ಒಂದು ವಿವಾಹ ಯಶಸ್ವಿಯಾಗಬೇಕೆಂದರೆ ಸಂಗಾತಿಗಳಲ್ಲಿ ಹೊಂದಾಣಿಕೆ ಇರಬೇಕು. ಒಬ್ಬರನ್ನೊಬ್ಬರು ಅರಿತುಕೊಂಡು ಬಾಳ್ವೆ ನಡೆಸಬೇಕು. ಸಾಮರಸ್ಯ ಇಲ್ಲವಾದರೆ ಕೊನೆಗೆ ತಲುಪುವುದು ವಿಚ್ಚೇದನದ ಹಂತ. ಇದಕ್ಕೆ ರಾಶಿ ಗುಣಗಳ ಪ್ರಭಾವವೂ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.
ಇಂದಿನ ದಿನಗಳಲ್ಲಿ ವಿಚ್ಚೇದನದ (Divorce) ಸಂಖ್ಯೆ ಸ್ವಲ್ಪ ಹೆಚ್ಚೇ ಆಗಿದ್ದು, ಯಶಸ್ವಿ ಮದುವೆಗಳ (Marriage ) ಸಂಖ್ಯೆ ಕಡಿಮೆ ಆಗುತ್ತಿರುವುದು ಅಷ್ಟೆ ಸತ್ಯವಾಗಿದೆ (True). ಇದಕ್ಕೆ ಹೊಂದಾಣಿಕೆಯ (Adjustment) ಕೊರತೆ ಒಂದೆಡೆಯಾದರೆ, ರಾಶಿ ಚಕ್ರಗಳ (Zodiac sign ) ಪ್ರಭಾವವು ಸಹ ಕಾರಣವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ.
ಇದನ್ನು ಓದಿ: ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ
ಆಯಾ ರಾಶಿಯ ಸ್ವಭಾವ ಗುಣಗಳು ವ್ಯಕ್ತಿಯ ಮೇಲೆ ಪ್ರಭಾವ (Effect) ಬೀರುತ್ತವೆ. ಹಾಗಾಗಿ ರಾಶಿ ತತ್ತ್ವಗಳ ಮೂಲ ಗುಣಗಳು ವ್ಯಕ್ತಿಯ ಸ್ವಭಾವದಲ್ಲಿ ಕೆಲಸಕಾರ್ಯಗಳಲ್ಲಿ ಕಾಣಸಿಗುತ್ತವೆ. ಕೆಲವು ರಾಶಿಯ ವ್ಯಕ್ತಿಗಳು ಸಂಬಂಧಗಳನ್ನು (Relationship) ಕಾಪಾಡಿಕೊಂಡು ಹೊಂದಾಣಿಕೆಯಿಂದ ಜೀವನ ನಡೆಸುವ ಸ್ವಭಾವವನ್ನು ಹೊಂದಿರುತ್ತಾರೆ. ಅದೇ ಇನ್ನೂ ಕೆಲವು ರಾಶಿಯ ವ್ಯಕ್ತಿಗಳಿಗೆ ಹೊಂದಾಣಿಕೆಯಿಂದ ಬಾಳ್ವೆ ನಡೆಸುವುದು, ಬಾಂಧವ್ಯಗಳನ್ನು ಗಟ್ಟಿಗೊಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ಮದುವೆಯ ಬಂಧದಲ್ಲಿ ಬೆಸೆದುಕೊಂಡರೂ ಸಹ ಹೊಂದಾಣಿಕೆಯಾಗದೆ ವಿಚ್ಚೇದನದ ದಾರಿ ಹಿಡಿಯುವಂತಾಗುತ್ತದೆ. ಕೆಲವು ರಾಶಿಯ ವ್ಯಕ್ತಿಗಳಲ್ಲಿ ವಿಚ್ಚೇದನ ಆಗುವುದು ಹೆಚ್ಚು ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ ರಾಶಿ (Aries)
ಈ ರಾಶಿಯ ವ್ಯಕ್ತಿಗಳು ಮದುವೆಯ ನಂತರ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳಲು ಹೆಚ್ಚು ಪ್ರಯತ್ನಿಸುತ್ತಾರೆ. ಸಂಗಾತಿಯಿಂದ ಆ ಮಟ್ಟಿನ ಭಾವನಾತ್ಮಕ ಬಾಂಧವ್ಯ ಗಟ್ಟಿಗೊಳ್ಳದಿದ್ದಾಗ ಜೊತೆಗೆ ಬಾಳ್ವೆ ನಡೆಸುವುದು ಮೇಷ ರಾಶಿಯ ವ್ಯಕ್ತಿಗಳಿಗೆ ಕಷ್ಟವಾಗುತ್ತದೆ. ಹಾಗಾಗಿ ಮದುವೆಯ ಬಂಧವನ್ನು ಕಡಿದುಕೊಳ್ಳುವುದೇ ಸರಿ ಎಂದೆನಿಸುತ್ತದೆ. ನಂತರ ವಿಚ್ಚೇದನ ಪಡೆಯುವ ಹಂತಕ್ಕೆ ತಲುಪುತ್ತದೆ. ಮೇಷ ರಾಶಿಯವರ ವಿಚ್ಚೇದನ ಹೆಚ್ಚಾಗಿ ಭಾವನಾತ್ಮಕವಾಗಿ ಹೊಂದಾಣಿಕೆಯಾಗದ ಕಾರಣದಿಂದಲೇ ಆಗುತ್ತದೆ.
ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವವನ್ನುಈ ಸಂಕೇತಗಳಿಂದ ತಿಳಿಯಿರಿ...!!
