Vastu Tips : ನಿಮಗೆ ಯಾವ ಬಣ್ಣದ ಚಪ್ಪಲಿ ಆಗಿ ಬರೋಲ್ಲ ತಿಳಿಯಿರಿ..

By Suvarna News  |  First Published Jan 17, 2022, 1:20 PM IST

ನೂರು ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಪ್ಪಲಿ, ಶೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚೆಂದದ ಶೂ ಕಣ್ಣಿಗೆ ಬಿದ್ದಾಗ ಯೋಚನೆ ಮಾಡದೆ ಅದನ್ನು ಖರೀದಿ ಮಾಡಿರ್ತೇವೆ. ಆದ್ರೆ ನಾವು ಮನೆಗೆ ತಂದ ಚಪ್ಪಲಿ ನಮ್ಮ ಯಶಸ್ಸಿನ ದಾರಿ ತಪ್ಪಿಸಿರುತ್ತದೆ ಎಂಬುದು ನಿಮಗೆ ಗೊತ್ತಾ? 
 


ಮನೆ (Home)ಯ ಹೊರಗಿಡುವ, ಪಾದ(Foot)ಗಳಿಗೆ ರಕ್ಷಣೆ ನೀಡುವ ಪಾದರಕ್ಷೆ (Footwear)ಗಳ ಬಗ್ಗೆ ಅನೇಕರು ಗಮನ ನೀಡುವುದಿಲ್ಲ. ಪಾದರಕ್ಷೆಗಳನ್ನು ಖರೀದಿಸುವಾಗ ಹಾಗೂ ಅದನ್ನು ಮನೆಯಲ್ಲಿಡುವಾಗ ನಾವು ವಾಸ್ತುಶಾಸ್ತ್ರದ ಬಗ್ಗೆ ಆಲೋಚನೆ ಮಾಡುವುದಿಲ್ಲ. ಜ್ಯೋತಿಷ್ಯಶಾಸ್ತ್ರ (Astrology)ದ ಪ್ರಕಾರ, ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೆ ಗ್ರಹಗಳು ಕಾರಣವಾಗಿವೆ.

ಜ್ಯೋತಿಷಿಗಳ ಪ್ರಕಾರ, ನಾವು ಮಾಡುವ ತಪ್ಪು ಫ್ಯಾಷನ್ ನಮ್ಮ ಅದೃಷ್ಟ ಕೈತಪ್ಪಿ ಹೋಗಲು ಕಾರಣವಾಗುತ್ತದೆ. ಬಣ್ಣ ಬಣ್ಣದ ಶೂ, ಪಾದರಕ್ಷೆ ಧರಿಸುವುದು ಇಂದಿನ ಟ್ರೆಂಡ್. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಬಣ್ಣದ ಪಾದರಕ್ಷೆ ನಮಗೆ ಒಳ್ಳೆಯದಲ್ಲ. ಯಾವ ಬಣ್ಣದ ಶೂ ಮತ್ತು ಚಪ್ಪಲಿಯನ್ನು ಧರಿಸಬಾರದು ಎಂಬುದನ್ನು ನಾವು ತಿಳಿದಿರಬೇಕು. ಇಂದು ಪಾದರಕ್ಷೆ ಹಾಗೂ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಹೇಳ್ತೆವೆ.

ಪಾದರಕ್ಷೆ ಜೊತೆ ಗ್ರಹದ ಸಂಬಂಧ : ಜ್ಯೋತಿಷ್ಯದ ಪ್ರಕಾರ, ಶೂಗಳ ಬಣ್ಣವು ಗ್ರಹಗಳಿಗೆ ಸಂಬಂಧಿಸಿದೆ. ಶನಿಯು ದೇಹದ ಕೆಳಭಾಗಕ್ಕೆ, ವಿಶೇಷವಾಗಿ ಪಾದಗಳ ಜೊತೆ ಸಂಬಂಧ ಹೊಂದಿದ್ದಾನೆ. ಶೂ ಮತ್ತು ಚಪ್ಪಲಿಯೊಂದಿಗೆ ಶನಿ ಮತ್ತು ರಾಹುವಿಗೆ ಸಂಬಂಧವಿದೆ. ಶನಿ ಮತ್ತು ರಾಹು ಉತ್ತಮ ಸ್ಥಾನದಲ್ಲಿದ್ದವರು, ಪಾದರಕ್ಷೆ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. 

Tap to resize

Latest Videos

undefined

ಬಣ್ಣದ ಪಾದರಕ್ಷೆ : ಪಾದಗಳಿಗೆ ಕಪ್ಪು, ಕಂದು ಮತ್ತು ನೀಲಿ ಶೂ ಅಥವಾ ಪಾದರಕ್ಷೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳ ಅಶುಭವಾಗಿದ್ದರೆ ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸಬಾರದು.  

