Sun Mahadasha: ಸೂರ್ಯ ಮಹಾದಶಾದಲ್ಲಿ ಒಳ್ಳೆಯದಾಗ್ಬೇಕೆಂದ್ರೆ ಹೀಗ್ ಮಾಡಿ

By Suvarna News  |  First Published May 20, 2023, 12:41 PM IST

ಗ್ರಹಗಳು ಬಲವಾಗಿದ್ದರೆ ಸುಖ ಜೀವನ ಸಾಧ್ಯ. ಗ್ರಹ, ನಕ್ಷತ್ರಗಳ ಕೃಪೆ ಸಿಗಲು ನಾವು ನಾನಾ ಉಪಾಯಗಳನ್ನು ಮಾಡ್ಬೇಕಾಗುತ್ತದೆ. ಕಣ್ಣಿಗೆ ಕಾಣುವ ದೇವರು ಸೂರ್ಯನನ್ನು ಒಲಿಸಿಕೊಳ್ಳಲು, ಆತನ ಆಶೀರ್ವಾದ ಪಡೆಯಲು ನೀವೇನು ಮಾಡ್ಬೇಕು ಅಂತಾ ನಾವು ಹೇಳ್ತೇವೆ.
 


ಗ್ರಹ, ನಕ್ಷತ್ರಗಳ ಬದಲಾವಣೆ ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಗ್ರಹಗಳು ಸ್ಥಾನ ಬದಲಿಸಿದಂತೆ ಅಥವಾ ಜಾತಕದಲ್ಲಿ ಗ್ರಹಗಳು ಯಾವ ಸ್ಥಾನದಲ್ಲಿದೆ ಎನ್ನುವುದ್ರ ಮೇಲೆ ನಮ್ಮ ಸುಖ, ಸಂತೋಷ, ದುಃಖಗಳು ನಿಂತಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾದಶಾಕ್ಕೂ ಮಹತ್ವ ನೀಡಲಾಗಿದೆ. ಗ್ರಹಗಳ ಮಹಾದಶಾ, ಮನುಷ್ಯನ ಬದುಕಿನಲ್ಲಿ ಬದಲಾವಣೆ ತರುತ್ತದೆ. ಮಹಾದಶಾ ಉತ್ತಮವಾಗಿದ್ದರೆ ಲಾಭ ಹೆಚ್ಚು. ಅದೇ ಕೆಟ್ಟ ಸ್ಥಾನದಲ್ಲಿದ್ದರೆ ಒಂದಾದ್ಮೇಲೆ ಒಂದು ಸಮಸ್ಯೆ ನಮ್ಮನ್ನು ಕಾಡುತ್ತದೆ. ಅಹಂಕಾರ, ಸಂಸಾರದಲ್ಲಿ ಗಲಾಟೆ ಜೊತೆಗೆ ಹೃದಯ, ಕಣ್ಣಿನ ಸಮಸ್ಯೆ ಕೂಡ ಕಾಡುತ್ತದೆ. ನಾವಿಂದು ಸೂರ್ಯ ಮಹಾದಶಾದ ಪರಿಹಾರಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಸೂರ್ಯ (Sun) ಮಹಾದಶಾ (Mahadasha) ಪರಿಹಾರ : ಸೂರ್ಯ ಮಹಾದಶಾದ ಕೆಟ್ಟ ಪರಿಣಾಮದಿಂದ ತಪ್ಪಿಸಿಕೊಳ್ಳಲು ನೀವು ನಿತ್ಯ ಸೂರ್ಯನ ಪೂಜೆ ಮಾಡಬೇಕಾಗುತ್ತದೆ. 
• ತಾಮ್ರ (Copper) ದ ಪಾತ್ರೆಯಲ್ಲಿ ನೀರ (Water) ನ್ನು ತೆಗೆದುಕೊಂಡು ಅದಕ್ಕೆ ಕೆಂಪು (Red )ಚಂದನವನ್ನು ಹಾಕಿ ನಂತ್ರ ಸೂರ್ಯನಿಗೆ ಪ್ರತಿದಿನ ಅರ್ಘ್ಯವನ್ನು ಅರ್ಪಿಸಬೇಕು.
• ಭಾನುವಾರವನ್ನು ಸೂರ್ಯನಿಗೆ ಅರ್ಪಿಸಲಾಗಿದೆ. ಅದಕ್ಕಾಗಿಯೇ ಭಾನುವಾರ ಗೋಧಿ, ಕೆಂಪು ಚಂದನ, ಕಬ್ಬಿನ ಬೆಲ್ಲ, ತಾಮ್ರ, ಗುಲಾಬಿ ಬಟ್ಟೆ ಇತ್ಯಾದಿಗಳನ್ನು ನಿರ್ಗತಿಕರಿಗೆ ದಾನ ಮಾಡಿ.
• ಭಾನುವಾರದಂದು ಕೇಸರಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು.
• ಭಾನುವಾರದಂದು ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ಅಶ್ವತ್ಥ ಮರಕ್ಕೂ ನೀರನ್ನು ಅರ್ಪಿಸಿ. ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಸಂಜೆ ಬೆಳಗಿಸಿ.
• ನಿತ್ಯವೂ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ವೈಶಾಖ ಮಾಸದ ಎರಡನೇ ಭಾನುವಾರದಿಂದ ಸತತ 43 ದಿನಗಳ ಕಾಲ ಸ್ನಾನ ಮಾಡಿ ಶ್ರೀಗಂಧ ಹಚ್ಚಿ ಪೂರ್ವಾಭಿಮುಖವಾಗಿ ಕುಳಿತು  ಆದಿತ್ಯ ಹೃದಯ ಸ್ತ್ರೋತ್ರವನ್ನು ಪಠಿಸಬೇಕು.
• ಸೂರ್ಯನ ಮಹಾದಶಾದಲ್ಲಿ  ಜನರು ಓಂ ರಂ ರವಯೇ ನಮಃ, ಓಂ ಘೃಣಿ ಸೂರ್ಯಾಯ ನಮಃ ಮಂತ್ರವನ್ನು ನಿಯಮಿತವಾಗಿ ಜಪಿಸಬೇಕು. 

