ದೀಪಾವಳಿ ಎಂದರೆ ದೀಪಗಳದೇ ದರ್ಬಾರು.. ಪ್ರತಿ ಮನೆಯಲ್ಲಿ ಈ ದಿನ ಹಲವಾರು ದೀಪಗಳನ್ನು ಬೆಳಗಲಾಗುತ್ತದೆ. ಆದರೆ ನಿಖರವಾಗಿ ಎಷ್ಟು ದೀಪ ಹಚ್ಚಬೇಕೆಂದು ನಿಮಗೆ ತಿಳಿದಿದೆಯೇ?
ದೀಪಾವಳಿ ಎಂದರೆ ಎಲ್ಲೆಲ್ಲೂ ದೀಪಗಳದೇ ದರ್ಬಾರ್. ಸಂಜೆಯಾಗುತ್ತಿದ್ದಂತೆ ಮನೆಮನೆಗಳು ಹಣತೆಯ ದೀಪಗಳ ಬೆಳಕಿನಿಂದ ಹೊಸ ಲೋಕವನ್ನೇ ಸೃಷ್ಟಿಸುತ್ತವೆ. ದೀಪಗಳು ಕತ್ತಲಿಂದ ಬೆಳಕಿನೆಡೆಗೆ ಮನುಷ್ಯನನ್ನು ಕೊಂಡೊಯ್ಯುವ ಅಂಧಕಾರವನ್ನು ಕಳೆದು ಜ್ಞಾನ ಬೆಳಗುವುದನ್ನು ಸೂಚಿಸುತ್ತದೆ. ಬೆಳಕಿನ ಹಬ್ಬವನ್ನು ರಾಷ್ಟ್ರದಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ವಿವಿಧ ರೀತಿಯ ಸಂಪ್ರದಾಯಗಳು ಮತ್ತು ಆಚರಣೆಗಳಿಂದ ತುಂಬಿದೆ.
ಇಂಥ ಈ ಬೆಳಕಿನ ಹಬ್ಬದಲ್ಲಿ ನೀವು ಮನೆಯಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು ಎಂಬ ಬಗ್ಗೆ ತಿಳಿದಿದ್ದೀರಾ? ಹಿಂದೂ ನಂಬಿಕೆಯ ಪ್ರಕಾರ, ನಮ್ಮ ಮನೆಗಳ ವಿವಿಧ ಮೂಲೆಗಳಲ್ಲಿ ದೀಪಾವಳಿಯ ಸಮಯದಲ್ಲಿ ಒಟ್ಟು 13 ದೀಪಗಳನ್ನು ಬೆಳಗಿಸಬೇಕು. ನೀವು ಇದಕ್ಕಿಂತ ಹೆಚ್ಚು ದೀಪಗಳನ್ನು(Diyas) ಬೆಳಗುವುದರಿಂದ ಸಮಸ್ಯೆಯಿಲ್ಲ. ಆದರೆ, 13 ದೀಪಗಳನ್ನು ಹಚ್ಚುವುದರ ಹಿಂದೆ ಕೆಲ ಉದ್ದೇಶವಿದೆ.
ದೀಪಾವಳಿಯಲ್ಲಿ ದೀಪಾಲಂಕಾರದ ಮಹತ್ವ(Significance)
ದೀಪಗಳು ಕೆಟ್ಟ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುವ ಜೊತೆಗೆ, ದಯೆ ಮತ್ತು ಶುದ್ಧತೆಯ ಸಂಕೇತವಾಗಿವೆ. ಅಗ್ನಿ ಯಾವಾಗಲೂ ಶುದ್ಧತೆಯನ್ನು ಪ್ರತಿನಿಧಿಸುತ್ತದೆ.
ನಮ್ಮನ್ನು ಉತ್ತಮ ಆದರ್ಶಗಳಿಗೆ ಕೊಂಡೊಯ್ಯುವ ವಿಷಯಗಳನ್ನು ಕಲಿಯುವ ಗುರಿಯೊಂದಿಗೆ ದೀಪಗಳ ಜ್ವಾಲೆಯು ನಿರಂತರವಾಗಿ ಮೇಲಕ್ಕೆ ಉರಿಯುತ್ತದೆ.
ಹಣತೆಯಿ ಅಜ್ಞಾನದ ಮೇಲೆ ಬುದ್ಧಿವಂತಿಕೆ ಮತ್ತು ದುಷ್ಟರ ಮೇಲೆ ಸದ್ಗುಣದ ವಿಜಯವನ್ನು ಸಂಕೇತಿಸುತ್ತದೆ. ಇದು ಒಳ್ಳೆಯತನ ಮತ್ತು ಆಶಾವಾದವನ್ನು ಹರಡುತ್ತದೆ.
ಇಷ್ಟೆಲ್ಲ ಸಾಂಕೇತಿಕ ಅರ್ಥಗಳನ್ನೊಳಗೊಂಡ ದೀಪಗಳು ನಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತನ್ನು ತರುತ್ತವೆ ಎಂದು ಪರಿಗಣಿಸಿ, ಮನೆಗಳ ಮುಂದೆ ದೀಪಗಳನ್ನು ಬೆಳಗಿಸಲಾಗುತ್ತದೆ.
ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!
13 ದೀಪಗಳ ಅರ್ಥ ಮತ್ತು ಪ್ರಾಮುಖ್ಯತೆ(Meaning behind 13 diyas)
ದೀಪಾವಳಿ ಹಬ್ಬದಲ್ಲಿ ಜೇಡಿಮಣ್ಣಿನ ದೀಪಗಳನ್ನು ಬೆಳಗಿಸುವುದು ಹೆಚ್ಚು ಶ್ರೇಷ್ಠವಾಗಿದೆ.
ದೀಪಗಳನ್ನು ಬೆಳಗಿಸುವುದರ ಹೆಚ್ಚಿನ ಲಾಭ
ಮಾನ್ಸೂನ್ ಋತುವಿನಲ್ಲಿ ತೇವ, ಸೂಕ್ಷ್ಮಜೀವಿಗಳಿಂದ ತುಂಬಿದ ಗಾಳಿ ಇರುತ್ತದೆ. ದೀಪಗಳು ಉತ್ಪಾದಿಸುವ ಶಾಖವು ಮನೆಯ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ದೀಪಗಳು ಮಣ್ಣಿನಿಂದ ಮಾಡಲ್ಪಟ್ಟಿರುವುದರಿಂದ ಪರಿಸರ ಸ್ನೇಹಿಯಾಗಿದೆ. ಅವು ಯಾವುದೇ ಹಾನಿಕಾರಕ ಅವಶೇಷಗಳನ್ನು ಬಿಡುವುದಿಲ್ಲ.
ಹಣತೆಗಳು ವಿದ್ಯುತ್ ಉಳಿಸುತ್ತವೆ.