ಈ 6 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿಯೇ ಇರೋದಿಲ್ವಂತೆ..!

By Suvarna News  |  First Published Feb 8, 2021, 10:21 AM IST

ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ಕೆಲವರಿಗೆ ಮದುವೆಯ ಬಗೆಗಿನ ಆಲೋಚನೆಗಳು ಸಕಾರಾತ್ಮಕವಾಗಿದ್ದರೆ. ಮತ್ತೆ ಕೆಲವರಿಗೆ ಮದುವೆ ಎಂದರೆ ನಕಾರಾತ್ಮಕ ಅಂಶಗಳೇ ಎದ್ದು ಕಾಣುತ್ತವೆ. ಜನ್ಮ ರಾಶಿಯ ಪ್ರಭಾವವು ಇದಕ್ಕೆ ಕಾರಣವಾಗಿರುತ್ತದೆ. ಕೆಲವು ರಾಶಿಯ ವ್ಯಕ್ತಿಗಳಿಗೆ ವಿವಾಹದಲ್ಲಿ ಆಸಕ್ತಿ ತೀರಾ ಕಡಿಮೆ ಇರುತ್ತದೆ. ವಿವಾಹದ ಬಗ್ಗೆ ನಿರುತ್ಸಾಹವನ್ನು ತೋರುವ ರಾಶಿಗಳ ಬಗ್ಗೆ ತಿಳಿಯೋಣ..


ರಾಶಿ ಪ್ರಕಾರ ಗುಣ, ಸ್ವಭಾವಗಳನ್ನು ತಿಳಿಯಬಹುದಾಗಿರುತ್ತದೆ. ಕೆಲವು ರಾಶಿಯವರು ಸ್ವಭಾವದಲ್ಲಿ ತುಂಬಾ ಗಂಭೀರ ಮತ್ತು ಮಾತನಾಡುವುದಕ್ಕೂ ಯೋಚಿಸುವಂಥವರಾಗಿರುತ್ತಾರೆ. ಇನ್ನು ಕೆಲವು ರಾಶಿಯವರ ಪ್ರಪಂಚವೇ ಉದ್ಯೋಗ, ಪ್ರತಿಷ್ಠೆ, ಹಣವಾಗಿರುತ್ತದೆ. ಮತ್ತೆ ಕೆಲವು ರಾಶಿಯವರಿಗೆ ಕನಸೇ ಜೀವನ, ಮದುವೆ, ಉದ್ಯೋಗ, ಪತಿ ಹೀಗೆ ಹಲವಾರು ಕನಸು ಮತ್ತು ಮದುವೆಯ ಬಗ್ಗೆ ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಮುಂದಿನ ಜೀವನ ಹೇಗಿದ್ದರೆ ಚೆಂದ? ಮದವೆಯಾದ ಮೇಲೆ ಹೀಗಿದ್ದರೆ ಚೆಂದ, ಮದುವೆಯಾಗುವ ಹುಡುಗ ಅಥವಾ ಹುಡುಗಿ ಹೀಗಿರಬೇಕು ಎಂದೆಲ್ಲ ಕನಸು ಕಾಣುತ್ತಾ ಇರುತ್ತಾರೆ. ಆದರೆ ಕೆಲವು ರಾಶಿಯವರಿಗೆ ಮದುವೆ ಎಂದರೆ ಆಸಕ್ತಿನೇ ಇರುವುದಿಲ್ಲವಂತೆ. ಮದುವೆಯಾದರೆ ಅಂದುಕೊಂಡ ಗುರಿ ಸಾಧಿಸುವುದು ಅಸಾಧ್ಯವೆಂಬುದು ಕೆಲವರ ಯೋಚನೆ ಅದಕ್ಕೆ ತಕ್ಕಂತೆ ವಿವಾಹದ ಬಗ್ಗೆ ನಕಾರಾತ್ಮಕ ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ.

