Zodiac Traits: ರಾಶಿ ಅನುಸಾರ, ನಿಮ್ಮನ್ನು ಜನ ದ್ವೇಷಿಸೋದು ಈ ಒಂದು ಕಾರಣಕ್ಕೆ!

By Suvarna NewsFirst Published Jan 31, 2022, 4:31 PM IST
Highlights

ಪ್ರತಿಯೊಬ್ಬರಿಗೂ ತಮ್ಮನ್ನು ಎಲ್ಲರೂ ಪ್ರೀತಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಅದು ಅಸಾಧ್ಯ. ಹೇಗಿದ್ದರೂ ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗೋಲ್ಲ. ಜನ ನಿಮ್ಮನ್ನು ಏಕೆ ದ್ವೇಷಿಸ್ತಾರೆ ಅನ್ನೋದನ್ನ ರಾಶಿ ಆಧಾರದ ಮೇಲೆ ತಿಳಿಸುವ ಪ್ರಯತ್ನ ಇಲ್ಲಿದೆ. 

ಜನ ಹೇಗಿದ್ರೂ ದ್ವೇಷಿಸ್ತಾರೆ. ಪ್ರತಿಯೊಬ್ಬರಿಗೂ ಇಷ್ಟ ಪಡುವವರು ಎಷ್ಟೇ ಜನರದ್ದರೂ ದ್ವೇಷಿಸುವವರೂ ಇರುತ್ತಾರೆ. ಕೆಲವೊಮ್ಮೆ ಅವರು ತಮ್ಮನ್ನೇಕೆ ದ್ವೇಷಿಸುತ್ತಾರೆ ಎಂಬುದೇ ಅರಿವಿಗೆ ಬರದೆ ಹೋಗುತ್ತದೆ. ರಾಶಿಯ ಅನುಸಾರ, ಜನ ನಿಮ್ಮನ್ನು ಯಾವ ಕಾರಣಕ್ಕಾಗಿ ದ್ವೇಷಿಸುತ್ತಾರೆ ಎಂದು ನೋಡೋಣ.

ಮೇಷ(Aries): ಈ ರಾಶಿಯವರು ಸಖತ್ ಬೋಲ್ಡ್. ಹೊಸತನ್ನು ಪ್ರಯತ್ನಿಸುತ್ತಾರೆ, ಸುತ್ತಾಡುತ್ತಾರೆ, ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತಾರೆ. ಹಾಗಾಗಿ ಈ ರಾಶಿಯವರನ್ನು ಕಂಡರೆ ದ್ವೇಷಿಸುವವರಲ್ಲಿ ಹೊಟ್ಟೆಕಿಚ್ಚೇ(envy) ಹೆಚ್ಚಾಗಿರುತ್ತದೆ. ಸೋಷ್ಯಲ್ ಮೀಡಿಯಾಗಳಲ್ಲಿ ಇವರನ್ನು ಸ್ಟ್ಯಾಕ್ ಮಾಡಿ ಹೊಟ್ಟೆ ಉರಿಸಿಕೊಳ್ಳುತ್ತಿರುತ್ತಾರೆ. ನಿಮ್ಮಂತೆ ಇರಲಾಗದ ಕಾರಣಕ್ಕೆ ನೀವೇ ಸರಿಯಿಲ್ಲ ಎಂದು ತಮ್ಮನ್ನು ಸಮಾಧಾನ ಪಡಿಸಿಕೊಳ್ಳುತ್ತಾರೆ. ನಿಮ್ಮನ್ನು ಹೇಟ್ ಮಾಡಲು ಪ್ರಮುಖ ಕಾರಣ ನಿಮ್ಮಂತೆ ಬೋಲ್ಡಾಗಿ ಅವರಿಂದ ಇರಲಾಗದಿರುವುದು. 

