ನನಗೆ ಮಾತ್ರ ಯಾಕೆ ಇಷ್ಟೊಂದು ಸಮಸ್ಯೆಗಳು ಎಂದು ಮರುಗುತ್ತಾ ಕೂರುವ ಜನರ ನಡುವೆ ಎಲ್ಲದರಲ್ಲೂ ಖುಷಿಯನ್ನು ಹುಡುಕುವ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರನ್ನು ಕೂಡಾ ನಗಿಸುವ ಜನರು ಈ ರಾಶಿ ಚಕ್ರದಡಿಯಲ್ಲಿ ಜನಿಸುತ್ತಾರೆ..!
ಈ ಭೂಮಿಯ ಮೇಲೆ ಜನ್ಮ ತಾಳಿದ ಮೇಲೆ ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಒಂದೊಂದು ರೀತಿಯ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ. ಆದರೆ, ಅನೇಕ ಜನರು ಯಾವಾಗಲೂ ಜೀವನದ ಏರಿಳಿತಗಳ ಬಗ್ಗೆ ದೂರು ಹೇಳುವುದರಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನೂ ಕೆಲವರು ಜೀವನವನ್ನು ಪೂರ್ಣವಾಗಿ ಬದುಕಬೇಕು (Live) ಮತ್ತು ಇತರರ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಅವರ ಹಾಸ್ಯಮಯ ಪ್ರವೃತ್ತಿ ಮತ್ತು ಆಶಾವಾದಿ ಮನಸ್ಥಿತಿಯು ಅವರ ಸುತ್ತ ಮುತ್ತ ನೆರೆದಿರುವ ಜನರನ್ನು ಸಂತೋಷವಾಗಿರಿಸುವಂತೆ (Happy) ಮಾಡುತ್ತದೆ. ಇವರ ಹಾಸ್ಯದ ಮಾತುಗಳಿಂದ, ತಮ್ಮ ಚಿಂತೆಗಳ ಬಗ್ಗೆ ಮರೆಯುವ ಜೊತೆಗೆ ಜನರ ಚಿಂತೆಗಳನ್ನು ಕೂಡಾ ಮರೆಸುತ್ತಾರೆ ಜೊತೆಗೆ ಅವರ ಸುತ್ತಲಿರುವ ಜನರ ಕಣ್ಣುಗಳಿಂದ ಸಂತೋಷದ ಕಣ್ಣೀರನ್ನು ತರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇಂತಹ ಜನರು ಜನಿಸಿರುವ ರಾಶಚಕ್ರದ ಪಟ್ಟಿ ಇಲ್ಲಿದೆ..
ಮಿಥುನ ರಾಶಿ (Gemini)
ಮಿಥುನ ರಾಶಿಯ ಜನರು ಬುದ್ಧಿವಂತಿಕೆಗೆ ಹೆಸರುವಾಸಿ, ಇವರ ಈ ಬುದ್ದಿವಂತಿಕೆಯನ್ನು ಇತರ ಜನರೊಂದಿಗೆ ಸಂಪರ್ಕಿಸುವ ಮಾರ್ಗವಾಗಿ ಬಳಸಿಕೊಳ್ಳುತ್ತಾರೆ ಮತ್ತು ನೀವು ಇವರ ಯಾವುದೇ ಸಂಭಾಷಣೆಯಲ್ಲಿ ವಿನೋದವನ್ನು ಕಂಡುಕೊಳ್ಳಬಹುದು. ಇವರು ಹಾಸ್ಯದ ಮೇಧಾವಿಗಳು (Comedian) ಇದ್ದಹಾಗೆ, ಯಾರನ್ನು ಬೇಕಾದರೂ ಗಂಟೆಗಳ ಕಾಲ ಜಗವನ್ನೇ ಮರೆಯುವಂತೆ ನಗೆಯಲ್ಲಿ ಹೊರಳಾಡುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಿಥುನ ರಾಶಿಯವರು ಜನರನ್ನು ನಗುವಿನಿಂದ ತುಂಬಿಸುವ ಮೂಲಕ ಅವರವರ ಚಿಂತೆಗಳನ್ನು ಬದಿಗಿಡುವಂತೆ ಪ್ರಚೋದಿಸಬಹುದು.
ಇದನ್ನೂ ಓದಿ: ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಇವರಿಂದ ಮಾತ್ರ ಸಾಧ್ಯ!
