ಸದಾ ಸಿಡಿಮಿಡಿಗೊಳ್ಳೋರು ಈ ಹರಳನ್ನು ಜೊತೆಯಲ್ಲೇ ಇಟ್ಕೊಂಡರೆ ಬೆಸ್ಟ್ ಪರಿಹಾರ!

By Suvarna News  |  First Published Mar 20, 2024, 4:21 PM IST

ಹರಳುಗಳು, ರತ್ನಗಳಲ್ಲಿ ವಿಶಿಷ್ಟ ಪ್ರಭಾವವಿರುತ್ತದೆ. ಪರಿಸರದ ಶಕ್ತಿಗಳೊಂದಿಗೆ ಸೇರಿ ಅವು ನಮ್ಮ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ. ಎಷ್ಟೋ ಹರಳುಗಳು ನಮ್ಮ ಕೋಪ, ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತವೆ. ಅವುಗಳಲ್ಲಿ ಕೆಲವು ಹರಳುಗಳು ಉದ್ವಿಗ್ನಗೊಂಡ ಮನಸ್ಸನ್ನು ಶಾಂತಗೊಳಿಸಲು, ಭಾವನೆಗಳನ್ನು ನಿಯಂತ್ರಿಸಲು ಕಾರಣವಾಗುತ್ತವೆ. 
 


ದೈನಂದಿನ ಜೀವನದಲ್ಲಿ ಎಲ್ಲರೂ ಒತ್ತಡಗಳನ್ನು ಎದುರಿಸುತ್ತೇವೆ. ಗಡಿಬಿಡಿಯ ಜೀವನ, ಕಾರ್ಯಕಟ್ಟಳೆಗಳಿಂದ ಎಷ್ಟೋ ಬಾರಿ ಸಾಕಷ್ಟು ಕಿರಿಕಿರಿ, ಆತಂಕಗಳನ್ನೂ ಎದುರಿಸಬೇಕಾಗುತ್ತದೆ. ಅಂದುಕೊಂಡ ಕೆಲಸಗಳು ಆಗುವುದಿಲ್ಲ, ಎಲ್ಲವೂ ನಾವು ಅಂದುಕೊಂಡಂತೆ ಸಾಧ್ಯವಾಗುವುದಿಲ್ಲ. ನಮ್ಮವರು ಎನಿಸಿಕೊಂಡರೇ ಕಷ್ಟಕಾಲದಲ್ಲಿ ದೂರ ನಿಲ್ಲುತ್ತಾರೆ, ಮನೆಯಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ. ಮಕ್ಕಳಿಂದ ಸಮಸ್ಯೆ ನಿರ್ಮಾಣವಾಗಬಹುದು. ಒಟ್ಟಿನಲ್ಲಿ ಜೀವನ ಅನಿರೀಕ್ಷಿತವಾಗಿದ್ದು, ಏನು ಬೇಕಿದ್ದರೂ ಎದುರಾಗಬಹುದು. ಇಂತಹ ಸಮಯದಲ್ಲಿ ಒತ್ತಡ ಹೆಚ್ಚಾಗಿ ಕೋಪದ ಮನಸ್ಥಿತಿಯೂ ಹೆಚ್ಚಾಗಬಹುದು. ಮೊದಲೇ ಸಿಡಿಮಿಡಿಗೊಳ್ಳುವ ಸ್ವಭಾವದವರು ಹೆಚ್ಚು ಕೋಪಿಸಿಕೊಂಡು ಎಗರಾಡುವಂತಹ ಸ್ಥಿತಿ ಉಂಟಾಗಬಹುದು. ಇಂತಹ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿರುತ್ತದೆ. ಒತ್ತಡ ಮತ್ತು ಕೋಪವನ್ನು ನಿಯಂತ್ರಿಸಿಕೊಂಡು ವರ್ತಿಸಬೇಕಾಗುತ್ತದೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒತ್ತಡ ಮತ್ತು ಕೋಪವನ್ನು ನಿಯಂತ್ರಿಸಲು ಅನೇಕ ರೀತಿಯ ಹರಳುಗಳ ಈ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತವೆ. ಕೆಲವು ಹರಳುಗಳು ತಮ್ಮ ಪ್ರಭಾವದಿಂದ ಮನದಲ್ಲಿ ಶಾಂತಿ ನೀಡುತ್ತವೆ. 

