ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

Suvarna News   | Asianet News
Published : Oct 29, 2021, 05:15 PM IST
ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

ಸಾರಾಂಶ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಆಧಾರದ ಮೇಲೆ ಗುಣ ಸ್ವಭಾವಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ರಾಶಿ ಸ್ವಭಾವದಂತೆ ಕೆಲವು ಮಹಿಳೆಯರು ಸಂಸಾರದಲ್ಲಿ ತಮ್ಮದೇ ಹಿಡಿತ ಸಾಧಿಸಬೇಕೆಂದು ಬಯಸುತ್ತಾರೆ. ಪತಿ ತಮ್ಮ ಮಾತನ್ನೇ ಕೇಳಬೇಕೆನ್ನುತ್ತಾರೆ. ಹಾಗಾದರೆ ಯಾವ್ಯಾವ  ರಾಶಿಗಳು ಅವು ಎಂಬುದನ್ನು ತಿಳಿಯೋಣ....  

ಈ ಆಧುನಿಕ (Modern) ಯುಗದಲ್ಲಿ ಮಹಿಳೆ ( women) ಪುರುಷ (men) ಎಂಬ ಭೇದವಿಲ್ಲದೆ ಎಲ್ಲರೂ ವೃತ್ತಿ ಕ್ಷೇತ್ರದಲ್ಲಿ (Career) ಉನ್ನತ ಹುದ್ದೆಯನ್ನು (Position) ಹಾಗೂ ಯಶಸ್ಸನ್ನು (Success) ಪಡೆಯುತ್ತಾರೆ. ಈ ರೀತಿ ಯಶಸ್ಸು ಗಳಿಸುವವರಲ್ಲಿ ಮಹಿಳೆಯರು ಹೆಚ್ಚೇ ಇದ್ದಾರೆ ಎನ್ನಬಹುದು. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ವ್ಯಕ್ತಿಗಳ ಸ್ವಭಾವ, ವ್ಯಕ್ತಿತ್ವ, ಭವಿಷ್ಯ ಮತ್ತು ಯಶಸ್ಸಿನ ಮೇಲೆ ರಾಶಿ, ಗ್ರಹ ಹಾಗೂ  ನಕ್ಷತ್ರಗಳ ಪ್ರಭಾವ (Effect) ಇರುತ್ತದೆ. ಇವುಗಳ ಪ್ರಭಾವದಿಂದ ಕೆಲವರು ಯಶಸ್ಸು ಗಳಿಸುತ್ತಾರೆ ಮತ್ತೆ ಕೆಲವರು ಯಶಸ್ಸಿನ ಶಿಖರ ಏರಲು ಪ್ರಯತ್ನಿಸುತ್ತಲೇ (try) ಇರುತ್ತಾರೆ. ಶಾಸ್ತ್ರದ ಪ್ರಕಾರ ಈ ಕೆಲವು ರಾಶಿಯ (Zodiac) ಮಹಿಳೆಯರು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಅಷ್ಟೇ ಅಲ್ಲದೆ ಸಾಂಸಾರಿಕ ಜೀವನದಲ್ಲಿ (Life) ಪತಿಯ (Husband) ಮೇಲೆ ಹಿಡಿತ (Control) ಸಾಧಿಸುವಲ್ಲಿ ಸಹ ಯಶಸ್ವಿಯಾಗುತ್ತಾರೆ.

ಇದನ್ನು ಓದಿ: ಈ ರಾಶಿಯವರಲ್ಲೇ ವಿಚ್ಚೇದನ ಹೆಚ್ಚು: ಅವು ಯಾವ್ಯಾವ ರಾಶಿ ಗೊತ್ತಾ..?

ಏನೇ ಇದ್ದರೂ ಪತಿ ತಮ್ಮ ಮಾತು ಕೇಳಬೇಕೆಂಬ ಹಠ ಇವರದಾಗಿರುತ್ತದೆ. ಮತ್ತು ಇವರು ಹಾಕಿದ ಗೆರೆಯನ್ನು ಎಂದಿಗೂ ದಾಟಬಾರದು ಎಂದು ಬಯಸುತ್ತಾರೆ. ಜತೆಗೆ ಮಾತನಾಡುವಾಗಲೂ ಸಹ ಸೌಮ್ಯ ಸ್ವಭಾವದಿಂದಲೇ ವರ್ತಿಸಬೇಕೆಂಬುದು ಇವರ ಮನೋಭಿಲಾಷೆ ಆಗಿರುತ್ತದೆ. ಹಾಗಾಗಿ ಪ್ರತಿಯೊಂದು ನಡೆಯೂ ಸಹ ಇವರ ಕಣ್ಣಿನ ಕೆಳಗೆ ನಡೆಯುವಂತೆ ನೋಡಿಕೊಳ್ಳುತ್ತಾರೆ ಇಂತಹ ವ್ಯಕ್ತಿತ್ವವುಳ್ಳ ಹುಡುಗಿಯರ ರಾಶಿಗಳು ಯಾವುದು ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ಮೇಷ ರಾಶಿ (Aries)
ಮೇಷ ರಾಶಿಯ ಹುಡುಗಿಯರು (Girls)  ನೋಡಲು ಅತ್ಯಂತ ಆಕರ್ಷಕವಾಗಿ (Attractive) ಇರುತ್ತಾರೆ. ಈ ರಾಶಿಯ ಹುಡುಗಿಯರು ನೋಡಲು ಅಂದವಾಗಿರುವುದು ಅಷ್ಟೇ ಅಲ್ಲದೆ ಬುದ್ಧಿವಂತರು ಸಹ ಆಗಿರುತ್ತಾರೆ. ಈ ರಾಶಿಯ ಹುಡುಗಿಯರು ಮದುವೆಯ (Marriage) ನಂತರ ಪತಿಯ ಮೇಲೆ ಹಿಡಿತವನ್ನು ಇಟ್ಟುಕೊಳ್ಳಲು ಇಚ್ಛಿಸುತ್ತಾರೆ. ಮೇಷ ರಾಶಿಯ ಹುಡುಗಿಯರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಅಷ್ಟೇ ಅಲ್ಲದೆ ಇವರ ಈ ಯಶಸ್ಸಿಗೆ ಪತಿಯ ಸಹಕಾರವೂ (Support) ಸಿಗುತ್ತದೆ.    

