Sun Transit 2022: 3 ರಾಶಿಗಳಿಗೆ ಕೇಂದ್ರ ತ್ರಿಕೋನ ರಾಜಯೋಗದ ಲಾಭ

By Suvarna NewsFirst Published Nov 22, 2022, 3:37 PM IST
Highlights

ಸಧ್ಯ ಸೂರ್ಯ ಗ್ರಹವು ವೃಶ್ಚಿಕ ರಾಶಿಯಲ್ಲಿ ಸಂಕ್ರಮಣವಾಗಿದೆ. ಇದರಿಂದ ವಿಶೇಷವಾದ ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗವು 3 ರಾಶಿಗಳಿಗೆ ಅಪಾರ ಪ್ರಯೋಜನಕಾರಿಯಾಗಿದೆ. 

ಪ್ರತಿಯೊಂದು ಗ್ರಹವೂ ಆಗಾಗ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತಿರುತ್ತದೆ. ಇದೀಗ ನವೆಂಬರ್‌ನಲ್ಲಿ ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಗಿ ಕೇಂದ್ರ ತ್ರಿಕೋಣ ರಾಜಯೋಗವು ಸೃಷ್ಟಿಯಾಗಿದೆ. 
ಈ ಯೋಗವು ಅಪಾರ ಅದೃಷ್ಟ ತರುವ ಯೋಗವಾಗಿದ್ದು, ಇದು ವೃತ್ತಿಯಲ್ಲಿ ಬಡ್ತಿ, ಸಮಾಜದಲ್ಲಿ ಗೌರವ, ಗಳಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜಾತಕದಲ್ಲಿ 4, 7, 10ರಂಥ 3 ಕೇಂದ್ರ ಮನೆಗಳು ಮತ್ತು 1, 5, 9 ರಂಥ 3 ತ್ರಿಕೋನ ಮನೆಗಳು ತಮ್ಮಲ್ಲಿ ಸಂಯೋಗ ಅಥವಾ ರಾಶಿಚಕ್ರ ಬದಲಾವಣೆಗಳನ್ನು ಮಾಡಿದಾಗ, ಕೇಂದ್ರ ತ್ರಿಕೋನ ರಾಜಯೋಗ(Kendra Tirkon Rajyog) ರೂಪುಗೊಳ್ಳುತ್ತದೆ. 

ಈ ಯೋಗದ ಪ್ರಭಾವವು ದೇಶ, ಜಗತ್ತು ಮತ್ತು ಎಲ್ಲ ರಾಶಿಚಕ್ರ ಚಿಹ್ನೆಗಳ(Zodiac signs) ಮೇಲೆ ಇರುತ್ತದೆ. ಆದರೆ 3 ರಾಶಿಚಕ್ರದ ಚಿಹ್ನೆಗಳು ಈ ಯೋಗದ ಪ್ರಭಾವದಿಂದ ಅಪಾರವಾದ ಸಂಪತ್ತನ್ನು ಪಡೆಯಬಹುದು. ಈ ಅದೃಷ್ಟವಂತ ರಾಶಿಚಕ್ರಗಳು ಯಾವುವು ಎಂದು ತಿಳಿಯೋಣ.

ಸಿಂಹ ರಾಶಿ(Leo): ಕೇಂದ್ರ ತ್ರಿಕೋನ ರಾಜಯೋಗವು ನಿಮ್ಮ ರಾಶಿಗೆ ಉಂಟಾಗುತ್ತಿದೆ. ಈ ಯೋಗವು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಆದ್ದರಿಂದ, ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯ ಆನಂದವನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಆಸ್ತಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡಿದರೆ, ಉತ್ತಮ ಹಣವನ್ನು ಗಳಿಸಬಹುದು. ಅದೇ ಸಮಯದಲ್ಲಿ, ನಿಮ್ಮ ತಾಯಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಇದರೊಂದಿಗೆ ತಾಯಿಯ ಸಹಾಯದಿಂದಲೂ ಹಣ ಗಳಿಸಬಹುದು. ಮತ್ತೊಂದೆಡೆ, ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು.

ಮೀನದಲ್ಲಿ ಗುರು ಮಾರ್ಗಿ; ಅಂತೂ ಜಗತ್ತಿಗೆ ಒಳ್ಳೆ ಟೈಂ ಬಂತು!

ಕುಂಭ ರಾಶಿ(Aquarius): ಕೇಂದ್ರ ತ್ರಿಕೋನ ರಾಜಯೋಗವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ, ನಿಮ್ಮ ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ನೀವು ನೋಡಬಹುದು. ಜೊತೆಗೆ ಆರ್ಥಿಕವಾಗಿಯೂ ಸದೃಢರಾಗುತ್ತೀರಿ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯಬಹುದು. ಇದರೊಂದಿಗೆ ಕುಟುಂಬದಲ್ಲಿ ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮವಿರಬಹುದು. ಈ ಸಮಯದಲ್ಲಿ ನೀವು ರಹಸ್ಯ ಶತ್ರುಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ಏಕೆಂದರೆ ಗ್ರಹಗಳ ಚಲನೆ ನಿಮ್ಮ ಪರವಾಗಿರುತ್ತದೆ.

Guru Margi 2022: ಕಟಕದಿಂದ ಮೀನದವರೆಗೆ 5 ರಾಶಿಗಳಿಗೆ ಗುರು ತರುವ ಶುಭಯೋಗ, ನಿಮ್ಮ ರಾಶಿಫಲ ನೋಡಿ..

ಮಿಥುನ ರಾಶಿ(Gemini): ಕೇಂದ್ರ ತ್ರಿಕೋನ ರಾಜಯೋಗವು ಮಿಥುನ ರಾಶಿಯವರಿಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಪಾಲುದಾರಿಕೆ ಮತ್ತು ವೈವಾಹಿಕ ಜೀವನದ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಇದರೊಂದಿಗೆ ದಾಂಪತ್ಯ ಜೀವನವೂ ಮಧುರವಾಗಿರುತ್ತದೆ. ಸೂರ್ಯನ ಗ್ರಹದ ಪ್ರಭಾವದಿಂದಾಗಿ, ಈ ಅವಧಿಯಲ್ಲಿ ನಿಮ್ಮ ಮನೋಬಲವು ಹೆಚ್ಚಾಗುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನಿಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಯೋಜನೆಯನ್ನು ಸಹ ನೀವು ಮಾಡಬಹುದು.

click me!