Solar eclipse: ನಾಳೆ ಸೂರ್ಯಗ್ರಹಣ, ಏನು ಮಾಡಬಹುದು, ಏನು ಮಾಡಬಾರದು?

By Suvarna News  |  First Published Dec 3, 2021, 10:29 AM IST

ನಾಳೆ ಸೂರ್ಯಗ್ರಹಣ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದು ನೆರಳು ಭೂಮಿಗೆ ಬೀಳುತ್ತದೆ. ಆಗ ಭೂಮಿಯ ಕೆಲ ಭಾಗದಲ್ಲಿ ಕತ್ತಲು ಕವಿಯುತ್ತದೆ. ಸೂರ್ಯಗ್ರಹಣ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಗೊತ್ತಾ?


ನಾಳೆ ಈ ವರ್ಷದ ಕಡೆಯ ಸೂರ್ಯಗ್ರಹಣ(Solar eclipse). ಸೂರ್ಯ, ಭೂಮಿ(earth)ಯ ನಡುವೆ ಚಂದ್ರ(moon) ಬಂದಾಗ- ಇವೆಲ್ಲವೂ ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಘಟಿಸುತ್ತದೆ. ಗ್ರಹಣದ ಸಂದರ್ಭದಲ್ಲಿ ಊಟ ಮಾಡಬಾರದು, ಹೊರಗೆ ಹೋಗಬಾರದು ಮುಂತಾದ ಮಾತುಗಳನ್ನು ನೀವೂ ಕೇಳಿಯೇ ಇರುತ್ತೀರಿ. ಇವುಗಳಲ್ಲೆಲ್ಲ ಎಷ್ಟು ನಿಜವಿದೆ? ನಾಳೆ ನೀವೇನು ಮಾಡಬಹುದು, ಏನು ಮಾಡಬಾರದು ಗೊತ್ತಾ?

ಗ್ರಹಣದ ನಂತರ ಸ್ನಾನ(bath)
ಗ್ರಹಣ ಬಿಟ್ಟ ಬಳಿಕ ಸ್ನಾನ ಮಾಡಬೇಕು. ಗ್ರಹಣ ಕಾರಣದಿಂದ ಅಪಾಯಕಾರಿ ರೋಗಾಣುಗಳು(bacteria) ವಾತಾವರಣದಲ್ಲಿ ಹೆಚ್ಚಿರುತ್ತವೆ. ಹಾಗಾಗಿ, ಗ್ರಹಣದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಅಂಟಿರಬಹುದಾದ ಕೀಟಾಣು(germs)ಗಳನ್ನು ತೊಡೆದು ಹಾಕಬಹುದು. ಅದರಲ್ಲೂ ಗರ್ಭಿಣಿಯರಾದರೆ ತಣ್ಣೀರು ಸ್ನಾನ ಒಳ್ಳೆಯದು. ಇದರಿಂದ ಮೆದುಳು ಹಾಗೂ ಹೊಟ್ಟೆಗೆ ಸಂಪರ್ಕ ಹೊಂದಿರುವ ವೇಗಸ್ ನರ್ವ್ ಸ್ಟಿಮುಲೇಟ್ ಆಗುತ್ತದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುವುದಲ್ಲದೆ ಮನಸ್ಸು ಹಾಗೂ ದೇಹವನ್ನು ಹಗುರಾಗಿಸುತ್ತದೆ. 

