ಈ ರಾಶಿಯವರು ಸ್ನೇಹಿತರಿಗೆ ಸಾಲ ಕೊಡುವುದಲ್ಲಿ ಎತ್ತಿದ ಕೈ; ನಿಮ್ಮ ರಾಶಿ ಇದ್ಯಾ?

By Suvarna News  |  First Published Mar 15, 2021, 1:58 PM IST

ಜಗತ್ತು ನಡೆಯುತ್ತಿರುವುದೇ ಸಾಲದಲ್ಲಾಗಿದೆ. ಹಾಗಾಗಿ ಯಾರಿಗೆ ತಾನೇ ಸಾಲ ಬೇಡ ಹೇಳಿ, ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿಯೂ ಸಾಲ ಹುಟ್ಟುವುದು ಕಷ್ಟ. ಸ್ನೇಹಿತರ ಬಳಿ ಕೇಳಿದರೂ ಇಲ್ಲ ಎಂಬ ಉತ್ತರ ಬರುತ್ತದೆ. ಆದರೆ, ಈ ನಾಲ್ಕು ರಾಶಿಯವರು ನಿಮ್ಮ ಸ್ನೇಹಿತರಾಗಿದ್ದರೆ ನಿಮಗೆ ಬಹುಬೇಗ ಸಾಲ ಹುಟ್ಟುತ್ತದೆ. ಇವರ ಬಳಿ ಕೇಳಿದ ತಕ್ಷಣ ಹಿಂದೆ ಮುಂದೆ ಯೋಚಿಸದೆ ಸಾಲ ಕೊಟ್ಟುಬಿಡುತ್ತಾರೆ. ಹಾಗಾದರೆ ಈ ನಾಲ್ಕು ರಾಶಿ ಯಾವುದು..? ನಿಮ್ಮ ರಾಶಿ, ನಿಮ್ಮ ಸ್ನೇಹಿತರ ರಾಶಿ ಇದರಲ್ಲಿ ಇದೆಯೆ..? ಎಂಬುದನ್ನು ನೋಡಿ…
 


ಸ್ನೇಹ ಎಂದರೆ ಹಾಗೆ ತಮ್ಮ ಜೊತೆಗಿದ್ದವರು ಏನೇ ಕೇಳಿದರೂ ಇಲ್ಲ ಎನ್ನದೇ ಕೊಟ್ಟು ಬಿಡುವರು. ಯಾವುದೇ ಸಹಾಯವನ್ನು ಬೇಕಿದ್ದರೂ ಮಾಡಿಬಿಡುವರು. ಅವರಿಗೆ ವೈಯುಕ್ತಿಕ ಹಿತಕ್ಕಿಂತಲೂ ಸ್ನೇಹ ದೊಡ್ಡದಾಗಿರುತ್ತದೆ. ಇದಕ್ಕೆ ಹಣವೂ ಹೊರತಲ್ಲ. ತಮ್ಮ ಸ್ನೇಹಿತ / ಸ್ನೇಹಿತ ಸ್ವಲ್ಪ ಕಷ್ಟದಲ್ಲಿದ್ದಾರೆಂದರೂ, ಹಣದ ಅವಶ್ಯಕತೆ ಇದೆ ಎಂದು ಗೊತ್ತಾದರೂ, ಇಲ್ಲವೇ ಕೇಳಿದರೂ ಹಿಂದೆ ಮುಂದೆ ಯೋಚಿಸದೆ ಸಾಲವನ್ನು ಕೊಟ್ಟುಬಿಡುವವರೂ ಇದ್ದಾರೆ.

ಹಾಗಂತ ಎಲ್ಲರೂ ಹೀಗೆ ಹಿಂದೆ-ಮುಂದೆ ಯೋಚಿಸದೆ ಹಣ ಕೊಟ್ಟು ಬಿಡುತ್ತಾರೆಂದೆಲ್ಲ, ಕೆಲವರು ಸ್ವಲ್ಪ ಯೋಚಿಸಿ ಕೊಡುತ್ತಾರೆ. ಮತ್ತೆ ಕೆಲವರು ಕೊಡುವುದೇ ಇಲ್ಲ, ಇನ್ನು ಕೆಲವರು ಅರ್ಧ ಮನಸ್ಸಿನಲ್ಲಿ ತೊಯ್ದಾಡುತ್ತಿರುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ಅದ್ಯಾವುದನ್ನೂ ಯೋಚಿಸದೆ ಎಷ್ಟು ಬಾರಿ ಕೇಳಿದರೂ ಸಾಲವನ್ನು ಕೊಟ್ಟುಬಿಡುತ್ತಾರೆ. ಇದು ರಾಶಿಗಳಿಗನುಸಾರವಾಗಿ ಬಂದಂತಹ ಗುಣವೂ ಆಗಿರುತ್ತದೆ. ಪ್ರಮುಖವಾಗಿ ನಾಲ್ಕು ರಾಶಿಯವರಂತೂ ಸ್ನೇಹಿತರಿಗೆ ಸಾಲ ಕೊಡುವುದಕ್ಕೆ ಎತ್ತಿದ ಕೈ. 