ಕನ್ಯಾರಾಶಿ (Virgo)
ಕನ್ಯಾ ರಾಶಿಯವರ ಬುದ್ಧಿವಂತ ಮತ್ತು ಪ್ರತಿಭಾವಂತ ವ್ಯಕ್ತಿತ್ವದ ಜೊತೆಗೆ ತಮಾಷೆಯ ಮಾತುಗಾರಿಕೆಯ ವ್ಯಕ್ತಿತ್ವ ಹೊಂದಿರುತ್ತಾರೆ. ಇವರ ಈ ಸ್ವಭಾವವೇ ಎಲ್ಲರಿಗೂ ಇಷ್ಟವಾಗುತ್ತದೆ. ಇವರು ಇರುವ ಕಡೆಯಲ್ಲಿ ಮನೋರಂಜನೆಗೆ ಯಾವುದೇ ಕೊರತೆ ಇರುವುದಿಲ್ಲ. ಇವರ ಕೂಲ್ ಹಾಗೂ ರಿಲಾಕ್ಸಿಂಗ್ (Relaxing) ಗುಣಗಳ ಕಾರಣದಿಂದ ತಮ್ಮ ಸಮಸ್ಯೆ ಹಾಗೂ ನೋವುಗಳನ್ನು ಯಾವಾಗಲೂ ಹೇಳಿಕೊಂಡು ಗೊಳಾಡುವುದಿಲ್ಲ. ಹಾಗೂ ತಮ್ಮ ಜೊತೆ ಇರುವ ಜನರಿಗೂ ಕೂಡಾ ಬೇಸರದಲ್ಲಿ (Sad) ಕುಳಿತಿರಲು ಬಿಡುವುದಿಲ್ಲ. ಏನೋ ಒಂದು ಮೋಜಿನ ಸಂಗತಿ ಹೇಳುತ್ತಾ ತಮ್ಮ ಸುತ್ತಮುತ್ತಲಿನ ಜನರನ್ನು ರಂಜಿಸಿಕೊಂಡಿರುತ್ತಾರೆ. ಇದಕ್ಕಾಗಿಯೇ ಇವರು ಎಲ್ಲರಿಗೂ ಅಚ್ಚುಮೆಚ್ಚು.
ಸಿಂಹ ರಾಶಿ (Leo)
ಸಿಂಹ ರಾಶಿಯವರು ತಮ್ಮ ನಾಯಕತ್ವದ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ, ಆದ್ದರಿಂದ ಅವರಲ್ಲಿ ಸಹಜವಾಗಿಯೇ ಜನರ ಉತ್ಸಾಹವನ್ನು (Energy) ಹೆಚ್ಚಿಸುವ ಸಹಜ ಸಾಮರ್ಥ್ಯ ಇರುತ್ತದೆ. ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ಜನರಲ್ಲಿ ಉತ್ಸಾಹ ತುಂಬುತ್ತಾರೆ. ಅವರು ಆಗಾಗ ಸಿಲ್ಲಿ ಜೋಕ್‌ಗಳನ್ನು (Joke) ಹೇಳುತ್ತಲೇ ಇರುತ್ತಾರೆ. ಆದ್ದರಿಂದ, ಅವರು ತಮ್ಮ ಸುತ್ತಲಿನ ಜನರ ಪ್ರೇರಣೆಯನ್ನು ಬೂಸ್ಟ್ ಮಾಡುತ್ತದೆ. ಇದಲ್ಲದೆ, ಅವರ ವಿಶಿಷ್ಟವಾದ ತಮಾಷೆಯ ಹಾಸ್ಯವು (Comedy) ಯಾವಾಗಲೂ ಜನರ ಗಮನ ಇವರೆಗೆದೆ ಸೆಳೆಯುವಲ್ಲಿ ಅವರಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೃತ ಆತ್ಮೀಯರು ಸಂದೇಶ ಕಳಿಸಿದ್ದಾರೆ! ಯಾವ ರಾಶಿಯವರು ಹೇಗೆ ಸಂದೇಶ ಪಡೆಯುತ್ತಾರೆ!
ಧನು ರಾಶಿ (Sagittarius)
ಸಂತೋಷಕರ ವ್ಯಕ್ತಿಗಳು ಎಂದು ಕರೆಯಲ್ಪಡುವ ಈ ಜನರು, ಇವರ ಸುತ್ತ ವಾಸಿಸುವ ಯಾರನ್ನೂ ಕೂಡ ನೋವು (Pain) ಅಥವಾ ಕಣ್ಣೀರಿನಲ್ಲಿ ನೋಡಲು ಇಷ್ಟಪಡುವುದಿಲ್ಲ. ಅವರು ತಮ್ಮ ಮಾತುಗಳನ್ನು ಚುರುಕಾಗಿ ಮತ್ತು ಸ್ವಯಂಪ್ರೇರಿತವಾಗಿ ಎತ್ತಿಕೊಂಡು, ವ್ಯಕ್ತಿಗಳು ತಮ್ಮ ನೋವನ್ನು ಮರೆತು ನಗುವಂತೆ ಮಾಡುತ್ತಾರೆ. ಗಂಟೆಗಟ್ಟಲೆ ಕುಳಿತು ಮಾತನಾಡಬಲ್ಲ ಇವರು, ಜನರ ತಮಾಷೆಯ ಮೂಳೆಗಳನ್ನು ಸಲೀಸಾಗಿ ಕೆರಳಿಸಬಲ್ಲರು. ತಾವಿರುವ ಜಾಗವನ್ನು ಲವಲವಿಕೆಯಿಂದ ತುಂಬಿರುವ ಹಾಗೆ ನೋಡಿಕೊಳ್ಳುವ ಜಾಣ್ಮೆ ಇವರಲ್ಲಿದೆ.