Latest Videos

ವೃಷಭ(Taurus): ನೀವು ವಿವರಕ್ಕೆ ಕೊಡುವ ಗಮನವನ್ನು ನಿಮ್ಮನ್ನು ದ್ವೇಷಿಸುವವರು ದೂಷಿಸುತ್ತಾರೆ. ನಿಮ್ಮನ್ನು ನೋವು ತೋರಿಸಿಕೊಳ್ಳುವ ರೀತಿ, ಬಟ್ಟೆಬರೆ, ಮನೆಯ ವಸ್ತುಗಳು ಎಲ್ಲದರಲ್ಲೂ ನಿಮ್ಮ ಆಯ್ಕೆ ಕ್ಲಾಸ್ ಆಗಿರುತ್ತದೆ. ನೀವು ಚೆಂದ ರೆಡಿಯಾಗುವ ಜೊತೆಗೆ, ಕೇರ್ಲೆಸ್ ಆ್ಯಟಿಟ್ಯೂಡ್ ಪ್ರದರ್ಶಿಸುತ್ತೀರಲ್ಲ.. ಅದನ್ನು ಜೀರ್ಣಿಸಿಕೊಳ್ಳಲಾಗದೆ ಕೆಲವರು ನಿಮ್ಮನ್ನು ದ್ವೇಷಿಸುತ್ತಾರೆ. 

ಮಿಥುನ(Gemini): ಹೊರಗಿನಿಂದ ಹ್ಯಾಪಿ ಗೋ ಲಕ್ಕಿಯಂತೆ ಕಂಡರೂ ಒಳಗೊಳಗೇ ಭಯ, ಆತಂಕವನ್ನು ಹದ್ದುಬಸ್ತಿನಲ್ಲಿಡುವವರು ಇವರು. ತಮ್ಮೆಲ್ಲ ನೆಗೆಟಿವ್ ಸೈಡ್ ಬಚ್ಚಿಟ್ಟು ಬಬ್ಲಿಯಾಗಿರಲು ಬಯಸುವ ಇವರನ್ನು ಇತರರು ಫೇಕ್ ಎಂದುಕೊಳ್ಳುವುದುಂಟು. ನೀವು ತುಂಬಾ ಸಂತೋಷದಿಂದ ಇದ್ದೀರಾ ಎಂದು ತೋರಿಸಿಕೊಳ್ಳುತ್ತೀರ. ಆದರೆ, ಒಳಗಿನ ವಿಷಯ ಹಾಗಿಲ್ಲ, ನೀವು ನಟಿಸುತ್ತೀರ ಎಂದು ಜನ ದ್ವೇಷಿಸಬಹುದು. 

ಕಟಕ(Cancer): ನಿಮ್ಮ ಆರನೇ ಇಂದ್ರಿಯ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಜನರ ಭಾವನೆಗಳು, ಮೂಡ್ ಅರಿಯುವುದರಲ್ಲಿ ಸಿದ್ಧಹಸ್ತರು. ಅದೇ ನಿಮ್ಮ ವಿಷಯದಲ್ಲಿ ಜನರನ್ನು ಬೆದರಿಸುತ್ತದೆ. ಜೊತೆಗೆ, ನೀವು ಅತಿಯಾಗಿ ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ವಿಷಯದಿಂದ ಕೆಲವರು ಅನ್‌ಕಂಫರ್ಟೇಬಲ್ ಆಗಿಬಿಡುತ್ತಾರೆ. ಅವರೊಳಗಿನ ಹುಳುಕೆಲ್ಲ ನಿಮಗೆ ತಿಳಿದು ಬಿಡಬಹುದು ಎಂಬ ಕಾರಣದಿಂದ- ಅತಿಯಾಗಿ ಮೂಗು ತೂರಿಸುವವರು ಎಂದು ದೂಷಿಸಿ ನಿಮ್ಮನ್ನು ಹೇಟ್ ಮಾಡಬಹುದು. 

ಸಿಂಹ(Leo): ನಿಮ್ಮ ತಲೆಯಲ್ಲಿ ಒಳ್ಳೊಳ್ಳೆ ಸೃಜನಾತ್ಮಕ ಯೋಚನೆಗಳು ಬರುತ್ತವೆ. ಹಾಗಾಗಿ, ಸುತ್ತಲಿರುವವರು ಆಗಾಗ ನಿಮ್ಮ ಬಳಿ ಸಹಾಯ ಅರಸಿ ಬರುವರು. ಜೊತೆಗೆ, ತಮಗಿಲ್ಲದ ಈ ಗುಣ ನಿಮಗಿರುವುದನ್ನು ಸಹಿಸಲಾಗದೆ ನಿಮ್ಮನ್ನು ದೂಷಿಸಬಹುದು. ಸದಾ ಯಶಸ್ಸಿನ ಹಾದಿಯಲ್ಲಿರುವ ಇವರನ್ನು ಕಂಡರೆ ಸೋಲು, ನಕಾರಾತ್ಮಕ ಯೋಚನೆಗಳಲ್ಲಿ ಜೀವನ ನಡೆಸುವವರಿಗೆ ತಮ್ಮ ಮೇಲೆ ಕೀಳರಿಮೆ ಮೂಡುವುದು. ಅದನ್ನವರು ಗುರುತಿಸದೆ ವೃಥಾ ನಿಮ್ಮನ್ನು ದ್ವೇಷಿಸಬಹುದು. 

