ಶ್ರಾವಣ ಮಾಸದಲ್ಲಿ ಮಹಿಳೆಯರು ಮಾಡ್ಲೇಬೇಕು ಈ ಕೆಲಸ

By Suvarna NewsFirst Published Jul 23, 2022, 5:31 PM IST
Highlights

ಶ್ರಾವಣ ಮಾಸ ಹತ್ತಿರ ಬರ್ತಿದೆ. ಹಬ್ಬಗಳ ಸಾಲು ಶುರುವಾಗಲಿದೆ. ಶಿವನ ಭಕ್ತರು, ಈಶ್ವರನ ಆರಾಧನೆಗೆ ಸಿದ್ಧರಾಗ್ತಿದ್ದಾರೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಬಯಸುವವರಿಗೆ ಕೆಲ ಉಪಾಯ ಇಲ್ಲಿದೆ. 
 

ದೇವರ ದೇವ ಮಹಾದೇವ ಶಿವ. ಆತನ ಪೂಜೆಗೆ ಯಾವುದೇ ದಿನ, ಮಾಸದ ಅಗತ್ಯವಿಲ್ಲ. ಆದ್ರೆ ಧಾರ್ಮಿಕ ಗ್ರಂಥಗಳಲ್ಲಿ ಶ್ರಾವಣ ಮಾಸವನ್ನು ಭಗವಂತ ಶಿವನಿಗೆ ಅರ್ಪಿಸಲಾಗಿದೆ. ಈ ತಿಂಗಳು ಶಿವನಿಗೆ ಹೆಚ್ಚು ಪ್ರಿಯವೆಂದು ಹೇಳಲಾಗಿದೆ. ಆದ್ದರಿಂದ  ಒಬ್ಬ ವ್ಯಕ್ತಿಯು ಶ್ರಾವಣ ಮಾಸದಲ್ಲಿ ಈಶ್ವರನನ್ನು ಮೆಚ್ಚಿಸಿದ್ರೆ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಹಿಳೆಯರಿಗೆ ಶಂಕರನ ಆಶೀರ್ವಾದ ಪಡೆಯಲು ಶ್ರಾವಣ ಮಾಸ ಅತ್ಯುತ್ತಮ. ವಿವಾಹಿತ ಮಹಿಳೆಯರು ಈ ಮಾಸದಲ್ಲಿ ಶಿವ ಮತ್ತು ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಬೇಕು ಎಂಬ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ.  ಮದುವೆಯಾಗದ ಹೆಣ್ಣು ಮಕ್ಕಳು ಒಳ್ಳೆಯ ವರನನ್ನು ಪಡೆಯಲು ಶಿವನ ಆರಾಧನೆ ಮಾಡಬೇಕೆಂದೂ ಹೇಳಲಾಗುತ್ತದೆ. ಹಾಗಾಗಿಯೇ  ಶ್ರಾವಣ ಮಾಸದಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಶಿವನನ್ನು ಪೂಜಿಸುತ್ತಾರೆ.  ಶ್ರಾವಣ ಮಾಸಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದನ್ನು ಮಹಿಳೆಯರು ಅನುಸರಿಸುವುದು ಬಹಳ ಮುಖ್ಯ. ಶ್ರಾವಣ ಮಾಸದಲ್ಲಿ ಈಶ್ವರನನ್ನು  ಪೂಜಿಸುವುದಲ್ಲದೆ  ಸ್ತ್ರೀಯರು ಏನು ಮಾಡಿದ್ರೆ ಶಿವ – ಪಾರ್ವತಿ ಆಶೀರ್ವಾದ ಸಿಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಶ್ರಾವಣ (Shravan) ಮಾಸದಲ್ಲಿ ಮಹಿಳೆ (Women) ಯರು ಅವಶ್ಯಕವಾಗಿ ಮಾಡಿ ಈ ಕೆಲಸ : 

ದಾನ : ಶ್ರಾವಣ ಮಾಸದಲ್ಲಿ ಪಾರ್ವತಿ (Parvati) ಗೆ ಅರ್ಪಿತವಾದ ಮಂಗಳ ಗೌರಿ ವೃತವನ್ನು ಮಾಡಲಾಗುತ್ತದೆ. ವಿವಾಹಿತ (Married) ಮತ್ತು ಅವಿವಾಹಿತ ಮಹಿಳೆಯರು ಶ್ರಾವಣ ಮಾಸದ ಸೋಮವಾರ ಮತ್ತು ಮಂಗಳವಾರದಂದು ಮಂಗಳ ಗೌರಿಗೆ ಜೇನುತುಪ್ಪವನ್ನು ಅರ್ಪಿಸಬೇಕು. ಅಲ್ಲದೆ ವಿವಾಹಿತ ಮಹಿಳೆಯರು ಈ ದಿನದಂದು ಸೌಂದರ್ಯ ವರ್ದಕ (Makeup) ವಸ್ತುಗಳನ್ನು ದಾನ ಮಾಡಬೇಕು.  

