ನೀವು-ನಿಮ್ಮವರು ಜನವರಿಯಲ್ಲಿ ಹುಟ್ಟಿದ್ದರೆ, ಅವರ ಗುಣ ಸ್ವಭಾವ ಹೀಗಿರುತ್ತೆ..!

By Suvarna News  |  First Published Jan 19, 2021, 3:16 PM IST

ಕ್ಯಾಲೆಂಡರ್ ವರ್ಷದ ಮೊದಲ ತಿಂಗಳು ಜನವರಿ. ಜನವರಿಯಲ್ಲಿ ಜನಿಸಿದವರು ಇತರ ತಿಂಗಳಿನಲ್ಲಿ ಜನಿಸಿದವರಿಗಿಂತ ಭಿನ್ನವಾದ ಸ್ವಭಾವವನ್ನು ಹೊಂದಿರುತ್ತಾರೆ. ನಾಯಕತ್ವದ ಗುಣವನ್ನು ಹೆಚ್ಚು ಹೊಂದಿರುವ ಈ ವ್ಯಕ್ತಿಗಳು, ಅತ್ಯಂತ ಬುದ್ಧಿವಂತರು ಸಹ ಆಗಿರುತ್ತಾರೆ. ಹಾಗಾದರೆ ಜನವರಿ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳ ಇನ್ನೂ ಅನೇಕ ವಿಶೇಷ ಗುಣಗಳ ಬಗ್ಗೆ ತಿಳಿಯೋಣ..


ಕ್ಯಾಲೆಂಡರ್ ವರ್ಷದ ಮೊದಲ ತಿಂಗಳು ಜನವರಿ. ಈ ಹೊಸ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಎಲ್ಲರಿಗಿಂತ ಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜನವರಿಯಲ್ಲಿ ಜನಿಸಿದ ವ್ಯಕ್ತಿಗಳು ಆತ್ಮವಿಶ್ವಾಸವುಳ್ಳವರು, ಧೈರ್ಯಶಾಲಿಗಳು  ಹೀಗೆ ಈ ವ್ಯಕ್ತಿಗಳು ಇನ್ನೂ ಅನೇಕ ವಿಶೇಷ ಗುಣ ಮತ್ತು ಸ್ವಭಾವವನ್ನು ಹೊಂದಿರುತ್ತಾರೆ.

ಒಳ್ಳೆಯ ಮತ್ತು ಕೆಟ್ಟ ಗುಣಗಳು ಪ್ರತಿ ವ್ಯಕ್ತಿಯಲ್ಲಿ ಇರುತ್ತವೆ. ಹಾಗೆಯೆ ಜನವರಿಯಲ್ಲಿ ಜನಿಸಿದ ವ್ಯಕ್ತಿಗಳು ಇದಕ್ಕೆ ಹೊರತಾಗಿಲ್ಲ. ಹಾಗಾದರೆ ಜನವರಿ ತಿಂಗಳಿನಲ್ಲಿ ಜನಿಸಿದವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ..

Tap to resize

Latest Videos

undefined

ಹುಟ್ಟಿನಿಂದ ನಾಯಕರು

ಜನವರಿಯಲ್ಲಿ ಜನಿಸಿದವರು ಹುಟ್ಟಿನಿಂದಲೆ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಎಂಥಹ ತಂಡವನ್ನಾದರು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವ ಚಾಕಚಕ್ಯತೆಯನ್ನು ಹೊಂದಿರುತ್ತಾರೆ. ಪ್ರತಿ ವಿಷಯದಲ್ಲೂ ಎಲ್ಲರಿಗಿಂತ ಮುಂದಿರುವ ಸ್ವಭಾವ ಇವರದ್ದು.