ಕನ್ಯಾ(Virgo): ಈ ರಾಶಿಯವರಿಗೆ ತಮ್ಮ ಬೇಕು ಬೇಡಗಳ ಬಗ್ಗೆ, ತಮ್ಮೆಲ್ಲ ಪ್ಲಸ್ಸು, ಮೈನಸ್ಸುಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ, ತಮ್ಮ ಜೀವನದಿಂದ ದೂರ ಓಡುತ್ತಿರುವವರಿಗೆ, ಬದುಕಿನಲ್ಲಿ ಏನು ಬೇಕೆಂದು ಗೊತ್ತಿಲ್ಲದೆ ಗೊಂದಲದಲ್ಲಿ ದಿನ ಕಳೆಯುವವರಿಗೆ ಕನ್ಯಾ ರಾಶಿಯವರನ್ನು ನೋಡಿದರೆ ಆಗದು. ಒಳಗೊಳಗೇ ನಿಮ್ಮ ಬಗ್ಗೆ ಗೌರವವಿದ್ದರೂ, ತಮ್ಮ ಹುಳುಕನ್ನು ಮುಚ್ಚಲು ನಿಮ್ಮನ್ನು ದ್ವೇಷಿಸಬಹುದು. 

Mantra Benefits: ಹರೇ ಕೃಷ್ಣ ಮಂತ್ರದಲ್ಲಿದೆ ಸಂತೋಷದ ಕೀಲಿಕೈ

ತುಲಾ(Libra): ಬಹಳ ಆಕರ್ಷಕ ವ್ಯಕ್ತಿತ್ವ ಹೊಂದಿರುವ ಇವರ ಎಲ್ಲರೊಂದಿಗೂ ಬಹಳ ಸ್ನೇಹದಿಂದ ಇರುತ್ತಾರೆ. ಆದರೆ, ನಿಮ್ಮ ಸಮಸ್ಯೆ ಏನೆಂದರೆ ನೀವು ಗೆಳೆಯರೊಂದಿಗೆ ಎಲ್ಲೇ ಹೋದರೂ ಎಲ್ಲರ ಗಮನ ನಿಮ್ಮ ಮೇಲೆಯೇ ಇರುತ್ತದೆ. ಇದೇ ಜೊತೆಗಿರುವವರಿಗೆ ಇರಿಸು ಮುರಿಸು ತರುತ್ತದೆ. ಅದೇ ಕಾರಣಕ್ಕೆ ಅವರು ನಿಮ್ಮನ್ನು ದ್ವೇಷಿಸಬಹುದು. 

ವೃಶ್ಚಿಕ(Scorpio): ಎಲ್ಲದಕ್ಕೂ ಪರಿಶ್ರಮ ಹಾಕುವವರು. ಉದ್ಯೋಗದಲ್ಲಿ ಸದಾ ಹೊಗಳಿಸಿಕೊಳ್ಳುತ್ತಾ ಉತ್ತಮವಾಗಿ ಕಾರ್ಯ ನಿರ್ವಹಿಸುವವರು ನೀವು. ಇದೇ ಕಾರಣಕ್ಕೆ ಸಹೋದ್ಯೋಗಿಗಳು ನಿಮ್ಮನ್ನು ದ್ವೇಷಿಸಬಹುದು. ಜೊತೆಯಲ್ಲಿ ಇದ್ದವರಿಗಿಂತ ಬೇಗ ಬೇಗ ಯಶಸ್ಸಿನಲ್ಲಿ ಮೇಲೇರಿದರೆ ಅದನ್ನವರು ಸಹಿಸಲಾರರು. 

