ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಸಾಯುವವರೆಗೆ ಅನೇಕ ಪದ್ಧತಿಗಳನ್ನು ಪಾಲನೆ ಮಾಡಲಾಗುತ್ತದೆ. ಸತ್ತ ನಂತ್ರವೂ ಕೆಲ ಸಂಪ್ರದಾಯ ರೂಢಿಯಲ್ಲಿದೆ. ಅಂತ್ಯಸಂಸ್ಕಾರದ ವೇಳೆ ಬಿಳಿ ಬಟ್ಟೆ ಧರಿಸುವುದ್ರಿಂದ ಹಿಡಿದು ಶವ ಯಾತ್ರೆ ವೇಳೆ ಬಳಸುವ ಒಂದೊಂದು ವಸ್ತುವಿಗೂ ಮಹತ್ವವಿದೆ.
ಈ ಭೂಮಿ ಮೇಲೆ ಹುಟ್ಟಿದ ನಂತ್ರ ಸಾವು ನಿಶ್ಚಿತ. ಒಬ್ಬರು ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರೆ ಮತ್ತೆ ಕೆಲವರು 100ರ ಗಡಿ ದಾಟಿದ ಮೇಲೆ ನಿಧನರಾಗ್ತಾರೆ. ಹುಟ್ಟು ಹಾಗೂ ಸಾವಿನ ದಿನಾಂಕ, ಸಮಯವನ್ನು ಹೇಳಲು ಸಾಧ್ಯವಿಲ್ಲ. ಸಾವು ಯಾವಾಗ, ಯಾರಿಗೆ ಬೇಕಾದ್ರೂ ಬರಬಹುದು. ಅನೇಕ ಬಾರಿ ಯಾವುದೇ ಸಣ್ಣ ಮುನ್ಸೂಚನೆ ಇಲ್ಲದೆ ನಮ್ಮ ಆಪ್ತರು ನಮ್ಮನ್ನು ಅಗಲಿರುತ್ತಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಆತ್ಮವನ್ನು ತೊರೆದ ದೇಹಕ್ಕೆ ಅಂತಿಮ ಸಂಸ್ಕಾರ ನಡೆಯುತ್ತದೆ. ಅಂತಿಮ ಸಂಸ್ಕಾರವನ್ನು ಸರಿಯಾಗಿ ಮಾಡದೆ ಹೋದ್ರೆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲವೆಂದು ನಂಬಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಅಂತಿಮ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವವಿದೆ. ಒಂದೊಂದು ಜಾತಿಯವರು ಒಂದೊಂದು ಪದ್ಧತಿಯಲ್ಲಿ ಅಂತ್ಯಸಂಸ್ಕಾರ ಮಾಡ್ತಾರೆ. ಕೆಲವರು ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ರೆ ಮತ್ತೆ ಕೆಲವರು ಮೃತ ದೇಹವನ್ನು ಹೂಳುತ್ತಾರೆ. ಅಂತ್ಯಸಂಸ್ಕಾರಕ್ಕೆ ಮುನ್ನ ಶವ ಯಾತ್ರೆ ನಡೆಯುತ್ತದೆ. ಶವ ಯಾತ್ರೆ ವೇಳೆ ರಾಮ್ ನಾಮ್ ಸತ್ಯಹೇ ಎಂದು ರಾಮನನ್ನು ನೆನೆಯಲಾಗುತ್ತದೆ. ಇಂದು ಶವ ಯಾತ್ರೆ ವೇಳೆ ರಾಮನ ಸ್ಮರಣೆ ಏಕೆ ಮಾಡ್ತಾರೆ ಎಂಬುದನ್ನು ನಾವು ಹೇಳ್ತೇವೆ.
