Zodiac Sign: ಈ ರಾಶಿಗಳ ಮಂದಿ ಸುಲಭವಾಗಿ ಜನರ ಕೇಂದ್ರಬಿಂದುವಾಗ್ತಾರೆ

By Suvarna News  |  First Published Oct 19, 2022, 4:49 PM IST

ಜನರ ನಡುವೆ ಎದ್ದು ಕಾಣಬೇಕೆಂದು ಕೆಲವರು ಏನೇನೋ ಪ್ರಯತ್ನ ನಡೆಸುತ್ತಾರೆ. ಚಿತ್ರವಿಚಿತ್ರ ಡ್ರೆಸ್‌ ಧರಿಸುವುದರಿಂದ ಹಿಡಿದು ಕೆಟ್ಟ ಜೋಕ್‌ ಗಳನ್ನು ಮಾಡುತ್ತ ಜನರನ್ನು ನಗಿಸಲು ಮುಂದಾಗುತ್ತಾರೆ. ಆದರೂ ಅವರ ಬಗ್ಗೆ ಯಾರೂ ಹೆಚ್ಚು ಗಮನ ನೀಡುವುದಿಲ್ಲ. ಆದರೆ, ಕೆಲವು ರಾಶಿಯ ಜನ ಅಪ್ರಯತ್ನಪೂರ್ವಕವಾಗಿ ಗುರುತಿಸಿಕೊಳ್ಳುತ್ತಾರೆ, ಜನರ ನಡುವೆ ಕೇಂದ್ರಬಿಂದುವಾಗುತ್ತಾರೆ. 
 


ನಾಲ್ಕು ಜನ ಸೇರಿದ್ದಾಗ ಎಲ್ಲರ ನಡುವೆ ತಾವು ಎದ್ದು ಕಾಣಬೇಕು, ಗುರುತಿಸಿಕೊಳ್ಳಬೇಕು ಎನ್ನುವ ಬಯಕೆ ಹಲವರಲ್ಲಿ ಇರುತ್ತದೆ. ಎಷ್ಟೇ ಪ್ರತಿಭೆಯಿದ್ದರೂ ಕೆಲವರು ಜನರ ನಡುವೆ ನಾಚಿಕೆಯಿಂದ ಮುದುಡಿ ಮೂಲೆಗುಂಪಾಗುತ್ತಾರೆ. ಆದರೆ, ಕೆಲವರು ಹಾಗಲ್ಲ, ತಾವು ಪ್ರತಿಭಾವಂತರಾಗಲಿ, ಬಿಡಲಿ. ಅದೆಲ್ಲ ದೊಡ್ಡ ವಿಷಯವೇ ಅಲ್ಲ, ನಾಲ್ಕು ಜನರ ನಡುವೆ ಗುರುತಿಸಿಕೊಳ್ಳುವುದೆಂದರೆ ಅವರಿಗೆ ಭಾರೀ ಇಷ್ಟ. ಮಾತನಾಡುವ ಕಲೆಯೂ ಅವರಿಗೆ ಸಿದ್ಧಿಸಿರುತ್ತದೆ. ಮಾತುಗಳ ನಡುವೆ ವಿನೋದವನ್ನು ಸೇರಿಸಿ ಎಲ್ಲೂ ಬೋರಾಗದಂತೆ ಅವರು ಮಾತನಾಡಬಲ್ಲರು. ಆದರೆ, ಎಲ್ಲರಿಗೂ ಹೀಗೆ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೇ ರಾಶಿಗಳ ಜನರಿಗೆ ಮಾತ್ರ ಈ ಅದೃಷ್ಟ ಇರುತ್ತದೆ ಎನ್ನಬಹುದು. ಏಕೆಂದರೆ, ಈ ರಾಶಿಗಳ ಮಂದಿ ಜನರ ನಡುವೆ ಗುರುತಿಸಿಕೊಳ್ಳಲು ಹೆಚ್ಚು ಪ್ರಯತ್ನವನ್ನೇ ಪಡಬೇಕಿಲ್ಲ. ಯಾವುದೇ ಗೆಟ್-ಟುಗೆದರ್‌ ನಲ್ಲಿ ಇವರು ಅಪ್ರಯತ್ನಪೂರ್ವಕವಾಗಿ ಗುರುತಿಸಿಕೊಂಡುಬಿಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಎಲ್ಲರ ಚಿತ್ತ ಸೆಳೆಯಬಲ್ಲರು. ಹಾಗೆಂದು ಇವರು ತಮ್ಮತ್ತ ಎಲ್ಲರೂ ಗಮನ ಹರಿಸಬೇಕೆಂಬ ಆಸೆಗಾಗಿ ಏನೇನೋ ಕಸರತ್ತು ಮಾಡುವುದಿಲ್ಲ. ತಮ್ಮ ಆತ್ಮವಿಶ್ವಾಸದ ನಡೆನುಡಿ ಹಾಗೂ ಚಿಂತನಾ ಲಹರಿಯಿಂದಲೇ ಇವರು ಗುರುತಿಸಿಕೊಳ್ಳುತ್ತಾರೆ. 

