ಕೆಲವರಿಗೆ ಬಹಳ ಸಿಟ್ಟು, ಮೂಗಿನ ತುದಿಯಲ್ಲೇ ಕೋಪ ಇರುತ್ತದೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಮತ್ತೆ ಕೆಲವರು ಇದಕ್ಕೆ ತದ್ವಿರುದ್ಧ. ಇವರು ಶಾಂತ ಸ್ವಭಾವದವರಾಗಿದ್ದು, ಎಂಥದ್ದೇ ಸನ್ನಿವೇಶ ಇರಲಿ ಅದನ್ನು ಸುಲಭವಾಗಿ ನಿಭಾಯಿಸಿಬಿಡುತ್ತಾರೆ. ಇಂಥ ಶಾಂತ ಸ್ವಭಾವದ ರಾಶಿಯವರು ಯಾರು ಎಂಬ ಬಗ್ಗೆ ತಿಳಿಯೋಣ...
ನಮ್ಮ ಜೊತೆಗಿರುವ ವ್ಯಕ್ತಿಗಳ (People) ಎಷ್ಟೋ ಸಂಗತಿಗಳು (Matters) ನಮಗೆ ಗೊತ್ತೇ ಆಗಿರುವುದಿಲ್ಲ. ಕೆಲವರು ಮಾತಿನಿಂದ (Talk) ಜೋರಿದ್ದರೂ ಸ್ವಭಾವತಃ ಸೌಮ್ಯವಾಗಿರುತ್ತಾರೆ. ಮತ್ತೆ ಕೆಲವರು ಅಹಂಕಾರಿ (Arrogant) ಆಗಿರುತ್ತಾರೆ. ಹೀಗೆ ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಇರುತ್ತದೆ. ಎಲ್ಲರ ಗುಣ, ಸ್ವಭಾವಗಳು (Character, nature) ಬೇರೆ (Different) ಬೇರೆಯಾಗಿರುತ್ತವೆ. ಆದರೆ, ಇವುಗಳಿಗೆ ಅವರ ಜಾತಕವೂ (Horoscope) ಕಾರಣವಾಗಿರುತ್ತವೆ. ಹುಟ್ಟಿದ ಸಮಯ (Birth Time), ವಾರ (Week), ದಿನದ (Day) ಆಧಾರದ ಮೇಲೆ ಜಾತಕವನ್ನು ಸಿದ್ಧಪಡಿಸಿ ರಾಶಿ (Zodiac), ನಕ್ಷತ್ರಗಳನ್ನು (Star) ನಿರ್ಧರಿಸಲಾಗುತ್ತದೆ.
ಈಗ ಕೆಲವರು ತುಂಬಾ ಶಾಂತ (Calm) ಸ್ವಭಾವದವರಾಗಿರುತ್ತಾರೆ. ಎಂಥದ್ದೇ ಪರಿಸ್ಥಿತಿ (Situation) ಬರಲಿ, ಇವರು ಮಾತ್ರ ಕೂಲ್ ಕೂಲ್. ಆ ಸಮಸ್ಯೆಗಳನ್ನು ಅಷ್ಟೇ ಸಂಯಮದಿಂದ (Restraint) ಪರಿಹರಿಸಿಬಿಡುತ್ತಾರೆ. ಅದು ಎಂಥದ್ದೇ ಕಷ್ಟಗಳು (Problems) ಎದುರಾದರೂ ಅದನ್ನು ನಿಭಾಯಿಸುವುದು ಹೇಗೆ (How) ಎಂಬುದನ್ನು ಅರಿತಿರುತ್ತಾರೆ. ಇಂಥವರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ಹಲವಾರು ಬಾರಿ ನಾವು ಅಂದುಕೊಂಡಿರುತ್ತೇವೆ. ಆದರೆ, ಅವರ ಈ ಸ್ವಭಾವವು ರಾಶಿಗಳಿಂದ ಪ್ರಭಾವಿತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಹಾಗಾದರೆ ಈ ಶಾಂತ ಸ್ವಭಾವವುಳ್ಳ ನಾಲ್ಕು ರಾಶಿ ಚಕ್ರ ಯಾವುದು ಎಂಬುದನ್ನು ನೋಡೋಣ...
