ಮಕರ ರಾಶಿಗೆ ಸೂರ್ಯನ ಪಯಣ, ಈ ರಾಶಿಗಳಿಗೆ ಲಾಭ

By Suvarna News  |  First Published Jan 14, 2021, 4:12 PM IST

ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಅದರಿಂದ ಈ ಕೆಳಗಿನ ರಾಶಿಯವರಿಗೆ ತುಂಬಾ ಶುಭ- ಲಾಭ ಆಗಲಿದೆ.


ಇಂದು ಮಕರ ಸಂಕ್ರಾಂತಿ. ಇಂದಿನಿಂದ ಉತ್ತರಾಯಣ ಪುಣ್ಯಕಾಲ ಆರಂಭ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕಾಲವೂ ಇದೇ. ಹಾಗಾಗಿ ಇದು ಹಲವು ರಾಶಿಗಳವರಿಗೆ ಶುಭದಾಯಕವಾಗಿ, ಲಾಭದಾಯಕವಾಗಿ ಪರಿಣಮಿಸಲಿದೆ. ಯಾರಿಗೆಲ್ಲಾ ಶುಭ?

ಮಕರ ರಾಶಿ
ಇನ್ನು ಮುಂದಿನ ಮೂವತ್ತು ದಿನಗಳ ಕಾಲ ಸೂರ್ಯನು ನಿಮ್ಮ ಮನೆಯಲ್ಲಿ ವಿರಾಜಿಸಲಿದ್ದಾನೆ. ನೀವು ಊಹಿಸಿಕೊಂಡ, ಯೋಜಿಸಿಕೊಂಡ ಕಾರ್ಯಗಳನ್ನು ಮಾಡಿಕೊಳ್ಳಲು ಇದು ಶುಭಕಾಲ. ಕಚೇರಿಯಲ್ಲಿ ನಿಮ್ಮ ಮಾತೇ ನಡೆಯುತ್ತದೆ. ನಿಮ್ಮ ಐಡಿಯಾಗಳಿಗೆ ಬಾಸ್ ಕಿವಿಗೊಡುತ್ತಾರೆ. ಜೂನಿಯರ್‌ಗಳು ನಿಮ್ಮ ಅನುಭವದ ಮಾತಿಗೆ ಶರಣಾಗುತ್ತಾರೆ. ಕಂಪನಿಗೆ ಹೆಚ್ಚಿನ ಹಣವನ್ನು ನೀವು ಉಳಿಸಿಕೊಡುತ್ತೀರಿ. ಅನೇಕ ಹೊಸ ಸಾಹಸಗಳನ್ನು ಹಮ್ಮಿಕೊಳ್ಳಲು ಮುಂದಾಗುತ್ತೀರಿ. ಅವುಗಳಲ್ಲಿ ಶುಭ- ಲಾಭವನ್ನು ಕಾಣಬಹುದು. ಆಫೀಸಿನ ಒಳಾಂಗಣ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡುವಿರಿ. ಫೆಬ್ರವರಿ ಹದಿನೈದರ ನಂತರ ನೀವು ಮಾಡಿದ ಕೆಲಸಗಳೆಲ್ಲ ಹೆಚ್ಚಿನ ಫಲ ಕೊಡಲು ಆರಂಭಿಸುತ್ತವೆ. ಸೂರ್ಯನು ನಿಮ್ಮ ರಾಶಿಯಲ್ಲೇ ಇರುವುದರಿಂದ, ಉಷ್ಣಪ್ರಕೋಪ ಇದರಾದೀತು. ಎಳನೀರು ಮುಂತಾದ ತಂಪು ಪದಾರ್ಥಗಳನ್ನು ಸೇವಿಸಿ.

