Kuja Dosha: ವೈವಾಹಿಕ ಬದುಕಲ್ಲಿ ಬಿರುಗಾಳಿ ಎಬ್ಬಿಸೋ ಕುಜ ದೋಷ

By Suvarna News  |  First Published Dec 2, 2021, 5:18 PM IST

ಕುಜ ಎನ್ನುವುದು ಮಂಗಳನ ಹೆಸರು. ಹಾಗಾಗಿ ಕುಜ ದೋಷ ಹಾಗೂ ಮಾಂಗಳಿಕ ದೋಷ ಎರಡೂ ಒಂದೇ ಆಗಿದೆ. ಸಾಮಾನ್ಯವಾಗಿ ಜಾತಕ ನೋಡುವಾಗ ಕುಜ ದೋಷ ಇರುವುದೇ ನೋಡುತ್ತಾರೆ. ಒಂದು ವೇಳೆ ಇದ್ದರೇನು ಸಮಸ್ಯೆ, ಪರಿಹಾರವೇನು- ಎಲ್ಲ ವಿವರಗಳು ಇಲ್ಲಿವೆ.


ಶನಿ, ರಾಹು ಹಾಗೂ ಮಂಗಳ ಗ್ರಹಗಳು ಜಾತಕದಲ್ಲಿ ಕೆಲ ನಿರ್ದಿಷ್ಟ ಮನೆಯಲ್ಲಿದ್ದಾಗ ದೋಷಗಳಿವೆ ಎಂದು ಹೇಳಲಾಗುತ್ತದೆ. ಹೀಗೆ ದೋಷಗಳಿದ್ದಾಗ ವ್ಯಕ್ತಿಯು ಅದರಿಂದ ಹಲವು ಸಮಸ್ಯೆಗಳು, ಸವಾಲುಗಳನ್ನೆದುರಿಸಬೇಕಾಗುತ್ತದೆ. ಮಂಗಳ ದೋಷ, ಅಂಗಾರಕ ದೋಷ(Manglik dosha) ಅಥವಾ ಕುಜ ದೋಷ ಕೂಡ ಹಾಗೆ, ಜಾತಕದಲ್ಲಿ ಮಂಗಳನ ಉಪಸ್ಥಿತಿ 1, 2, 4, 7, 8 ಅಥವಾ 12ನೇ ಮನೆಯಲ್ಲಿದ್ದರೆ ಕಾಡುತ್ತದೆ. 
ಹೀಗೆ ಕುಜ ದೋಷದೊಂದಿಗೆ ಹುಟ್ಟಿದ ವ್ಯಕ್ತಿಯು ಮುಖ್ಯವಾಗಿ ವಿವಾಹ(marriage) ಜೀವನದಲ್ಲಿ ಸಂಕಷ್ಟಗಳನ್ನೆದುರಿಸಬೇಕಾಗುತ್ತದೆ. 
ಮೊದಲೇ ಮಂಗಳ ಯುದ್ಧದ ಗ್ರಹ ಎಂದು ಹೆಸರು ಪಡೆದಿದೆ. ಹಾಗಾಗಿ, ಮಂಗಳನು ಕುಜ ದೋಷವಿರುವ ವ್ಯಕ್ತಿಯ ವೈವಾಹಿಕ ಬದುಕಿನಲ್ಲಿ ಯುದ್ಧ ತಂದಿಟ್ಟು ನೋಡುತ್ತಾನೆ. ಕುಜ ದೋಷ ಇರುವ ವ್ಯಕ್ತಿಯ ವಿವಾಹ ಜೀವನ ಆತಂಕ, ಬೇಜಾರು, ದುಃಖ, ನೆಮ್ಮದಿ ಹೀನವಾಗಿರುತ್ತದೆ. 
ಕುಜದೋಷವಿರುವ ವ್ಯಕ್ತಿಯಲ್ಲಿ ಕೂಡಾ ಮಂಗಳನ ಉಪಸ್ಥಿತಿ ಒಂದೊಂದು ಮನೆಯಲ್ಲಿದ್ದಾಗ ಒಂದೊಂದು ಪರಿಣಾಮ(effect)ಗಳನ್ನು ಬೀರಬಲ್ಲದು. 

