ಹಿಂದೂ ಧರ್ಮದಲ್ಲಿ ಐದು ದಾನಗಳನ್ನು ಬಲವಾಗಿ ನಂಬಲಾಗಿದೆ. ಅದ್ರಲ್ಲಿ ಹಸುವಿನ ದಾನ ಕೂಡ ಸೇರಿದೆ. ಗೋದಾನ ಅತ್ಯಂತ ಶ್ರೇಷ್ಠವಾಗಿದೆ. ಇಂದಿನ ಹಾಗೂ ಮರಣದ ನಂತರದ ಜೀವನ ಸುಗಮವಾಗಿರಬೇಕೆಂದ್ರೆ ಗೋದಾನ ಮಾಡ್ಲೇಬೇಕು.
ಗೋದಾನವನ್ನು ದಾನದಲ್ಲಿ ಅತಿ ದೊಡ್ಡ ದಾನವೆಂದು ಪರಿಗಣಿಸಲಾಗಿದೆ. ಗೋದಾನ ಪ್ರತಿಯೊಬ್ಬ ಮನುಷ್ಯನಿಗೂ ಪ್ರಯೋಜನಕಾರಿಯಾಗಿದೆ. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಗೋವನ್ನು ದಾನ ಮಾಡಬಹುದು. ಅದರಲ್ಲೂ ವಿಶೇಷವಾಗಿ ಪಿತೃಪಕ್ಷದಲ್ಲಿ ಗೋವನ್ನು ದಾನ ಮಾಡಿದರೆ ಅದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಹಿಂದು ಧರ್ಮದಲ್ಲಿ ಗೋವನ್ನು ತಾಯಿಯೆಂದು ಪೂಜಿಸಲಾಗುತ್ತದೆ. ಗೋವಿನಲ್ಲಿ ಎಲ್ಲ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಗೋವನ್ನು ದಾನ ಮಾಡುವುದು ಶ್ರೇಷ್ಠ ಪುಣ್ಯ ಲಭಿಸುತ್ತದೆ.
ಪ್ರತಿಯೊಬ್ಬ ಮನುಷ್ಯನು ತನ್ನ ಜೀವನ (Life) ದಲ್ಲಿ ಒಮ್ಮೆ ಗೋವ (Cow) ನ್ನು ದಾನ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಗೋವನ್ನು ದಾನ ಮಾಡಲು ಕೆಲವು ನಿಯಮಗಳನ್ನು ಸಹ ನೀಡಲಾಗಿದೆ. ಬ್ರಾಹ್ಮಣ (Brahmin) ರಿಗೆ ಮಾಡುವ ಗೋದಾನ ಸರ್ವೋತ್ತಮ ಮತ್ತು ಶ್ರೇಷ್ಠ ಎಂದು ನಂಬಲಾಗಿದೆ. ಗೋವನ್ನು ದಾನ ಮಾಡುವ ಮೊದಲು ಅದನ್ನು ಅಲಂಕರಿಸಬೇಕು. ಗೋವಿನ ಕೊಂಬಿನಲ್ಲಿ ಬ್ರಹ್ಮ ಮತ್ತು ವಿಷ್ಣು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಸುವಿನ ತಲೆಯಲ್ಲಿ ಮಹಾದೇವ, ಹಣೆಯಲ್ಲಿ ಗೌರಿ ಮತ್ತು ಮೂಗಿನ ಹೊಳ್ಳೆಯಲ್ಲಿ ಕಾರ್ತಿಕೇಯರು ನೆಲೆಸಿದ್ದಾರೆ. ಹಸುವಿನ ಕಣ್ಣುಗಳಲ್ಲಿ ಸೂರ್ಯ-ಚಂದ್ರ, ಕಿವಿಯಲ್ಲಿ ಅಶ್ವಿನಿ ಕುಮಾರ, ಹಲ್ಲುಗಳಲ್ಲಿ ವಾಸುದೇವ, ನಾಲಿಗೆಯಲ್ಲಿ ವರುಣ ಮತ್ತು ಗಂಟಲಿನಲ್ಲಿ ದೇವರಾಜ್ ಇಂದ್ರ, ಸೂರ್ಯನ ಕಿರಣಗಳು ಕೂದಲಿನಲ್ಲಿ, ಗಂಧರ್ವ ಗೊರಸಿನಲ್ಲಿ, ಭೂಮಿಯು ಹೊಟ್ಟೆಯಲ್ಲಿ ಮತ್ತು ನಾಲ್ಕು ಕೆಚ್ಚಲುಗಳಲ್ಲಿ ನಾಲ್ಕು ಸಮುದ್ರಗಳು ನೆಲೆಸಿವೆ. ಗೋಮೂತ್ರದಲ್ಲಿ ಗಂಗಾ ಮತ್ತು ಗೊಬ್ಬರದಲ್ಲಿ ಯಮುನೆ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹೀಗೆ ಎಲ್ಲ ದೇವರಿರುವ ಗೋವನ್ನು ದಾನ ಮಾಡುವುದ್ರಿಂದ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೆವೆ.
