Effect of Rahu in 2022: ಮೇಷ, ವೃಷಭ ಸೇರಿ 6 ರಾಶಿಗೆ ರಾಹು ಕಾಟ

By Suvarna News  |  First Published Dec 2, 2021, 2:44 PM IST

ಜ್ಯೋತಿಷ್ಯದಲ್ಲಿ ರಾಹುವಿನ ಸ್ಥಾನ ದೊಡ್ಡದು. ರಾಹು ಬದುಕನ್ನೇ ಬುಡಮೇಲು ಮಾಡುವಂತ ಪರಿಣಾಮಗಳನ್ನು ಬೀರುತ್ತಾನೆ. ಹೊಸ ವರ್ಷದಲ್ಲಿ ರಾಹುವಿನ ವಕ್ರದೃಷ್ಟಿ ಯಾವೆಲ್ಲ ರಾಶಿಗಳ ಮೇಲೆ ಬೀಳಲಿದೆ ನೋಡಿ. 


ಇನ್ನೇನು ಒಂದೇ ತಿಂಗಳು. ಕಳೆದರೆ ಹೊಸ ವರ್ಷ. ಹೊಸ  ವರ್ಷದಲ್ಲಿ ಬದುಕಿನ ಗತಿ ಬದಲಾಗಬಹುದೆಂದು ಕಾಯುವವರು ಹಲವರು. ಇದಕ್ಕೆ ನಮ್ಮ ರಾಶಿ, ನಕ್ಷತ್ರ, ರಾಹು ಕೇತುಗಳ ಸ್ಥಾನಮಾನಗಳೆಲ್ಲವೂ ಕಾರಣವಾಗುತ್ತವೆ. ವಿಶೇಷವಾಗಿ ರಾಹು(Rahu)ವಿನ ವಿಚಾರಕ್ಕೆ ಬರೋಣ. ರಾಹು ಪ್ರತಿಯೊಂದು ರಾಶಿಚಕ್ರದಲ್ಲೂ ಒಂದೂವರೆ ವರ್ಷಗಳ ಕಾಲ ಇರುತ್ತಾನೆ. ನಂತರ ತನ್ನ ಸ್ಥಾನ ಬದಲಿಸುತ್ತಾನೆ. ಹೀಗೆ ರಾಹು ರಾಶಿ ಚಕ್ರ ಬದಲಿಸುವಾಗ ಒಂದಿಷ್ಟು ರಾಶಿಗಳ ಮೇಲೆ ಒಳಿತು, ಕೆಡುಕು ಎರಡೂ ವಿಧದಲ್ಲಿ ತನ್ನ ಪರಿಣಾಮ(effects)ವನ್ನು ಬೀರಿಯೇ ತೀರುತ್ತಾನೆ. ಶನಿಯ ನಂತರ ಅತಿ ನಿಧಾನವಾಗಿ ಚಲಿಸುವವನು ರಾಹು. ಶನಿಯಷ್ಟೇ ಪರಿಣಾಮಗಳನ್ನು ಬೀರುವವನು ಕೂಡಾ ಹೌದು.

2022ರ ಏಪ್ರಿಲ್‌(April) 12ರಂದು ವೃಷಭದಿಂದ ಮೇಷಕ್ಕೆ ರಾಶಿಚಕ್ರವನ್ನು ಬದಲಿಸುತ್ತಾನೆ. ರಾಹುವಿನ ಈ ನಡೆಯಿಂದ ಕೆಲ ರಾಶಿಗಳಿಗೆ ಒಳಿತಾದರೆ, ಮತ್ತಷ್ಟು ರಾಶಿಗಳಲ್ಲಿ ವಿಪ್ಲವ ಸೃಷ್ಟಿಯಾಗುತ್ತದೆ. ರಾಹುವಿನ ಪರಿಣಾಮಗಳನ್ನು ಅನುಭವಿಸುವ ಪ್ರಮುಖ 6 ರಾಶಿಗಳಿವು. 

ಮೇಷ(Aries)
ಏಪ್ರಿಲ್‌ನಲ್ಲಿ ರಾಹು ಮೇಷಕ್ಕೆ ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಮೇಷ ರಾಶಿಯವರ ಕೌಟುಂಬಿಕ ಜೀವನ ಹಾಗೂ ಔದ್ಯೋಗಿಕ ಜೀವನದಲ್ಲಿ ಬಿರುಗಾಳಿ ಏಳುವ ಸಾಧ್ಯತೆ ಇರುತ್ತದೆ. ಬರುವ ವರ್ಷದ ಮೊದಲ ಮೂರು ತಿಂಗಳಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದಾಗಲೀ,  ಆಸ್ತಿ ಖರೀದಿ ಮಾಡುವುದಾಗಲೀ ಸಲ್ಲದು. ಅದು ನಕಾರಾತ್ಮಕ ಫಲಿತಾಂಶ ತರಬಹುದು. 

Tap to resize

Latest Videos

undefined

ವೃಷಭ(Taurus)
ಈ ರಾಶಿಯವರಿಗೆ ರಾಹುವಿನ ಸ್ಥಾನಪಲ್ಲಟದ ಪರಿಣಾಮವಾಗಿ ಮಂಕುಬುದ್ಧಿ ಆಗಬಹುದು. ಯಾವ ನಿರ್ಧಾರ ಕೈಗೊಳ್ಳ ಹೋದರೂ ಗೊಂದಲಗಳು ಎದುರಾಗುತ್ತವೆ. ವರ್ಷಾರಂಭದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ರಾಹುವಿನ ಕಾರಣದಿಂದಾಗಿ ಸಂಗತಿಯೊಂದನ್ನು ಎಲ್ಲ ಕೋನಗಳಿಂದಲೂ ಪರಿಶೀಲಿಸುವ ಸಾಮರ್ಥ್ಯ ಕುಂದಿರುತ್ತದೆ. ಯಾರನ್ನೂ ನಂಬದಿರುವುದೇ ಉತ್ತಮ. ಏಪ್ರಿಲ್‌ನಲ್ಲಿ ಖರ್ಚುವೆಚ್ಚಗಳು ಬಹಳಷ್ಟು ಹೆಚ್ಚಾಗುವುವು. 