Tap to resize

Latest Videos



ಇದನ್ನು ಓದಿ: ಈ 5 ರಾಶಿಯವರಿಗೆ ಅಡುಗೆ ಮಾಡೋದಂದ್ರೆ ತುಂಬಾ ಇಷ್ಟವಂತೆ ...! 

ಹಾಗಾದರೆ ಈ ನಾಲ್ಕು ರಾಶಿಯವರು ಯಾರು..? ಅವರ ಗುಣಗಳು ಎಂಥವು..? ಇಂಥ ಸ್ನೇಹಿತರನ್ನು ನೀವು ಪಡೆದಿದ್ದರೆ ಸಾಲ ಸುಲಭವಾಗಿ ಸಿಗುತ್ತದೆ ಹಾಗೂ ಸಿಗುತ್ತಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ…

ಸಿಂಹ ರಾಶಿ
ಸಿಂಹ ರಾಶಿ ಹೊಂದಿರುವವರು ಬಹಳ ಉದಾರಿಗಳು ಎಂಬ ಬಿರುದಾಂಕಿತವೇ ಇದೆ. ಇವರಷ್ಟು ದಾರಾಳಿ ರಾಶಿಯವರು ಮತ್ತೊಬ್ಬರಿಲ್ಲವಂತೆ. ಹಾಗಾಗಿ ಕೇಳಬೇಕೆ? ಈ ರಾಶಿಯವರ ಸ್ನೇಹಿತರು ಬಹಳ ಅದೃಷ್ಟ ಮಾಡಿದ್ದಾರೆ. ಸಿಂಹ ರಾಶಿಯವರು ಸ್ನೇಹದ ವಿಚಾರದಲ್ಲಿ ಬಹಳ ನಿಷ್ಠಾವಂತರಾಗಿದ್ದಾರೆ. ಅಲ್ಲದೆ, ಸ್ನೇಹಕ್ಕೆ ತುಂಬ ಬೆಲೆ ಕೊಡುವುದಲ್ಲದೆ, ಮೌಲ್ಯಗಳನ್ನು ಇಟ್ಟುಕೊಂಡವರಾಗಿರುತ್ತಾರೆ. ಜೊತೆಗೆ ಸ್ನೇಹಿತರನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಯೇ ನೋಡುವ ಇವರು, ಅವರ ಯಾವುದೇ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಸಿದ್ಧರಾಗಿರುತ್ತಾರೆ. ನಿಮಗೆ ಯಾವುದೇ ಸಂದರ್ಭದಲ್ಲಿ ದುಡ್ಡು ಬೇಕೆಂದಿದ್ದರೆ, ಸಿಂಹ ರಾಶಿಯ ಸ್ನೇಹಿತರು ನಿಮ್ಮ ಬಳಿ ಇದ್ದರೆ ಯಾವುದೇ ಮರು ಯೋಚನೆ ಮಾಡದೆ ಹೋಗಿ ಅವರನ್ನು ಕೇಳಿದರೆ ಸಾಲ ಸಿಗುವುದು ಗ್ಯಾರಂಟಿ.

ಇದನ್ನು ಓದಿ: ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!...

