zodiac signs and personality: ಈ ಅಪಾಯಕಾರಿ ರಾಶಿಗಳೊಂದಿಗೆ ಎಚ್ಚರ, ಕಟ್ಟೆಚ್ಚರ!

By Suvarna News  |  First Published Dec 3, 2021, 11:47 AM IST

ಎಲ್ಲರಿಗೂ ಕೋಪ ಬರುತ್ತದೆ. ಆದರೆ, ಕೆಲವರ ಕೋಪ ಊಹಿಸಲಾರದಷ್ಟು ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಹಾಗೆ ಕೋಪ ಬಂದಾಗ ಅತಿ ಅಪಾಯಕಾರಿಯಾಗಬಲ್ಲ ರಾಶಿಗಳು ಯಾವೆಲ್ಲ ಗೊತ್ತಾ?


ಎಲ್ಲರೊಳಗೂ ಒಬ್ಬ ವಿಲನ್ ಇರುತ್ತಾನೆ. ಸಮಯ, ಸಂದರ್ಭ, ಸನ್ನಿವೇಶಗಳು ಅವನನ್ನು ಆಗಾಗ ಹೊರಗೆಳೆದು ತರುತ್ತವೆ. ನಮ್ಮೊಳಗೆ ಆಗಾಗ ಹುಟ್ಟುವ ಕೋಪತಾಪ, ಪಶ್ಚಾತ್ತಾಪ, ದುಃಖ, ಕಿರಿಕಿರಿಗಳೆಲ್ಲವೂ ಅದ್ ಹೇಗೋ ಒಂದಕ್ಕೊಂದು ಬೆಸೆದುಕೊಂಡು ಯಾವುದೋ ರೂಪದಲ್ಲಿ ಹೊರಬರುತ್ತವೆ. ಆಗ ನಾವು ಅಪಾಯಕಾರಿಯಾಗಿರುತ್ತೇವೆ, ಕೆಲವರಿಗೆ ಕೆಟ್ಟವರಾಗಿ ಬಿಡುತ್ತೇವೆ. ನಮ್ಮ ಜನ್ಮರಾಶಿಗನುಗುಣವಾದ ಸ್ವಭಾವ ಹೇಳುವಂತೆ ಕೆಲ ರಾಶಿಗಳು ಸನ್ನಿವೇಶ ಎದುರಾದಾಗ ಬಹಳ ಅಪಾಯಕಾರಿಯಾಗಬಲ್ಲರು. ಅಂಥ ರಾಶಿಗಳು ಯಾವುವು, ಅವರು ಹೇಗೆಲ್ಲ ಅಪಾಯಕಾರಿ ಅನ್ನೋದಿಲ್ಲಿದೆ ನೋಡಿ.

ಮಿಥುನ(Gemini)
ಈ ರಾಶಿಯವರು ಬೇರೆಲ್ಲ ರಾಶಿಗಿಂತ ಹೆಚ್ಚು ಸೋಷ್ಯಲ್ಲಾಗಿರುತ್ತಾರೆ. ಸುಲಭವಾಗಿ ಜನರೊಂದಿಗೆ ಬೆರೆಯುತ್ತಾರೆ, ಹೆಚ್ಚು ಜನರ ಜೊತೆ ಇರಲು ಬಯಸುತ್ತಾರೆ. ಜನರಿಗೆ ಕನೆಕ್ಟ್ ಆಗುವುದು ಎಂದು ಗೊತ್ತಿರುವ ಇವರಿಗೆ ಜನರನ್ನು ಭಯ ಬೀಳಿಸುವುದು ಹೇಗೆ, ಅವರ ವೀಕ್ ಪಾಯಿಂಟ್‌ಗಳೇನು ಎಂಬುದೂ ಗೊತ್ತಿರುವುದು ದೊಡ್ಡ ವಿಷಯವೇನಲ್ಲ. ಸನ್ನಿವೇಶಗಳು ಎದುರಾದಾಗ ಈ ಸೈಕಾಲಜಿಯನ್ನೇ ಅವಕಾಶ(opportunity)ವನ್ನಾಗಿ ಬಳಸಿಕೊಂಡು ಎದುರಿನವರನ್ನು ಹೆದರಿಸಿ ಮಟ್ಟ ಹಾಕಿಬಿಡುತ್ತಾರೆ.  ಅಪರಾಧಗಳನ್ನೆಸಗಲು ಬೇಕಾದ ಮಾಸ್ಟರ್ ಮೈಂಡ್(Master mind) ಇವರದು. ಅದಕ್ಕೇ ಮಿಥುನ ರಾಶಿಯವರು ಬಹಳ ಅಪಾಯಕಾರಿ(dangerous) ಎನ್ನುವುದು. 

