ಜ್ಯೋತಿಷ್ಯ ಶಾಸ್ತ್ರ (Astrology)ದ ಪ್ರಕಾರ ಅದೃಷ್ಟ, ದುರಾದೃಷ್ಟಗಳು ಜಾತಕಗಳ ಮೂಲಕ ತಿಳಿಯುತ್ತದೆ. ಕೆಲವರಿಗೆ ಅದೃಷ್ಟ (Luck) ಮೊದಲೇ ಒಲಿಯುವುದಿಲ್ಲವಾದರೂ ಅವರ ಪರಿಶ್ರಮದಿಂದ ಒಲಿಯುತ್ತದೆ. ಹೀಗೆ ಕಷ್ಟಪಟ್ಟು ತಮ್ಮ ಹಣೆಬರಹವನ್ನು ತಾವೇ ನಿರ್ಧರಿಸುವ ವ್ಯಕ್ತಿಗಳು ಯಾರು ಎಂಬುದನ್ನು ನೋಡೋಣ. ಇಂತಹ ಪರಿಶ್ರಮಿಗಳಾಗಿರುವ 4 ರಾಶಿಗಳ ಬಗ್ಗೆ ತಿಳಿಯೋಣ..
ಅದೃಷ್ಟ (Luck) ಎನ್ನುವುದು ಎಲ್ಲರಿಗೂ ಒಲಿಯುವದಿಲ್ಲ. ಇನ್ನು ಕೆಲವರು ಎಷ್ಟೇ ಕಷ್ಟಪಟ್ಟರೂ ಯಶಸ್ಸಿನ ಹಾದಿಯನ್ನು ಹಿಡಿಯುವುದು ಬಹಳವೇ ಕಷ್ಟ. ಕೆಲವರು ಹುಟ್ಟಿನಿಂದಲೇ (Birth) ಅದೃಷ್ಟವನ್ನು ಹೊತ್ತು ತಂದಿರುತ್ತಾರೆ. ಮತ್ತೆ ಕೆಲವರ ಪರಿಸ್ಥಿತಿ ಹಾಗಲ್ಲ. ಇದು ಅವರ ಹುಟ್ಟಿದ ಘಳಿಗೆ (Time), ದಿನ (Day), ರಾಶಿ (Zodiac), ನಕ್ಷತ್ರಗಳ (Star) ಆಧಾರದ ಮೇಲೆ ಸಹ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಕೆಲವರು ಕಷ್ಟಪಟ್ಟರೆ ಅವರಿಗೆ ಅದೃಷ್ಟ ಒಲಿಯುತ್ತದೆ. ಅಂಥವರು ಏನನ್ನು ಬೇಕಿದ್ದರೂ ಸಾಧಿಸಬಹುದು.
ಇಂಥವರು ತಮ್ಮದೇ ಹಣೆಬರಹವನ್ನು ಬರೆಯುವ ಸಾಮರ್ಥ್ಯವನ್ನು (Capacity) ಸಹ ಹೊಂದಿದ್ದಾರೆ. ಅವರಿಗೆ ಸರಿಯಾದ ಮಾರ್ಗವೊಂದು ಸಿಗಬೇಕಿದೆ ಅಷ್ಟೇ. ಹೀಗೆ ಪರಿಶ್ರಮ ಪಟ್ಟರೆ ಅದೃಷ್ಟ ಪಡಯಬಲ್ಲ 4 ರಾಶಿಯವರು ಯಾರು ಎಂಬುದರ ಬಗ್ಗೆ ನೋಡೋಣ..