ಯಾವ ಮನೆಯಲ್ಲಿದ್ದರೆ ಏನು ಪರಿಣಾಮ?
ಒಂದು ವೇಳೆ ಜಾತಕ(horoscope)ದ ಒಂದನೇ ಮನೆಯಲ್ಲಿ ಕುಜನಿದ್ದರೆ, ಅಂಥ ವ್ಯಕ್ತಿಯ ಸಂಗಾತಿ(partner)ಯಾದವರು ಬಹಳ ಗಂಭೀರ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ಇಬ್ಬರ ನಡುವೆ ಪದೇ ಪದೆ ಜಗಳ, ವೈಮನಸ್ಸು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದು ನಿಧಾನವಾಗಿ ದೈಹಿಕ ದೌರ್ಜನ್ಯ ಹಾಗೂ ಹಿಂಸೆಗೆಡೆ ಮಾಡಬಹುದು. 

Effect of Rahu in 2022: ಮೇಷ, ವೃಷಭ ಸೇರಿ 6 ರಾಶಿಗೆ ರಾಹು ಕಾಟ

Tap to resize

Latest Videos

undefined

ಎರಡನೇ ಮನೆಯಲ್ಲಿ ಮಂಗಳನಿದ್ದರೆ ಅದು ವೈಯಕ್ತಿಕ ಕುಟುಂಬ(family) ಜೀವನದಲ್ಲಿ ಸಮಸ್ಯೆಗಳನ್ನು ತರುತ್ತದೆ. ಜೊತೆಗೆ, ಔದ್ಯೋಗಿಕ ಬದುಕು ಕೂಡಾ ಗಂಭೀರ ಸವಾಲುಗಳನ್ನೆದುರಿಸುತ್ತದೆ. 4ನೇ ಮನೆಯಲ್ಲಿ ಕುಜನಿದ್ದರೆ, ಅದು ಮುಖ್ಯವಾಗಿ ವ್ಯಕ್ತಿಯ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪದೇ ಪದೆ ಉದ್ಯೋಗ ಬದಲಿಸಬೇಕಾಗಿ ಬರುತ್ತದೆ. ಹಾಗಿದ್ದೂ ಕಡೆಗೂ ಯಾವ ಉದ್ಯೋಗವೂ ಸಮಾಧಾನ ತರುವುದಿಲ್ಲ. ಒಂದು ವೇಳೆ ಕುಜ 7ನೇ ಮನೆಯಲ್ಲಿದ್ದರೆ, ವ್ಯಕ್ತಿಯು ಸಣ್ಣಪುಟ್ಟದ್ದಕ್ಕೂ ಕಿರಿಕಿರಿ ಮಾಡಿಕೊಳ್ಳುವುದು, ಅತಿಯಾಗಿ ಕೋಪ ಮಾಡಿಕೊಳ್ಳುವ ಸ್ವಭಾವ ಹೊಂದಿರುತ್ತಾನೆ. ಇದರಿಂದ ಕುಟುಂಬದ ಸದಸ್ಯರೊಡನೆ ಹಾಗೂ ಸಂಗಾತಿಯೊಡನೆ ಪದೇ ಪದೆ ಜಗಳವಾಡುತ್ತಲೇ ಇರಬೇಕಾಗುವುದು. 

Feng Shui for Money: ಧನಲಕ್ಷ್ಮೀ, ಮನೆಗೆ ಬಾರಮ್ಮಾ...