ಇಂಪ್ರೆಸ್ಸಿಂಗ್ ವ್ಯಕ್ತಿತ್ವ

ಜನವರಿಯಲ್ಲಿ ಜನಿಸಿದ ವ್ಯಕ್ತಿಗಳು ವಿಶೇಷವಾದ ವರ್ಚಸ್ಸನ್ನು ಹೊಂದಿರುತ್ತಾರೆ. ಎಂಥಹ ವ್ಯಕ್ತಿಯೇ ಆದರೂ ಅವರ ಮುಂದೆ ತಮ್ಮ ಛಾಪು ಮೂಡಿಸುವುದರಲ್ಲಿ ಸಫಲರಾಗುತ್ತಾರೆ. ಇದೇ ಕಾರಣದಿಂದ ಈ ವ್ಯಕ್ತಿಗಳ ವ್ಯಕ್ತಿತ್ವ ಎಂಥವರನ್ನು ಇಂಪ್ರೆಸ್ ಆಗುವಂತೆ ಮಾಡುತ್ತದೆ. ಜನವರಿಯಲ್ಲಿ ಹುಟ್ಟಿದವರು ಸದಾ ಖುಷಿಯಿಂದ ಇರುವ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಖುಷಿಯನ್ನು ಹಂಚುವುದರಲ್ಲಿಯೂ ಇವರೇ ಮೊದಲಿಗರು.

ಮಾತಿಗೆ ಬದ್ಧರಾಗಿರುವ ವ್ಯಕ್ತಿಗಳು

ಜನವರಿಯಲ್ಲಿ ಜನಿಸಿದವರನ್ನು ಕಂಡರೆ ಹಲವರಿಗೆ ಆಗುವುದಿಲ್ಲ, ಕಾರಣವೇನೆಂದರೆ ಈ ವ್ಯಕ್ತಿಗಳು ನಿರ್ಣಯವನ್ನು ಸ್ವತಃ ತೆಗೆದುಕೊಳ್ಳುತ್ತಾರೆ. ಯಾವುದೇ ವಿಷಯವಾದರೂ ಹೆಚ್ಚು ಸಮಯವನ್ನು ಮತ್ತು ಇತರರ ಸಲಹೆಯನ್ನು ತೆಗೆದುಕೊಳ್ಳದೆ ನಿರ್ಧಾರವನ್ನು ತಿಳಿಸುವ ಸ್ವಭಾವ ಇವರದ್ದು, ಇತರರು ಸಲಹೆ ನೀಡಿದರೂ, ನಿರ್ಣಯ ತೆಗೆದುಕೊಳ್ಳುವಾಗ ಸ್ವಂತವಾಗಿಯೇ ನಿರ್ಧರಿಸುವ ಸ್ವಭಾವ ಈ ವ್ಯಕ್ತಿಗಳದ್ದು. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಆಡಿದ ಮಾತಿಗೆ ಬದ್ಧರಾಗಿರುತ್ತಾರೆ.

ಕರ್ತವ್ಯ ನಿಷ್ಠರು

ಅತಿ ಕಠಿಣವಾದ ಕೆಲಸವೇ ಆದರೂ ಅದರಿಂದ ಹಿಂದೆ ಸರಿಯುವ ಸ್ವಭಾವ ಇವರದ್ದಲ್ಲ. ಯಾವುದೇ ಕೆಲಸವನ್ನಾದರು ವೇಗವಾಗಿ ಮತ್ತು ಪ್ರಾಮಾಣಿಕತೆಯಿಂದ ಮಾಡುವ ಇವರು ಸ್ಮಾರ್ಟ್ ವರ್ಕರ್ ಆಗಿರುತ್ತಾರೆ.

ಇದನ್ನು ಓದಿ: ಹಲ್ಲಿಯಿಂದ ತಿಳಿಯಬಹುದು ಭವಿಷ್ಯ...ಹಲ್ಲಿಗೆ ಸಂಬಂಧಿಸಿದ ಶುಭ-ಅಶುಭ ವಿಚಾರಗಳು...

ನೋಡಲು ಸ್ಮಾರ್ಟ್

ಜನವರಿಯಲ್ಲಿ ಜನಿಸಿದವರು ನೋಡಲು ಅಚ್ಚು-ಕಟ್ಟಾಗಿ ಚೆಂದವಾಗಿರುತ್ತಾರೆ. ಇವರನ್ನು ನೋಡಿದರೆ ವಯಸ್ಸು ಗುರುತಿಸುವುದು ಅಸಾಧ್ಯವಾಗಿರುತ್ತದೆ. ಇವರು ನೋಡಲು ಅಂದವಾಗಿರುವುದಲ್ಲದೆ, ನೈಜ ವಯಸ್ಸಿಗಿಂತ ಚಿಕ್ಕ ಪ್ರಾಯದವರಂತೆಯೇ ಕಾಣುತ್ತಾರೆ.