ವೃಷಭ (taurus)
ವೃಷಭ ರಾಶಿಯ ವ್ಯಕ್ತಿಗಳು ನೋಡಲು ಬಹಳ ಶಾಂತ ಸ್ವಭಾವದವರಾಗಿದ್ದರು, ಸೃಜನಶೀಲ ವ್ಯಕ್ತಿತ್ವ ಉಳ್ಳವರು. ಇವರಿಗೆ ಕೋಪ (Angry) ಬಂದರೂ ಸಹ ಅದನ್ನು ಹೊರ ಹಾಕಿ, ತೋರ್ಪಡಿಸಲು ಇಷ್ಟಪಡುವುದಿಲ್ಲ. ಅವರು ತಮ್ಮ ಸುತ್ತಲೂ ಶಾಂತಿಯುತ ವಾತಾವರಣವನ್ನು ಬಯಸುತ್ತಾರೆ. ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡದೆ ಎಲ್ಲ ವಿಷಯಗಳನ್ನು ಶಾಂತಚಿತ್ತ ರೀತಿಯಿಂದಲೇ ಪರಿಹಾರ ಕಂಡುಕೊಳ್ಳಲು ಬಯಸುತ್ತಾರೆ. ಶಾಂತಿ ಮಾರ್ಗದ ಮೇಲೆ ಇವರಿಗೆ ಅಪಾರವಾದ ನಂಬಿಕೆ (Trust). ಸದಾ ಕೂಗಾಡುವವರು (Shout), ಜಗಳಕ್ಕೆ (Quarrel) ಕಾಯುತ್ತಿರುವ ವ್ಯಕ್ತಿಗಳನ್ನು ಕಂಡರೆ ಇವರಿಗೆ ಆಗುವುದೇ ಇಲ್ಲ. ಅಂಥವರನ್ನು ದೂರ ಇಟ್ಟುಬಿಡುತ್ತಾರೆ.
ಇದನ್ನು ಓದಿ: Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?
ಸಿಂಹ ರಾಶಿ (Leo)
ಸಿಂಹ ರಾಶಿ ಜನರು ತುಂಬಾ ಬುದ್ಧಿವಂತರು (Clever). ಇವರಿಗೆ ಸಂಕಷ್ಟಗಳು ಎದುರಾದರೆ ತೀರಾ ಟೆನ್ಶನ್ (Tension) ಮಾಡಿಕೊಳ್ಳುವವರಲ್ಲ. ಗಡಿಬಿಡಿ ಮಾಡಿಕೊಳ್ಳದೇ ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ. ಇವರು ಯಾವುದೇ ನಿರ್ಧಾರವನ್ನು (Decision) ತೆಗೆದುಕೊಳ್ಳುವುದಿದ್ದರೂ ಬಹಳಷ್ಟು ಯೋಚಿಸಿದ ನಂತರವೇ ತೆಗೆದುಕೊಳ್ಳುತ್ತಾರೆ. ಕೋಪದಿಂದ ನಿರ್ಧಾರಗಳನ್ನು ತೆಗೆದುಕೊಂಡರೆ ಅಚಾತುರ್ಯ ಆಗಬಹುದು ಎಂಬ ಅರಿವು ಇವರಿಗೆ ಇರುವುದರಿಂದ ತಮ್ಮ ನಿರ್ಧಾರವನ್ನು ಸಹ ಪರಾಮರ್ಶಿಸಿಯೇ (Review) ತೆಗೆದುಕೊಳ್ಳುತ್ತಾರೆ.
ತುಲಾ ರಾಶಿ (Libra)
ಸಿಂಹ ರಾಶಿಯ ಜನರಂತೆಯೇ ತುಲಾ ರಾಶಿಯವರು ಸಹ ಶಾಂತ ಸ್ವಭಾವವನ್ನು ಹೊಂದಿದವರು. ಇವರು ನಿಷ್ಠಾವಂತರಾಗಿದ್ದು (Loyal), ತಮ್ಮ ಎದುರು ಅನ್ಯಾಯ (Injustice) ನಡೆಯುತ್ತಿದ್ದರೆ ಸಹಿಸುವುದೇ ಇಲ್ಲ. ಅದರಿಂದ ಬಹಳಷ್ಟು ಕೋಪಗೊಳ್ಳುತ್ತಾರೆ. ಆದರೆ, ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂಥ ವಿಷಯಗಳು ಎದುರಾದರೆ ಅದನ್ನು ಅಷ್ಟೇ ಕೂಲ್ ಆಗಿ, ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ.
ಇದನ್ನು ಓದಿ: Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!
ಧನು ರಾಶಿ (Sagittarius)
ಧನು ರಾಶಿಯವರು ಸಹ ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳವರು. ಇವರು ತಮ್ಮ ಜೊತೆಗಾರರ (Partners), ಸ್ನೇಹಿತರ (Friend), ಸಂಬಂಧಿಗಳ (Relations) ಮೇಲೆ ಯಾವತ್ತೂ ಕೋಪ ಮಾಡಿಕೊಳ್ಳುವವರಲ್ಲ. ಒಂದು ವೇಳೆ ತಮಗೆ ಬೇಸರವಾದರೂ ಅದನ್ನು ತೋರ್ಪಡಿಸಿಕೊಳ್ಳದೇ ಖುಷಿಯಾಗಿ (Happy) ಇರುವಂತೆಯೇ ನಿಭಾಯಿಸುತ್ತಾರೆ. ಇವರು ಅನೇಕ ಸಂದರ್ಭದಲ್ಲಿ ಸಲಹೆಗಳನ್ನು (Tip) ನೀಡುವ ಮೂಲಕ ಇತರರಿಗೆ ನೆರವಾಗುತ್ತಾರೆ.