ವೃಶ್ಚಿಕ ರಾಶಿ (Scorpio)
ಈ ರಾಶಿಯ ಹುಡುಗಿಯರು ತುಂಬಾ ಚುರುಕು (Vigor) ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯವರು ಸ್ವತಂತ್ರ (Independent) ಮನೋಭಾವವನ್ನು ಹೊಂದಿರುತ್ತಾರೆ.  ಯಾವುದೋ ಒಂದು ಚೌಕಟ್ಟಿನೊಳಗೆ (Framework) ಬದುಕುವುದು ಇವರಿಗೆ ಇಷ್ಟವಿರುವುದಿಲ್ಲ. ಮದುವೆಯ ನಂತರ ಈ ರಾಶಿ ಹುಡುಗಿಯರಿಗೆ ಪತಿಯ ಸಹಾಯ ಮತ್ತು ಬೆಂಬಲ (Support) ದೊರೆಯುತ್ತದೆ. ಈ ರಾಶಿಯ ಹುಡುಗಿಯರು ಯಾರನ್ನೇ ಮದುವೆಯಾದರೂ ಅವರನ್ನು ತಮ್ಮ ಕೈಗೊಂಬೆಗಳಂತೆ (toy) ಆಡಿಸುತ್ತಾರೆ. ಈ ರಾಶಿಯ ಹುಡುಗಿಯರ ಪತಿ ಇವರು ಹೇಳಿದಂತೆ ಕೇಳುವವನಾಗಿರುತ್ತಾನೆ. 

ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವವನ್ನುಈ ಸಂಕೇತಗಳಿಂದ ತಿಳಿಯಿರಿ...!!

ಕನ್ಯಾ ರಾಶಿ (Virgo)
ಈ ರಾಶಿಯ ಹುಡುಗಿಯರು ಅತ್ಯಂತ ಶಾಂತ ಸ್ವಭಾವವನ್ನು ಹೊಂದಿದವರು ಆಗಿರುತ್ತಾರೆ. ಅಷ್ಟೇ ಅಲ್ಲದೆ ಸಾಹಸಿಗಳು ಮತ್ತು ಧೈರ್ಯವಂತರು (Brave) ಇವರಾಗಿರುತ್ತಾರೆ.    ಈ ರಾಶಿಯ ಹುಡುಗಿಯರಲ್ಲಿ ಉತ್ತಮ ಪತ್ನಿಯಲ್ಲಿ (Wife) ಇರಬೇಕಾದ ಎಲ್ಲ ಗುಣಗಳೂ ಇರುತ್ತವೆ. ಕಾರ್ಯಕ್ಷೇತ್ರದಲ್ಲಿ (Carrer) ಉತ್ತಮ ಯಶಸ್ಸನ್ನು (Success) ಗಳಿಸುವುದಲ್ಲದೆ ಗೌರವ ಪ್ರತಿಷ್ಠೆಗಳನ್ನು ಸಂಪಾದಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯ ಹುಡುಗಿಯರು ಪತಿಯು ತಾವು ಹೇಳಿದಂತೆ ಕೇಳಬೇಕೆಂದು ಬಯಸುತ್ತಾರೆ.   


ಮಕರ ರಾಶಿ (Capricorn)
ಮಕರ ರಾಶಿಯ ಹುಡುಗಿಯರು ಚಂಚಲ (Changeful) ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯ ಹುಡುಗಿಯರು ಯಾವುದೇ ನಿರ್ಧಾರ (Decision) ತೆಗೆದುಕೊಳ್ಳುವಂತೆ ಹೆಚ್ಚು ಯೋಚಿಸುವುದಿಲ್ಲ. ಪತಿ ತಾವು ಹೇಳಿದಂತೆ ಕೇಳಬೇಕೆಂದು ಈ ರಾಶಿಯ ಹುಡುಗಿಯರು ಬಯಸುತ್ತಾರೆ. ಮಕರ ರಾಶಿಯ ಹುಡುಗಿಯರು ವೃತ್ತಿ ಕ್ಷೇತ್ರದಲ್ಲಿ (Job) ಹೆಚ್ಚಿನ ಸಫಲತೆಯನ್ನು (Success) ಕಾಣುತ್ತಾರೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