Tap to resize

Latest Videos

undefined

ಗ್ರಹಣಕ್ಕಿಂತ ಮುಂಚೆ ಊಟ
ಊಟ, ತಿಂಡಿ ಏನೇ ಇರಲಿ ಗ್ರಹಣ ಹಿಡಿಯುವ ಕನಿಷ್ಠ ಎರಡು ಗಂಟೆಗೆ ಮುನ್ನ ಮಾಡಿ ಮುಗಿಸಬೇಕು. ಏಕೆಂದರೆ ಸೂರ್ಯನ ನೀಲಿ ಹಾಗೂ ಆಲ್ಟ್ರಾ ವಯೋಲೆಟ್ ಕಿರಣಗಳು ಪ್ರತಿದಿನ ನ್ಯಾಚುರಲ್ ಡಿಸ್‌ಇನ್ಫೆಕ್ಟೆಂಟ್ ಆಗಿ ಕೆಲಸ ಮಾಡುತ್ತಿರುತ್ತವೆ. ಗ್ರಹಣ ಕಾಲದಲ್ಲಿ ಅವುಗಳ ಕಾರ್ಯಕ್ಷಮತೆ ಕುಂದುತ್ತದೆ. ವೇವ್‌ಲೆಂತ್(wavelength) ಬದಲಾಗುತ್ತದೆ. ಇದರಿಂದ ವಾತಾವರಣದಲ್ಲಿ ಕೀಟಾಣುಗಳು ಹೆಚ್ಚುತ್ತವೆ. ಅವು ನಮ್ಮ ಆಹಾರಗಳ ಮೇಲೆ ಬೆಳೆಯುವ ವೇಗ ಹೆಚ್ಚು. ಹಾಗಾಗಿ, ಗ್ರಹಣಕ್ಕೂ ಎರಡು ಗಂಟೆಗಳ ಮುಂಚೆಯೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದರಲ್ಲೂ ಸಸ್ಯಾಹಾರ ಸೇವನೆ ಹೆಚ್ಚು ಒಳ್ಳೆಯದು. ಆಹಾರಕ್ಕೆ ಅರಿಶಿನ(turmeric) ಸೇರಿಸಿ ಸೇವಿಸುವುದರಿಂದ ಅದರ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಸಹಾಯಕ್ಕೆ ಬರುತ್ತದೆ. 

Bad Luck and Horoscope: ಜೀವನವನ್ನೇ ಹಾಳು ಮಾಡುವ ಈ 5 ದೋಷಗಳಿವೆ ಪರಿಹಾರ!!

ಈ ಮೇಲಿನ ಕಾರಣಕ್ಕಾಗಿಯೇ ಗ್ರಹಣ ಸಂದರ್ಭದಲ್ಲಿ ನೀರನ್ನೂ ಕುಡಿಯಬಾರದು. ಸೂರ್ಯನಿಲ್ಲದೆ ಭೂಮಿಯ ಎನರ್ಜಿ ಜೊತೆಗೆ ಮನುಷ್ಯನ ದೇಹದ ಎನರ್ಜಿ ಕೂಡಾ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಪ್ರಕ್ರಿಯೆ ನಿಧಾನಗತಿಯಾಗುತ್ತದೆ. ಗ್ರಹಣ ಕಾಲದಲ್ಲಿ ತಿನ್ನಬಾರದು ಎಂಬುದಕ್ಕೆ ಇದೂ ಒಂದು ಕಾರಣ. 

ಒಂದು ವೇಳೆ ಗರ್ಭಿಣಿಯಾಗಿದ್ದರೆ, ವಯಸ್ಸಾದವರಾಗಿ ಪದೇ ಪದೆ ದೇಹಕ್ಕೆ ಹೈಡ್ರೇಶನ್(hidration) ಬೇಕೇ ಬೇಕು ಎನ್ನುವವರಾದರೆ ನೀರನ್ನು ಚೆನ್ನಾಗಿ ಕುದಿಸಿ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ. ಈ ನೀರಿಗೆ ತುಳಸಿ ಹಾಗೂ ಅರಿಶಿನ ಸೇರಿಸಿಕೊಂಡು ಅವುಗಳ ಆ್ಯಂಟಿವೈರಲ್(anti viral) ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್(anti bacterial) ಗುಣಗಳ ಲಾಭವನ್ನೂ ಪಡೆಯಬಹುದು. 

Kuja Dosha: ವೈವಾಹಿಕ ಬದುಕಲ್ಲಿ ಬಿರುಗಾಳಿ ಎಬ್ಬಿಸೋ ಕುಜ ದೋಷ

ಗ್ರಹಣದ ಬಳಿಕ ತಾಜಾ ಆಹಾರ(food) ಸೇವನೆ
ಗ್ರಹಣ ಸಂದರ್ಭದಲ್ಲಿ ಹೊರಡುವ ಸೂರ್ಯನ ಕಿರಣಗಳ ಕೆಟ್ಟ ಪರಿಣಾಮ ಮಾಡಿ ಉಳಿದ ಆಹಾರದ ಮೇಲಾಗಿರಬಹುದು. ಹಾಗಾಗಿ, ಗ್ರಹಣಕ್ಕೂ ಮುಂಚೆ ತಯಾರಿಸಿದ ಆಹಾರವನ್ನು ನಂತರದಲ್ಲಿ ಸೇವಿಸಬೇಡಿ. ಬದಲಿಗೆ, ಗ್ರಹಣ ಮುಗಿದ ಮೇಲೆ ಹೊಸತಾಗಿ ಬಿಸಿ ಬಿಸಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಿ. 