•    ಅಮೆಥಿಸ್ಟ್ –ಪದ್ಮರಾಗ (Amethyst)
ಕೆನ್ನೇರಳೆ (Purple) ಬಣ್ಣದ ಈ ಹರಳು ತನ್ನ ಶಾಂತಗೊಳಿಸುವ (Cooling), ಉದ್ವಿಗ್ನತೆಯನ್ನು ಶಮನಗೊಳಿಸುವ ಅಂಶದಿಂದ ಗುರುತಿಸಿಕೊಂಡಿದೆ. ನಮ್ಮ ದೇಹದಲ್ಲಿರುವ ಏಳು ಚಕ್ರಗಳ (Chakra) ಪೈಕಿ ಒಂದಾಗಿರುವ ತಲೆಯ ಮಧ್ಯಭಾಗದಲ್ಲಿರುವ ಸಹಸ್ರಾರ (Sahasrara) ಚಕ್ರದೊಂದಿಗೆ ಈ ಹರಳು (Crystal) ಸಂಬಂಧ ಹೊಂದಿದೆ. ಮನಸ್ಸನ್ನು ಸಮತೋಲನಗೊಳಿಸಲು ಮತ್ತು ಶಾಂತಗೊಳಿಸಲು ಇದು ಅನುಕೂಲವಾಗಿದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಿಲ್ಲ. ನೀವಿರುವ ಪರಿಸರದಲ್ಲಿ ಈ ಹರಳನ್ನು ಇರಿಸಿಕೊಂಡರೆ ಸಾಕು. ಕೋಪ (Angry) ನಿಯಂತ್ರಣಕ್ಕೂ ಇದು ಸಹಕಾರಿ.

ಶ್ರೀರಾಮನಂತೆ ಈ ರಾಶಿಯವರು ಪ್ರೀತಿ ಮತ್ತು ನಿಷ್ಠೆಯಲ್ಲಿ ಎತ್ತಿದ ಕೈ

Tap to resize

Latest Videos

•    ಗುಲಾಬಿ ಸ್ಫಟಿಕ (Rose Quartz)
ಸ್ಟೋನ್ (Stone) ಆಫ್ ಲವ್ ಎಂದೇ ಗುರುತಿಸಿಕೊಳ್ಳುವ ಗುಲಾಬಿ ಸ್ಫಟಿಕವನ್ನು ಭಾವನಾತ್ಮಕ (Emotional) ಹೀಲಿಂಗ್ ಗಾಗಿ ಬಳಸಲಾಗುತ್ತದೆ. ಇದರ ಗುಲಾಬಿ ಬಣ್ಣ ಸ್ವ ಪ್ರೀತಿ ಹೆಚ್ಚಿಸಿ ಎಲ್ಲರ ಬಗೆಗೂ ಪ್ರೇಮದ (Love) ಭಾವನೆ ಮೂಡಿಸುವಲ್ಲಿ ನೆರವಾಗುತ್ತದೆ. ಈ ಮೂಲಕ ಕೋಪವನ್ನು ನಿಯಂತ್ರಿಸುತ್ತದೆ. ಹೃದಯಕ್ಕೆ (Heart) ಸಮೀಪ ಇರುವಂತೆ ಈ ಹರಳನ್ನು ಇಟ್ಟುಕೊಳ್ಳಬೇಕು. 