ಶನಿಯಿಂದ ಮುಕ್ತಿ : ಸಾಡೇ ಸತಿ ಶನಿ ಅಥವಾ ಧೈಯಾ ಸಮಯದಲ್ಲಿ ಕಪ್ಪು ಹಸುವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡಿದ್ರೆ ಶನಿಯಿಂದ ಉಂಟಾಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
ಗ್ರಹಗಳ ಶಾಂತಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳ ಶಾಂತಿಗಾಗಿ ಗೋದಾನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗೋದಾನದಿಂದ ಗ್ರಹಗಳ ಅಶುಭ ಸ್ಥಿತಿಯೂ ಶುಭವಾಗುತ್ತದೆ. ಅಲ್ಲದೆ ಮಂಗಳ ಗ್ರಹದಲ್ಲಿ ಸಮಸ್ಯೆಯಿದ್ದರೆ, ದೋಷ ಕಂಡು ಬಂದರೆ ಅಂಥವರು ಗೋವನ್ನು ದಾನ ಮಾಡಬೇಕು. ಇದ್ರಿಂದ ಜೀವನದ ಪ್ರಕ್ಷುಬ್ಧತೆ ಕಡಿಮೆಯಾಗುತ್ತದೆ. ಸಂತೋಷಕರ ಜೀವನ ಪ್ರಾಪ್ತಿಯಾಗುತ್ತದೆ.
ASTROLOGY TIPS: ಅದೃಷ್ಟವೇ ಬದಲಿಸುವ ಈ ರತ್ನ ಧರಿಸುವಾಗ ಹುಷಾರಾಗಿರಿ
ಪೂರ್ವಜರ ಆತ್ಮಕ್ಕೆ ಶಾಂತಿ : ಹಿಂದೂ ಧರ್ಮದ ಪ್ರಕಾರ, ಗೋವನ್ನು ದಾನ ಮಾಡುವುದರಿಂದ ಪೂರ್ವಜರು ಸಂತೋಷಗೊಳ್ಳುತ್ತಾರೆ. ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಪೂರ್ವಜರು ನಮಗೆ ಆಶೀರ್ವಾದ ನೀಡುತ್ತಾರೆ ಎನ್ನಲಾಗಿದೆ. ಪೂರ್ವಜನರ ಕೃಪೆ ನಮ್ಮ ಮೇಲಿರುವುದು ಬಹಳ ಮುಖ್ಯ. ಅವರ ಕೋಪಗೊಂಡರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕುಟುಂಬದಲ್ಲಿ ಯಾವುದೇ ವ್ಯಕ್ತಿ ಸಾವನ್ನಪ್ಪಿದಾಗ ಗೋದಾನ ಮಾಡಲಾಗುತ್ತದೆ. ಇದಕ್ಕೆ ವಿಶೇಷ ಮನ್ನಣೆ ಇದೆ. ಗೋದಾನ ಮಾಡಿದ್ರೆ ಆತ್ಮ ಸ್ವರ್ಗ ಸೇರಲು ನೆರವಾಗುತ್ತದೆ ಎಂದು ನಂಬಲಾಗಿದೆ. ಗೋದಾನ ಮಾಡಿದ ಸಂದರ್ಭದಲ್ಲಿ ಆತ್ಮವು ಹಸುವಿನ ಬಾಲ ಹಿಡಿದುಕೊಂಡು ವೈತರಣಿ ನದಿಯನ್ನು ದಾಡುತ್ತದೆ ಎಂದು ನಂಬಲಾಗಿದೆ.
ಆರ್ಥಿಕ ಸಮಸ್ಯೆ ಪರಿಹಾರ : ಗೋವನ್ನು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಸಾಲದಿಂದ ಮುಕ್ತಿ ಸಿಗುತ್ತದೆ. ಆರ್ಥಿಕ ಮುಗ್ಗಟ್ಟು ತಲೆದೋರುವುದಿಲ್ಲ. ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ.
Astrology Tips: ಮನೆಯ ಮುಖ್ಯ ದ್ವಾರದಿಂದ ಹಲ್ಲಿ ಬಂದ್ರೆ ಹಣದ ಹೊಳೆ
ಕಷ್ಟಗಳಿಂದ ಮುಕ್ತಿ : ಗೋ ಶ್ರೀಕೃಷ್ಣನಿಗೆ ಪ್ರಿಯವಾದದ್ದು. ಗೋವನ್ನು ದಾನ ಮಾಡಿದಾಗ ಕೃಷ್ಣ ತೃಪ್ತನಾಗ್ತಾನೆ. ಅವನ ಅನುಗ್ರಹ ನಮಗೆ ಸಿಗುತ್ತದೆ. ಎಲ್ಲ ಕಷ್ಟಗಳು ದೂರವಾಗಿ, ಆನಂದಮಯ ಜೀವನ ಪ್ರಾಪ್ತಿಯಾಗುತ್ತದೆ. ಗೋ ಸೇವೆ ಮತ್ತು ಗೋದಾನ ಮಾಡುವುದರಿಂದ ವ್ಯಕ್ತಿಯು ಶಾಶ್ವತ ಫಲವನ್ನು ಪಡೆಯುತ್ತಾನೆ.