ಒಳ್ಳೆಯತನವನ್ನು ನಂಬಿ ಮೋಸ ಹೋಗುವ ರಾಶಿಗಳಿವು!

By Suvarna NewsFirst Published Jul 23, 2022, 6:07 PM IST
Highlights

ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರೇ ಇರುವುದಿಲ್ಲ ಕೆಲವು ಜನರಿಗೆ ಕೇಡು ಬಯಸುವುದನ್ನು ಉದ್ಯೋಗ ಮಾಡಿಕೊಂದಿರುವವರ ಹಾಗೆ ವರ್ತಿಸುತ್ತಾರೆ. ಹಾಗೆಯೇ, ತಮಗೆ ತಿಳಿದಿರುವ ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯದನ್ನು ಮಾಡಲು ಹೊರಟ ಪುಣ್ಯಾತ್ಮರು ಕೂಡಾ ಇದ್ದಾರೆ. ಆದರೂ, ಇಲ್ಲಿ ನೀಡಿರುವ ಕೆಲವು ರಾಶಿ ನಕ್ಷತ್ರದ ಜನರು ಇತರರಿಗೆ ತುಂಬಾ ಹೆಚ್ಚಿನ ಸಹಾಯ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಆದರೆ, ಕೆಲವೊಮ್ಮೆ ಯೋಗ್ಯತೆ ಇಲ್ಲದೆ ಇರುವ ಜನರಿಗೆ ಇವರ ಸಹಾಯ ತಲುಪುವ ಮೂಲಕ ಅದು ವ್ಯರ್ಥವಾಗುತ್ತದೆ. ಹಾಗಾದರೆ ಜನರನ್ನು ಬಹುಬೇಗ ನಂಬಿ ಅವರನ್ನು ಸ್ನೇಹಿತರಾಗಿ ಮಾಡಿಕೊಳ್ಳುವ ರಾಶಿಗಳ ಪಟ್ಟಿಯನ್ನು ನೋಡಿ..

ಒಳ್ಳೆಯವರಾಗಿ ಬದುಕುವುದು ಸುಲಭವಲ್ಲ. ಆದರೆ ನಮ್ಮ ಒಳ್ಳೆಯ ನಡವಳಿಕೆಯೇ ನಮ್ಮ ನೋವಿಗೆ ಕಾರಣವಾಗುವ ಹಾಗೆ ಆಗಬಾರದು. ಆದ್ದರಿಂದ, ಇಂದು ನಾವು ರಾಶಿಚಕ್ರದ ಚಿಹ್ನೆಯ ಜನರು, ಅವರು ಕೆಟ್ಟ ಸ್ನೇಹಿತರು ಅಥವಾ ಅನಾರೋಗ್ಯಕರ ಸಹೋದ್ಯೋಗಿಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳುವುದರಿಂದ ಆಗಾಗ್ಗೆ ನೋವನ್ನು ಅನುಭವಿಸುತ್ತಾರೆ. ಕರ್ಕಾಟಕದಿಂದ ತುಲಾ ರಾಶಿಯವರೆಗೆ, ಜನರೊಂದಿಗೆ ಸುಲಭವಾಗಿ ಬಾಂಧವ್ಯ ಹೊಂದುವ ಮತ್ತು ಇದರ ಪರಿಣಾಮವಾಗಿ ತಾವೇ ಹಾನಿಗೊಳಗಾಗುವ ರಾಶಿಚಕ್ರದ ಚಿಹ್ನೆಗಳನ್ನು ನೋಡೋಣ.