•    ಮೇಷ (Aries)
ಅತ್ಯಂತ ಆತ್ಮವಿಶ್ವಾಸ (Confident) ಹಾಗೂ ಸ್ಮಾರ್ಟ್‌ ನೇಚರ್‌ (Smart Nature) ಹೊಂದಿರುವ ಮೇಷ ರಾಶಿಗಳ ಜನ ಅತ್ಯಂತ ಸುಲಭವಾಗಿ ಜನರ ನಡುವೆ ಗುರುತಿಸಿಕೊಳ್ಳುತ್ತಾರೆ. ಧೈರ್ಯದ (Courageous) ನಡೆನುಡಿಯೂ ಇವರಿಗೆ ಸಿದ್ಧಿಸಿರುತ್ತದೆ. ಜನರ ನಡುವೆ ಇವರಿಗೆ ಯಾವ ಮುಜುಗರವೂ (Shy) ಉಂಟಾಗುವುದಿಲ್ಲ. ಇವರು ಎಲ್ಲರ ಗಮನ (Attention) ತಮ್ಮತ್ತ ಬರಲೆಂದು ಆಸೆಯನ್ನೂ ಹೊಂದಿರುವುದಿಲ್ಲ ಹಾಗೂ ಅದಕ್ಕಾಗಿ ಏನೇನೋ ಪ್ರಯತ್ನಗಳನ್ನೂ ಮಾಡುವುದಿಲ್ಲ. ಆದರೆ, ವಿನೋದದ ಮಾತುಗಳನ್ನಾಡುವ ಮೂಲಕ ಜನರನ್ನು ನಗಿಸಬಲ್ಲರು. ಹಾಗೂ ತಮ್ಮದೇ ನಿರ್ದಿಷ್ಟ ವಲಯದಲ್ಲಿ ಎಲ್ಲರ ಕೇಂದ್ರಬಿಂದುವಾಗಬಲ್ಲರು. 

Tap to resize

Latest Videos

Zodiac Compatibility: ಈ ರಾಶಿಗಳೆರ್ಡು ಮದ್ವೆಯಾದ್ರೆ ಹೊಂದಾಣಿಕೆ ಸಾಧ್ಯವೇ ಇಲ್ಲ!

•    ಮಿಥುನ (Gemini)
ಅತ್ಯಂತ ಕ್ರಿಯಾಶೀಲ (Creative) ಹಾಗೂ ಚುರುಕಿನ ನಡೆನುಡಿ ಹೊಂದಿರುವ ಮಿಥುನ ರಾಶಿಯ ಜನ ಸ್ಮಾರ್ಟ್‌ ಕೂಡ ಆಗಿರುತ್ತಾರೆ. ಮಾತನಾಡುವ ಸಮಯದಲ್ಲಿ ಇವರಾಡುವ ಕೆಲವು ನುಡಿಗಳು, ಶಬ್ದಗಳು (Words) ಜನರನ್ನು ಅಕ್ಷರಶಃ ಮೋಡಿ (Effect) ಮಾಡುತ್ತವೆ. ಅವರು ಎಂದೆಂದೂ ಇವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಜನರ ನಡುವೆ ಕೇಂದ್ರಬಿಂದುವಾಗಲು (Spotlight) ಇವರು ಅತ್ಯಂತ ಅರ್ಹರೂ ಆಗಿರುತ್ತಾರೆ. ಸದಾಕಾಲ ಎಕ್ಸೈಟಿಂಗ್‌ (Exiting) ಕತೆಗಳನ್ನು ಹೇಳುತ್ತ ಜನರ ಮನರಂಜಿಸಬಲ್ಲರು. ಯಾವುದೇ ಗೆಟ್-ಟುಗೆದರ್‌ (Get-together) ಕಾರ್ಯಕ್ರಮವನ್ನು ಇನ್ನಷ್ಟು ಗಮ್ಮತ್ತಾಗಿ ಮಾಡುವ ಕಲೆ ಇವರಿಗೆ ಸಿದ್ಧಿಸಿರುತ್ತದೆ ಎಂದರೆ ತಪ್ಪಿಲ್ಲ.