ಪ್ರೀತಿಯಲ್ಲಿ ಈ ವ್ಯಕ್ತಿಗಳು

ಜನವರಿಯಲ್ಲಿ ಜನಿಸಿದ ವ್ಯಕ್ತಿಗಳು ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಸಂಗಾತಿಯನ್ನು ಅತ್ಯಂತ ಪ್ರೀತಿಸುವ ಈ ವ್ಯಕ್ತಿಗಳು ಪ್ರಣಯದ ವಿಚಾರದಲ್ಲಿ ಸಹ ಮೊದಲಿಗರಾಗಿರುತ್ತಾರೆ.

ಇದನ್ನು ಓದಿ: ಈ ರಾಶಿಯವರು ವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? 

ಹಠ, ಮಹತ್ವಾಕಾಂಕ್ಷೆ ಮತ್ತು ಗಂಭೀರ ಸ್ವಭಾವ

ಜನವರಿಯಲ್ಲಿ ಹುಟ್ಟಿದ ವ್ಯಕ್ತಿಗಳು ಆಲೋಚನೆಯಲ್ಲಿ ಇತರರನ್ನು ಮೀರಿಸುತ್ತಾರೆ. ಈ ವ್ಯಕ್ತಿಗಳು ಏನನ್ನು ಯೋಚಿಸುತ್ತಿದ್ದಾರೆಂದು ಎದುರಿನ ವ್ಯಕ್ತಿಗೆ ಊಹಿಸಲು ಸಾಧ್ಯವಿರುವುದಿಲ್ಲ. ಮಾತನ್ನು ಮುಚ್ಚಿಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಜೀವನದಲ್ಲಿ ಬೇಗ ಸಫಲತೆಯನ್ನು ಕಾಣುವ ಆಶಯ ಈ ತಿಂಗಳಿನಲ್ಲಿ ಜನಿಸಿದವರಿಗೆ ಹೆಚ್ಚಾಗಿರುತ್ತದೆ. ಹಾಗಾಗಿ ಅದರ ಬಗ್ಗೆಯೇ ಸದಾ ಆಲೋಚನೆಯಲ್ಲಿ ಮುಳುಗಿರುತ್ತಾರೆ. ಅಷ್ಟೇ ಅಲ್ಲದೆ ಜನವರಿಯಲ್ಲಿ ಜನಿಸಿದವರು ಹಠವಾದಿಗಳು, ಮಹತ್ವಾಕಾಂಕ್ಷಿಗಳು ಮತ್ತು ಗಂಭೀರ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. 

ಕಾರ್ಯಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಹೊಂದುವವರು

ಪರಿಶ್ರಮದಿಂದ ಕೆಲಸವನ್ನು ನಿರ್ವಹಿಸುವ ಈ ವ್ಯಕ್ತಿಗಳು ಯಶಸ್ಸನ್ನು ಕಾಣುತ್ತಾರೆ. ಹೆಚ್ಚಿನ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕಾರ್ಯಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ.  ಶ್ರಮದ ಜೊತೆ ಅದೃಷ್ಟವನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಅಷ್ಟೇ ಅಲ್ಲದೆ ಇತರರಿಗೆ ಪ್ರೇರಣಾ ಶಕ್ತಿಯು ಇವರಾಗಿರುತ್ತಾರೆ.

ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..! 

ಉತ್ತಮ ವಾಗ್ಮಿ ಇವರಾಗಿರುತ್ತಾರೆ

ಮಾತಿನಲ್ಲಿ ಮೋಡಿ ಮಾಡುವ ಕಲೆ ಗೊತ್ತಿರುವ ವ್ಯಕ್ತಿಗಳಿವರು. ಎದುರಿಗಿದ್ದ ವ್ಯಕ್ತಿಯಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕೆಂಬ  ಬುದ್ಧಿವಂತಿಕೆ ಇವರಿಗಿಂತ ಹೆಚ್ಚು ಬೇರೆಯವರಿಗೆ ತಿಳಿದಿರಲು ಸಾಧ್ಯವಿಲ್ಲ. ಹಲವು ಬಾರಿ ಎದುರಿಗಿದ್ದವರ ಮಾತು ಪೂರ್ತಿಯಾಗಿ ಮುಗಿಯುವ ಮುಂಚೆಯೇ ಪ್ರತಿಕ್ರಿಯಿಸುವ ಸ್ವಭಾವವನ್ನು ಹೊಂದಿರುತ್ತಾರೆ.

click me!