•    ಕಪ್ಪು ಶಿಲೆ (Black Tourmaline)
ಸಾಮಾನ್ಯವಾಗಿ ಕಪ್ಪನ್ನು ನಕಾರಾತ್ಮಕತೆಗೆ (Negativity) ಹೋಲಿಸಲಾಗುತ್ತದೆ. ಆದರೆ, ಈ ಕಪ್ಪು ಶಿಲೆ ಅದನ್ನು ದೂರ ಮಾಡುತ್ತದೆ. ಒತ್ತಡ (Stress) ಮತ್ತು ಕೋಪಕ್ಕೆ ತುತ್ತಾಗದಂತೆ ರಕ್ಷಣೆ ಒದಗಿಸುತ್ತದೆ. ಅಧಿಕ ಎನರ್ಜಿಯನ್ನು ಬ್ಯಾಲೆನ್ಸ್ ಮಾಡುತ್ತದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಥವಾ ನಿಮ್ಮೊಂದಿಗೆ ಇದನ್ನು ಇಟ್ಟುಕೊಳ್ಳುವುದರಿಂದ ವಿನಾಶಕಾರಿ (Destructive) ಭಾವನೆಗಳಿಂದ ರಕ್ಷಣೆ ದೊರೆಯುತ್ತದೆ. ಒಂದು ರೀತಿಯಲ್ಲಿ ಇದು ನಮ್ಮ ಭಾವನೆಗಳನ್ನು ಫಿಲ್ಟರ್ ಮಾಡುತ್ತದೆ ಎಂದೂ ಹೇಳಬಹುದು. 

•    ಸಿಟ್ರಿನ್ (Citrine)-ಹಳದಿ ಹರಳು
ಮರ್ಚೆಂಟ್ ಸ್ಟೋನ್ ಎಂದು ಕರೆಯಲ್ಪಡುವ ಹಳದಿ (Yellow) ಹರಳು ಧನಾತ್ಮಕ (Positive) ಎನರ್ಜಿಯನ್ನು (Energy) ಸೂಸುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ. ಹೊಳೆಯುವ ಶಿಲೆಯಾಗಿರುವ ಇದು, ನಮ್ಮ ದೇಹದಲ್ಲಿರುವ ಸೋಲಾರ್ ಪ್ಲೆಕ್ಸಸ್ ಅಂದರೆ ಮಣಿಪುರ ಚಕ್ರದೊಂದಿಗೆ ಸಂಬಂಧ ಹೊಂದಿದೆ. ಈ ಚಕ್ರ ಕೂಡ ಹಳದಿ ಬಣ್ಣದಲ್ಲಿದ್ದು, ಆತ್ಮವಿಶ್ವಾಸ, ಸ್ವಾಭಿಮಾನ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಂಡು ಜೀವನದಲ್ಲಿ ಸಂತಸ ಹೆಚ್ಚಿಸಿಕೊಳ್ಳಲು ಈ ಹರಳು ಸಹಕಾರಿ.

ನಿಮ್ಮ ಮನೆಯಲ್ಲಿ ಶ್ರೀಮಂತಿಕೆಯ ಜತೆ, ಸಂತೋಷ, ಸಮೃದ್ಧಿ ವೃದ್ಧಿಸಲು ಈ ಸಲಹೆ ಪಾಲಿಸಿ

•    ಲೆಪಿಡೋಲೈಟ್ (Lepidolite)
ಇದೊಂದು ರೀತಿಯ ಖನಿಜ, ನೀಲಕವೆನ್ನುತ್ತಾರೆ. ತಿಳಿನೇರಳೆ ಮತ್ತು ಗುಲಾಬಿ ಶೇಡ್ ಗಳನ್ನು ಹೊಂದಿರುತ್ತದೆ. ಆತ್ಮಕ್ಕೆ (Soul) ಹಿತವಾದ ಅನುಭವ ನೀಡುತ್ತದೆ. ಇದರಲ್ಲಿ ಲೀಥಿಯಂ ಅಂಶವಿದ್ದು, ಆತಂಕ ನಿವಾರಣೆಗೆ ಬಳಸಲಾಗುತ್ತದೆ. ಇದು ನೈಸರ್ಗಿಕ ಒತ್ತಡ ನಿವಾರಕವಾಗಿದ್ದು, ತಲೆದಿಂಬಿನ ಕೆಳಗೆ ಇರಿಸಿಕೊಳ್ಳಬೇಕು ಅಥವಾ ಸದಾಕಾಲ ನಿಮ್ಮೊಂದಿಗೇ ಇಟ್ಟುಕೊಳ್ಳಬೇಕು. ಇದರ ಪ್ರಭಾವದ ಪರಿಣಾಮವಾಗಿ ಇಡೀ ದಿನ ಒತ್ತಡದಿಂದ ಮುಕ್ತರಾಗಿ ಇರಬಹುದು. 

click me!