ಚಿಕ್ಕಮಗಳೂರು: ಹಿರೇಮಗಳೂರಿನಲ್ಲಿ ಬ್ರಹ್ಮ ರಥೋತ್ಸವದ ಸಂಭ್ರಮ; ಕನ್ನಡ ಮಂತ್ರದೊಂದಿಗೆ ಪೂಜೆ  

By Ravi Janekal  |  First Published Mar 19, 2024, 9:31 PM IST

ಚಿಕ್ಕಮಗಳೂರು ನಗರದ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ  ಶ್ರೀ ಕೋದಂಡ ರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವವು ಇಂದು  ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವೋಪೇತವಾಗಿ ನೆರವೇರಿತು


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಮಾ.19): ಚಿಕ್ಕಮಗಳೂರು ನಗರದ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ  ಶ್ರೀ ಕೋದಂಡ ರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವವು ಇಂದು  ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವೋಪೇತವಾಗಿ ನೆರವೇರಿತು. ನಗರ ಹಾಗೂ ಸುತ್ತಮುತ್ತ ಗ್ರಾಮಗಳು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪುನೀತಭಾವ ಮೆರೆದರು. ರಥೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡಿದ್ದು ಮಕ್ಕಳಾದಿಯಾಗಿ ಗ್ರಾಮಸ್ಥರು ರಥದೊಂದಿಗೆ ಹೆಜ್ಜೆ ಹಾಕಿದ್ದು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿತು.

Tap to resize

Latest Videos

ಕನ್ನಡ ಮಂತ್ರದೊಂದಿಗೆ ಪೂಜೆ : 

ಬೆಳಗ್ಗೆ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಶ್ರೀ ವಿಷ್ವಕ್ಸೇನಾರಾಧನೆ, ಭಗವತ್ ವಾಸುದೇವ ಪುಣ್ಯಾಹ ವಾಚನ, ವಸಂತಸೇವೆ, ತೋಮಾಲೆ, ಪುಷ್ಪಾಲಂಕಾರ, ಮಂಟಪ ಸೇವೆ ವಿವಿಧ ಧಾರ್ಮಿಕ ಉತ್ಸವಾದಿಗಳ ಮೂಲಕ ಶ್ರೀರಾಮನಿಗೆ ವೇದಘೋಷ, ರುದ್ರಪಟಣ, ಕನ್ನಡ ಮಂತ್ರದೊಂದಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಪ್ರಾರ್ಥನೆ ನೆರವೇರಿಸಲಾಯಿತು.ಶ್ರೀ ಕೃಷ್ಣ ಗಂಧೋತ್ಸವ, ಯಾತ್ರಾದಾನ ಸೇವೆಯಲ್ಲಿ ತಹಸೀಲ್ದಾರ್ ಸೇರಿದಂತೆ ಶಾಸಕ ಎಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸದಸ್ಯೆ ವಿದ್ಯಾ ಬಸವರಾಜ್, ದೇವಸ್ಥಾನ ಸಮಿತಿ ಸಂಚಾಲಕಿ ರಮಾ ಮೋಹನ್, ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ರಂಗನಾಥ್, ಹಿರೇಮಗಳೂರು ಕೇಶವ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ದೇವಸ್ಥಾನದ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್, ವೈಷ್ಣವಸಿಂಹ ಸಮ್ಮುಖದಲ್ಲಿ ಉತ್ಸವ ಮೂರ್ತಿ ಗ್ರಾಮ ಪ್ರದಕ್ಷಿಣೆ ನಡೆಯಿತು.

ಬದಲಾದ ಭಾರತಕ್ಕೆ ಇಡೀ ಪ್ರಪಂಚದಲ್ಲೇ ಹೆಚ್ಚು ಗೌರವ: ಕೋಟ ಶ್ರೀನಿವಾಸ ಪೂಜಾರಿ

ದೇವಾಲಯದ ಮುಂದೆ ಕದಳಿ ಛೇದನ, ಸಾವಿರಾರು ಜನರ ಸಮ್ಮುಖದಲ್ಲಿ ಆರಂಭವಾದ ಬ್ರಹ್ಮ ರಥೋತ್ಸವ ಮುಖ್ಯಬೀದಿಗಳಲ್ಲಿ ಸಾಗುವಾಗ ಭಕ್ತರು ಬಾಳೆಹಣ್ಣು ಉಗ್ಗಿ ಸ್ವಾಗತಿಸಿದರು. ಮೆರವಣಿಗೆ ಯುವಕರು, ಮಕ್ಕಳು ಉಘೆ ಉಘೇ ಎಂದು ಹರ್ಷೋದ್ಘಾರದಿಂದ ಕೂಗುತ್ತಾ ಸಾಗಿದ್ದು ವಿಶೇಷವಾಗಿತ್ತು. ರಥೋತ್ಸವ ಅಂಗವಾಗಿ ಕಳೆದೆರಡು ದಿನಗಳ ಹಿಂದೆ  ದೇವರಿಗೆ ಪಂಚಾಮೃತ ಅಭಿಷೇಕ, ಭಜನಾ ಮಂಡಳಿ ಭಕ್ತರಿಂದ ಸಂಕೀರ್ತನೆ, ಅನುಜ್ಞೆ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾ ಬಂಧನ  ನಡೆಸಿ ಗ್ರಾಮ ದೇವರುಗಳಿಗೆ ಆಹ್ವಾನಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. 

 

ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್‌ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!

ಯಾಗಶಾಲಾ ಪ್ರವೇಶ, ಹಂಸಾರೋಹಣ, ಕಲ್ಯಾಣೋತ್ಸವ, ದಿವ್ಯ ಪ್ರಬಂಧ ಪಾರಾಯಣ ಸೇವೆ, ನಾಗವಲ್ಲಿ ಪಲ್ಲಕ್ಕಿ ಉತ್ಸವ, ಹನುಮಂತೋತ್ಸವ ಚೆನ್ನಗರುಡೋತ್ಸವ ನೆರವೇರಿಸಲಾಗಿತ್ತು.ಜಾತ್ರೆ ಹಿನ್ನೆಲೆಯಲ್ಲಿ ಹಿರೇಮಗಳೂರು ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ಪ್ರತಿ ಮನೆಗಳಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಬಂದುಗಳು ಸ್ನೇಹಿತರನ್ನು ಆಹ್ವಾನಿಸಿ ಒಟ್ಟಾಗಿ ಕಲೆತು ಸಂಭ್ರಮವಿಸಿದರು.

click me!