Tap to resize

Latest Videos

undefined

ವೃಶ್ಚಿಕ(Scorpio)
ಯಾರಾದರೂ ತಮ್ಮನ್ನು ನೋಯಿಸಿದರೆ, ಅವರನ್ನು ಜೀವನದಲ್ಲಿ ಕ್ಷಮಿಸಲಾರರು ಇವರು. ತಮ್ಮನ್ನು ನೋಯಿಸಿದವರನ್ನು ಮಣಿಸಲು ಎಂಥ ಯೋಜನೆ ಹೆಣೆಯುತ್ತಾರೆಂದರೆ ಕೊನೆಯಲ್ಲಿ ಇವರ ಶತ್ರುಗಳು(enemies) ಜೀವನದಲ್ಲಿ ಮರೆಯಲಾಗದ ನೋವು ತಿನ್ನಬೇಕಾಗುತ್ತದೆ. ತಮ್ಮ ಮಾತು, ಕಾರ್ಯಗಳಲ್ಲೇ ಬಲೆ ಹೆಣೆದು ಶತ್ರುವನ್ನು ಖೆಡ್ಡಾಕ್ಕೆ ಬೀಳಿಸುತ್ತಾರೆ. ತಮಗೆ ಮೋಸ ಮಾಡಿದವರು ಎಂದಿಗೂ ಚೇತರಿಸಿಕೊಳ್ಳದಂತ ಹೊಡೆತ ನೀಡುತ್ತಾರೆ. ಆದರೂ ಹೊರಗಿನವರ ಕಣ್ಣಿಗೆ ಬಹಳ ಮುಗ್ಧರಂತೆ ಕಾಣುತ್ತಾರೆ. ಒಳಗೊಳಗೇ ಹೊಟ್ಟೆಕಿಚ್ಚು ಇವರಲ್ಲಿ ತುಂಬಿ ತುಳುಕುತ್ತಿರುತ್ತದೆ. ಬೇರೆಯವರಿಗೆ ಸೇರಬೇಕಾದ ವಸ್ತುವನ್ನು ತಾವು ಕಸಿದುಕೊಳ್ಳುತ್ತಾರೆ.

Solar eclipse: ನಾಳೆ ಸೂರ್ಯಗ್ರಹಣ, ಏನು ಮಾಡಬಹುದು, ಏನು ಮಾಡಬಾರದು?

ಮೀನ(Pisces)
ತಾವು ಪ್ರೀತಿಸುವವರ ವಿಷಯದಲ್ಲಿ ಸಿಕ್ಕಾಪಟ್ಟೆ ಸೂಕ್ಷ್ಮ ಸ್ವಭಾವದವರು ಇವರು. ಅವರನ್ನು ಅತಿ ಎನ್ನುವಷ್ಟು ಇಷ್ಟ ಪಡುವವರು. ಅವರ ವಿಷಯಕ್ಕೆ ಯಾರಾದರೂ ಬಂದರೆ, ತಮ್ಮ ಸಂಬಂಧ ಹಾಳು ಮಾಡುತ್ತಿದ್ದಾರೆ ಎನಿಸಿದರಂತೂ ರೌದ್ರಾವತಾರವನ್ನೇ ತಾಳಬಲ್ಲರು. ಭಾವನಾತ್ಮಕ ವಿಷಯಗಳು ಇವರನ್ನು ಬೇಗ ಕೆರಳಿಸುತ್ತವೆ. ಜಗಳಕ್ಕಿಳಿದರೆ ಇವರನ್ನು ಸೋಲಿಸುವ ಮಾತು ಅಸಾಧ್ಯವೇ ಸರಿ. ಆದರೆ ಅಷ್ಟೇ ಬೇಗ ತಣ್ಣಗಾಗುತ್ತಾರೆ. ಅತಿಯಾಗಿ ಕಿರಿಕಿರಿಯಾದಾಗ ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತು ಪ್ರತಿಕ್ರಿಯಿಸಿ, ಸೇಡು(revenge) ತೀರಿಸಿಕೊಳ್ಳುವಷ್ಟು ಅಪಾಯಕಾರಿಯಾಗಬಲ್ಲ ತಾಕತ್ತು ಇವರಿಗಿದೆ. 

