Shiva Purana : ಶಿವನ ಐದು ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಗೊತ್ತಾ?

By Suvarna NewsFirst Published Nov 22, 2022, 3:35 PM IST
Highlights

ಶಿವ, ಪಾರ್ವತಿ, ಗಣಪತಿ, ಕಾರ್ತಿಕೇಯ. ನಾವು ಇವ್ರ ಬಗ್ಗೆ ತಿಳಿದಿದ್ದೇವೆ. ಆದ್ರೆ ಶಿವನ ಬಗ್ಗೆ ತಿಳಿಯೋದು ಸಾಕಷ್ಟಿದೆ. ಶಿವನಿಗೆ ಐದು ಹೆಣ್ಣು ಮಕ್ಕಳು ಕೂಡ ಇದ್ದರು. ಅವರ ಹುಟ್ಟು ಹೇಗಾಯ್ತು? ಅವರು ಯಾರು ಎಂಬ ಮಾಹಿತಿ ಇಲ್ಲಿದೆ.
 

ಭಗವಂತ ಶಿವನ ಕುಟುಂಬದ ವಿಷ್ಯ ಬಂದಾಗ ನಾವು ಗಣೇಶ ಮತ್ತು ಕಾರ್ತಿಕೇಯನ ಹೆಸರನ್ನು ಮೊದಲು ಹೇಳ್ತೇವೆ. ಗಣೇಶ, ಕಾರ್ತಿಕೇಯ, ಅಶೋಕ ಸುಂದರಿ, ಜ್ಯೋತಿ, ಮಾನಸ ಮತ್ತು ಜಲಂಧರ್ ಇವರು ಶಿವನ ಮಕ್ಕಳು ಎಂಬುದು ಅನೇಕರಿಗೆ ತಿಳಿದಿದೆ. ಆದ್ರೆ ಇವರಲ್ಲದೆ  ಶಿವನಿಗೆ 5 ಹೆಣ್ಣು ಮಕ್ಕಳಿದ್ದರು. ಈ ವಿಷ್ಯ ಅನೇಕರಿಗೆ ತಿಳಿದಿಲ್ಲ. ಮಹಾದೇವನ ಐದು ಹೆಣ್ಣು ಮಕ್ಕಳಿಗೂ ಪೂಜೆ ನಡೆಯುತ್ತದೆ. ಅವರು ವಿಶೇಷ ವರವನ್ನು ಪಡೆದಿದ್ದಾರೆ. ನಾವಿಂದು ಶಿವನ ಐದು ಹೆಣ್ಣು ಮಕ್ಕಳ ಬಗ್ಗೆ  ಮಾಹಿತಿ ನೀಡ್ತೇವೆ.

ಶಿವ (Shiva) ಮತ್ತು ತಾಯಿ ಪಾರ್ವತಿ (Parvati) ಯ ಪುತ್ರಿಯರ ವರ್ಣನೆ ಶಿವ ಪುರಾಣ (Shiva Purana) ದಲ್ಲಿ ಕಂಡುಬರುತ್ತದೆ. ಶಿವ ಪುರಾಣದಲ್ಲಿ, ಶಿವನಿಗೆ ಹೇಗೆ ಪುತ್ರಿಯರು ಜನಿಸಿದ್ರು ಎನ್ನುವ ಬಗ್ಗೆ ಹೇಳಲಾಗಿದೆ.

ಶಿವ ಮತ್ತು ತಾಯಿ ಪಾರ್ವತಿ ಸರೋವರದಲ್ಲಿ ಧ್ಯಾನ (Meditation) ಮಾಡುತ್ತಿದ್ದಾಗ ಶಿವನ ಮುಖದಲ್ಲಿ ಮಸುಕಾದ ನಗು ಕಾಣಿಸಿಕೊಂಡಿತು. ಆ ನಗುವಿನಿಂದಲೇ 5 ಮುತ್ತುಗಳು ಕೆರೆಗೆ ಬಿದ್ದವು. ಆ ಐದು ಮುತ್ತುಗಳಿಂದ ಐದು ಹುಡುಗಿಯರು ಜನಿಸಿದರು. ಆದರೆ ಈ ಹುಡುಗಿಯರು ಮಾನವ ರೂಪದಲ್ಲಿರುವ ಬದಲು ಹಾವಿ (Snake) ನ ರೂಪದಲ್ಲಿ ಜನಿಸಿದರು ಎಂದು ಗ್ರಂಥದಲ್ಲಿ ಹೇಳಲಾಗುತ್ತದೆ.  ಧ್ಯಾನದಲ್ಲಿ ಮಗ್ನಳಾದ ಪಾರ್ವತಿ ತಾಯಿಗೆ ಮಹಾದೇವನಿಂದ ಈ ಹೆಣ್ಣು ಮಕ್ಕಳು ಹುಟ್ಟಿದ್ದಾರೆಂದು ತಿಳಿದಿರಲಿಲ್ಲ. ಆದ್ರೆ ಮಹಾದೇವನಿಗೆ ತನ್ನ ಇತರ ಮಕ್ಕಳಂತೆ ತನ್ನ ಹೆಣ್ಣುಮಕ್ಕಳ ಮೇಲೆ ಪ್ರೀತಿಯಿತ್ತು. ಇದೇ ಕಾರಣಕ್ಕೆ ಬೆಳಗಿನ ಬ್ರಹ್ಮ ಮುಹೂರ್ತದಲ್ಲಿ ಈ ಐದು ಹೆಣ್ಣು ಮಕ್ಕಳೊಂದಿಗೆ ಆಟವಾಡಲು ಪ್ರತಿ ದಿನ ಹೋಗುತ್ತಿದ್ದ.

ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

ತಾಯಿ ಪಾರ್ವತಿಗೆ ಸತ್ಯ ತಿಳಿದಿದ್ದು ಹೇಗೆ? : ಒಂದು ದಿನ ತಾಯಿ ಪಾರ್ವತಿಗೆ ಪ್ರತಿ ದಿನ ಮುಂಜಾನೆ ಈಶ್ವರ ಎಲ್ಲಿಗೆ ಹೋಗ್ತಿದ್ದಾನೆ ಎಂಬ ಪ್ರಶ್ನೆ ಮೂಡಿತ್ತು. ಇದೇ ಕಾರಣಕ್ಕೆ ಪಾರ್ವತಿ ಶಿವನನ್ನು ಹಿಂಬಾಲಿಸಿದಳು. ಆಗ ಸತ್ಯ ತಿಳಿಯಿತು. ಪಾರ್ವತಿಯು ಸರೋವರದ ಬಳಿಗೆ ಬಂದಾಗ ಶಿವನು ಆ ಐದು ಹೆಣ್ಣುಮಕ್ಕಳ ಮೇಲೆ ತಂದೆಯಂತೆ ಅಪಾರವಾದ ಪ್ರೀತಿ ನೀಡುವುದನ್ನು ನೋಡಿದಳು. ಆದರೆ ಆ ಹೆಣ್ಣುಮಕ್ಕಳು ಯಾರೆಂದು ಪಾರ್ವತಿಗೆ ತಿಳಿದಿರಲಿಲ್ಲ. ಹಾವಿನ ಮರಿಗಳು ಪತಿಗೆ ತೊಂದರೆ ನೀಡಿದ್ರೆ ಎಂದು ಆಲೋಚನೆ ಮಾಡಿದ ಪಾರ್ವತಿ, ಅವರನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಳು. ಶಿವನಿಗೆ  ಪಾರ್ವತಿಯ ಉದ್ದೇಶ ಗೊತ್ತಾಯಿತು. ಆತ ಪಾರ್ವತಿಯನ್ನು ತಡೆದನು. ಆಗ ಪಾರ್ವತಿ, ಹಾವಿನ ಹುಡುಗಿಯರು ಯಾರೆಂದು ಕೇಳಿದಳು. ಆಗ ಶಿವ, ತನ್ನ ಮುಖದಿಂದ ಹುಟ್ಟಿದ ಮಕ್ಕಳೆಂದು, ಹಾವಿನ ರೂಪದಲ್ಲಿ ಜನಿಸಿದ್ದಾರೆಂದು, ಈ ಹೆಣ್ಣು ಮಕ್ಕಳಿಗೆ ನೀನೇ ತಾಯಿ ಎಂದು ತಿಳಿಸಿದ.

ಭಗವಂತ ಶಿವನ ಹೆಣ್ಣುಮಕ್ಕಳ ಹೆಸರುಗಳು ಏನು ? : ಭಗವಂತ ಶಿವನ ಈ ಐದು ಸರ್ಪ ಪುತ್ರಿಯರ ಹೆಸರುಗಳು ಜಯ, ವಿಷರ, ಶಮಿಲ್ಬರಿ, ದೇವ ಮತ್ತು ದೋತಲಿ. ಶಿವನು ತನ್ನ ಹೆಣ್ಣುಮಕ್ಕಳಿಗೆ ವಿಶೇಷವಾದ ವರವನ್ನು ನೀಡಿದನೆಂದು ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಮನೆಯಲ್ಲಿ ಬರ್ಡ್ಸ್ ಇವೆಯಾ? ಯಶಸ್ಸಿಗೆ ಅಡ್ಡಿಗಾಲು ಪಂಜರದಲ್ಲಿರುವ ಪಕ್ಷಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಯಾರು ಈ ನಾಗರಹಾವನ್ನು ಪೂಜಿಸುತ್ತಾರೋ ಅವರ ಕುಟುಂಬವು ಹಾವಿನ ಕಡಿತಕ್ಕೆ ಒಳಗಾಗುವುದಿಲ್ಲ ಎಂದು ಶಿವನು ತನ್ನ ಹೆಣ್ಣುಮಕ್ಕಳ ಬಗ್ಗೆ ಹೇಳಿದನು. ಹಾಗೆ ಈ ನಾಗರ ದೇವಿಯರ ಪೂಜೆ ಮಾಡಿದ್ರೆ ಮನೆಯಲ್ಲಿ ಧನ-ಧಾನ್ಯಗಳಿಗೆ ಕೊರತೆಯಾಗುವುದಿಲ್ಲ. ಶ್ರಾವಣ ಕೃಷ್ಣ ಪಂಚಮಿ ಮತ್ತು ಶ್ರಾವಣ ಶುಕ್ಲ ಪಂಚಮಿಯ ದಿನದಂದು ಈ ಐದು ಹಾವುಗಳನ್ನು ಪೂಜಿಸಲಾಗುತ್ತದೆ. 

click me!