ಒಂದು ವೇಳೆ ಮೊಸರು, ದೋಸೆ ಹಿಟ್ಟೆಲ್ಲ ಇದ್ದರೆ ಅದನ್ನು ಚೆಲ್ಲುವ ಬದಲು ಅದಕ್ಕೆ ದರ್ಬೆ ಹಾಕಿಡಿ. ದರ್ಬೆಯು ಪ್ರಾಕೃತಿಯವಾಗಿಯೇ ಡಿಸ್‌ಇನ್ಫೆಕ್ಟೆಂಟ್ ಆಗಿದೆ. ಆಹಾರಗಳನ್ನು ಬಹುಕಾಲ ಕೆಡದಂತೆ ಇಡಲು ಅಪಾಯಕಾರಿ ಕೆಮಿಕಲ್‌ಗಳನ್ನು ಬಳಸುವ ಬದಲು ದರ್ಬೆಯನ್ನೇ ಬಳಸುವುದು ಒಳ್ಳೆಯದು ಎಂದು ವೈಜ್ಞಾನಿಕ ಸಂಶೋಧನೆ(research)ಗಳಲ್ಲೂ ತಿಳಿದುಬಂದಿದೆ. ಗ್ರಹಣ ಮುಗಿದ ಮೇಲೆ ದರ್ಬೆ ತೆಗೆದು ಬಳಸಿ. 

ನೇರವಾಗಿ ಸೂರ್ಯನನ್ನು ದಿಟ್ಟಿಸದಿರಿ
ಸೂರ್ಯನನ್ನು ಯಾವತ್ತೂ ನೇರವಾಗಿ ನೋಡುವುದು ಒಳ್ಳೆಯದಲ್ಲ. ಅದರಲ್ಲೂ ಗ್ರಹಣ ಸಂದರ್ಭದಲ್ಲಿ ನೋಡುವುದರಿಂದ ಕಣ್ಣುಗಳಿಗೆ ಹಾನಿಯಾಗಬಹುದು. ಏಕೆಂದರೆ, ಗ್ರಹಣ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಹೆಚ್ಚು ಪ್ರಖರತೆ ಹೊಂದಿರುತ್ತವೆ. ಅದರಲ್ಲೂ ಬೈನಾಕ್ಯುಲರ್ ಹಾಗೂ ಟೆಲಿಸ್ಕೋಪ್ ಬಳಕೆ ಖಂಡಿತವಾಗಿ ಮಾಡಬೇಡಿ. 

ಗ್ರಹಣ ಕಾಲದಲ್ಲಿ ಧ್ಯಾನ(meditation)
ಧ್ಯಾನ ಯಾವತ್ತಿಗೂ ಒಳ್ಳೆಯದೇ. ಗ್ರಹಣದ ಸಂದರ್ಭದಲ್ಲಿ ಅದರ ಲಾಭಗಳು ಇನ್ನೂ ಹೆಚ್ಚು. ಇದಕ್ಕೆ ಕಾರಣ ನಮ್ಮ ಮನಸ್ಸು ಚಂದ್ರನೊಂದಿಗೆ ಸಂಪರ್ಕ ಹೊಂದಿದ್ದರೆ, ದೇಹವು ಭೂಮಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಸೂರ್ಯನು ಮನಸ್ಸು ಹಾಗೂ ದೇಹವೆರಡಕ್ಕೂ ಕನೆಕ್ಟ್ ಆಗಿರುತ್ತಾನೆ. ಹಾಗಾಗಿ, ಈ ಮೂರೂ ಆಕಾಶಕಾಯಗಳು ನೇರ ರೇಖೆಯಲ್ಲಿದ್ದಾಗ ಧ್ಯಾನ ಮಾಡುವುದು ಹೆಚ್ಚು ಲಾಭದಾಯಕ. 

ಗ್ರಹಣ ಸಂದರ್ಭದಲ್ಲಿ ಕೆಲ ಹಕ್ಕಿಗಳು ಹಾಡುವುದಿಲ್ಲ, ಕೆಲ ಹೂವುಗಳು ಮುದುಡುತ್ತವೆ. ಇನ್ನು ಬುದ್ಧಿವಂತನೆನಿಸಿಕೊಂಡ ಮನುಷ್ಯ ಕೂಡಾ ತನ್ನ ತಾನು ರಕ್ಷಿಸಿಕೊಳ್ಳಲು ಈ ಕೆಲ ಕ್ರಮ ಕೈಗೊಳ್ಳುವುದು ಒಳ್ಳೆಯದಲ್ಲವೇ?

click me!