Successful Zodiacs: ಈ ನಾಲ್ಕು ರಾಶಿಯವರು ಹುಟ್ಟಿರೋದೇ ಯಶಸ್ಸು ಕಾಣೋಕೆ!

By Suvarna News  |  First Published Jan 17, 2022, 3:45 PM IST

ಜೀವನದಲ್ಲಿ ಯಶಸ್ಸನ್ನು ಬಹುತೇಕರು ಹುಡುಕಿಕೊಂಡು ಹೋದರೆ, ಕೆಲವರನ್ನು ಯಶಸ್ಸೇ ಹುಡುಕಿಕೊಂಡು ಬರುತ್ತದೆ. ನೀವೂ ಅಂಥ ರಾಶಿಗೆ ಸೇರಿದ್ದೀರಾ?


ಸಂಪತ್ತು, ಯಶಸ್ಸು, ಸಮೃದ್ಧಿ ಇದೆಲ್ಲ ಎಲ್ಲರ ಕನಸುಗಳು. ಇದಕ್ಕಾಗಿ ಜೀವನಪೂರ್ತಿ ಸವೆಸುತ್ತೇವೆ. ಕಷ್ಟ ಪಟ್ಟರೆ ಫಲ ಇರಲಿದೆ ನಿಜ. ಅದರೆ, ಎಲ್ಲರಿಗೂ ದೊಡ್ಡ ಮಟ್ಟದ ಯಶಸ್ಸು ಸಿಗಲಾರದು. ಅದಕ್ಕೆ ಪರಿಶ್ರಮದ ಜೊತೆಗೆ ಅದೃಷ್ಟವೂ ಇರಬೇಕಾಗುತ್ತದೆ. ಕೆಲ ರಾಶಿಗಳ ಗುಣವೇ ಅಂಥದ್ದಿರುತ್ತದೆ. ಅವಕ್ಕೆ ಗ್ರಹಗತಿಗಳ ಅನುಗ್ರಹವೂ ಸರಿಯಾಗಿ ಸಿಕ್ಕರೆ ಜಾಕ್‌ಪಾಟ್ ಹೊಡೆದು ಬಿಡುತ್ತಾರೆ. ಹಾಗೆ ಯಶಸ್ಸಿನ ಉತ್ತುಂಗಕ್ಕೇರುವ ನಾಲ್ಕು ರಾಶಿಗಳು ಯಾವೆಲ್ಲ ನೋಡೋಣ.

ವೃಷಭ(Taurus)
ಈ ರಾಶಿಯ ಜನರು ಬಹಳ ಅದೃಷ್ಟವಂತರು(lucky). ಅದರ ಜೊತೆ ಇವರ ಹುಟ್ಟು ಸ್ವಭಾವದಲ್ಲೇ ಕಷ್ಟ ಪಡಲು ಸಿದ್ಧರಿದ್ದಾರೆ. ಈ ರಾಶಿಯ ಅಧಿಪತಿ ಶುಕ್ರ(Venus)ನಾಗಿದ್ದು, ಆತ ಬದುಕಿನಲ್ಲಿ ಲಕ್ಷುರಿ ಹಾಗೂ ಸಂಪತ್ತಿಗೆ ಕಾರಣನಾಗುವವನು. ತನ್ನದೇ ರಾಶಿಯಾದ್ದರಿಂದ ಶುಕ್ರನು ವೃಷಭ ರಾಶಿಯವರಿಗೆ ಸಂಪತ್ತು, ಲಕ್ಷುರಿ ಎಲ್ಲವನ್ನೂ ಕರುಣಿಸುತ್ತಾನೆ. ಅದರಲ್ಲೂ ಇವರು ಪರಿಶ್ರಮ ಹಾಕಿದರೆ ಅದಕ್ಕೆ ಹೆಚ್ಚಿನ ಫಲವೇ ಸಿಗಲಿದೆ. ಅದೂ ಕೂಡಾ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಯಶಸ್ಸು(success) ಸಿಗಲಿದೆ. ಅದೂ ಅಲ್ಲದೆ, ಕೇವಲ ಹಣ, ವಸ್ತು ಗಳಿಕೆ ಇವರಿಗೆ ಸಂತೋಷ ತಂದುಕೊಡುವುದಿಲ್ಲ. ಇವರ ಯಶಸ್ಸಿನ ವಿವರಣೆ ಜನ ಸಂಪಾದನೆ. ಇವರ ಸ್ನೇಹ ಗುಣವು ಹೆಚ್ಚು ಒಳ್ಳೆಯ ಸ್ನೇಹಿತರನ್ನು ಕೂಡಾ ಮಾಡಿ ಕೊಡುತ್ತದೆ.