ಹೌದು! ಕೆಲವು ರಾಶಿಯವರಿಗೆ ಮದುವೆಯ ಬಗ್ಗೆ ಯಾವುದೇ ಕನಸುಗಳು ಇರುವುದಿಲ್ಲವಂತೆ. ಆರಾಮವಾಗಿ, ಖುಷಿಯಾಗಿ ಒಬ್ಬರೇ ಇರುವುದನ್ನು ಇಷ್ಟಪಡುವ ವ್ಯಕ್ತಿಗಳು ಇವರು. ಮದುವೆಯಾದರೆ ಸ್ವತಂತ್ರರಾಗಿರಲು ಸಾಧ್ಯವಿಲ್ಲ, ಏಕಾಂತಕ್ಕೆ ಧಕ್ಕೆ ಬರುತ್ತದೆ ಎಂಬುದು ಕೆಲವು ರಾಶಿಯವರ ಯೋಚನೆಯಂತೆ.. ಹಾಗಾದರೆ ಆ 6 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನು ಓದಿ:  ಬುಧಗ್ರಹದ ಈ ಗ್ರಹಚಾರದಿಂದ ಪಾರಾಗಲು ಇಲ್ಲಿವೆ ಪರಿಹಾರಗಳು...

ಮೇಷ ರಾಶಿ
ಮೇಷ ರಾಶಿಯವರು ಸ್ವಲ್ಪ ಹಠ ಸ್ವಭಾವದವರು. ಸ್ವತಂತ್ರರಾಗಿರಲು ಇಷ್ಟಪಡುವವರು ಮತ್ತು ತಮಗೆ ಅನ್ನಿಸಿದ್ದನ್ನು ಮಾಡುವವರು. ಈ ರಾಶಿಯವರಿಗೆ ಇತರರು ಇವರನ್ನು ಪ್ರಶ್ನಿಸುವುದು ಇಷ್ಟವಿರುವುದಿಲ್ಲ, ಮತ್ತೊಬ್ಬರಿಗೆ ಸಮಜಾಯಿಷಿ ನೀಡುತ್ತಾ ಕೂರುವುದು ಇವರ ಸ್ವಭಾವವಲ್ಲ. ಹಾಗಾಗಿ ಮದುವೆಯ ಬಗ್ಗೆ ಈ ವ್ಯಕ್ತಿಗಳಿಗೆ ಆಸಕ್ತಿ ಕಡಿಮೆ.

Tap to resize

Latest Videos



ಮಿಥುನ ರಾಶಿ
ಈ ರಾಶಿಯವರಿಗೆ ಮದುವೆಯ ಬಗ್ಗೆ ಯಾವುದೇ ರೀತಿಯ ಯೋಚನೆಗಳಿರುವುದಿಲ್ಲ. ಮದುವೆಯಾದ ಮೇಲೆ ಜೀವನದಲ್ಲಿ ಬೇಸರ ಮತ್ತು ಏಕತಾನತೆ ಆವರಿಸುತ್ತದೆ ಎಂಬುದು ಇವರ ಆಲೋಚನೆಯಾಗಿರುತ್ತದೆ. ಸಂಗಾತಿಯ ನಿರ್ಬಂಧಗಳ ಬಗ್ಗೆ ಯೋಚಿಸಿಯೇ ಸುಸ್ತಾಗುವ ಸ್ವಭಾವ ಇವರದ್ದಾಗಿರುತ್ತದೆ. ಹಾಗಾಗಿ ಮದುವೆಯ ಬಗ್ಗೆ ಇವರು ಹೆಚ್ಚು ಯೋಚಿಸುವುದೇ ಇಲ್ಲ.

ಕನ್ಯಾ ರಾಶಿ
ಈ ರಾಶಿಯವರು ತಮ್ಮ ಗುರಿಯನ್ನು ಸಾಧಿಸುವ ಬಗ್ಗೆಯೇ ಗಮನಹರಿಸುತ್ತಿರುತ್ತಾರೆ. ಅದೇ ಅವರ ಪ್ರಪಂಚವಾಗಿರುತ್ತದೆ. ಹಾಗಾಗಿ ಮದುವೆಯ ಬಗ್ಗೆ ಯೋಚಿಸುವುದೇ ಇಲ್ಲ. ಅಷ್ಟೇ ಅಲ್ಲದೆ ಒಮ್ಮೆ ಅಂದುಕೊಂಡದ್ದನ್ನು ಸಾಧಿಸಿಬಿಟ್ಟರೆ ಸಾಕು ನಂತರ ಮದುವೆಯಾಗಬಹುದು ಎಂಬುದು ಇವರ ಭಾವನೆ. ಗುರಿಯನ್ನು ಸಾಧಿಸಲು ವರ್ಷಗಳೇ ಬೇಕಾಗಬಹುದು, ಕನ್ಯಾ ರಾಶಿಯವರು ಮದವೆಯಾಗದೇ ಉಳಿಯುವ ಸಾಧ್ಯತೆ ಸಹ ಇರುತ್ತದೆ. 

