ಸೂರ್ಯಗ್ರಹವು ಇದೇ ಫೆಬ್ರವರಿ 12ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಒಂದು ತಿಂಗಳ ಕಾಲ ಅದೇ ರಾಶಿಯಲ್ಲಿ ಸ್ಥಿತವಾಗಿರಲಿದೆ. ಈ ರಾಶಿ ಪರಿವರ್ತನೆಯ ಶುಭ ಮತ್ತು ಅಶುಭ ಫಲಗಳು ಎಲ್ಲ ರಾಶಿಗಳ ಮೇಲೂ ಆಗಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ ತಿಳಿಯೋಣ...
ಇದೇ ಫೆಬ್ರವರಿ 12ರಂದು ಕುಂಭ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯದೇವ. ಮಾರ್ಚ್ 14 ತನಕ ಸೂರ್ಯಗ್ರಹವು ಕುಂಭರಾಶಿಯಲ್ಲಿದ್ದು, ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಕುಂಭ ರಾಶಿಯ ಅಧಿಪತಿ ಶನಿಗ್ರಹ. ಶನಿಗ್ರಹ ಮತ್ತು ಸೂರ್ಯದೇವನ ನಡುವೆ ಶತ್ರುತ್ವವಿರುವ ಕಾರಣ. ಸೂರ್ಯನ ಈ ಗೋಚಾರ ಎಲ್ಲ ರಾಶಿಗಳ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳಾಗುತ್ತವೆ. ಯಾವ್ಯಾವ ರಾಶಿಗೆ ಯಾವ ಫಲ ತಿಳಿಯೋಣ.....?
ಮೇಷ ರಾಶಿ
ಸೂರ್ಯದೇವನ ರಾಶಿ ಪರಿವರ್ತನೆಯು ಹಲವಾರು ವಿಷಯಗಳಲ್ಲಿ ಲಾಭಕಾರಿಯಾಗುತ್ತದೆ. ಈ ಅವಧಿಯಲ್ಲಿ ಧನಪ್ರಾಪ್ತಿ ಯೋಗವಿದೆ. ವ್ಯಾಪಾರಿಗಳು ಅಧಿಕ ಲಾಭವನ್ನು ಪಡೆಯುತ್ತಾರೆ. ಉನ್ನತ ಅಧಿಕಾರಿಗಳೊಂದಿಗೆ ಬಾಂಧವ್ಯ ಕೆಡದಂತೆ ನೋಡಿಕೊಳ್ಳುವುದು ಉತ್ತಮ. ಮನೆಯ ಹಿರಿಯರು ಅಥವಾ ಸಹೋದರರೊಂದಿಗೆ ವಾದ-ವಿವಾದಗಳಿಂದ ದೂರವಿರುವುದು ಉತ್ತಮ.
ಇದನ್ನು ಓದಿ: ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು.....
ವೃಷಭ ರಾಶಿ
ಸೂರ್ಯನ ರಾಶಿ ಪರಿವರ್ತನೆಯಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ಈ ರಾಶಿಯ ಮಹಿಳೆಯರು ಕೆಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕುತ್ತದೆ. ವ್ಯಾಪಾರಿಗಳಿಗೆ ಯೋಗ ಉತ್ತಮವಾಗಿದೆ. ಕಾರ್ಯ- ವ್ಯಾಪಾರದಲ್ಲಿ ಲಾಭ ಮತ್ತು ಆದಾಯದ ಮೂಲ ಹೆಚ್ಚಲಿದೆ. ನೌಕರಿಯಲ್ಲಿ ಸಹ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ.
ಮಿಥುನ ರಾಶಿ
ಕಾರ್ಯ – ವ್ಯಾಪಾರಗಳಿಗೆ ಈ ಸಮಯವು ಉತ್ತಮವಾಗಿದೆ. ಈ ಗೋಚಾರದ ಪ್ರಭಾವದಿಂದ ಧರ್ಮ –ಕರ್ಮಗಳ ವಿಚಾರದಲ್ಲಿ ಆಸಕ್ತಿ ಮೂಡುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ಸಹ ವಿಜಯವನ್ನು ಪಡೆಯಬಹುದಾಗಿದೆ. ವಿದೇಶ ಪ್ರವಾಸ ಅಥವಾ ವಿದೇಶಿ ಕಂಪನಿಗಳೊಂದಿಗಿನ ಒಪ್ಪಂದ ಸಫಲತೆಯನ್ನು ಕಾಣಲಿದೆ.
ಕರ್ಕಾಟಕ ರಾಶಿ
ಸೂರ್ಯನ ರಾಶಿ ಪರಿವರ್ತನೆಯ ಈ ಸಮಯದಲ್ಲಿ ಕರ್ಕಾಟಕ ರಾಶಿಯವರು ಜಾಗರೂಕರಾಗಿರುವುದು ಅವಶ್ಯಕ. ಈ ಸಮಯವು ಕಷ್ಟಕರವಾಗುವ ಸಾಧ್ಯತೆ ಇದೆ. ಗೌರವಾದರಗಳು ವೃದ್ಧಿಸಲಿವೆ. ಕಾರ್ಯ-ವ್ಯಾಪಾರವು ಸಾಧಾರಣವಾಗಿರಲಿದೆ. ಆಕಸ್ಮಿಕ ಖರ್ಚು ಮತ್ತು ಧನಹಾನಿಯಾಗುವ ಸಂಭವ ಸಹ ಎದುರಾಗಬಹುದಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ಇದನ್ನು ಓದಿ: ಬುಧಗ್ರಹದ ಈ ಗ್ರಹಚಾರದಿಂದ ಪಾರಾಗಲು ಇಲ್ಲಿವೆ ಪರಿಹಾರಗಳು...