ಜಾತಕದಲ್ಲಿ ಚಂದ್ರ ಗ್ರಹ ಅಶುಭ ಸ್ಥಾನದಲ್ಲಿರುವಾಗ ಬಿಳಿ ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಳದಿ ಬಣ್ಣ ಗುರು ಗ್ರಹದ ಬಣ್ಣವಾಗಿದೆ. ಆದ್ದರಿಂದ, ಹಳದಿ ಬಣ್ಣದ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಬಾರದು.ಹಳದಿ ಬಣ್ಣವನ್ನು ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಳದಿ ಬಣ್ಣದ ಬೂಟುಗಳು ಮತ್ತು ಚಿನ್ನದ ಕಾಲುಂಗುರಗಳನ್ನು ಧರಿಸುವುದರಿಂದ ಜೀವನದಲ್ಲಿ ದುರಾದೃಷ್ಟ, ಬಡತನ ಮತ್ತು ಅನೇಕ ರೀತಿಯ ಅಡೆತಡೆ ಎದುರಿಸಬೇಕಾಗುತ್ತದೆ.

  • ಬ್ಯಾಂಕ್ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದರೆ ನೀವು ಬ್ರೌನ್ ಬಣ್ಣದ ಚಪ್ಪಲಿಯನ್ನು ಧರಿಸಬೇಡಿ. ಯಾಕೆಂದ್ರೆ ಇದು ನಿಮ್ಮ ಆರ್ಥಿಕ ಸ್ಥಿತಿ ಹದಗೆಡಲು ಕಾರಣವಾಗುತ್ತದೆ. 
  • ಮೆಡಿಕಲ್ ಕ್ಷೇತ್ರ, ಕಬ್ಬಿಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಿಳಿ ಬಣ್ಣದ ಶೂ ಧರಿಸಬಾರದು. ಇದು ಅವರ ವೃತ್ತಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ನೀರಿಗೆ ಸಂಬಂಧಿಸಿದ ಕೆಲಸ ಅಥವಾ ಆಯುರ್ವೇದ ಕ್ಷೇತ್ರದಲ್ಲಿರುವವರು ಎಂದೂ ನೀಲಿ ಬಣ್ಣದ ಚಪ್ಪಲಿ ಧರಿಸಬಾರದು. ಅಲ್ಲದೆ ಬಟ್ಟೆಯಿಂದ ಮಾಡಿದ ಚಪ್ಪಲಿಯನ್ನು ಧರಿಸಬಾರದು. 
  • ಊಟ ಮಾಡುವಾಗ ಚಪ್ಪಲಿ ಧರಿಸಬಾರದು. ಆದ್ರೆ ಇತ್ತೀಚಿನ ದಿನಗಳಲ್ಲಿ ಮನೆಯೊಳಗೂ ಜನರು ಶೂ,ಚಪ್ಪಲಿ ಧರಿಸುತ್ತಾರೆ. ಊಟ ಮಾಡುವಾಗ್ಲೂ ಚಪ್ಪಲಿ ಧರಿಸುತ್ತಾರೆ. ಚಪ್ಪಲಿ ಧರಿಸಿ ಊಟ ಮಾಡುವುದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಚಪ್ಪಲಿ ಧರಿಸಿ ಊಟ ಮಾಡುವುದನ್ನು ನಿಲ್ಲಿಸಿ.

    Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!
     
  • ಅಡುಗೆ ಮನೆಯಲ್ಲಿಯೂ ಚಪ್ಪಲಿ ಧರಿಸಬಾರದು. ಆಹಾರ ಪದಾರ್ಥಗಳನ್ನು ಇಡುವ ಜಾಗದಲ್ಲಿ ಪಾದರಕ್ಷೆ, ಚಪ್ಪಲಿ ಧರಿಸಿದ್ರೆ ಆ ಸ್ಥಳಕ್ಕೆ ಅವಮಾನ ಮಾಡಿದಂತೆ. 
  • ಕದ್ದ ಅಥವಾ ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ಅಪ್ಪಿತಪ್ಪಿಯೂ ಧರಿಸಬಾರದು. ಈ ಪಾದರಕ್ಷೆಗಳು ನಿಮ್ಮ ದುರದೃಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಉದ್ಯೋಗ, ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ.

          Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

  • ಚಪ್ಪಲಿ ಬಣ್ಣ ಮಾತ್ರವಲ್ಲ ಚಪ್ಪಲಿ ಖರೀದಿ ದಿನದ ಬಗ್ಗೆಯೂ ಗಮನ ನೀಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮಾವಾಸ್ಯೆ, ಮಂಗಳವಾರ, ಶನಿವಾರ ಮತ್ತು ಗ್ರಹಣ ಕಾಲದಲ್ಲಿ  ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬಾರದು. 
click me!