ಇದನ್ನು ಓದಿ: ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..! 

ಧನು ರಾಶಿ
ಈ ರಾಶಿಯವರು  ಸ್ವತಂತ್ರರು ಮತ್ತು ಸ್ವಾವಲಂಭಿಗಳಾಗಿರುತ್ತಾರೆ. ಇವರಿಗೆ ಒಬ್ಬರೆ ಇರುವುದೆಂದರೆ ಇಷ್ಟ. ಏಕಾಂತದಲ್ಲಿ ಒಬ್ಬರೆ ಕಾಲಕಳೆಯುವ ಸ್ವಭಾವದವರಾಗಿರುತ್ತಾರೆ. ಜೊತೆಗೆ ಇನ್ನೊಬ್ಬರು ಇರಬೇಕೆಂದು ಇವರಿಗೆ ಅನ್ನಿಸುವುದಿಲ್ಲ, ಅದರಲ್ಲೂ ಸಂಗಾತಿಯ ಅಗತ್ಯವಿಲ್ಲ ಎಂಬುದೆ ಇವರ ಆಲೋಚನೆಯಾಗಿರುತ್ತದೆ.

ಕುಂಭ ರಾಶಿ
ಈ ರಾಶಿಯವರು ಸಂಕೋಚ ಸ್ವಭಾವದವರು. ಇತರರ ಮುಂದೆ ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಹಿಂಜರಿಯುವ ಇವರಿಗೆ, ಭಾವನೆಗಳಿಗೆ ಘಾಸಿಯಾದೀತೆಂಬ ಭಯವಿರುತ್ತದೆ. ಭಾವನೆಗಳನ್ನು ಅರ್ಥೈಸಿಕೊಂಡು ಜೊತೆ ನಡೆಯುವವರು ಸಿಗುವುದೇ ಇಲ್ಲವೆಂಬ ಭಾವನೆ ಇವರಲ್ಲಿರುತ್ತದೆ. ಜೀವನ ಪೂರ್ತಿ ಜೊತೆಯಾಗಿದ್ದು ಪ್ರೀತಿಸುವ ಮತ್ತು ಬೆಂಬಲಿಸುವ ಸಂಗಾತಿ ಸಿಗುವ ಬಗ್ಗೆ ಈ ರಾಶಿಯವರಿಗೆ ಸಂಶಯವಿರುತ್ತದೆ. ಹಾಗಾಗಿ ವಿವಾಹದ ಯೋಚನೆಯಿಂದ ದೂರವಿರಲು ಪ್ರಯತ್ನಿಸುತ್ತಾರೆ.

ಇದನ್ನು ಓದಿ: ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...‍! 

ಸಿಂಹ ರಾಶಿ
ಈ ರಾಶಿಯವರು ತಮ್ಮ ಬಗ್ಗೆ ತಾವೇ ಹೆಮ್ಮೆ ಪಟ್ಟುಕೊಂಡು ಬೀಗುವ ಸ್ವಭಾವದವರು. ಎಲ್ಲರೆದುರು ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ಸಂಗಾತಿಗೆ ಪ್ರಾಧಾನ್ಯತೆ ನೀಡುವುದು ಇವರಿಗೆ ಇಷ್ಟವಿಲ್ಲದ ಕಾರಣ ವಿವಾಹದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಎಲ್ಲರ ಗಮನ ತಮ್ಮೆಡೆ ಮಾತ್ರ ಇರಬೇಕೆಂಬುದು ಈ ರಾಶಿಯವರ ಹಂಬಲವಾಗಿರುತ್ತದೆ.

click me!