ಮಿಥುನ ರಾಶಿ (Gemini)
undefined
ಮಿಥುನ ರಾಶಿಯ ವ್ಯಕ್ತಿಗಳು ಮದುವೆಯಾದ ನಂತರ ಒಂದು ಹಂತದವರೆಗೆ ಹೊಂದಾಣಿಕೆಯಿಂದ ಬಾಳಲು ಪ್ರಯತ್ನಿಸುತ್ತಾರೆ. ಎಷ್ಟು ಪ್ರಯತ್ನಿಸಿದರೂ ಸರಿ ಹೊಂದದಿದ್ದಾಗ, ಇನ್ನೂ ಸಂಗಾತಿಗೆ (Partner) ಹಣ ಮತ್ತು ಸಮಯ (Time ) ಖರ್ಚು (Spend) ಮಾಡುವುದು ವ್ಯರ್ಥ ಪ್ರಯತ್ನ ಎಂದು ಅನ್ನಿಸಿದಾಗ ವಿಚ್ಛೇದನ ತೆಗೆದುಕೊಳ್ಳುವ ಮನಸ್ಸು ಮಾಡುತ್ತಾರೆ. ವಿವಾಹದಲ್ಲಿ ಅಸ್ಥಿರತೆ ಉಂಟಾದಾಗ ಮಿಥುನ ರಾಶಿಯ ವ್ಯಕ್ತಿಗಳು ವಿಚ್ಚೇದನ ಪಡೆಯುವ ಬಗ್ಗೆ ನಿರ್ಧರಿಸುತ್ತಾರೆ (Decision).
ಸಿಂಹ ರಾಶಿ (Leo)
ಸಿಂಹ ರಾಶಿಯ ವ್ಯಕ್ತಿಗಳು ಮದುವೆಯಾಗಲು ನಿರ್ಧರಿಸುವಾಗಲೇ ಪ್ರಾಮಾಣಿಕತೆ ಮತ್ತು ವಿಶ್ವಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ಗುಣಗಳು ಕಾಪಾಡಿಕೊಳ್ಳುವವರನ್ನು ಸಂಗಾತಿಯಾಗಿ ಪಡೆಯಲು ಬಯಸುತ್ತಾರೆ. ಮದುವೆಯ ನಂತರ ವಿಶ್ವಾಸಕ್ಕೆ ಕುತ್ತು ಬಂದಾಗ ಅಥವಾ ಸಂಗಾತಿಯಿಂದ ಮೋಸ ಹೋದಾಗ ವಿಚ್ಛೇದನ ಪಡೆಯಲು ಬಯಸುತ್ತಾರೆ. ಅವಿಶ್ವಾಸ ಮತ್ತು ಮೋಸವನ್ನು ಸಿಂಹ ರಾಶಿಯ ವ್ಯಕ್ತಿಗಳು ಯಾವುದೇ ಸಂಬಂಧದಲ್ಲೂ ಸಹಿಸಿಕೊಳ್ಳುವುದಿಲ್ಲ. ಹಾಗಾಗಿ ಸಂಗಾತಿ ಮೋಸಮಾಡಿದಾಗ ವಿಚ್ಚೇದನ ಪಡೆಯುತ್ತಾರೆ.
ಇದನ್ನು ಓದಿ: ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ
ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳು ಯಾರ ಮಾತನ್ನೂ ಕೇಳುವುದಿಲ್ಲ. ಇತರರು ತಮ್ಮ ಆಜ್ಞೆ ಪಾಲಿಸಬೇಕೆಂದು ಬಯಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಂಗಾತಿಯು ಹೇಳಿದಂತೆ ಕೇಳಬೇಕೆಂಬ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಂಗಾತಿಗೆ ಅನೇಕ ರೀತಿಯ ಕಟ್ಟುಪಾಡುಗಳನ್ನು ಹಾಕುತ್ತಾರೆ. ಇದರಿಂದ ವಿಚ್ಚೇದನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವೃಶ್ಚಿಕ ರಾಶಿಯವರು ಕಟ್ಟುಪಾಡುಗಳಿಗೆ ಒಪ್ಪದ ವ್ಯಕ್ತಿಯನ್ನು ಮದುವೆಯಾದಾಗ ವಿಚ್ಛೇದನ ಪಡೆಯುವ ನಿರ್ಧಾರ ಮಾಡುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಂಬಂಧಗಳನ್ನು ತಾವೇ ಸ್ವತ: ಹಾಳು ಮಾಡಿಕೊಳ್ಳುತ್ತಾರೆ.
ಮೀನ ರಾಶಿ (Pisces)
ವಿಚ್ಚೇದನ ಪಡೆಯುವವರಲ್ಲಿ ಮೀನ ರಾಶಿಯ ವ್ಯಕ್ತಿಗಳೇ ಅಧಿಕ (High). ಈ ರಾಶಿಯ ವ್ಯಕ್ತಿಗಳಿಗೆ ಸಂಗಾತಿಯು ಪ್ರೀತಿಗೆ (Love) ಅರ್ಹ ಅಲ್ಲ ಎಂದು ಅನ್ನಿಸಿದಾಗ ಅಥವಾ ಸಂಗಾತಿಯು ಸಾಂಗತ್ಯ ದೊರೆಯದ ಸಂದರ್ಭದಲ್ಲಿ ಮದುವೆಯ ಬಗ್ಗೆ ಬೇಸರ ಹೊಂದಿ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ಒಂಟಿ (Single) ಎಂಬ ಭಾವನೆ ಬಂದು, ಮದುವೆಯ ಬಂಧ ಬೇಡವೆಂದೆನಿಸಿ ಈ ರಾಶಿಯವರು ವಿಚ್ಛೇದನ ಪಡೆಯುತ್ತಾರೆ.