ಸಿಂಹ ರಾಶಿ
ಈ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯವರಿಗೆ ಮಿಶ್ರಫಲ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಉತ್ತಮ. ಕಾರ್ಯ- ವ್ಯಾಪಾರದ ದೃಷ್ಟಿಯಿಂದ ಈ ಗೋಚಾರ ಉತ್ತಮವಾಗಿದೆ. ಈ ರಾಶಿಯ ಮಹಿಳೆಯರಿಗೆ ಕಷ್ಟದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಗೌರವಾದರಗಳು ಹೆಚ್ಚಲಿವೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಕಡೆಯಿಂದ ನಿರೀಕ್ಷಿಸಿದ್ದ ಕೆಲಸ ಸಫಲತೆಯನ್ನು ಕಾಣಲಿದೆ.
ಕನ್ಯಾ ರಾಶಿ
ಸೂರ್ಯ ಗ್ರಹದ ಈ ಗೋಚಾರವು ಕನ್ಯಾ ರಾಶಿಯ ವ್ಯಕ್ತಿಗಳಿಗೆ ಕೋರ್ಟ್ ವ್ಯವಹಾರಗಳ ನಿರ್ಣಯವು ಅನುಕೂಲವಾಗುವಂತೆ ಬರುತ್ತವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಅಷ್ಟೇ ಅಲ್ಲದೆ ತಂದೆ –ತಾಯಿಯ ಆರೋಗ್ಯದ ಬಗ್ಗೆ ನಿಗಾವಹಿಸುವುದು ಉತ್ತಮ. ಈ ಅವಧಿಯಲ್ಲಿ ಸಾಲ ಕೊಡದಿರುವುದು ಒಳ್ಳೆಯದು.
ತುಲಾ ರಾಶಿ
ವಿದ್ಯಾರ್ಥಿಗಳಿಗೆ ಈ ಸಮಯ ಕಠಿಣವಾಗಿರುತ್ತದೆ. ಓದಿನ ಕಡೆ ಹೆಚ್ಚು ಗಮನಹರಿಸುವುದು ಉತ್ತಮ. ವ್ಯಾಪಾರಿಗಳಿಗೆ ಈ ಯೋಗ ಬಹಳ ಉತ್ತಮವಾಗಿದ್ದು, ಹೊಸ ಕಾರ್ಯಗಳನ್ನು ಆರಂಭಿಸಲು ಇದು ಉತ್ತಮ ಸಮಯವಾಗಿದೆ.
ವೃಶ್ಚಿಕ ರಾಶಿ
ಕುಟುಂಬ ಕಲಹದಿಂದ ಮಾನಸಿಕ ಅಶಾಂತಿಯು ಹೆಚ್ಚುತ್ತದೆ. ಮಾಡುತ್ತಿರುವ ಕಾರ್ಯಗಳಿಗೆ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಕೊನೆಯಲ್ಲಿ ಜಯ ನಿಮಗೇ ಸಿಗುತ್ತದೆ, ಹಾಗಾಗಿ ಪರಿಶ್ರಮವನ್ನು ಮುಂದುವರಿಸುವುದು ಉತ್ತಮ. ತಂದೆ-ತಾಯಿಯ ಆರೋಗ್ಯದ ಕಾಳಜಿ ವಹಿಸುವುದು ಒಳ್ಳೆಯದು.
ಧನು ರಾಶಿ
ಸಕಲ ಕಾರ್ಯಗಳಲ್ಲಿ ಸಫಲತೆ ಸಿಗುತ್ತದೆ. ಶಕ್ತಿಯು ವೃದ್ಧಿಸುವುದಲ್ಲದೆ, ನಿರ್ಣಯವನ್ನು ತೆಗೆದು ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ. ಈ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಮಕರ ರಾಶಿ
ಈ ಗೋಚಾರವು ಮಿಶ್ರ ಪರಿಣಾಮವನ್ನು ನೀಡಲಿದೆ. ಮಾನಸಿಕ ಅಶಾಂತಿ ಕಾಡುತ್ತದೆ. ಆರ್ಥಿಕವಾಗಿ ಸಬಲರಾಗುತ್ತೀರಿ. ಆಕಸ್ಮಿಕ ಧನಪ್ರಾಪ್ತಿ ಯೋಗವಿದೆ.ಆರೋಗ್ಯದ ಕಾಳಜಿ ವಹಿಸುವುದು ಉತ್ತಮ. ಕೋರ್ಟ್ ವ್ಯವಹಾರಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ.
ಕುಂಭ ರಾಶಿ
ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿಭಾಗಗಳ ಸೇವೆಗೆ ಆಹ್ವಾನ ಬರುವ ಸಾಧ್ಯತೆ ಇದೆ. ಕುಟುಂಬ ಕಲಹದಿಂದ ಮಾನಸಿಕ ಅಶಾಂತಿಯು ಹೆಚ್ಚುತ್ತದೆ. ಮೇಲಧಿಕಾರಿಗಳ ಜೊತೆ ಬಾಂಧವ್ಯ ಕೆಡದಂತೆ ನೋಡಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.
ಇದನ್ನು ಓದಿ: ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..!
ಮೀನ ರಾಶಿ
ಈ ಗೋಚಾರವು ಈ ರಾಶಿಯವರಿಗೆ ಒತ್ತಡದ ಸಮಯವಾಗಿರಲಿದೆ. ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ. ಕೋರ್ಟ್ ವ್ಯವಹಾರಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ವಿದೇಶಿ ನಾಗರಿಕತೆಗೆ ಸಂಬಂಧ ಪಟ್ಟ ಒಪ್ಪಂದ ಸಫಲತೆಯನ್ನು ಕಾಣಲಿದೆ.