ಮಂಗಳ 8ನೇ ಮನೆಯಲ್ಲಿದ್ದರೆ ಆ ವ್ಯಕ್ತಿಯು ಸಿಕ್ಕಾಪಟ್ಟೆ ಸೋಮಾರಿ(lazy)ಯಾಗಿರುತ್ತಾನೆ. ಹಣಕಾಸನ್ನು ನಿಭಾಯಿಸುವ ವಿಷಯದಲ್ಲಿ ಕೇರ್‌ಲೆಸ್ಸಾಗುವ ಕಾರಣ ಪಿತ್ರಾರ್ಜಿತ ಆಸ್ತಿ(property)ಗಳನ್ನೆಲ್ಲ ಕರಗಿಸಿಬಿಡುತ್ತಾನೆ. 12ನೇ ಮನೆಯಲ್ಲಿ ಅಂಗಾರಕನಿದ್ದರೆ ಅಂಥ ವ್ಯಕ್ತಿಗೆ ಶತ್ರುಗಳು ಹೆಚ್ಚು. ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಕುಜ ದೋಷಕ್ಕೇನು ಪರಿಹಾರ?
- ಕುಜ ದೋಷ ಇರುವವರು ಪ್ರತಿ ತಿಂಗಳ ಮೊದಲ ಮಂಗಳವಾರ(Tuesday) ಅಂದರೆ ಶುಕ್ಲಪಕ್ಷದಂದು ಉಪವಾಸ(fasting) ಆಚರಿಸಬೇಕು. ಈ ಸಂದರ್ಭದಲ್ಲಿ ತೊಗರಿ(toor dal)ಯನ್ನು ಮಾತ್ರ ಸೇವಿಸಬಹುದು. ಇದಲ್ಲದೆ ಪ್ರತಿ ಮಂಗಳವಾರ ಮಂಗಳ್ ಮಂತ್ರ ಜಪಿಸಬೇಕು.
- ಪ್ರತಿ ದಿನ 108 ಬಾರಿ ಗಾಯತ್ರಿ ಮಂತ್ರ ಹೇಳಿಕೊಳ್ಳಿ. 
- ದಿನಕ್ಕೆ ಒಮ್ಮೆಯಾದರೂ ಹನುಮಾನ್ ಚಾಳೀಸ್ ಹೇಳಿ.
- ಪ್ರತಿದಿನ ಆಂಜನೇಯನ ಫೋಟೋ ಅಥವಾ ದೇವಾಲಯದಲ್ಲಿ ಕುಳಿತು 'ಓಂ ಶ್ರೀಂ ಹನುಮಂತೇ ನಮಃ' ಹೇಳಿಕೊಳ್ಳಿ. 
- ಪ್ರತಿ ಮಂಗಳವಾರ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಸಿಹಿ ನೈವೇದ್ಯ ಸಲ್ಲಿಸಿ. ತುಪ್ಪದ ದೀಪ ಹಚ್ಚಿ.
- ಕಬ್ಬಿಣ ಕೆಲಸಗಾರರಿಗೆ ಕೆಂಪು ಬಟ್ಟೆ ದಾನ ಮಾಡಿ.
- ಕುಜ ದೋಷವಿರುವ ವರನು ಕುಜ ದೋಷ ಹೊಂದಿದ ವಧುವನ್ನೇ ವಿವಾಹವಾಗುವುದರಿಂದ ಒಳಿತಾಗುವುದು. 
- ಕುಂಭ ವಿವಾಹ ಕೈಂಕರ್ಯ ನಡೆಸಿ.
- ಮಂಗಳವಾರದಂದು ಚಾಕು, ಸೂಜಿಯಂಥ ವಸ್ತುಗಳನ್ನು ದಾನ ಮಾಡಿ. ಕೆಂಪು ಬೇಳೆಯಿಂದ ತಯಾರಿಸಿದ ಆಹಾರ ಪದಾರ್ಥ, ಕೆಂಪು ಬಟ್ಟೆಗಳು ಹಾಗೂ ಕೆಂಪು ರತ್ನವನ್ನು ದಾನ ಮಾಡಿ. 


 

click me!