ಕಣ್ಣು ಬಡಿದುಕೊಳ್ಳುವುದು ಶುಭ ಸಂಕೇತವೇ?

By Web DeskFirst Published Mar 7, 2019, 3:52 PM IST
Highlights

ನಮ್ಮಲ್ಲಿ ಕೆಲವು ಮೂಢನಂಬಿಕೆಗಳಿಗೆ. ಬೆಕ್ಕು ಅಡ್ಡ ಬಂದರೆ ಅಪಶಕುನ, ಕಾಗೆ ಕೂಗಿದ್ದನ್ನು ಕೇಳಿಸಿಕೊಂಡರೆ ಯಾರದ್ದೋ ಸಾವಿನ ಸುದ್ದಿ ಕೇಳುತ್ತೇವೆ... ಹೀಗೆ.  ಕಣ್ಣಿನ ರೆಪ್ಪೆ ಬಡಿದುಕೊಂಡರೆ ಕೆಟ್ಟದ್ದು....ಹೀಗೆ. ಅಷ್ಟಕ್ಕೂ ಕಣ್ಣು ಬಡಿದುಕೊಳ್ಳುವುದೇಕೆ?

ಕಣ್ಣು  ಬಡಿದುಕೊಳ್ಳುವ ಸಂದರ್ಭದಲ್ಲಿ ಏನೋ ಶುಭ ಅಥವಾ ಅಶುಭವೆಂದು ಮಂದಿ ನಂಬುತ್ತಾರೆ. ಆದರೆ ಶುಭ ಅಶುಭದ ಮಧ್ಯೆ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ಯಾಕೆಂದರೆ ಕಣ್ಣು ಬಡಿದುಕೊಳ್ಳುವುದು ಆರೋಗ್ಯದ ಸಮಸ್ಯೆಯಾಗಿದ್ದು, ಕಣ್ಣಿನ ದೌರ್ಬಲ್ಯದ ಸಂಕೇತವಾಗಿದೆ. 

ಕಣ್ಣಿನ ಸಮಸ್ಯೆ : ಕಣ್ಣಿನ ಮಾಂಸ ಖಂಡಗಳಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಕಣ್ಣು ಬಡಿದುಕೊಳ್ಳುತ್ತದೆ. ಅಂದರೆ ನೀವು ಕನ್ನಡಕ ಧರಿಸಬೇಕಾಗಬಹುದು. ಆಗಲೇ ಕನ್ನಡಕ ಧರಿಸುತ್ತಿದ್ದರೆ, ಮತ್ತೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿ, ಬದಲಾಯಿಸಿ. 

ಟೆನ್ಷನ್: ಸುಸ್ತು, ಟೆನ್ಷನ್‌ನಿಂದ ನಿದ್ರೆ ಸರಿಯಾಗದಿದ್ದರೆ ಕಣ್ಣು ಬಡಿದುಕೊಳ್ಳುತ್ತದೆ. 

ಸುಸ್ತು: ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದಲೂ ಕಣ್ಣುಗಳು ಆಯಾಸಗೊಳ್ಳುತ್ತವೆ. ಇದರಿಂದಲೂ ಕಣ್ಣು ಬಡಿದುಕೊಳ್ಳಲು ಆರಂಭಿಸುತ್ತದೆ. 

ಕರಿಯರ್‌ನಲ್ಲಿ ಯಶಸ್ಸು ಬೇಕೆಂದರೆ ಹೀಗ್ ಮಾಡಿ....

ಡ್ರೈ ನೆಸ್ : ಹೌದು ಕಣ್ಣು ಹೆಚ್ಚು ಡ್ರೈ ಆಗುವುದರಿಂದ, ಅಲರ್ಜಿ ಉಂಟಾಗುತ್ತದೆ. ತುರಿಕೆ ಮೊದಲಾದ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗ  ಹೀಗೆ ಕಣ್ಣು ಬಡಿದುಕೊಳ್ಳುತ್ತದೆ.

ಪೋಷಕಾಂಶದ ಕೊರತೆ: ಶರೀರದಲ್ಲಿ ಮೆಗ್ನೇಷಿಯಂ ಕಡಿಮೆಯಾದರೆ ಕಣ್ಣು ಬಡಿದುಕೊಳ್ಳುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ ಅತ್ಯಧಿಕ ಕೆಫೆನ್, ಆಲ್ಕೋಹಾಲ್ ಸೇವಿಸಿದರೂ ಸಮಸ್ಯೆ ಉಂಟಾಗುತ್ತದೆ.  

click me!