ಈ ದೇಶಗಳ ಮೂಢನಂಬಿಕೆ ನಿಜಕ್ಕೂ ವಿಚಿತ್ರ; ನೀವು ಕೇಳಿದ್ರೆ ಬೆರಗಾಗೋದು ಗ್ಯಾರಂಟಿ..!

By Sushma Hegde  |  First Published Jul 6, 2023, 10:34 AM IST

ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿಯು ವಿಚಿತ್ರವಾದ ಮೂಢನಂಬಿಕೆಗಳು ಇವೆ. ಅವುಗಳನ್ನು ಕೇಳಿದರೆ ನೀವು ಬೆರಗಾಗುತ್ತೀರಿ. ಈ ಕುರಿತು ಇಲ್ಲಿದೆ ಮಾಹಿತಿ.


ಕುರುಡಾಗಿ ಏನನ್ನಾದರೂ ನಂಬುವುದನ್ನು ಮೂಢನಂಬಿಕೆ ಎನ್ನುತ್ತಾರೆ. ವಿವಿಧ ರೀತಿಯ ಮೂಢನಂಬಿಕೆ (superstition) ಗಳಿವೆ. ಇವುಗಳಲ್ಲಿ ಮಾಟಮಂತ್ರ, ತಂತ್ರ-ಮಂತ್ರ, ವಾಮಾಚಾರ, ನರಬಲಿ, ಕಣ್ಣು ಬೀಳುವುದು, ಭೂತ-ಪ್ರೇತ್, ಪಿಶಾಚಿ ಸೇರಿವೆ. ಇವುಗಳಿಗೆ ಸಂಬಂಧಿಸಿದ ಮೂಢನಂಬಿಕೆಗಳು, ವದಂತಿಗಳು ಮತ್ತು ಪ್ರಾಣಿ ಬಲಿ ಅದರಿಂದ ಆಗುವ  ದುಷ್ಪರಿಣಾಮಗಳು ಮೂಢನಂಬಿಕೆಗಳಾಗಿವೆ.

ಭಾರತ ದೇಶದಲ್ಲಿ ನಂಬಿಕೆ ಮತ್ತು ಮೂಢನಂಬಿಕೆ ಎಂಬ ಎರಡು ವಿಷಯಗಳ ಬಗ್ಗೆ ನಿರಂತರವಾಗಿ ಚರ್ಚೆಗಳಾಗುತ್ತಿರುತ್ತವೆ . ಕೆಲವು ಕೆಲಸಗಳನ್ನು ಮಾಡುವುದರಿಂದ ನಿಮಗೆ ತೊಂದರೆಯಾಗಬಹುದು ಅಥವಾ ದೇವರಿಗೆ ಕೋಪ ಬರಬಹುದು ಎಂದು ನಾವು ಆಗಾಗ್ಗೆ ಕೇಳುತ್ತೇವೆ. ಮೂಢನಂಬಿಕೆಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇಂತಹ ಮೂಢನಂಬಿಕೆಗಳು ಭಾರತ (India) ದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿವೆ. ಅಂತಹ ದೇಶಗಳ ಕೆಲವು ಮೂಢನಂಬಿಕೆಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

Tap to resize

Latest Videos

ಇವು ಕೆಲವು ದೇಶಗಳ ವಿಚಿತ್ರ ಮೂಢನಂಬಿಕೆಗಳು

ಫ್ರಾನ್ಸ್‌ನಲ್ಲಿ, ನಾಯಿಯ ಮಲದ ಮೇಲೆ ಎಡಗಾಲು ಇಟ್ಟರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಅದೇ  ಬಲಗಾಲು ಅದರ ಮೇಲೆ ಇಟ್ಟರೆ, ಅದನ್ನು ದುರಾದೃಷ್ಟ (bad luck) ವೆಂದು ಪರಿಗಣಿಸಲಾಗುತ್ತದೆ.

ಲಿಥುವೇನಿಯಾದಲ್ಲಿ ಮನೆಯಲ್ಲಿ ಕುಳಿತು ಶಿಳ್ಳೆ ಹೊಡೆಯುವುದನ್ನು ನಿಷೇಧಿಸಲಾಗಿದ್ದು, ಮನೆಯಲ್ಲಿ ಶಿಳ್ಳೆ ಹೊಡೆದರೆ  ದೆವ್ವವನ್ನು ಮನೆಗೆ ಆಹ್ವಾನಿಸದಂತೆ ಎಂದು   ನಂಬಲಾಗಿದೆ.

ಜಪಾನ್‌ನಲ್ಲಿ ಅಕ್ಕಿಯ ಬಟ್ಟಲಿನಲ್ಲಿ ಚಾಪ್‌ಸ್ಟಿಕ್‌ (Chopstick) ಗಳನ್ನು ನೆಟ್ಟಗೆ ಇಡುವುದು ಕೆಟ್ಟದು ಎಂದು ಪರಿಗಣಿಸುತ್ತಾರೆ.

ಈಜಿಪ್ಟ್‌ ಜನರು ಕೇವಲ ಕತ್ತರಿ ಬಳಸುವುದು ಕೆಟ್ಟದ್ದು ಎಂದು ನಂಬಿದ್ದಾರೆ. ಕತ್ತರಿ ಬಾಯಿ ತೆರೆದರೆ ದುರಾದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.

ಈ ಮೂರು ರಾಶಿಯ ಹುಡುಗಿಯರು ಅದೃಷ್ಟ ಲಕ್ಷ್ಮಿಯರು..!

 

ಚೀನಾದಲ್ಲಿ 4 ಅಂಕಿಗಳನ್ನು ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಚೈನೀಸ್ ಭಾಷೆಯಲ್ಲಿ ಇದನ್ನು ಉಚ್ಚರಿಸುವುದು ಸಾವು ಎಂದರ್ಥ.