Tap to resize

Latest Videos

undefined

ಧನು ರಾಶಿ
ನೀವು ಕುಟುಂಬವನ್ನು ಜೋಪಾನದಿಂದ ನೋಡಿಕೊಳ್ಳುವುದಕ್ಕೆ ಇದು ಸಕಾಲ, ಕಚೇರಿ ಕೆಲಸ, ವೃತ್ತಿ ತೊಂದರೆಗಳು ಅಂತ ಇಡೀ ಜೀವನವನ್ನು ಉದ್ಯೋಗಕ್ಕಾಗಿಯೇ ಮೀಸಲು ಇಟ್ಟಿರುವಿರಿ. ಇತ್ತ ನಿಮ್ಮ ಮನೆಯಲ್ಲಿ ನಿಮ್ಮ ಆರೋಗ್ಯ ಹಾಗೂ ಒಳಿತಿಗಾಗಿ ಪ್ರಾರ್ತೀಸುವವರು ತುಂಬಾ ಜನರಿದ್ದಾರೆ ಎಂಬುದನ್ನು ನೀವು ಮರೆತೇ ಬಿಟ್ಟಿದ್ದಿರಿ. ಅವರ ಪ್ರೀತಿಗೆ ಕೃತಜ್ಞತೆ ಹೇಳುವ, ಹೇಳಬೇಕಾದ ಕಾಲ ಇದು. ಸೂರ್ಯ ಮಕರ ರಾಶಿಗೆ ವೈಭವದಿಂದ ಪ್ರವೇಶಿಸಿದಂತೆ, ನೀವು ಹೊಸತಾಗಿ ನಿಮ್ಮ ಮನೆಗೆ ವೈಭವದಿಂದ ಪ್ರವೇಶಿಸಿ. ನಿಮ್ಮನ್ನು ಇಷ್ಟು ಕಾಲ ಪ್ರೀತಿಸಿದವರಿಗೆ ಗಿಫ್ಟ್ ಕೊಡಿ. ಗಿಫ್ಟ್ ಕೊಡದಿದ್ದರೂ ತೊಂದರೆಯಿಲ್ಲ, ಪ್ರೀತಿ ತೋರಿಸಿ. ಅದು ನಿಮ್ಮ ಅಪ್ಪ- ಅಮ್ಮ ಇರಬಹುದು, ಹೆಂಡತಿ- ಮಕ್ಕಳು ಇರಬಹುದು. ಯಾರೇ ಇರಬಹುದು. ಇದಕ್ಕೆ ಪ್ರತಿಯಾಗಿ ನೀವು ಜೀವಮಾನದಲ್ಲಿ ಮುಂದೆಂದೂ ಪಶ್ಚಾತ್ತಾಪ ಪಡಬೇಕಾಗಿಲ್ಲ ಎಂಬಂಥ ಪ್ರೀತಿಯ ಲೋಕವೊಂದು ನಿಮ್ಮದಾಗುತ್ತದೆ.



ಮೀನ ರಾಶಿ
ನೀವು ಕಳೆದ ಏಳೆಂಟು ತಿಂಗಳಿನಿಂದ ಹಣಕಾಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದೀರಲ್ಲವೇ? ಅದು ಸೋಂಕಿನ ಕಾರಣ ಇರಬಹುದು, ಯಾವುದೇ ಕಾರಣ ಇರಬಹುದು. ಆ ಚಿಂತೆಗೆ ವಿರಾಮ ಹಾಕುವ ಕಾಲ ಇದೀಗ ಬಂದಿದೆ. ಯಾಕೆಂದರೆ ನಿಮ್ಮ ರಾಶಿಗೆ ಧನಾಗಮದ ಸೂಚನೆ ಕಾಣಿಸುತ್ತಿದೆ. ಹಣವೇನೋ ಬರಲಿದೆ, ಆದರೆ ಅದನ್ನು ಎಚ್ಚರಿಕೆಯಿಂದ ಖರ್ಚು ಮಾಡುವ ವಿವೇಕ ಹಾಗೂ ಬುದ್ಧಿವಂತಿಕೆ ನಿಮ್ಮ ಕೈಯಲ್ಲೇ ಇರಬೇಕು. ಹಾಗೂ ಹಣವನ್ನು ಮಾಡುವ ಅನೇಕ ವಿದ್ಯೆಗಳನ್ನು ನೀವು ಬಲ್ಲಿರಿ. ಆದರೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿಮ್ಮ ಮಾತಿನ ಜಾಣ್ಮೆ ಹಾಗೂ ಇಷ್ಟು ವರ್ಷಗಳ ಅನುಭವ ಈ ವಿಚಾರದಲ್ಲಿ ನಿಮಗೆ ನೆರವಾಗಲಿದೆ. ಮಿತ್ರರನ್ನು ಪ್ರಚೋದಿಸಿ ಹೊಸ ಸಾಹಸಗಳಿಗೆ ಪ್ರೇರೇಪಿಸಿ. ಅವರಿಂದ ತುಂಬಾ ನೆರವಾಗುತ್ತದೆ. ಮಿತ್ರಬಲ, ಜನಬಲಗಳು ನಿಮ್ಮ ಜೊತೆಗಿರುವಾಗ ನೀವು ಯಾವುದಕ್ಕೂ ಅಂಜಬೇಕಿಲ್ಲ.

