Mantra Benefits: ಹರೇ ಕೃಷ್ಣ ಮಂತ್ರದಲ್ಲಿದೆ ಸಂತೋಷದ ಕೀಲಿಕೈ

By Suvarna News  |  First Published Jan 31, 2022, 2:56 PM IST

ಹರೇ ಕೃಷ್ಣ ಮಂತ್ರ ಹೇಳುವುದರಿಂದ ಏಕಾಗ್ರತೆ, ಸಂತೋಷ, ಮೋಕ್ಷ ಸೇರಿದಂತೆ ಹಲವಷ್ಟು ಲಾಭಗಳನ್ನು ಪಡೆಯಬಹುದು. 


ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..

ಸಾಮಾನ್ಯವೆಂಬಂತೆ ಕೇಳಿಸುವ ಈ ಮಂತ್ರವನ್ನು ಕಾಯಾ ವಾಚಾ ಮನಸಾ ಹೇಳಿಕೊಂಡರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ? ಇವು ಆಧ್ಯಾತ್ಮಿಕವಾಗಿ ತಂದುಕೊಡುವ ಲಾಭಗಳನ್ನಲ್ಲಿ ಪಟ್ಟಿ ಮಾಡಲಾಗಿದೆ.

Latest Videos

ಮನಸ್ಸಿನ ನಿಯಂತ್ರಣ(Control of mind)
ನಾವೆಲ್ಲರೂ ನಮ್ಮ ಆಸೆ(desires), ಹಸಿವು, ಬೇಡದ ಯೋಚನೆಗಳ ಗುಲಾಮರಾಗಿ ಬಿಟ್ಟಿದ್ದೇವೆ. ನಮ್ಮ ಮನಸ್ಸಿನ ನಿಯಂತ್ರಣ ನಮ್ಮ ಕೈಲೇ ಇಲ್ಲ. ಆದರೆ, ಮನಸ್ಸು ಮರ್ಕಟನಾದರೆ ಬದುಕು ಸುಖವಾಗಿರಲು ಸಾಧ್ಯವಿಲ್ಲ. ಭಗವದ್ಗೀತೆ(Bhagavad Gita)ಯಲ್ಲಿ ಕೃಷ್ಣ ಹೇಳುವಂತೆ, 'ಮೊದಲು ಮನಸ್ಸಿನ ನಿಯಂತ್ರಣವನ್ನು ಸಾಧಿಸಬೇಕು. ಹಾಗೆ ನಿಯಂತ್ರಣ ಸಾಧಿಸಿದವರ ಮನಸ್ಸೇ ಸ್ವಂತಕ್ಕೆ ಉತ್ತಮ ಗೆಳೆಯನಾಗಿ ಬಿಡುತ್ತದೆ. ನಿಯಂತ್ರಣವಿಲ್ಲದ ಮನಸ್ಸು ಆ ವ್ಯಕ್ತಿಯ ಶತ್ರುವಾಗಿ ಬಿಡುತ್ತದೆ.' ಈ ಮಂತ್ರವನ್ನು ಹೇಳಿಕೊಳ್ಳುವುದರಿಂದ ಮನಸ್ಸಿನ ಮೇಲೆ ವ್ಯಕ್ತಿಗೆ ನಿಯಂತ್ರಣ ಸಿಗುತ್ತದೆ. ಮನಸ್ಸಿನ ಶಾಂತಿಯೂ ಲಭಿಸುತ್ತದೆ. 

ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು(Understanding the self)
ನಾವು ಈ ಜಗತ್ತಿನ ಜಂಜಾಟದಲ್ಲಿ ಕಳೆದು ಹೋಗಿ ಸ್ವಂತಿಕೆಯನ್ನೇ ಮರೆತು ಬಿಡುತ್ತೇವೆ. ನಾವೇನು, ನಮ್ಮ ನಿಜವಾದ ವ್ಯಕ್ತಿತ್ವವೇನು, ನಿಜಕ್ಕೂ ನಾವು ಸಾಧಿಸಬೇಕಾದುದು ಏನು ಇತ್ಯಾದಿಗಳ ಬಗ್ಗೆ ಯೋಚಿಸಲೂ ಮನಸ್ಸು ಹಿಂಜರಿಯುತ್ತದೆ. ಇಷ್ಟೊಂದು ಭೌತಿಕ ಜಗತ್ತಲ್ಲಿ ಕಳೆದು ಹೋದಾಗ ಸಾವು, ವಯಸ್ಸು, ಕಾಯಿಲೆಗಳ ಭಯ ಆವರಿಸುತ್ತದೆ. ಸೌಂದರ್ಯ, ಪ್ರಜ್ಞೆ, ಬುದ್ದಿವಂತಿಕೆ, ಬಲ ಕಳೆದುಕೊಳ್ಳುವ ಭಯ ಹೆಚ್ಚುತ್ತದೆ. ಆದರೆ, ಹರೆ ಕೃಷ್ಣ ಮಂತ್ರ ಹೇಳಿಕೊಂಡಾಗ ನಮಗೆ ನಮ್ಮ ಆತ್ಮದ ಪರಿಚಯವಾಗುತ್ತದೆ. ಆಧ್ಯಾತ್ಮಿಕ(spiritual)ವಾಗಿ ನಾವೇನು ಎಂಬುದನ್ನು ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ. ಆಗ, ಭೌತಿಕ ಭಯ, ಆಸೆಗಳಿಂದ ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಮಂತ್ರದ ಆಧ್ಯಾತ್ಮಿಕ ವೈಬ್ರೇಶನ್ ನಾನು ಎಂದರೇನೆಂಬ ಪರಿಚಯ ಮಾಡಿಸುತ್ತದೆ. 

ಸಂತೋಷದ ಕೀಲಿಕೈ
ಸಂತೋಷ ಎಂಬುದು ಹಂಚಿಕೊಂಡಾಗ ಮಾತ್ರ ನಿಜವಾದದ್ದಾಗಿರುತ್ತದೆ ಎನ್ನುತ್ತಾರೆ ಕಾದಂಬರಿಕಾರ ಅಲೆಕ್ಸಾಂಡರ್ ಸೂಪರ್ಟ್ರ್ಯಾಂಪ್(Alexander Supertramp). ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಂತೋಷ(happiness)ಕ್ಕಾಗಿ ಹುಡುಕಾಡುತ್ತಿರುತ್ತಾರೆ. ಆದರೆ, ಅದು ಎಲ್ಲಿಯೂ ಸಿಗುವುದಿಲ್ಲ. ಸಿಕ್ಕಿತು ಎಂದುಕೊಂಡಲ್ಲಿ ಸಿಕ್ಕಿದ್ದು ಹೆಚ್ಚು ಕಾಲ ಉಳಿಯುವುದಿಲ್ಲ. ಹರೆ ಕೃಷ್ಣ ಹೇಳುವುದರಿಂದ ನಮ್ಮ ಆತ್ಮಕ್ಕೂ ದೇವರ ನಡುವೆಯೂ ಸಂಪರ್ಕ ಏರ್ಪಡುತ್ತದೆ. ಇದು ಶಾಶ್ವತವಾದ ಸಂತೋಷವನ್ನು ನಮ್ಮೊಳಗೆ ಉಂಟು ಮಾಡುತ್ತದೆ. ಇದು ವಸ್ತುವನ್ನು ಪಡೆಯುವುದರಿಂದ ಬರುವ ಸಂತೋಷವಲ್ಲ. ಹಾಗಾಗಿ ಇದು ಕೊನೆವರೆಗೂ ಒಳಗೇ ಉಳಿಯುತ್ತದೆ. 

ಕರ್ಮ(Karma)
ಕರ್ಮದ ವ್ಯಾಖ್ಯಾನವೂ ನ್ಯೂಟನ್‌(Newton)ನ ಮೂರನೇ ಲಾ ಆಫ್ ಮೋಶನ್ ವ್ಯಾಖ್ಯಾನವೂ ಒಂದೇ ಆಗಿದೆ. ಪ್ರತೀ ಕ್ರಿಯೆಗೂ ಪ್ರತಿಯಾಗಿ ಸಮಾನವಾದ ಪ್ರತಿಕ್ರಿಯೆ ಇರುತ್ತದೆ. ನಾವೇನು ಬಿತ್ತುತ್ತೇವೋ ಅದನ್ನೇ ಪಡೆಯುತ್ತೇವೆ. ಹಾಗಾಗಿ, ನಮ್ಮೆಲ್ಲ ಭೌತಿಕ ಕೆಲಸ ಕಾರ್ಯಗಳು ಶುದ್ಧವಾಗಿರಬೇಕು. ಕರ್ಮದ ಅನುಸಾರ ಮಾಡಿದ ಕೆಲಸಕ್ಕೆ ಸರಿಯಾದ ಕರ್ಮ ಅನುಭವಿಸುತ್ತೇವೆ. ಹರೇ ಕೃಷ್ಣ ಹೇಳಿಕೊಳ್ಳುವುದರಿಂದ ನಮ್ಮ ಕರ್ಮವನ್ನು ಧನಾತ್ಮಕವಾಗಿ ಪೋಣಿಸಿಕೊಂಡು ಹೋಗುತ್ತೇವೆ. ಆಗ, ಫಲವೂ ಧನಾತ್ಮಕವಾಗಿಯೇ ಇರುತ್ತದೆ. 