ಸಿಂಹ ರಾಶಿ (Leo)
ಸಿಂಹ ರಾಶಿಯವರು ಅಗ್ನಿ ತತ್ವ ರಾಶಿಯಾಗಿದೆ. ಅಂದರೆ ಇವರಲ್ಲಿ ಎಷ್ಟು ಕೋಪ ಇರುತ್ತದೆಯೋ..? ಅಷ್ಟೇ ಉತ್ಸಾಹ ಮತ್ತು ಕೋಪವಿದೆ. ಈ ಜನ ಜೀವನದಲ್ಲಿ (Life) ಏನನ್ನು ಬೇಕಿದ್ದರೂ ಸಾಧಿಸಬಹುದು. ಒಮ್ಮೆ ಇವರು ದೃಢ ನಿಶ್ಚಯ ಮಾಡಿದರೆ, ಇಲ್ಲವೇ ಇಂಥದ್ದನ್ನು ಸಾಧಿಸುತ್ತೇನೆ ಎಂದು ಪ್ರತಿಜ್ಞೆಗೈದರೆ ಇವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇವರು ಐಷಾರಾಮಿ (Luxury) ಮತ್ತು ಅನುಕೂಲಕರ ಜೀವನ ನಡೆಸಲು ಇಷ್ಟಪಡುತ್ತಾರೆ. ಆದ್ದರಿಂದ ಅವರು ಹೆಚ್ಚಾಗಿ ಸಂಪತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ಅವರು ಜೀವನದಲ್ಲಿ ಎಷ್ಟೇ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದರೂ, ತಮ್ಮ ಗುರಿಯನ್ನು (Target) ಸಾಧಿಸುತ್ತಾರೆ. ಜೊತೆಗೆ ತಾವು ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರು ಸಾಧನೆಯನ್ನು ಮಾಡುತ್ತಾರೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ಜನರು ತುಂಬಾ ಬುದ್ಧಿವಂತರು (Intelligent). ಇವರು ಎಷ್ಟು ಪರಿಶ್ರಮಿಗಳೆಂದರೆ ವೃತ್ತಿ ಕ್ಷೇತ್ರದಲ್ಲಿ ಇವರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬರಲಿದೆ. ಆದರೆ, ಇವರು ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಾಣಲಿದ್ದು, ಎಂಥ ಸಂದರ್ಭದಲ್ಲಿಯೂ ಸೋಲೊಪ್ಪಿಕೊಳ್ಳುವುದಿಲ್ಲ. ಜೀವನದಲ್ಲಿ ಯಾವುದೇ ಸವಾಲುಗಳು (Challenge) ಬಂದರೂ, ಅಷ್ಟೇ ದೃಢವಾಗಿ ಎದುರಿಸುವ ಇವರು, ತಮ್ಮ ಹಣೆಬರಹವನ್ನು ತಾವೇ ನಿರ್ಧರಿಸುತ್ತಾರೆ. ಎಲ್ಲರಿಗಿಂತ ತಾವೇ ಮುಂದಿರಬೇಕು ಎಂಬುದು ಇವರ ಇಚ್ಛೆಯಾಗಿರುತ್ತದೆ.
ಇದನ್ನು ಓದಿ: Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ತುಂಬಾ ತೀಕ್ಷ್ಣ ಮನಸ್ಸಿನವರು. ಅವರು ಕಲಿಯುವ ಮತ್ತು ನಾಯಕತ್ವದ ಗುಣವನ್ನು ಹೊಂದುವ ಅದ್ಭುತ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಇವರು ತುಂಬಾ ಉತ್ಸಾಹಿಗಳಾಗಿದ್ದು, ಕ್ರಿಯೇಟಿವ್ (Creative) ಸಹ ಆಗಿರುತ್ತಾರೆ. ಯಾವುದೇ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಇವರು, ಬಹುಬೇಗ ಹೊಸ ಕೆಲಸವನ್ನು ಕಲಿಯುತ್ತಾರೆ. ಈ ಗುಣಗಳು ಇವರನ್ನು ಜೀವನದಲ್ಲಿ ಒಂದು ಗುರಿ ಮುಟ್ಟುವ ಛಲವನ್ನು ತಂದುಕೊಡುತ್ತದೆ. ಅಲ್ಲದೆ, ತಾವು ಮಾಡುವ ಕೆಲಸವನ್ನು ರಹಸ್ಯವಾಗಿಡಲು ಇಷ್ಟಪಡುತ್ತಾರೆ. ಗುರಿಯನ್ನು ಸಾಧಿಸಿದ ನಂತರವೇ ಇವರು ತಮ್ಮ ಯೋಜನೆಯ ಸುದ್ದಿಯನ್ನು ಹೊರಜಗತ್ತಿಗೆ ತಿಳಿಸುತ್ತಾರೆ. ಇವರು ಎಂದಿಗೂ ಅದೃಷ್ಟಕ್ಕಾಗಿ ಅಳುವವರಲ್ಲ. ಆದರೆ ವರ ಕಠಿಣ ಪರಿಶ್ರಮ ಮತ್ತು ಜಾಣ್ಮೆಯಿಂದ ದುರದೃಷ್ಟವನ್ನು ಜಯಿಸುತ್ತಾರೆ.
ಇದನ್ನು ಓದಿ: Solar Eclipse 2022: ಈ ವರ್ಷದಲ್ಲೆಷ್ಟು ಬಾರಿ ಸೂರ್ಯ ಗ್ರಹಣ?
ಕುಂಭ ರಾಶಿ (Aquarius)
ಕುಂಭ ರಾಶಿಯ ಜನರು ಕಠಿಣ ಪರಿಶ್ರಮಿಗಳಾಗಿದ್ದಾರೆ. ಅಲ್ಲದೆ, ಸಾಕಷ್ಟು ಪ್ರಬುದ್ಧರೂ ಆಗಿದ್ದಾರೆ. ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿದ್ದರೆ ಅದರ ಸಾಧಕ – ಬಾಧಕಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಎಂಥದ್ದೇ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿಭಾಯಿಸುತ್ತಾರೆ. ಇವರು ದೊಡ್ಡ ಕನಸನ್ನೇ (Dream) ಕಾಣುವವರಾಗಿದ್ದು, ಅದನ್ನು ನನಸು ಮಾಡುವತ್ತ ಹೆಜ್ಜೆ ಹಾಕುತ್ತಾರೆ.