Festive vibes: ಹಬ್ಬದ ಆಚರಣೆಯಲ್ಲಿ ಹೆಚ್ಚಿನ ಉತ್ಸಾಹ ತೋರುವ ರಾಶಿಗಳಿವು!

By Suvarna NewsFirst Published Oct 23, 2022, 4:57 PM IST
Highlights

ಹಬ್ಬಗಳನ್ನು ಆಚರಿಸುವುದು ಮನೆಯ ಮಂದಿಗೆಲ್ಲ ಹೆಚ್ಚು ಹರ್ಷ ತರುವ ವಿಚಾರ. ಅದಕ್ಕೆ ನಾನಾ ಕಾರಣಗಳು ಇರಬಹುದು. ಆದರೆ, ಇಲ್ಲಿರುವ ಕೆಲವು ರಾಶಿಯ ಜನರಿಗೆ ಹಬ್ಬಗಳು ಬಂದರೆ ಸಾಕು ಬೇರೆ ಯಾರಲ್ಲಿಯೂ ಕಾಣದೆ ಇರುವಂತಹ ಉತ್ಸಾಹ ಇವರಲ್ಲಿ ಕಾಣಬಹುದು. ಅದಕ್ಕೆ ಅವರ ರಾಶಿ ಚಕ್ರದ ಪ್ರಭಾವ ಕೂಡ ಇರುತ್ತದೆ. ಅಂತಹ ಕೆಲವು ರಾಶಿ ಚಕ್ರಗಳು ಹೀಗಿವೆ ನೋಡಿ...

ಪ್ರತಿಯೊಬ್ಬರೂ ಹಬ್ಬಗಳನ್ನು ಆಚರಿಸಲು ಇಷ್ಟಪಡುತ್ತಾರೆ. ಹಬ್ಬಗಳನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಮನೆಯವರಿಗೆಲ್ಲ ಸಂತೋಷ, ಉಲ್ಲಾಸ ಮತ್ತು ಅದೃಷ್ಟವನ್ನು ತರುತ್ತದೆ. ಮನೆಯವರಿಗೆಲ್ಲ ಈ ಪೂಜೆ ಹಾಗೂ ಹಬ್ಬವು ಸಂಭ್ರಮವನ್ನು ಹೊಸ ಉತ್ಸಾಹವನ್ನು ತರುತ್ತದೆ. ಅದರಲ್ಲಿಯೂ ಕೆಲವು ಜನರಿಗೆ ಹಬ್ಬಗಳು ಅಂದರೆ ಸಾಕು ಅದೆಲ್ಲಿಂದಲೋ ಅತಿ ಉತ್ಸಾಹ ಹೊರಹೊಮ್ಮುತ್ತದೆ. ಅವರು ಹಬ್ಬಕ್ಕಾಗಿಯೆ ವಾಸಿಸುತ್ತಾರೆ, ಉಸಿರಾಡುತ್ತಾರೆ ಮತ್ತು ರಜಾದಿನ ಮತ್ತು ಹಬ್ಬದ ಋತುವಿನ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ಹಬ್ಬಗಳನ್ನು ಆಚರಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ, ಅವರು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಆದ್ದರಿಂದ, ಹಬ್ಬದ ಋತುವಿನ ಬಗ್ಗೆ ಹೆಚ್ಚು ಉತ್ಸಾಹ ತೋರುವ ರಾಶಿಚಕ್ರ ಚಿಹ್ನೆಗಳ ಪಟ್ಟಿ ಇಲ್ಲಿದೆ ನೋಡಿ! 

ವೃಷಭ ರಾಶಿ (Taurus)

ವೃಷಭ ರಾಶಿಯವರು ಎಲ್ಲದರ ಬಗ್ಗೆ ಅತಿಯಾದ ಉತ್ಸಾಹವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಹಬ್ಬ ಹರಿದಿನಗಳು ಬಂದರೆ, ಎಲ್ಲವನ್ನೂ ತಾವೇ ಮಾಡುತ್ತೇವೆ ಎಂದು ಹೇಳುತ್ತಾ ಎಲ್ಲಾ ಅವಕಾಶವನ್ನು (Chances) ಅವರು ಪಡೆದುಕೊಳ್ಳುತ್ತಾರೆ. ಆದರೆ, ಇದರ ಪ್ರತಿಯಾಗಿ, ತಾವು ಮೊದಲು ನಿರ್ವಹಿಸಬೇಕಾದ ಜವಾಬ್ದಾರಿಯುತ Responsible) ವಿಷಯಗಳ ಬಗ್ಗೆ ಅವರು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇದಕ್ಕೆ ಅವರ ಅತ್ಯುತ್ಸಾಹ ಕಾರಣ ಎಂಬುದು ವಿಪರ್ಯಾಸ.

ಇದನ್ನೂ ಓದಿ: Diwali Celebration: ಭಾರತದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ದೀಪಾವಳಿಯ ಆಚರಣೆ ಹೀಗಿದೆ

ಕರ್ಕಾಟಕ ರಾಶಿ (Cancer)

 ಇವರು ಪ್ರತಿಯೊಂದು ವಿಚಾರಗಳಲ್ಲಿಯೂ ಭಾವನಾತ್ಮಕ (Emotional) ಮೌಲ್ಯವನ್ನು ಲಗತ್ತಿಸಲು ಬಯಸುತ್ತಾರೆ. ಹಬ್ಬ ಹರಿದಿನಗಳು ಅವರಿಗೆ ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಆಪ್ತರೊಂದಿಗೆ ಒಟ್ಟುಗೂಡಬಹುದು ಮತ್ತು ಅಬ್ಬರಿಸಬಹುದು. ಅವರು ಹಬ್ಬದ ಋತುವಿನ ಬಗ್ಗೆ ತುಂಬಾ ಉತ್ಸುಕತೆ ಹೊಂದಿರುತ್ತಾರೆ ಮತ್ತು ಈ ಸಮಯವನ್ನು ಸ್ಮರಣೀಯವಾಗಿಸಲು (Memorable) ತಮ್ಮ ಶಕ್ತಿಯಿಂದ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡಲು ಪ್ರಯತ್ನಿಸುತ್ತಾರೆ.