ಟರ್ಕಿಯಲ್ಲಿ ರಾತ್ರಿಯಲ್ಲಿ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಗಿದೆ. ಇಲ್ಲಿ ರಾತ್ರಿಯ ಕತ್ತಲೆಯಲ್ಲಿ ಈ ಚೂಯಿಂಗ್ ಗಮ್ ಸತ್ತ ಮನುಷ್ಯನ ಮಾಂಸವಾಗಿ ಬದಲಾಗುತ್ತದೆ ಎಂದು ನಂಬಲಾಗಿದೆ.

ರಷ್ಯಾದಲ್ಲಿ ಹಳದಿ ಹೂವುಗಳನ್ನು ನೀಡುವುದು ಬೇರ್ಪಡುವಿಕೆಯ ಸಂಕೇತವಾಗಿದೆ. ಆದ್ದರಿಂದ ಹಳದಿ ಹೂವನ್ನು ನೀಡುವುದು ದ್ರೋಹವೆಂದು ಹೇಳಲಾಗುತ್ತದೆ.

ಸ್ಪೇನ್‌ನಲ್ಲಿ ಮಂಗಳವಾರ ಮತ್ತು 13 ನೇ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ರುವಾಂಡಾದಲ್ಲಿ ಮಹಿಳೆಯರು ಮೇಕೆ ಮಾಂಸ (goat meat) ವನ್ನು ಸೇವಿಸುವುದಿಲ್ಲ, ಸೇವಿಸಿದರೆ ಮಹಿಳೆಯರಿಗೆ ಗಡ್ಡ ಬೆಳೆಯುತ್ತದೆ ಎನ್ನುವ ಮೂಡನಂಬಿಕೆ ಇದೆ. 

ಒಂದು ಲೋಟ ನೀರಿನೊಂದಿಗೆ ಸಂತೋಷದಿಂದ ಕೂಗುವುದು  ಜರ್ಮನಿಯಲ್ಲಿ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಯಾಕೆದಂರೆ ನೀರು ಕುಡಿಯುವವರ ಮರಣವನ್ನು ನಾವು ಬಯಸುತ್ತೇವೆ ಎಂದು ನಂಬಲಾಗಿದೆ.

ಸ್ವೀಡನ್‌ನಲ್ಲಿ ನೀವು ಮ್ಯಾನ್‌ಹೋಲ್ ಮೇಲೆ ಕೆ ಅಕ್ಷರವನ್ನು ಬರೆದರೆ, ನೀವು ಪ್ರೀತಿಯಲ್ಲಿ ಯಶಸ್ವಿಯಾಗುತ್ತೀರಿ ಎಂದು ನಂಬಲಾಗಿದೆ. ಇನ್ನು ಮ್ಯಾನ್‌ಹೋಲ್ ಮೇಲೆ ಎ ಅಕ್ಷರ ಬರೆದರೆ ಪ್ರೀತಿಯಲ್ಲಿ ನಿರಾಶೆ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಸೆನೆಗಲ್‌ನಲ್ಲಿ, ಜನರು ತಮ್ಮ ತೀರ್ಥಯಾತ್ರೆಗಳ ಬಗ್ಗೆ  ಇತರ ಜನರೊಂದಿಗೆ ಚರ್ಚಿಸುವುದಿಲ್ಲ ಏಕೆಂದರೆ ಇತರರ ದೃಷ್ಟಿ  ಕೆಟ್ಟ ದೃಷ್ಟಿಯಾಗಿಬಹುದೆಂದು ಅವರು ನಂಬುತ್ತಾರೆ.

ಪೋರ್ಚುಗಲ್‌ನಲ್ಲಿ ಹಿಮ್ಮುಖವಾಗಿ ನಡೆಯುವುದು ತಪ್ಪು ಎಂದು ಹೇಳಲಾಗಿದೆ. ಏಕೆಂದರೆ ಹಿಮ್ಮುಖವಾಗಿ ನಡೆಯುವುದು ದುಷ್ಟ ಶಕ್ತಿಗಳಿಗೆ ದಾರಿ ತೋರಿದಂತೆ ಎಂದು ನಂಬುತ್ತಾರೆ. 

ವೃಶ್ಚಿಕ-ವೃಶ್ಚಿಕ ರಾಶಿ ಹೊಂದಾಣಿಕೆ: ಇವರ ಮಧ್ಯ ಡಿವೋರ್ಸ್‌ ಆಗುವುದಿಲ್ಲ..!

 

ನೆದರ್ಲ್ಯಾಂಡ್ಸ್'ನಲ್ಲಿ ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಹಾಡುವುದು ದೆವ್ವವನ್ನು ಕೆರಳಿಸುತ್ತದೆ ಎಂದು ನಂಬಲಾಗಿದೆ.

ಭಾರತದಲ್ಲಿ ಸೂರ್ಯಗ್ರಹಣ (solar eclipse) ದ ಸಮಯದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಬೇಕು. ಏಕೆಂದರೆ, ಆಗ ವಿಷಕಾರಿ ಮತ್ತು ಹಾನಿಕಾರಕ ಕಿರಣಗಳಿಂದ ಪಾರಾಗುವುದು ಅಗತ್ಯ ಎಂದು ಹೇಳಲಾಗುತ್ತದೆ.

ಕೊರಿಯಾದಲ್ಲಿ ಮಲಗಿರುವಾಗ ಫ್ಯಾನ್ ಬಳಸುವುದರಿಂದ ಉಸಿರುಗಟ್ಟುವಿಕೆ ಉಂಟಾಗುತ್ತದೆ ಎಂದು ನಂಬಲಾಗಿದೆ.

click me!