ಭಜನೆ (Bhajan) : ಹಿಂದೂ ಧರ್ಮ (Hindu Religion)ದ ಗ್ರಂಥಗಳ ಪ್ರಕಾರ, ಶ್ರಾವಣ ಮಾಸದಲ್ಲಿ ಭಗವಂತ ಶಿವ ಸಂತೋಷದ ಭಂಗಿಯಲ್ಲಿರುತ್ತಾನಂತೆ. ಹಾಗಾಗಿ ಆತನನ್ನು ಮೆಚ್ಚಿಸುವುದು ಸುಲಭ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಧ್ಯಾ ಕಾಲದಲ್ಲಿ ಶಿವ ಹಾಗೂ ಪಾರ್ವತಿ ಭಜನೆಯನ್ನು ಮಾಡಬೇಕು.  ಇದರಿಂದ ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಸೂರ್ಯಾಸ್ತದ ಸಮಯದಲ್ಲಿ ಈ ಕೆಲಸ ಮಾಡಿದ್ರೆ ತಾಯಿ ಲಕ್ಷ್ಮಿ ಕೋಪಿಸ್ತಾಳೆ

ಮಂತ್ರ (Mantra) : ಶಾಂತವಾದ ಮನಸ್ಸಿನಿಂದ ಶಿವನನ್ನು ಪೂಜಿಸಿದಾಗ ಮಾತ್ರ ಭಕ್ತಿಯ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.  ನಿಮ್ಮ ಪೂಜೆ ಯಶಸ್ವಿಯಾಗಬೇಕೆಂದ್ರೆ ಮಹಿಳೆಯರು ವಿಶೇಷವಾಗಿ ಶ್ರಾವಣ ಮಾಸದಲ್ಲಿ ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು.  ಯಾವುದೇ ಗಲಾಟೆ, ಜಗಳವಾದ್ರೂ ಶಾಂತಿಯಿಂದ ವರ್ತಿಸಬೇಕು. ಸದಾ ಶಿವನ ಮಂತ್ರವನ್ನು ಜಪಿಸಬೇಕು. ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಿರಬೇಕು. ಇದು ಕೋಪವನ್ನು ಶಮನಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ಬಳೆ : ಶ್ರಾವಣ ಮಾಸದಲ್ಲಿ ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುತ್ತದೆ. ಶ್ರಾವಣ ಮಾಸ, ಹಸಿರು ಬಣ್ಣದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.  ವಿವಾಹಿತ ಮಹಿಳೆಯರು ಶ್ರಾವಣ ಮಾಸದಲ್ಲಿ ಪ್ರತಿದಿನ ಹಸಿರು ಬಳೆಗಳನ್ನು ಧರಿಸಬೇಕು. ಇದರಿಂದ ತಾಯಿ ಪಾರ್ವತಿಯ ಕೃಪೆ ನಿಮಗೆ ಪ್ರಾಪ್ತಿಯಾಗುತ್ತದೆ. ಸುಖ, ಸಂತೋಷ ಲಭಿಸುತ್ತದೆ.

Vastu Tips: ಈ ದಿನಾಂಕದಂದು ಹೊಸ ಮನೆಗೆ ಹೋಗೋ ಸಾಹಸ ಮಾಡ್ಬೇಡಿ!

ಮೆಹಂದಿ : ಮಹಿಳೆ ಸೌಂದರ್ಯ ಪ್ರಿಯೆ. ವಿಶೇಷ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಲು ಮಹಿಳೆ ಬಯಸ್ತಾಳೆ. ಕೈಗೆ ಗೋರಂಟಿ ಹಚ್ಚುವುದರಿಂದ ಮನಸ್ಸು ಹಸಿರಾಗುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯದ ಪ್ರಕಾರ, ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದೆ. ಶ್ರಾವಣ ಮಾಸದಲ್ಲಿ ಮೆಹಂದಿ ಹಚ್ಚುವುದರಿಂದ ಸ್ತ್ರೀಯರ ಸೌಂದರ್ಯ ವೃದ್ಧಿಯಾಗುತ್ತದೆ. ಅಲ್ಲದೆ ಬುಧ ಗ್ರಹದ ಶುಭ ಫಲ ಪ್ರಾಪ್ತಿಯಾಗುತ್ತದೆ. ಕೈಗೆ ಶ್ರಾವಣ ಮಾಸದಲ್ಲಿ ಮೆಹಂದಿ ಹಚ್ಚುವುದ್ರಿಂದ ಜೀವನ ಸಂಗಾತಿಯ ಪ್ರಗತಿಯ ದಾರಿ ತೆರೆದುಕೊಳ್ಳುತ್ತದೆ ಎಂದು ನಂಬಲಾಗಿದೆ.  
 

click me!