ಕರ್ಕಾಟಕ(Cancer)
ಬರುವ ವರ್ಷ ರಾಹು ನಿಮ್ಮ ರಾಶಿಯ 10ನೇ ಮನೆ ಕರ್ಮ ಭವಕ್ಕೆ ಪ್ರವೇಶಿಸುತ್ತಾನೆ. ಅಂದರೆ, ಉದ್ಯೋಗಸ್ಥರು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಉದ್ಯೋಕ ಕ್ಷೇತ್ರದಲ್ಲಿನ ರಾಜಕೀಯಗಳು ಕಂಗೆಡಿಸುವ ಸಾಧ್ಯತೆ ಇರುತ್ತದೆ. ಆದರೆ, ಈ ಸಂದರ್ಭದಲ್ಲಿ ಉದ್ಯೋಗ ಬದಲಿಸಲು ಯತ್ನಿಸಿದರೆ ಖಂಡಿತಾ ಒಳ್ಳೆಯ ಅವಕಾಶಗಳು ಎಡತಾಕುತ್ತವೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಆದೇಶ ಬರಲಿದೆ. 

Feng Shui for Money: ಧನಲಕ್ಷ್ಮೀ, ಮನೆಗೆ ಬಾರಮ್ಮಾ..

ಕನ್ಯಾ(Virgo)
ವರ್ಷಾರಂಭದಲ್ಲಿ ನಿಮ್ಮ ರಾಶಿಯ 9ನೇ ಮನೆಯ ಮೂಲಕ ರಾಹು ಹಾಯಲಿದ್ದಾನೆ. ಇದರಿಂದ ನಿಮ್ಮ ಮನಸ್ಸಿನ ಉದ್ವೇಗಗಳು, ಗೊಂದಲಗಳು ಹೆಚ್ಚಲಿವೆ. ಹಿರಿಯ ಸಹೋದ್ಯೋಗಿಗಳೊಂದಿಗೆ, ಅಧಿಕಾರಿಗಳೊಂದಿಗೆ ಅಥವಾ ತಂದೆಯೊಂದಿಗೆ ಜಗಳ, ವೈಮನಸ್ಸುಗಳು ಮೂಡಲಿವೆ. ನಂತರದಲ್ಲಿ ರಾಹು 8ನೇ ಮನೆಗೆ ಪ್ರವೇಶ ಪಡೆದಾಗ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. 

ವೃಶ್ಚಿಕ(Scorpion)
ಹೊಸ ವರ್ಷಾರಂಭದಲ್ಲಿ ರಾಹು ಏಳನೇ ಮನೆಯಲ್ಲಿರುವುದರಿಂದ ನಿಮ್ಮ ಸಂಗಾತಿ ಸಂಬಂಧದಿಂದ ಹೊರ  ಹೋಗಬಹುದು. ಅಥವಾ ಬೇರೆ ವ್ಯಕ್ತಿ ಕಡೆ ಆಕರ್ಷಣೆಗೊಳಗಾಗಿ ಸಂಬಂಧದ ನಡುವೆ ಬಿರುಕುಂಟಾಗಬಹುದು. ಅತಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದು ಗೊಂದಲದಲ್ಲಿ ಮುಳುಗುವಿರಿ. ಇಂಥ ಪರಿಸ್ಥಿತಿ ಎದುರಾದಾಗ ನಿಮ್ಮ ಪ್ರೀತಿಪಾತ್ರರ ಬಳಿ ಚರ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ. 

Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

ಧನು(Sagittarius)
ವರ್ಷಾರಂಭದಲ್ಲಿ ರಾಹು 6ನೇ ಮನೆಯ ಮೂಲಕ  ಹಾಯುತ್ತಾನೆ. ಈ ಸಂದರ್ಭದಲ್ಲಿ ಧನು ರಾಶಿಯವರ ಬದುಕಿನಲ್ಲಿ ಕೋರ್ಟ್ ಕೇಸ್‌ಗಳನ್ನು ಎದುರಿಸಬೇಕಾಗಿ ಬರಬಹುದು. ಅದೇ ಸಮಯದಲ್ಲಿ ಈಗಾಗಲೇ ಕೋರ್ಟ್ ವ್ಯಾಜ್ಯಗಳನ್ನು ಎದುರಿಸುತ್ತಿರುವ ಇದೇ ರಾಶಿಯವರಿಗೆ ನಿರಾಳತೆಯೂ  ಸಿಗಬಹುದು. ಏಪ್ರಿಲ್ ಮಧ್ಯಭಾಗದಲ್ಲಿ ರಾಹು 5ನೇ ಮನೆಗೆ ಹೋದಾಗ ವಿದ್ಯಾರ್ಥಿಗಳು ಸಂಕಷ್ಟವನ್ನೆದುರಿಸುತ್ತಾರೆ. ಮಾನಸಿಕ ಒತ್ತಡ ಹೆಚ್ಚಿ ವಿದ್ಯಾಭ್ಯಾಸದಿಂದ ವಿಮುಖರಾಗುವ ಮನಸ್ಸಾಗಬಹುದು. 
 

click me!