Clove and Luck: ಆರೋಗ್ಯ ಮಾತ್ರವಲ್ಲದೆ ಅದೃಷ್ಟವನ್ನೂ ಬದಲಾಯಿಸುತ್ತೆ 'ಲವಂಗ'

ಮೇಷ(Aries)
ಇವರಿಗೆ ಆಸೆಗಳು ಹಾಗೂ ಅಧಿಕಾರದ ಬಾಯಾರಿಕೆ ಹೆಚ್ಚು. ಇನ್ನೊಬ್ಬರು ಹಾಕಿದ ಗಡಿರೇಖೆಯೊಳಗೆ ಬದುಕಿಕೊಂಡಿರುವುದು ಇವರಿಂದಾಗದು. ತಮಗಿಷ್ಟಪಟ್ಟಿದ್ದನ್ನು ಗಳಿಸಲು ಇವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಇಡೀ ಜಗತ್ತೇ ತಮ್ಮ ಕೈಲಿರಬೇಕೆಂದು ಬಯಸುವ ಇವರ ಸ್ವಭಾವವೇ ಇವರನ್ನು ಅಪಾಯಕಾರಿಯಾಗಿಸಬಲ್ಲದು. ಕೆಟ್ಟವರ ಸಹವಾಸ ಸಿಕ್ಕರೆ ಅಪರಾಧಗಳಲ್ಲಿ ತೊಡಗುತ್ತಾರೆ. ಸೇಡಿನ ವಿಷಯದಲ್ಲಿ ಇವರನ್ನು ಮೀರಿಸುವವರಿಲ್ಲ. ನೀವೇನಾದರೂ ಅವರು ಕೊಟ್ಟ ಪ್ರೀತಿಗೆ ಸರಿಯಾಗಿ ಹಿಂದಿರುಗಿಸದೆ ನಿರೀಕ್ಷೆ ಹುಸಿ ಮಾಡಿದರೆ ಅವರು ನಿಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ.

ಕುಂಭ(Aquarius)
ಇವರು ತಮ್ಮ ಭಾವನೆಗಳನ್ನು ಅಷ್ಟಾಗಿ ತೋರಿಸಿಕೊಳ್ಳುವುದಿಲ್ಲ. ಅವರ ಮನಸ್ಸಿನೊಳಗೆ ಏನಾಗುತ್ತಿದೆ ಎಂಬುದನ್ನು ಹತ್ತಿರದವರೂ ಊಹಿಸಲಾರರು. ತಮಗೆ ಯಾರಾದರೂ ಮೋಸ ಮಾಡಿದರೆ, ತಮ್ಮ ಪ್ರೀತಿಪಾತ್ರರನ್ನು ಎಳೆದುಕೊಳ್ಳಲು ಪ್ರಯತ್ನಿಸಿದರೆ ಇವರ ಒಳಗೊಳಗೇ ದ್ವೇಷ ಹುತ್ತಗಟ್ಟುತ್ತದೆ. ಕಡೆಗೊಂದು ದಿನ ಅದು ಹೊಟ್ಟಿ ಸಿಡಿಯುವಾಗ ಸುತ್ತಲಿನವರೆಲ್ಲ ದಿಗ್ಭ್ರಮೆಯಲ್ಲಿ ಇವರ ಕಡೆ ನೋಡುತ್ತಾರೆ. ಏಕೆಂದರೆ, ಅದುವರೆಗೂ ಸಾಧು ಸ್ವಭಾವದವರಾಗಿ ಕಂಡ ಇವರಿಂದ ಆ ಮಟ್ಟಿನ ಕೋಪವನ್ನು ಯಾರೂ ನಿರೀಕ್ಷಿಸಿರುವುದು ಸಾಧ್ಯವಿಲ್ಲ. 
 

click me!