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಜನರು ತಮ್ಮ ಸುತ್ತ ಮುತ್ತ ಇರುವ ಜನರಿಗೆ ಅತಿಯಾದ ಕಾಳಜಿ (Over Care) ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಮತ್ತು ಜನರನ್ನು ಬಹುಬೇಗ ನಂಬಿ (Trust) ತಮ್ಮ ತಪ್ಪು ಒಪ್ಪು, ಕಷ್ಟ ಮತ್ತು ನೋವುಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ದೋಷಗಳನ್ನು ತ್ವರಿತವಾಗಿ (Immediate) ತೆರೆದಿರುತ್ತಾರೆ. ಇದು ಯಾವುದೇ ಹೊಸ ಸಹ- ಕೆಲಸಗಾರರಿಂದ (Colleagues) ಹಿಡಿದು ಜಿಮ್ನಲ್ಲಿ ಅಥವಾ ಅವರ ಬೋಧನಾ ತರಗತಿಗಳಲ್ಲಿ ಯಾರನ್ನಾದರೂ ಭೇಟಿಯಾಗುವುದು ಹೀಗೆ ಯಾರೊಂದಿಗೆ ಬೇಕಾದರೂ ಆಗಿರಬಹುದು. ಇವರು ಬಹಳ ಉದಾರ ಮನಸ್ಸನ್ನು ಹೊಂದಿದ್ದಾರೆ, ಸಹಾಯ (Help) ಮಾಡುವುದು, ಇತರರ ನೋವುಗಳಿಗೆ ಬೇಗ ಸ್ಪಂದಿಸುವ ಇವರ ಸ್ವಭಾವದಿಂದ ಬೇರೆಯವರು ಇವರ ಒಳ್ಳೆಯ ಗುಣಗಳ ಲಾಭ (Advantage) ಪಡೆದುಕೊಳ್ಳುತ್ತಾರೆ. ಮತ್ತು ಕೆಲವೊಮ್ಮೆ ಇವರದೇ ವಿಷಯಗಳನ್ನು ಇಟ್ಟುಕೊಂಡು ಇವರನ್ನು ತೊಂದರೆಗೆ ಒಳಗಾಗುವ ಹಾಗೆ ಮಾಡಬಹುದು.

ಇದನ್ನೂ ಓದಿ:ಮೀನದಲ್ಲಿ ಗುರು ವಕ್ರಿ: ಈ ನಾಲ್ಕು ರಾಶಿಗಳ ವೈವಾಹಿಕ ಬದುಕಿನಲ್ಲಿ ಬಿರುಗಾಳಿ

ತುಲಾ ರಾಶಿ (Libra)
ಅವರ ಮದುವೆಯ ಆರಂಭಿಕ ದಿನಗಳಲ್ಲಿ, ಅಥವಾ ಅವರು ಇತ್ತೀಚೆಗೆ ಭೇಟಿಯಾದ ಸ್ನೇಹಿತರ ಗುಂಪಿನ ಮಧ್ಯೆ ಇರಲಿ, ತುಲಾ ರಾಶಿಯ ಜನರು ಬಹಳಷ್ಟು ಸಮಯ (Time) ಮತ್ತು ಹಣವನ್ನು ಹೂಡಿಕೆ ಮಾಡುತ್ತಾರೆ. ಜೀವಿತಾವಧಿಯಲ್ಲಿ ಸಾಧ್ಯವಾಗುವಷ್ಟು ತಾವು ಗಳಿಸಿರುವ ಸ್ನೇಹವನ್ನು ಕಾಪಾಡಿಕೊಳ್ಳುವ ಹೊಣೆ ಹೊತ್ತಿರುತ್ತಾರೆ. ನಿಮ್ಮ ನಿಮಗೆ ಬೇಕಾದವರ ಜನ್ಮದಿನವನ್ನು (B'day) ಯಾವಾಗಲೂ ನೆನಪಿನಲ್ಲಿ (Remember) ಇಟ್ಟುಕೊಳ್ಳಲು ಮತ್ತು ಚಿಂತನಶೀಲ ಉಡುಗೊರೆಯನ್ನು (Gifts) ಯೋಜಿಸಲು ನೀವು ತುಲಾ ರಾಶಿಯ ಜನರನ್ನು ಅವಲಂಬಿಸಬಹುದು, ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನಿಮಗಾಗಿ ಊಟವನ್ನು ತಯಾರಿಸಿ ಕೊಟ್ಟು ನಿಮ್ಮನ್ನು ಸಣ್ಣ ಮಗುವಿನ ಹಾಗೆ ಕಾಳಜಿ ಮಾಡುತ್ತಾರೆ. ಇವರು ಯಾವಾಗಲೂ ಸ್ನೇಹಪರ (Friendly) ಜನರಿಂದ ಕೂಡಿರುವ ವ್ಯಕ್ತಿಗಳಾಗಿದ್ದರೂ, ತಮಗೆ ಕಷ್ಟ ಬಂದಾಗ ಸಹಾಯಕ್ಕಾಗಿ ತಮ್ಮ ಸ್ನೇಹಿತರ ಬೆಂಬಲ ಕೇಳುವುದಕ್ಕೂ ಹಿಂಜರಿಯುತ್ತಾರೆ. ಎಷ್ಟೇ ಕಷ್ಟ (Problems) ಎದುರಾದರೂ ತಾವೇ ಅದನ್ನು ನಿವಾರಿಸಿಕೊಳ್ಳಬೇಕು ಎಂದು ಹೆಣಗಾಡುತ್ತಾರೆ.

