಯಲ್ಲೇ ಹಿರಿಯವನ್ಯಾರೋ ಕಿರಿಯನಿಗೆ ಬುದ್ಧಿ ಹೇಳುತ್ತಾನೆ, ಅಳುತ್ತ ಮೂಲೆಗುಂಪಾಗುವ ಮಕ್ಕಳಿಗೆ ಧೈರ್ಯ ತುಂಬುತ್ತಾನೆ. ಮತ್ತೊಮ್ಮೆ ಗೇಲಿ ಮಾಡುತ್ತ ಕಾಲೆಳೆಯುತ್ತಾನೆ. ಜತೆಗೂಡಿ ಆಟವಾಡುತ್ತ ಬೆಳೆಯುವ ಮಕ್ಕಳಿಗೆ ಹಿರಿಯರ ತಲೆಬಿಸಿ ಯಾವುವೂ ತಟ್ಟುವುದಿಲ್ಲ.

ಅವರಲ್ಲಿ ಅಭದ್ರತೆ ಇರುವುದಿಲ್ಲ. ಅದುವೇ ಕ್ರಮೇಣ ಆತ್ಮವಿಶ್ವಾಸ ಮೂಡಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಮುಂದಿನ ಜೀವನವನ್ನು ಎದುರಿಸುವ ಸಾಮರ್ಥ್ಯವನ್ನೂ ಅರಿಯದೇ ನೀಡುತ್ತದೆ. ಹಾಗೆಯೇ, ಕೂಡು ಕುಟುಂಬದಲ್ಲಿ ಯಾರಾದರೂ ಸಣ್ಣ ಮನಸ್ಸಿನವರಿದ್ದು, ಇತರ ಮಕ್ಕಳಲ್ಲಿ ಭೇದ-ಭಾವ ಮಾಡುತ್ತಿದ್ದರೆ ಅದೂ ಒಂದು ಪಾಠವೇ ಆಗುತ್ತದೆ. ಅವಿಭಕ್ತ ಕುಟುಂಬದಲ್ಲಿ ಮಕ್ಕಳು ಬೆಳೆಯುವುದು ಹಲವು ರೀತಿಯಿಂದ ಉತ್ತಮ. ಆದರೆ, ಎಲ್ಲರಿಗೂ ಈ ಕುರಿತು ಒಲವಿರುವುದಿಲ್ಲ. ಕೆಲವು ರಾಶಿಗಳು ಮಾತ್ರ ತಮ್ಮ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿ ಬೆಳೆಸುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ.

Latest Videos

•    ಮಿಥುನ (Gemini)
ಸೋಷಿಯಲ್‌ ಬಟರ್‌ ಫ್ಲೈ ಎಂದು ಕರೆಸಿಕೊಳ್ಳುವ ಮಿಥುನ ರಾಶಿಯ (Zodiac Sign) ಜನ ಯಾವತ್ತೂ ಮನೆಯಲ್ಲಿ ಹಾರ್ದಿಕ (Warm) ವಾತಾವರಣ ಇಷ್ಟಪಡುತ್ತಾರೆ. ಅದಕ್ಕಾಗಿ ಪರಿತಪಿಸುತ್ತಾರೆ. ಇವರಿಗೆ ನಿರಂತರವಾಗಿ ಭಾವನಾತ್ಮಕ ಬೆಂಬಲ (Emotional Support) ಹಾಗೂ ಸ್ನೇಹಮಯ (Friendly) ವಾತಾವರಣದ ಅಗತ್ಯವಿರುತ್ತದೆ. ಇಂತಹ ವಾತಾವರಣದಲ್ಲಿ ಇವರು ನೆಮ್ಮದಿಯಿಂದ ಇರಬಲ್ಲರು. ಹೀಗಾಗಿ, ಇವರು ತಮ್ಮ ಮಕ್ಕಳನ್ನು ಅವಿಭಕ್ತ (Joint Family) ಕುಟುಂಬದಲ್ಲೇ ಬೆಳೆಸಲು ಇಷ್ಟಪಡುತ್ತಾರೆ. ಎಲ್ಲರೊಂದಿಗೆ ಬೆರೆತು ಬಾಳಲು ಇಷ್ಟಪಡುವಂತಹ ಸಂಗಾತಿಯನ್ನೇ ಹುಡುಕುತ್ತಾರೆ, ತಾವೂ ಸಹ ಕುಟುಂಬದಲ್ಲಿ ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿರುತ್ತಾರೆ.

ಶನಿಯ ಸಾಡೇ ಸಾಥ್ ಈ 4 ರಾಶಿಗಳ ಮೇಲೆ ಪರಿಣಾಮ ಬೀರೋದಿಲ್ಲ!