ಕನ್ಯಾರಾಶಿ (Virgo)

ಇವರು ಪರಿಪೂರ್ಣತೆಯನ್ನು ಜೀವನ ಅನುಭವಿಸಲು ಬಯಸುತ್ತಾರೆ. ಅವರು ತಮ್ಮ ರುಚಿಗೆ ತಕ್ಕಂತೆ ಎಲ್ಲವನ್ನೂ ಬಯಸುತ್ತಾರೆ, ಅದು ಕೆಲವೊಮ್ಮೆ ಇತರರಿಗೆ ಇಷ್ಟ ಅಗದೆಯೂ ಇರಬಹುದು. ಕನ್ಯಾ ರಾಶಿಯವರು ತಾವು ಮಾಡುವ ಕೆಲಸಗಳ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಅವರು ತಮ್ಮ ಅಮೂಲ್ಯವಾದ ಹಬ್ಬದ ಸಮಯವನ್ನು ಹಾಳುಮಾಡಲು ಯಾರಿಗೂ ಬಿಡುವುದಿಲ್ಲ ಏಕೆಂದರೆ ಅದು ಅವರಿಗೆ ಬಹಳ ಮುಖ್ಯವಾಗಿದೆ (Important). ವಾಸ್ತವವಾಗಿ, ಅವರು ಎಲ್ಲಾ ಅಲಂಕಾರಗಳು (Decoration) ಮತ್ತು ಆಚರಣೆಗಳನ್ನೂ ತಾವೇ ಮಾಡಬೇಕೆಂದು ಇತರರನ್ನು ನಿಯಂತ್ರಿಸುತ್ತಾರೆ.

ಇದನ್ನೂ ಓದಿ: ದೀಪಾವಳಿ ವರ್ಷ ಭವಿಷ್ಯ: ಯುಗಾದಿವರೆಗೆ 12 ರಾಶಿಗಳ ಭವಿಷ್ಯ ಹೇಗಿರಲಿದೆ?

ತುಲಾ ರಾಶಿ (Libra)

ಹಬ್ಬ ಹರಿದಿನಗಳನ್ನು ಪ್ರತಿಯೊಬ್ಬರೂ ಹೇಗೆ ಆಚರಿಸಲು ಬಯಸುತ್ತಾರೆ ಎಂಬುದರ ಕುರಿತು ತುಲಾ ರಾಶಿಯ ಜನರು ಅರ್ಥ ಮಾಡಿಕೊಂಡಿರುತ್ತಾರೆ. ಇತರರ ಕಲ್ಪನೆಯ (Imagination) ಆಚರಣೆಗೆ ತಮ್ಮಿಂದ ಸಾಧ್ಯವಾಗುವಷ್ಟು ಸಹಕಾರಿಯಾಗಿರುತ್ತಾರೆ. ಅವರು ಹಬ್ಬಗಳ ಗ್ಲಾಮ್ ಅನ್ನು ಇಷ್ಟಪಡುತ್ತಾರೆ ಮತ್ತು ಈ ಸಮಯದಲ್ಲಿ ತುಂಬಾ ಉತ್ಸಾಹಭರಿತರಾಗುತ್ತಾರೆ. ಅವರು ಮನೆಯ ಕೆಲಸಗಳಲ್ಲಿ ಎಲ್ಲರಿಗೂ ಸಹಾಯ (Help) ಮಾಡುತ್ತಾ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಮೀನ ರಾಶಿ (Pisces)

ಮೀನ ರಾಶಿಯ ಜನರು ಎಲ್ಲದರ ಬಗ್ಗೆ ಅತಿಯಾದ ಉತ್ಸಾಹವನ್ನು ಹೊಂದಿರುತ್ತಾರೆ. ಒಂದು ಹಬ್ಬ ಮುಗಿದ ನಂತರ ಅವರು ಅದರ ಮುಂದಿನ ಹಬ್ಬದ (Festival) ಕುರಿತು ಯೋಜಿಸಲು ಪ್ರಾರಂಭಿಸುತ್ತಾರೆ. ಇತರರು ನಿಜವಾಗಿಯೂ ಸಿದ್ಧರಿಲ್ಲದಿದ್ದರೂ ಅವರು ಹಬ್ಬವನ್ನು ಆಚರಿಸಲು ಎಲ್ಲರನ್ನು ಆಚರಣೆಗೆ ಎಳೆಯುತ್ತಾರೆ. ಅವರು ಉದ್ದೇಶಪೂರ್ವಕವಾಗಿ ಎಲ್ಲರೂ ತಮ್ಮ ಆರಾಮ ವಲಯದಿಂದ ಹೊರಬಂದು ಹಬ್ಬ ಮಾಡಲೇಬೇಕು ಎಂಬುದಾಗಿ ಒತ್ತಾಯಿಸುತ್ತಾರೆ (Force).

click me!