ಇದನ್ನೂ ಓದಿ:ದುಡ್ಡು ಎಂದರೆ ಬಾಯಿ ಕಳೆಯೋ ರಾಶಿಗಳಿವು!

ಧನು ರಾಶಿ (Sagittarius)
ಧನು ರಾಶಿಯಂತಹ ಕೆಲವು ರಾಶಿಚಕ್ರ ಚಿಹ್ನೆಗಳು ಸ್ವಲ್ಪ ಸಮಯದಲ್ಲೇ ಜನರೊಂದಿಗೆ ಉತ್ತಮ ಬಾಂಧವ್ಯ (Bonding) ಬೆಳೆಸಿಕೊಳ್ಳುವುದರಲ್ಲಿ ವೇಗವಾಗಿರುತ್ತಾರೆ (Fast). ಅದು ದಿನಗಳು ಅಥವಾ ವಾರಗಳ ವಿಷಯವಾಗಿರಬೇಕು. ಹೀಗೆ ಬೆಳೆಸಿಕೊಂಡ ಸ್ನೇಹಕ್ಕೆ ಅವರು ತುಂಬಾ ಪ್ರಾಮುಖ್ಯತೆ (Importance) ನೀಡುತ್ತಾರೆ. ಅದನ್ನು ಉಳಿಸಿಕೊಳ್ಳುವಲ್ಲಿ ತಮ್ಮ ಶ್ರಮವನ್ನು ವ್ಯಯಿಸುತ್ತಾರೆ. ಹಾಗೆಯೇ ತಮ್ಮ ಸ್ನೇಹಿತರೂ ಕೂಡ ಪ್ರತಿಕ್ರಿಯಿಸಬೇಕು ಎಂದು ಹೃದಯದಿಂದ (Heart) ಬಯಸುತ್ತಾರೆ. ಇವರ ನಿರೀಕ್ಷೆಗಳು (Expectations) ಹೆಚ್ಚಾದಾಗ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇವರ ಅತಿಯಾದ ಪ್ರೀತಿಯ ಕಾರಣಕ್ಕಾಗಿಯೇ ಸ್ನೇಹವನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗುತ್ತದೆ.

ನಿಜ, ಬೇರೆಯವರಿಗೆ ಕೆಡುಕನ್ನು ಬಯಸಬಾರದು. ಸಾಧ್ಯವಾದರೆ ಇತರರಿಗೆ ನಮ್ಮಿಂದ ಆಗುವ ಸಹಾಯ ಮಾಡಬೇಕು. ಆದರೆ, ಅತಿಯಾದ ಒಳ್ಳೆಯತನ ಕೂಡ ಒಂದು ದೋಷ (Weakness) ಆಗಿಬಿಡಬಹುದು ಎಚ್ಚರಿಕೆ!!

click me!