February Calendar: ಮಾಘ ನವರಾತ್ರಿಯಿಂದ ವಸಂತ ಪಂಚಮಿವರೆಗೆ.. ಫೆಬ್ರವರಿ ವಿಶೇಷ ದಿನಗಳು

ಮೋಕ್ಷ(Moksha)
ವ್ಯಕ್ತಿಯ ಆತ್ಮಕ್ಕೆ ಸಾವಿಲ್ಲ. ಅದು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಸೇರುತ್ತಲೇ ಇರುತ್ತದೆ. ನಮ್ಮ ಕರ್ಮಗಳು ನಮಗೆ ಜನ್ಮ ಜನ್ಮಾಂತರದಲ್ಲಿ ಕಾಡುತ್ತಲೇ ಇರುತ್ತವೆ. ಭೌತಿಕ ಆಕಾಂಕ್ಷೆಗಳ ಫಲವಾಗಿ ಮರುಹುಟ್ಟು(reincarnation) ಪಡೆಯುತ್ತಲೇ ಇರುತ್ತೇವೆ. ಆದರೆ, ಇದೆಲ್ಲ ಜಂಜಾಟದಿಂದ ಮುಕ್ತರಾಗಿ ಭಗವಂತನ ಸಾನಿಧ್ಯ ಸೇರುವ ಕನಸನ್ನೂ ಜೊತೆಗೆ ಕಾಣುತ್ತೇವೆ. ನಮ್ಮ ಆಸೆಗಳು ತಣಿವವರೆಗೆ ಮುಕ್ತಿ ದೊರೆಯುವುದಿಲ್ಲ. ನಮ್ಮ ಪ್ರಜ್ಞೆಯು ಭೌತಿಕ ಆಸೆಗಳಿಂದ ಮುಕ್ತವಾಗಲು ಹರೇ ಕೃಷ್ಣ ಮಂತ್ರ ನೆರವಾಗುತ್ತದೆ. ಇದು ನಮ್ಮ ಆಧ್ಯಾತ್ಮಿಕ ಪ್ರಜ್ಞೆಯನ್ನು ಎಚ್ಚರಿಸಿ ಉಳಿದಿದ್ದೆಲ್ಲ ನೀರ ಮೇಲಣ ಗುಳ್ಳೆ ಎಂಬುದನ್ನು ಅರ್ಥ ಮಾಡಿಸುತ್ತದೆ. ಇದರಿಂದ ಖಂಡಿತಾ ಮೋಕ್ಷ ದೊರಕುತ್ತದೆ. 

Mental Illness And Astrology: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!

ದೇವರ ಪ್ರೀತಿ(the love of God)
ಹರೇ ಕೃಷ್ಣ ಹೇಳುವುದರ ಅತಿ ಪ್ರಮುಖ ಲಾಭವೆಂದರೆ ದೇವರ ಪ್ರೀತಿ ನಮಗೆ ದೊರೆಯುತ್ತದೆ. ನಮ್ಮ ಪ್ರಜ್ಞೆಯು ಆಧ್ಯಾತ್ಮಿಕವಾಗಿ ಎಚ್ಚರಗೊಂಡಾಗ ನಮ್ಮಲ್ಲಿ ಹಲವು ಬದಲಾವಣೆಗಳಾಗುತ್ತವೆ. ಇದು ನಮ್ಮ ಹೃದಯವನ್ನು ಕೃಷ್ಣನಲ್ಲಿ ಬೆಸೆಯುವಂತೆ, ಭಗವಂತನಿಗೂ ನಮ್ಮ ಮೇಲೆ ಪ್ರೀತಿ ಮೂಡಿಸುತ್ತದೆ. ದೇವರ ಜೊತೆ ಬೆಸೆದುಕೊಳ್ಳುವ ಈ ಅಪರೂಪದ ಅನುಬಂಧಕ್ಕಿಂತ ಮಿಗಿಲಾದುದು ಏನು ತಾನೇ ಇದೆ?
 

click me!