ಧನು ರಾಶಿ
ಧನು ರಾಶಿಯವರೂ ಸಹ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಒಂದು ರೀತಿಯಲ್ಲಿ ಹೇಳುವುದಾದರೆ ವಿಪರೀತವಾಗಿ ಸಹಾಯಭಾವವನ್ನು ಇವರು ಹೊಂದಿರುತ್ತಾರೆ. ಕಾಳಜಿ ವ್ಯಕ್ತಿತ್ವವನ್ನು ಹೊಂದಿರುವ ಧನು ರಾಶಿಯವರು ಬಹಳಷ್ಟು ದಯಾಳುಗಳಾಗಿರುತ್ತಾರೆ. ಇತರರನ್ನು ತೊಂದರೆಯಿಂದ ಹೊರಗೆ ತರಬೇಕೆಂದು ಇವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಇವರು ಸಿದ್ಧರಿರುತ್ತಾರೆ. ಅಂದರೆ, ತಮ್ಮ ಬಳಿ ಆ ಸಹಾಯ ಮಾಡಲು ಆಗದಿದ್ದರೂ ಸಹ ತಮ್ಮ ವ್ಯಾಪ್ತಿಯನ್ನು ಮೀರಿ ಸಹಾಯ ಮಾಡುತ್ತಾರೆ. ತಮ್ಮ ಸುತ್ತಲಿನ ಜನರು ಸಂತೋಷದಿಂದ ಇರುವುದನ್ನು ನೋಡಲು ಇಷ್ಟಪಡುವ ಇವರು, ಜೀವನದ ಮೇಲೆ ತುಂಬಾ ಆಸಕ್ತಿಯನ್ನಿಟ್ಟುಕೊಂಡಿರುತ್ತಾರೆ. ಯಾರಾದರೂ ಜೀವನದಲ್ಲಿ ಏನನ್ನಾದರೂ ಸಾಧಿಸಲು ಹೋಗಿ ಸೋತು ಸುಣ್ಣವಾಗಿದ್ದರೆ, ಅಂಥವರನ್ನು ಕಂಡು ತೀವ್ರವಾಗಿ ಮರುಗುವ ಧನು ರಾಶಿಯವರು ಯಾವುದೇ ಸಹಾಯಕ್ಕೂ ಮುಂದಾಗುತ್ತಾರೆ. 

ತುಲಾ ರಾಶಿ
ಜಗತ್ತಿನಲ್ಲಿ ಉತ್ತಮ ಸ್ವಭಾವದ ಜನರಿದ್ದರೆ ಅದು ತುಲಾ ರಾಶಿಯವರು ಎಂದೇ ಹೇಳಬಹುದು. ಹಾಗಂತ ಉಳಿದ ರಾಶಿಯವರಲ್ಲಿ ಸ್ವಭಾವದವರು ಇಲ್ಲವೆಂದೆಲ್ಲ, ಈ ರಾಶಿಯವರಿಗೆ ಈ ಗುಣ ತುಸು ಹೆಚ್ಚೇ ಎಂದು ಹೇಳಬಹುದು. ಎಲ್ಲವೂ ಸರಿಸಮನಾಗಿ ಹಾಗೂ ಸುಂದರವಾಗಿರಬೇಕೆಂದು ತುಲಾ ರಾಶಿಯವರು ಇಷ್ಟಪಡುತ್ತಾರೆ. ಸ್ನೇಹಿತರೇನಾದರೂ ಸರಿಯಾಗಿ ನಡೆದುಕೊಳ್ಳದಿದ್ದರೆ ಇವರಿಗೆ ತೀವ್ರ ಬೇಸರವಾಗುತ್ತದೆ. ಅದೇ ರೀತಿ ಸ್ನೇಹಿತರ ಸಂಕಷ್ಟಕ್ಕೆ ಮುಂದಾಗಿ ಓಡಿಬರುವ ಇವರು, ಹಣದ ಸಹಾಯ ಸೇರಿದಂತೆ ಭಾವನಾತ್ಮಕವಾಗಿಯೂ ಬೆಂಬಲ ನೀಡುವವರಾಗಿದ್ದಾರೆ. ಕೆಲವೊಮ್ಮೆ ಸ್ನೇಹಿತರಂತೆ ಅಪರಿಚಿತರಿಗೂ ಸಹಾಯವನ್ನು ಮಾಡುವ ಮನೋಭಾವ ವುಳ್ಳವರು ಇವರಾಗಿದ್ದಾರೆ. 

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..!

ಕರ್ಕಾಟಕ ರಾಶಿ
ಈ ರಾಶಿಯವರು ಅತಿಯಾದ ಪರಾನುಭೂತಿ ಶಕ್ತಿಯುಳ್ಳವರಾಗಿದ್ದಾರೆ. ಜನರ ಭಾವನೆಗೆ ಹೆಚ್ಚಾಗಿ ಸ್ಪಂದಿಸುವ ಇವರು ಮನಸ್ಸಿಗೆ ಹತ್ತಿರವಾಗುತ್ತಾರೆ. ಹೀಗಾಗಿ ಸ್ನೇಹಿತರು ಕಷ್ಟ ಎಂದು ಬಂದರೆ ಸಹಾಯ ಮಾಡದೇ ಇರಲಾರರು. ಕೆಲವೊಮ್ಮೆ ಭಾವನಾತ್ಮಕವಾಗಿ ಯೋಚಿಸುವ ಇವರು, ಸಹಾಯ ಕೇಳುವವರಿಗೆ ನಿಜವಾಗಿಯೂ ಅವಶ್ಯಕತೆ ಇದೆಯೇ ಎಂಬುದನ್ನೂ ಗಮನಿಸದೆ ಹಣ ಕೊಟ್ಟು ಬಿಡುತ್ತಾರೆ. 

click me!