ರಾಮ (Rama) ನಾಮಕ್ಕೆ ಸಾಟಿಯಿಲ್ಲ. ಕಲಿಯುಗದಲ್ಲಿ ರಾಮನ ನಾಮ ಪಠಣಕ್ಕೆ ವಿಶೇಷ ಮಹತ್ವವಿದೆ. ರಾಮನಾಮ ಜಪಿಸಿದ್ರೆ ಎಲ್ಲ ಕಷ್ಟಗಳು ದೂರವಾಗುತ್ತವೆ. ಬರೀ ಬದುಕಿದ್ದಾಗ ಮಾತ್ರವಲ್ಲ ಸತ್ತ ನಂತ್ರವೂ ನಮ್ಮ ಜೊತೆ ಬರುವುದು ರಾಮನ ನಾಮ ಮಾತ್ರ.
ಮನುಷ್ಯ ಮುಂದೊಂದು ದಿನ ಸಾವು (Death) ಬರುತ್ತದೆ ಎಂಬುದು ತಿಳಿದಿದ್ದರೂ ಹಣ, ಆಸ್ತಿ, ಸ್ಥಾನ ಮತ್ತು ಗೌರವಕ್ಕಾಗಿ ತನ್ನ ಜೀವನದುದ್ದಕ್ಕೂ ಓಡುತ್ತಾನೆ. ಜನರಿಗೆ ಮೋಸ ಮಾಡ್ತಾನೆ. ದ್ರೋಹ ಬಗೆಯುತ್ತಾನೆ. ಅಪರಾಧನಗಳನ್ನು ಮಾಡ್ತಾನೆ. ಆದ್ರೆ ಸಾವಿನ ನಂತ್ರ ಆಸ್ತಿ, ಹಣ ಸೇರಿದಂತೆ ಎಲ್ಲವನ್ನೂ ಬಿಟ್ಟು ಹೋಗ್ತಾನೆ. ಒಬ್ಬ ವ್ಯಕ್ತಿ ಈ ಭೂಮಿ ಮೇಲೆ ಜನಿಸಿದ್ರೆ ಭೂಮಿ (Land) ಯ ನಿಯಮಗಳನ್ನು ಪಾಲನೆ ಮಾಡಬೇಕು. ಬದುಕಿದ್ದಾಗ ದೇವರ (God) ನಾಮ ಹೇಳ್ತಾನೋ ಬಿಡ್ತಾನೋ ತಿಳಿಯದು, ಕೊನೆಯಲ್ಲಾದ್ರೂ ರಾಮ ಆತನ ಜೊತೆಗಿರಬೇಕು.
ರಾಮ್ ನಾಮ್ ಸತ್ಯಹೇ ಬಗ್ಗೆ ಮೊದಲು ಹೇಳಿದ್ದು ಯಾರು ? :
ರಾಮ ನಾಮ್ ಸತ್ಯಹೇ ಅರ್ಥವನ್ನು ಮಹಾಭಾರತದ ಮುಖ್ಯ ಪಾತ್ರಧಾರಿ ಯುಧಿಷ್ಠಿರ, ಶ್ಲೋಕವೊಂದರಲ್ಲಿ ಮೊದಲ ಬಾರಿ ಉಲ್ಲೇಖ ಮಾಡಿದ್ದಾರೆ. ಮನುಷ್ಯ ಸಾವನ್ನಪ್ಪುತ್ತಾನೆ. ಕುಟುಂಬಸ್ಥರು ಆತನ ಆಸ್ತಿಯನ್ನು ಮಾತ್ರ ಬಯಸ್ತಾರೆ ಎಂಬುದನ್ನು ಯುಧಿಷ್ಠಿರ ಈ ಶ್ಲೋಕದ ಮೂಲಕ ಹೇಳುವ ಪ್ರಯತ್ನ ನಡೆಸಿದ್ದಾರೆ.ನಾವು ಈ ಜಗತ್ತಿಗೆ ಒಂಟಿಯಾಗಿ ಬಂದಿದ್ದೆವು, ಒಂಟಿಯಾಗಿ ಹೋಗ್ತಿದ್ದೇವೆ. ಶ್ರೀರಾಮ ಮಾತ್ರ ಸತ್ಯ ಎಂಬುದು ಇದನ್ನು ಸೂಚಿಸುತ್ತದೆ.