•    ಸಿಂಹ (Leo)
ಸಿಂಹ ರಾಶಿಯ ಜನ ಹುಟ್ಟಾ ನೇತಾರರು. ಲೀಡರ್‌ ಶಿಪ್‌ (Leadership) ಗುಣ ರಕ್ತದಲ್ಲೇ ಇರುತ್ತದೆ. ಹೀಗಾಗಿ, ಸುಲಭವಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಹಾಗೂ ಅವರಿಗೆ ತಮ್ಮ ಸಾಮರ್ಥ್ಯದ ಅರಿವಿರುತ್ತದೆ. ಹೀಗಾಗಿ, ಜನರ ಕೇಂದ್ರಬಿಂದುವಾಗಲು ಸ್ವಲ್ಪ ಪ್ರಯತ್ನವನ್ನೂ ಪಡುತ್ತಾರೆ. ಸ್ವಯಂ ಪ್ರೇರಿತರಾಗಿ ಕಠಿಣ ಕೆಲಸಕಾರ್ಯಗಳಲ್ಲಿ ನಿರತರಾಗುತ್ತಾರೆ. ತಮ್ಮ ಈ ಕೆಲಸಕಾರ್ಯಗಳ ಬಗ್ಗೆ ಇತರರ ಮೆಚ್ಚುಗೆಯನ್ನೂ (Applause) ನಿರೀಕ್ಷಿಸುತ್ತಾರೆ. ಸಹಾಯ ಪಡೆದವರಿಂದ ತಮ್ಮ ಬಗ್ಗೆ ಕೃತಜ್ಞತೆಯ (Great full) ನುಡಿಗಳನ್ನು ಕೇಳಲು ಇಷ್ಟಪಡುತ್ತಾರೆ. ಅದಕ್ಕಾಗಿ ಹೇಗೆ ಬೇಕಾದರೂ ವರ್ತಿಸುತ್ತಾರೆ. 

Negative Stress: ಋಣಾತ್ಮಕ ಒತ್ತಡಕ್ಕೂ, ಇವರಿಗೂ ಭಾರೀ ನಂಟು!

•    ಧನು (Sagittarius)
ಅತ್ಯಂತ ಬಹಿರ್ಮುಖಿ (Extravert) ವ್ಯಕ್ತಿತ್ವ (Personality) ಹೊಂದಿರುವ ಧನು ರಾಶಿಯ ಜನ ಜನರನ್ನು ಸುಲಭವಾಗಿ ರಂಜಿಸುತ್ತಾರೆ. ಅವರಲ್ಲಿ ನಗು ಮೂಡಿಸುತ್ತಾರೆ. ವಿನೋದದ (Fun) ಗುಣದಿಂದಾಗಿ ಮಾತುಕತೆಯನ್ನು ರಸವತ್ತಾಗಿಸುತ್ತಾರೆ. ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ ಹಾಗೂ ಅವರ ಗಮನವನ್ನು ಸಹ ಸುಲಭವಾಗಿ ಸೆಳೆಯುತ್ತಾರೆ. ಸಾಕಷ್ಟು ರೋಮಾಂಚಕ ಬದುಕನ್ನೂ ಹೊಂದಿರುತ್ತಾರೆ. ಹೀಗಾಗಿ, ಎಲ್ಲರೂ ಇವರ ಬಗ್ಗೆ ಮಾತನಾಡುವಂತೆಯೂ ಆಗಬಹುದು. ವಿನೋದವಾಗಿರಲು ಇಷ್ಟಪಡುವ ಜತೆಗೆ ಜನಪ್ರಿಯತೆ (Popular) ಹೊಂದಿರಲು ಬಯಸುತ್ತಾರೆ.  

click me!