Astrology Tips: ಸಾವಿನ ನಂತ್ರವೂ ಪುಣ್ಯಬೇಕಂದ್ರೆ ಹೀಗೆ ಮಾಡಿ

By Suvarna News  |  First Published Jan 27, 2023, 3:00 PM IST

ಹಿಂದೂ ಧರ್ಮದಲ್ಲಿ ಹುಟ್ಟು, ಮರಣ ಮಾತ್ರವಲ್ಲ ಮರಣದ ನಂತ್ರವೂ ಒಂದು ಬದುಕಿದೆ ಎಂದು ನಂಬಲಾಗಿದೆ. ಆತ್ಮ ದೇಹವನ್ನೇ ಬಿಟ್ಟು ಹೋದ್ಮೇಲೆ ಭೌತಿಕ ವಸ್ತುಗಳು ಜೊತೆಗೆ ಬರಲು ಸಾಧ್ಯವಿಲ್ಲ. ಆದ್ರೆ ನಾವು ಈ ಜನ್ಮದಲ್ಲಿ ಮಾಡಿದ ಪುಣ್ಯಗಳು ಸಾವಿನ ನಂತ್ರವೂ ನಮ್ಮ ಜೊತೆ ಬರುತ್ತೆ ಎನ್ನಲಾಗುತ್ತದೆ. 
 


ಈ ಭೂಮಿಗೆ ಬರಿಗೈನಲ್ಲಿ ಬರುವ ಮನುಷ್ಯ ಇಲ್ಲಿ ಹಣ, ಆಸ್ತಿ, ಪ್ರೀತಿ, ದ್ವೇಷ ಎಲ್ಲವನ್ನೂ ಸಂಪಾದನೆ ಮಾಡ್ತಾನೆ. ಆದ್ರೆ ಸಾವಿನ ನಂತ್ರ ಇದ್ಯಾವುದನ್ನೂ ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹಣ, ಆಸ್ತಿಯನ್ನೆಲ್ಲ ಬಿಟ್ಟು, ಬರಿಗೈನಲ್ಲಿಯೇ ಇಹಲೋಕ ತ್ಯಜಿಸಬೇಕಾಗುತ್ತದೆ. ಸಾವಿನ ನಂತರ ಒಬ್ಬ ವ್ಯಕ್ತಿ ತನ್ನೊಂದಿಗೆ ಏನನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಭೌತಿಕ ಸುಖಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಭೂಮಿ ಮೇಲೆಯೇ ಬಿಟ್ಟು ಹೋಗ್ಬೇಕು. ಆದರೆ ಜೀವಿತಾವಧಿಯಲ್ಲಿ ಆತ ಮಾಡಿದ ಕೆಲಸದ ಫಲವನ್ನು ಮಾತ್ರ ಆತ ಕೊಂಡೊಯ್ಯುತ್ತಾನೆ.  ಜೀವನದಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಪುಣ್ಯವನ್ನೂ, ಕೆಟ್ಟ ಕೆಲಸ ಮಾಡಿದ್ರೆ ಪಾಪವನ್ನೂ ತೆಗೆದುಕೊಂಡು ಹೋಗ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಅದಕ್ಕಾಗಿಯೇ ಜೀವ ಇರುವವರೆಗೂ ಒಳ್ಳೆಯ ಮತ್ತು ಸದ್ಗುಣದ ಕೆಲಸ ಮಾಡಬೇಕು ಎನ್ನಲಾಗುತ್ತದೆ.