Diwali 2022 : ನಿಮ್ಮ ಮಾತಿಗೆ ಪತಿ ತಲೆ ಅಲ್ಲಾಡಿಸ್ಬೇಕಾ? ದೀಪಾವಳಿಯಂದು ಈ ಕೆಲಸ ಮಾಡಿ
ಈ ಶ್ಲೋಕದ ಅರ್ಥವೇನು? :
ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಂ |
ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || ಮಹಾಭಾರತ, ವನಪರ್ವ ||
ನಾವು ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ, ರಾಮನ ಹೆಸರನ್ನು ಹೇಳ್ತೇವೆ. ಆದ್ರೆ ಶವ ಸಂಸ್ಕಾರ ಮುಗಿಸಿ ಬರುವಾಗ ನಾವು ಭ್ರಮೆ ಮತ್ತು ಸಂಪತ್ತಿನ ಬಗ್ಗೆ ಚಿಂತಿಸಲು ಶುರು ಮಾಡ್ತೇವೆ. ಮನುಷ್ಯ ಶಾಶ್ವತವಲ್ಲ ಎಂಬುದು ಗೊತ್ತಿದ್ದರೂ ನಾವು ಆಸ್ತಿಗೆ ಆಸೆಪಡುತ್ತೇವೆ ಎಂಬುದು ಯುಧಿಷ್ಠಿರನ ಈ ಶ್ಲೋಕದ ಹಿಂದಿನ ಉದ್ದೇಶವಾಗಿದೆ.
Diwali 2022: ಅಸ್ತಮಾ ರೋಗಿಗಳಿಗೆ ಆರೋಗ್ಯದ ಬಗೆಗಿರಲಿ ಕಾಳಜಿ
ರಾಮ್ ನಾಮ್ ಸತ್ಯ ಹೇ ಉದ್ದೇಶವೇನು ? : ರಾಮ್ ನಾಮ್ ಸತ್ಯಹೇ ಎಂಬುದು ಸತ್ತ ವ್ಯಕ್ತಿಗೆ ಹೇಳುವುದು ಎಂದು ನಾವು ನಂಬಿದ್ದೇವೆ. ಆದ್ರೆ ಅದ್ರ ಉದ್ದೇಶ ಹಾಗಲ್ಲ. ಬದುಕಿದ್ದ ವ್ಯಕ್ತಿಗಳಿಗೆ ಹೇಳುವುದಾಗಿದೆ. ರಾಮನ ಹೆಸರು ಸತ್ಯ, ಉಳಿದದ್ದು ಮಿಥ್ಯ. ಒಂದಲ್ಲ ಒಂದು ದಿನ ನೀವೂ ಸಾಯಬೇಕು. ನಿಮ್ಮದೆಲ್ಲವನ್ನೂ ಇಲ್ಲೇ ಬಿಡಬೇಕು ಎಂಬುದನ್ನು ಈ ಮೂಲಕ ಹೇಳಲಾಗುತ್ತದೆ. ರಾಮನ ಹೆಸರು ತೆಗೆದುಕೊಳ್ಳುವುದ್ರಿಂದ ಆತ್ಮಕ್ಕೆ ಮುಕ್ತಿ ಸಿಗುತ್ತದೆ. ಆತ್ಮ ದೇವರನ್ನು ಸೇರುತ್ತದೆ. ದುಶ್ಚಟಗಳಿಂದ ಮುಕ್ತಿ ಸಿಗುತ್ತದೆ. ಮೃತನ ವ್ಯಕ್ತಿ ಕುಟುಂಬಕ್ಕೆ ಮನಃಶಾಂತಿ ಸಿಗುತ್ತದೆ ಎಂಬೆಲ್ಲ ನಂಬಿಕೆ ಜನರಲ್ಲಿದೆ.