Tap to resize

Latest Videos

undefined

ಕಟಕ(Cancer)
ಈ ರಾಶಿಯವರು ಕೂಡಾ ಸಂಪತ್ತನ್ನು ಗಳಿಸುವಲ್ಲಿ ಅದೃಷ್ಟವಂತರು. ಈ ರಾಶಿಯ ಅಧಿಪತಿ ಚಂದ್ರನಾಗಿದ್ದು, ಆತನ ಅನುಗ್ರಹದಿಂದ ಈ ರಾಶಿಯ ಜನರು ಯಾವ ಕೆಲಸವನ್ನೇ ಮಾಡ ಹೊರಟರೂ ತಮ್ಮ ಪೂರ್ತಿ ಮನಸ್ಸು ಹಾಗೂ ಪ್ರಯತ್ನದಿಂದ ಮಾಡುತ್ತಾರೆ. ಇವರಿಗೆ ತಮ್ಮ ಪ್ರಯತ್ನಕ್ಕೆ ಮೀರಿ ಅತ್ಯುತ್ತಮ ಫಲಿತಾಂಶ ಸಿಗುತ್ತದೆ. ಹಣ(money) ಸಿಗುವ ಯಾವುದೇ ಅವಕಾಶವನ್ನು ಈ ರಾಶಿಯವರು ಮಿಸ್ ಮಾಡಲಾರರು. ಅದೂ ಅಲ್ಲದೆ ಇವರು ತುಂಬಾ ಪ್ರಾಮಾಣಿಕರು. ಇದರಿಂದಾಗಿ ಕಚೇರಿಯಲ್ಲಿ ಬಾಸ್ ಮನಸ್ಸನ್ನು ಗೆದ್ದು ಬಿಡುತ್ತಾರೆ. ಇದೂ ಕೂಡಾ ಇವರ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ. 

Vastu Tips : ನಿಮಗೆ ಯಾವ ಬಣ್ಣದ ಚಪ್ಪಲಿ ಆಗಿ ಬರೋಲ್ಲ ತಿಳಿಯಿರಿ..

ಸಿಂಹ(Leo)
ಸಿಂಹ ರಾಶಿಯ ಅಧಿಪತಿ ಸೂರ್ಯ(Sun). ಈತ ಎಲ್ಲ ಗ್ರಹಗಳಿಗೂ ಅಧಿಪತಿಯೇ. ಈತನ ಅನುಗ್ರಹ ಇದ್ದರೆ ಉಳಿದ ಗ್ರಹಗಳು ಹೆಚ್ಚು ಕಾಟ ಕೊಡಲಾರವು. ಹಾಗಾಗಿ, ಸಿಂಹ ರಾಶಿಯ ಜನರು ತಾವು ಬಯಸಿದಷ್ಟು ಸಂಪತ್ತು, ಯಶಸ್ಸು ಹಾಗೂ ಹೆಸರನ್ನು ಗಳಿಸಬಲ್ಲರು. ಈ ರಾಶಿಯ ಜನರು ಹೆಚ್ಚು ಪ್ರತಿಭಾಶಾಲಿಗಳಾಗಿರುತ್ತಾರೆ. ಇವರಲ್ಲಿರುವ ನಾಯಕತ್ವ ಗುಣ(leadership quality)ವೂ ಸೇರಿ ಬದುಕಿನಲ್ಲಿ ಬಹಳಷ್ಟು ಸಾಧಿಸುತ್ತಾರೆ. ಇಷ್ಟೇ ಅಲ್ಲದೆ, ಇವರಿಗೆ ವೈಯಕ್ತಿಕ ಬದುಕು ಹಾಗೂ ವೃತ್ತಿ ಬದುಕಿನ ನಡುವೆ ಹೇಗೆ ಸಮನ್ವಯ ಸಾಧಿಸುವುದು ಎಂದು ಚೆನ್ನಾಗಿ ತಿಳಿದಿರುತ್ತದೆ. ಇದು ಕೂಡಾ ಇವರ ಯಶಸ್ಸಿನಲ್ಲಿ ಪಾಲು ಪಡೆಯುತ್ತದೆ.

Vastu tips: ಅಂದದ ಜೊತೆ ಅದೃಷ್ಟವನ್ನೂ ತರೋ ಈ ವಸ್ತುಗಳಿಂದ ಮನೆ ಅಲಂಕರಿಸಿ

ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರಿಗೆ ಜನ್ಮಜಾತಸ್ಯ ಕಷ್ಟ ಪಟ್ಟು ಕೆಲಸ ಮಾಡುವ ಗುಣವಿದೆ. ಜೊತೆಗೆ, ಮಹತ್ವಾಕಾಂಕ್ಷೆಯೂ ಹೆಚ್ಚು. ಈ ಕಾರಣಕ್ಕಾಗಿ ಅವರು ಕಷ್ಟ ಪಟ್ಟು ಮೇಲೆ ಬರಬಲ್ಲರು. ಅವರ ಕೆಲಸ, ಬದ್ಧತೆಯು ಅವರಿಗೆ ಯಶಸ್ಸಿನ ರುಚಿ ತೋರಿಸುತ್ತದೆ. ಈ ರಾಶಿಯವರಿಗೆ ವಸ್ತು ಸಂತೋಷದ ಬಗ್ಗೆ ಆಕರ್ಷಣೆ ಹೆಚ್ಚು. ಅದನ್ನು ಪಡೆಯುವ ಸಲುವಾಗಿ ಅವರು ಗುರಿ ಕೇಂದ್ರಿತವಾಗಿ ಕೆಲಸ ಮಾಡುತ್ತಾರೆ. ಬೇರೆ ಯಾವುದೇ ಮಾರ್ಗದಲ್ಲಿ ತಾವು ಕೂಡಲೇ ಶ್ರೀಮಂತರಾಗಬಹುದೆಂಬುದು ತಿಳಿದರೆ ಅಂಥ ಅವಕಾಶವನ್ನು ಸಂಪೂರ್ಣ ಬಳಸಿಕೊಳ್ಳುವ ಛಾತಿ ಇವರಲ್ಲಿದೆ. 

click me!