ಮೇಷ ರಾಶಿ
ನಿಮಗೆ ಈ ಬಾರಿ ಶತ್ರುಗಳಿಂದಲೂ ಅಧಿಕ ಲಾಭವಿದೆ. ಶತ್ರುಗಳು ನಿಮ್ಮನ್ನು ಸೋಲಿಸಲು ಏನೇ ಮಾಡಿದರೂ, ಅದು ನಿಮ್ಮ ಒಳಿತಾಗಿಯೇ ಪರಿಣಮಿಸುತ್ತದೆ. ಇನ್ನು ಮಿತ್ರರು, ಬಂಧುಗಳಂತೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರಲಿದ್ದಾರೆ. ಈಗ ಕುಟುಂಬಸಖ್ಯ ನಿಮ್ಮದಾಗುವುದು. ನೀವು ಅಜಾತಶತ್ರು ಎನಿಸಲಿದ್ದೀರಿ. ನಿಮ್ಮ ವಿವೇಕದಿಂದಾಗಿ ವೃತ್ತಿಜೀವನ ಹಾಗೂ ಕುಟುಂಬ- ಎರಡೂ ಕಡೆ ನಿಮಗೆ ಒಳಿತಾಗಲಿದೆ. ಧನಲಾಭ ಇದೆ. ಮಿತ್ರಲಾಭ ಇದೆ. ಹೊಸದೊಂದು ಯೋಜನೆಯಲ್ಲಿ, ವಿಶೇಷವಾಗಿ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಳ್ಳುವ ಯೋಗ ಉಂಟಾಗಬಹುದು. ವಿವೇಕ ಹಾಗೂ ವಿವೇಚನೆಯಿಂದ ಈ ಸಂದರ್ಭವನ್ನು ಬಳಸಿಕೊಂಡರೆ ನಿಮಗೆ ಉತ್ತರೋತ್ತರ ಶ್ರೇಯಸ್ಸು ಸಿಗಲಿದೆ.

ಈ ರಾಶಿಯವರಿಗೆ ಸೆಕ್ಸ್ ಎಜುಕೇಶನ್ ಬೇಕೇ ಬೇಕು! ...

ಮಿಥುನ ರಾಶಿ
ಹಳೆಯ ಯೋಚನೆ ಚಿಂತನೆಗಳಿಗೆ ಮತ್ತೆ ಜೀವ ಬರಲಿದೆ. ನೀವು ಕೊಟ್ಟ ಕೆಲವು ಸಾಲಗಳು ಬಡ್ಡಿಸಮೇತ ವಾಪಸು ಬರಬಹುದು. ಹಲವು ಅನಿರೀಕ್ಷಿತ ಗಿಫ್ಟ್‌ಗಳೂ ಸಿಗಬಹುದು. ನಿಮ್ಮ ಬಹುಕಾಲದ ಸಾಲ ತೀರುವ ನಿರೀಕ್ಷೆ ಇದೆ. ಹಲವು ಪ್ರಭಾವಿಗಳು ನಿಮ್ಮ ಗೆಳೆತನವನ್ನು ಬೆಳೆಸಲಿದ್ದು, ಅವರಿಂದ ನಿಮಗೆ ಮುಂದೆ ಒಳ್ಳೆಯದಾಗಲಿದೆ. ಗೆಳೆತನವನ್ನು ಚೆನ್ನಾಗು ಉಪಯೋಗಿಸಿಕೊಳ್ಳಿ.

ಕಟಕ ರಾಶಿ
ನೀವು ಎಣಿಸಿದ ಕಾರ್ಯಗಳಾವುವೂ ಆಗದೆ ಮನಸ್ಸು ಸೋತಿರಬಹುದು. ನೀವು ನವಚೇತನ ತುಂಬಿಕೊಳ್ಳಲು ಇದು ಸಕಾಲ. ಯಾಕೆಂದರೆ ಈ ವಾರದಿಂದ ನೀವು ಹಿಡಿದ ಕೆಲಸಗಳೆಲ್ಲವೂ ಸರಾಗವಾಗಿ ಕೈಗೂಡುವುದರನ್ನು ನೋಡಿ ನೀವೇ ಅಚ್ಚರಿಗೊಳ್ಳಲಿದ್ದೀರಿ.

ಈ ರಾಶಿಯವರುವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? ...

click me!