•    ಕನ್ಯಾ (Virgo)
ಈ ರಾಶಿಯ ಜನ ಸಂಗಾತಿಯೊಂದಿಗೆ ನೇರವಾದ ಮಾತುಕತೆ (Open Conversation), ಸ್ಥಿರವಾದ, ಶಾಂತವಾದ ಪ್ರೀತಿ (Love) ಹೊಂದಿರಲು ಬಯಸುತ್ತಾರೆ. ಸಂಗಾತಿಯೊಂದಿಗೆ ಮುಕ್ತ ಮಾತುಕತೆಗೆ ಗೌರವ ನೀಡುತ್ತಾರೆ. ಪ್ರಾಮಾಣಿಕತೆ (Honesty) ಹಾಗೂ ಪಾರದರ್ಶಕತೆ ಇವರ ಗುಣ. ತಮ್ಮ ಸಂಗಾತಿಯನ್ನು ಒಮ್ಮೆ ನಂಬಿದರೆ ಅವರ ಕುಟುಂಬದಲ್ಲೇ ಒಂದಾಗಿರಲು ಇಷ್ಟಪಡುತ್ತಾರೆ. ತಮ್ಮ ವಿವಾಹಕ್ಕೆ (Marriage) ಬದ್ಧತೆ ಹೊಂದಿದ್ದು, ಮಕ್ಕಳನ್ನು (Children) ಸಹ ಎಲ್ಲರೊಂದಿಗೆ ಬೆಳೆಸಲು ಬಯಸುತ್ತಾರೆ. 

•    ಧನು (Sagittarius)
ಧೈರ್ಯ, ಸಾಹಸಕ್ಕೆ ಮತ್ತೊಂದು ಹೆಸರಾಗಿರುವ ಧನು ರಾಶಿಯ ಜನ ಕುಟುಂಬದಲ್ಲಿ ಹೇಗಿರಬೇಕು ಎನ್ನುವುದನ್ನು ಅರಿತಿರುತ್ತಾರೆ. ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ (Difference) ಇರುವಾಗ ಹೇಗೆ ಎಲ್ಲರನ್ನೂ ಒಂದುಗೂಡಿಸಬೇಕು, ಒಂದು ಅಭಿಪ್ರಾಯಕ್ಕೆ ಬರಲು ಹೇಗೆ ಪ್ರೇರೇಪಿಸಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಮುಕ್ತವಾದ ಹಾಗೂ ಗೌರವಪೂರ್ಣ ಮಾತುಕತೆಯಿಂದ ಕುಟುಂಬದ ಎಲ್ಲ ಸದಸ್ಯರೊಂದಿಗೆ (Members) ಉತ್ತಮ ಸಂಬಂಧ ಹೊಂದಿರುತ್ತಾರೆ. ಇವರಿಗೆ ಪಾಲಕರು (Parents), ಸಹೋದರ ವರ್ಗ ಸೇರಿದಂತೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಸಾಂಪ್ರದಾಯಿಕ (Conservative) ಮನಸ್ಸುಗಳನ್ನೂ ಮೋಡಿಯಿಂದ ಬದಲಿಸಬಲ್ಲರು. ಇವರು ತಮ್ಮ ಮಕ್ಕಳನ್ನೂ ಕೂಡು ಕುಟುಂಬದಲ್ಲೇ ಬೆಳೆಸುವ ಇರಾದೆ ಹೊಂದಿರುತ್ತಾರೆ.

ಈ ರಾಶಿಯವ್ರಿಗೆ ಉಳಿತಾಯ ಅಂದ್ರೇನು ಗೊತ್ತೇ ಇಲ್ಲ, ಗಳಿಸಿದ್ದನ್ನೆಲ್ಲ ವೆಚ್ಚ ಮಾಡಿದ್ರಷ್ಟೇ ಸಮಾಧಾನ!

•    ಕುಂಭ (Aquarius)
ಅವಿಭಕ್ತ ಕುಟುಂಬದ ಬಗ್ಗೆ ಕುಂಭ ರಾಶಿಯವರಿಗೆ ಅಭಿಮಾನ ಇರುತ್ತದೆ. ಹಿರಿಯರ ಬಗ್ಗೆ ಆಳವಾದ ಗೌರವ (Respect) ಹೊಂದಿರುತ್ತಾರೆ. ಹಿರಿಯರೊಂದಿಗೆ (Seniors) ಬೆರೆಯುವುದರಲ್ಲಿ ಇವರು ಎತ್ತಿದ ಕೈ. ಹಿರಿಯರಿಗೆ ಸಹಾಯ ಹಸ್ತ (Help) ಚಾಚಲು ಸದಾ ಸಿದ್ಧವಾಗಿರುತ್ತಾರೆ. ತಮ್ಮ ಮಕ್ಕಳು ಹಿರಿಯರಿಂದ ಉತ್ತಮ ವಿಚಾರಗಳನ್ನು ಕಲಿಯುತ್ತಾರೆ (Learn Good Things) ಎನ್ನುವ ಅದಮ್ಯ ವಿಶ್ವಾಸ ಹೊಂದಿರುತ್ತಾರೆ. ಹೀಗಾಗಿ, ತಮ್ಮ ಮಕ್ಕಳನ್ನು (Kid) ಕೂಡು ಕುಟುಂಬದಲ್ಲಿ ಬೆಳೆಸಲು ಬಯಸುತ್ತಾರೆ.
 

click me!