ಒಬ್ಬ ವ್ಯಕ್ತಿ ಜೀವಿತಾವಧಿ (Lifetime) ಯಲ್ಲಿ ಮಾಡಿದ ಕಾರ್ಯಗಳು ಈ ಜನ್ಮ (Birth) ದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದವರೆಗೂ ಅವನೊಂದಿಗೆ ಬರುತ್ತದೆ. ವೇದಗಳು, ಪುರಾಣಗಳು ಮತ್ತು ಧರ್ಮ ಗ್ರಂಥ (Scripture) ಗಳಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ನಾವುಂದು ಜೀವನದಲ್ಲಿ ಮಾಡಬೇಕಾದ ಐದು ಪುಣ್ಯಕಾರ್ಯಗಳ ಬಗ್ಗೆ ನಿಮಗೆ ಹೇಳ್ತೆವೆ. ಆ ಪುಣ್ಯ (Virtue) ದ ಕೆಲಸಗಳು ನೀವು ಜೀವಂತ ಇರುವವರೆಗೆ ಮಾತ್ರವಲ್ಲ ಮರಣದ ನಂತ್ರವೂ ನಿಮ್ಮ ಜೊತೆಗೆ ಬರುತ್ತವೆ.

Latest Videos

ಮರಣಾನಂತರವೂ ಪುಣ್ಯ ಸಿಗ್ಬೇಕೆಂದ್ರೆ ಏನು ಮಾಡ್ಬೇಕು? :  

ಧಾರ್ಮಿಕ ಪುಸ್ತಕ : ಹಿಂದೂ ಧರ್ಮದಲ್ಲಿ ಧಾರ್ಮಿಕ ಪುಸ್ತಕಗಳಿಗೆ ಮಹತ್ವದ ಸ್ಥಾನವಿದೆ. ಅದನ್ನು ದೇವರೆಂದು ನಂಬಲಾಗಿದೆ. ಅನೇಕರ ಮನೆಯಲ್ಲಿ ಧಾರ್ಮಿಕ ಗ್ರಂಥಗಳನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ನಿಮ್ಮ ಜೀವಿತಾವಧಿಯಲ್ಲಿ ನೀವು ಧಾರ್ಮಿಕ ಪುಸ್ತಕವನ್ನು ಉಡುಗೊರೆಯಾಗಿ ನೀಡಬೇಕು ಎನ್ನುತ್ತದೆ ಶಾಸ್ತ್ರ.  ಇದನ್ನು ಬಹಳ ಪುಣ್ಯದ ಕೆಲಸವೆಂದು ಪರಿಗಣಿಸಲಾಗುತ್ತದೆ. ನೀವು ಧಾರ್ಮಿಕ ಪುಸ್ತಕವನ್ನು ಉಡುಗೊರೆ ಅಥವಾ ದಾನದ ರೂಪದಲ್ಲಿ ನೀಡಿದ್ರೆ ಸಾವಿನ ನಂತರವೂ ಅದರ ಪುಣ್ಯ ನಿಮ್ಮ ಜೊತೆ ಬರುತ್ತದೆ. ನಿಮ್ಮಿಂದ ಧಾರ್ಮಿಕ ಗ್ರಂಥವನ್ನು ಪಡೆದ ವ್ಯಕ್ತಿ ಅದನ್ನು ಪಠಿಸಿದಾಗ ಅದರ ಪುಣ್ಯದ ಫಲ ಕೂಡ ನಿಮಗೆ ಸಿಗುತ್ತದೆ. 

ನೀರಿನ ದಾನ : ಮನೆಗೆ ಬರುವ ಅಥವಾ ಬಾಯಾರಿದ ವ್ಯಕ್ತಿಗೆ ನೀರು ನೀಡಬೇಕು. ಯಾವುದೇ ವ್ಯಕ್ತಿಗೆ ನೀರು ನೀಡಲು ನೀವು ನಿರಾಕರಿಸಿದ್ರೆ ಅದು ಪಾಪದ ಕೆಲಸ ಎನ್ನಲಾಗುತ್ತದೆ. ನೀರನ್ನು ದಾನ ಮಾಡುವುದು ಪುಣ್ಯದ ಕೆಲಸ. ಪ್ರತಿ ದಿನ ಸಾರ್ವಜನಿಕ ಪ್ರದೇಶದಲ್ಲಿ ನಿಂತು ದಣಿದವರಿಗೆ ನೀರು ನೀಡಲು ಸಾಧ್ಯವಿಲ್ಲ. ಹಾಗಾಗಿ ನೀವು ಸಾರ್ವಜನಿಕ ಸ್ಥಳದಲ್ಲಿ ಬೋರ್ ವೆಲ್ ಅಥವಾ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬಹುದು. ಇದು ಅತ್ಯಂತ ಪುಣ್ಯದ ಕೆಲಸ. ಜನರ ಬಾಯಾರಿಕೆ ನೀಗಿಸಿ ನೀರು ಕೊಡುವುದು ಮಹಾದಾನಕ್ಕೆ ಸಮಾನ. ಸಾವಿನ ನಂತ್ರವೂ ನಿಮಗೆ ಇದ್ರ  ಪುಣ್ಯದ ಫಲ ಸಿಗುತ್ತದೆ. 

