Shani Margi 2022: ಅಕ್ಟೋಬರ್‌ನ ಕಡೆಯ ವಾರದಿಂದ ಈ ರಾಶಿಗಳಿಗೆ ವರ ನೀಡಲಿದ್ದಾನೆ ಶನಿ

By Suvarna NewsFirst Published Sep 13, 2022, 1:06 PM IST
Highlights

ಪಂಚಾಂಗದ ಪ್ರಕಾರ, ಶನಿ ದೇವನು ಅಕ್ಟೋಬರ್ ತಿಂಗಳಲ್ಲಿ ಮಕರ ರಾಶಿಯಲ್ಲಿರುತ್ತಾನೆ. ಅವನ ಮಾರ್ಗಿಯಿಂದಾಗಿ, ಈ ರಾಶಿಚಕ್ರಗಳು ಪ್ರಯೋಜನ ಪಡೆಯಲಿವೆ.

ಒಂದು ಗ್ರಹವು ತಲೆಕೆಳಗಾದ ಮತ್ತು ದಾರಿ ತಪ್ಪಿದ ದಿಕ್ಕಿನಲ್ಲಿ ಚಲಿಸಿದಾಗ, ಅದು ನೇರವಾಗಿ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮವನ್ನೇ ಬೀರುತ್ತದೆ. ಮೊದಲೇ ಶನಿ ನಿಧಾನವಾಗಿ ಚಲಿಸುವ ಗ್ರಹ. ಇನ್ನು ವಕ್ರಿಯಾದಾಗಲಂತೂ ಮತ್ತೂ ನಿಧಾನ ನಡೆ ಅನುಸರಿಸುತ್ತಾನೆ. ಸಧ್ಯ ಶನಿಯು ಹೀಗೆ ಹಿಮ್ಮುಖ ಚಲನೆಯಲ್ಲಿದ್ದಾನೆ. ಆದರೆ, ಅಕ್ಟೋಬರ್ 23ರಿಂದ ಶನಿದೇವನು ಮಕರ ರಾಶಿಯಲ್ಲಿ ನೇರ ನಡೆಗೆ ಹೊರಳುತ್ತಾನೆ. ಇದು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಅದರಿಂದ ಕೆಲ ರಾಶಿಚಕ್ರ ಚಿಹ್ನೆಗಳ ಅದೃಷ್ಟವು ತೆರೆದುಕೊಳ್ಳುತ್ತದೆ. ಈ ರಾಶಿಗಳ ಮೇಲೆ ಶನಿದೇವನ ಕೃಪೆ ಇರುತ್ತದೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ಅತ್ಯಂತ ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಅವನನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ಜನರಿಗೆ ಅವರವರ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ ಶನಿ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿದೇವನು 23 ಅಕ್ಟೋಬರ್ 2022 ರಿಂದ ಮಕರ ರಾಶಿಯಲ್ಲಿ ನೇರ ಚಲನೆಯಲ್ಲಿರುತ್ತಾನೆ. ಹಿಮ್ಮುಖ ಚಲನೆಯಿಂದ ನೇರ ಚಲನೆಗೆ ಹೊರಳುವ ಈ ನಡೆಯನ್ನು ಮಾರ್ಗಿ ಎನ್ನಲಾಗುತ್ತದೆ. ಅದರಿಂದಾಗಿ, ಈ 5 ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ.

Sibling Jealousy: ಈ 4 ರಾಶಿಗಳಿಗೆ ಒಡಹುಟ್ಟಿದವರ ಮೇಲೆ ಸಿಕ್ಕಾಪಟ್ಟೆ ಅಸೂಯೆ

ಮೇಷ ರಾಶಿ(Aries)
ಪಂಚಾಂಗದ ಪ್ರಕಾರ, ಶನಿಯು ಮೇಷ ರಾಶಿಯ ಹತ್ತನೇ ಮನೆಯಲ್ಲಿದೆ ಮತ್ತು ಅದು ಅಕ್ಟೋಬರ್ 23ರಂದು ಸಂಕ್ರಮಣಗೊಳ್ಳಲಿದೆ. ವ್ಯಾಪಾರದಲ್ಲಿ ಕಷ್ಟಪಟ್ಟು ಕೆಲಸ ಮಾಡುವವರು, ಶನಿ ಮಾರ್ಗಿಯಿಂದ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗ ಮಾಡುತ್ತಿರುವವರು ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಹಠಾತ್ ವಿತ್ತೀಯ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಪ್ರತಿಷ್ಠೆ ಹೆಚ್ಚಾಗಲಿದೆ.

ಕರ್ಕಾಟಕ ರಾಶಿ(Cancer)
ಕರ್ಕಾಟಕದಲ್ಲಿ ಏಳನೇ ಮನೆಯಲ್ಲಿ ಶನಿಯ ಪಥದಿಂದಾಗಿ, ಅವರು ಅನೇಕ ರೀತಿಯ ತೊಂದರೆಗಳಿಂದ ಮುಕ್ತರಾಗುತ್ತಾರೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಶೇಷ ಲಾಭಗಳು ಕಂಡುಬರುತ್ತವೆ. ಆರೋಗ್ಯವೂ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಲಕ್ಷಣಗಳಿವೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ತುಲಾ ರಾಶಿ(Libra)
ಸದ್ಯ ತುಲಾ ರಾಶಿಯಲ್ಲಿ ಶನಿಯ ಧೈಯ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಮಕರ ರಾಶಿಯಲ್ಲಿ ಶನಿಯ ಸಂಕ್ರಮಣದಿಂದಾಗಿ ಈ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಇದರಿಂದ ನೀವು ಹಣದ ಕೊರತೆಯಿಂದ ಮುಕ್ತಿ ಪಡೆಯುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಇರುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ.

ಸಾವರ್ಕರ್ ಸಾಮ್ರಾಜ್ಯವಾಯ್ತು ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶೋತ್ಸವ!

ವೃಶ್ಚಿಕ ರಾಶಿ(Scorpio)
ವಾಹನ ಮತ್ತು ಕಟ್ಟಡದ ಸುಖವನ್ನು ಪಡೆಯುವ ಅದೃಷ್ಟ ನಿಮ್ಮದಾಗಲಿದೆ. ಅವರ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವೈವಾಹಿಕ ಜೀವನದಲ್ಲಿ ಸಂತೋಷದ ಮಹಾಪೂರ ಇರುತ್ತದೆ. ಕೌಟುಂಬಿಕ ಕಲಹಗಳಿಂದ ಮುಕ್ತಿ ಹೊಂದುವಿರಿ.

ಮೀನ ರಾಶಿ(Pisces)
ಮೀನ ರಾಶಿಯ ಲಾಭದ ಮನೆಯಲ್ಲಿ ಶನಿಯು ಸಂಚರಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರು ಪ್ರಯೋಜನವನ್ನು ಪಡೆಯುತ್ತಾರೆ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಪ್ರಗತಿಯ ಸಾಧ್ಯತೆಗಳಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!