ಧನುಸ್ಸು(Sagittarius): ಆಶಾವಾದಿಗಳಾದ ನಿಮ್ಮ ಹಾಸ್ಯಪ್ರಜ್ಞೆ(sense of humor)ಯೂ ಚೆನ್ನಾಗಿರುತ್ತದೆ. ನೀವು ಜೊತೆಯಿದ್ದರೆ ಸುತ್ತಲಿದ್ದವರು ಸಂತೋಷವಾಗಿರುತ್ತಾರೆ. ಆದರೆ, ನಿಮ್ಮ ಹಾಸ್ಯ ಪ್ರಜ್ಞೆ ಇತರರಿಗಿಲ್ಲದೆ, ಕಾಲೆಳಿದಿದ್ದಕ್ಕೇ ನಿಮ್ಮನ್ನು ವಿಚಿತ್ರವೆಂದು ದ್ವೇಷಿಸುವ ಸಾಧ್ಯತೆ ಇದೆ. 

Vastu Tips: ಮಂಚದ ಕೆಳಗೆ ಜಾಗ ಇದೆ ಅಂತ ಕಂಡಿದ್ದೆಲ್ಲ ಇಟ್ಟು ಕೈ ಸುಟ್ಕೋಬೇಡಿ

ಮಕರ(Capricorn): ತಾಳ್ಮೆ, ಮಹತ್ವಾಕಾಂಕ್ಷೆ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವ ನಿಮ್ಮದು. ಬಹುತೇಕರು ಈ ಗುಣಗಳನ್ನು ಗಳಿಸಲು ಒದ್ದಾಡಬೇಕಾಗಿರುವಾಗ ನಿಮಗಿದೆಲ್ಲ ಹುಟ್ಟುತ್ತಲೇ ಒಲಿದು ಬಂದಿರುತ್ತದೆ. ನಿಮ್ಮನ್ನು ಮಾದರಿಯಾಗಿ ನೋಡುವ ಜನ, ತಾವು ತಪ್ಪು ನಿರ್ಧಾರ ತೆಗೆದುಕೊಂಡಾಗ, ಮೇಲೇರದಾಗ, ನಿಮ್ಮನ್ನು ಕುತಂತ್ರಿ ಎಂದು ಜರಿದು ದ್ವೇಷಿಸಲೂಬಹುದು.

ಕುಂಭ(Aquarius): ಮತ್ತೊಬ್ಬರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ನಯಾಪೈಸೆ ಬೆಲೆ ಕೊಡದ ನಿಮ್ಮ ಸಾಮರ್ಥ್ಯ ಸುಲಭವಾಗಿ ಎಲ್ಲರಿಗೂ ಲಭಿಸುವಂಥದ್ದಲ್ಲ. ನಿಮ್ಮ ಸ್ವಾತಂತ್ರ್ಯ ಪ್ರಿಯತೆಯು ಸುತ್ತಲಿರುವವರಿಗೆ ತಮ್ಮ ಅಸಹಾಯಕತೆಯನ್ನು ಎತ್ತಿ ತೋರಿಸಬಹುದು. ಇದರಿಂದಾಗಿ ಅವರು ತಮ್ಮನ್ನೇ ದ್ವೇಷಿಸಿಕೊಳ್ಳಲಾರದೆ, ನಿಮ್ಮ ವಿರುದ್ಧ ಹಲ್ಲು ಕಡಿಯಬಹುದು. 

February Calendar: ಮಾಘ ನವರಾತ್ರಿಯಿಂದ ವಸಂತ ಪಂಚಮಿವರೆಗೆ.. ಫೆಬ್ರವರಿ ವಿಶೇಷ ದಿನಗಳು

ಮೀನ(Pisces): ನೀವು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ರೀತಿ ಹಾಗೂ ಅತಿ ಸೂಕ್ಷ್ಮತೆಯನ್ನು ಜನ ಆಗಾಗ ಹೊಗಳುತ್ತಾರೆ. ಗಾಸಿಪ್‌ಗೆ ಯಾವುದೇ ವಿಷಯ ಬಿಟ್ಟು ಕೊಡದೆ ನೀವು ಬದುಕುವ ರೀತಿ ಕೆಲವೊಮ್ಮೆ ಸುತ್ತಲಿನವರನ್ನು ಕಂಗಾಲಾಗಿಸಬಹುದು. ಆಗ ಅವರು ನಿಮ್ಮ ಸೂಕ್ಷ್ಮ ಸ್ವಭಾವವನ್ನೇ ದ್ವೇಷಿಸತೊಡಗಬಹುದು. 
 

click me!