ಇಂಥವರಿಗೆ ಶಿಕ್ಷಣ ನೀಡಿ ಪುಣ್ಯ ಪಡೆಯಿರಿ : ವಿದ್ಯಾಭ್ಯಾಸ ಪಡೆದವರು ನೀವಾಗಿದ್ದರೆ ನಿಮ್ಮ ವಿದ್ಯೆಯನ್ನು ದಾನ ಮಾಡುವುದನ್ನು ಕಲಿಯಬೇಕು.  ಅನಾಥ, ಬಡ ಅಥವಾ ನಿರ್ಗತಿಕರಿಗೆ ಶಿಕ್ಷಣ ನೀಡಬೇಕು. ಅದರಿಂದ ಸಿಗುವ ಪುಣ್ಯವು ಜೀವನ ಮತ್ತು ಮರಣದ ನಂತರ ಮಾತ್ರವಲ್ಲದೆ ಅನೇಕ ಜನ್ಮಗಳವರೆಗೆ ಸಿಗುತ್ತದೆ.

Astrology Tips: ಅದೃಷ್ಟವೇ ಬದಲಿಸುವ ಈ ರತ್ನ ಧರಿಸುವಾಗ ಹುಷಾರಾಗಿರಿ

ಗಾಲಿಕುರ್ಚಿ  ನೀಡಿದ್ರೆ ಪುಣ್ಯ ಸಿಗುತ್ತೆ : ಹೌದು, ಶಾಸ್ತ್ರಗಳ ಪ್ರಕಾರ, ನೀವು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ನೆರವಾಗಬೇಕು. ನೀವು ಆಸ್ಪತ್ರೆಗೆ ಗಾಲಿಕುರ್ಚಿ ದಾನ ಮಾಡಬಹುದು. ರೋಗಿಯು ಅದನ್ನು ಬಳಸಿದಾಗ ಅದರ ಪುಣ್ಯ ನಿಮಗೆ ಲಭಿಸುತ್ತದೆ. 

ASTROLOGY TIPS: ಜೀವನದಲ್ಲಿ ಒಮ್ಮೆಯಾದ್ರೂ ಈ ದಾನ ಮಾಡಿ ಪುಣ್ಯ ಪಡೆಯಿರಿ

ದಾನದಲ್ಲಿದೆ ಪುಣ್ಯದ ಗುಟ್ಟು : ದಾನದಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿದೆ. ದಾನ ಮಾಡಿದ್ರೆ ನಿಮ್ಮ ಕೈ ಎಂದಿಗೂ ಖಾಲಿಯಾಗುವುದಿಲ್ಲ.  ದಾನದಿಂದ ನಿಮ್ಮ ಖಜಾನೆ ತುಂಬುವುದಲ್ಲದೆ ಪುಣ್ಯ ಕೂಡ ಲಭಿಸುತ್ತದೆ. ನೀವು ಯಾವುದೇ ರೀತಿಯ ದಾನ ಮಾಡಿದ್ರೂ ಅದು ಸಾವಿನ ನಂತ್ರವೂ ನಿಮ್ಮ ಜೊತೆ ಬರುತ್ತದೆ.

click me!