Tap to resize

Latest Videos

Astrology Tips : ಸೂರ್ಯ ಮಹಾದಶಾ ನಿಮ್ಮ ಮೇಲೆ ಬೀರೋ ಕೆಟ್ಟ

• ಮಕರ ರಾಶಿಯವರನ್ನು ಹೊರತುಪಡಿಸಿ ತಾಮ್ರ ಅಥವಾ ಮಾಣಿಕ್ಯವನ್ನು ಧರಿಸಬೇಕು.
• ಹರಿವಂಶ ಪುರಾಣ ಮತ್ತು ರಾಮಚರಿತ ಮಾನಸ ಕಥೆಯನ್ನು ಪಠಿಸಬೇಕು. 
• ರೊಟ್ಟಿಗೆ ಕಬ್ಬಿನ ಬೆಲ್ಲವನ್ನು ಹಾಕಿ ಕೆಂಪು ಮುಖದ ಕೋತಿಗೆ ಆಹಾರವಾಗಿ ನೀಡಬೇಕು. 
• ಯಾವಾಗ್ಲೂ ಸತ್ಯವನ್ನೇ ಹೇಳಬೇಕು. ಸುಳ್ಳು ಹೇಳುವವರ ಸಹವಾಸವನ್ನು ನೀವು ಮಾಡಬಾರದು.
• ಸೂರ್ಯನನ್ನು ಸಾತ್ವಿಕ ಗ್ರಹವೆಂದು ಹೇಳಲಾಗುತ್ತದೆ. ಸೂರ್ಯನ ಕೃಪೆಗೆ ಪಾತ್ರರಾಗಲು ನೀವು ಪ್ರಾಮಾಣಿಕಕವಾಗಿರುವ ಜೊತೆಗೆ ಸಾತ್ವಿಕವಾಗಿರಬೇಕು.
• ಮಾತಂಗಿ ದೇವಿ, ಸೂರ್ಯ ಹಾಗೂ ಶ್ರೀರಾಮನ ಪೂಜೆ ಮಾಡುವುದು ಸೂಕ್ತ. 
• ಮದ್ಯ, ಮಾಂಸವನ್ನು ತ್ಯಜಿಸಬೇಕು. ಆರೋಗ್ಯಕರ ಆಹಾರ ಸೇವನೆ ಮಾಡಬೇಕು. 
• ಸೂರ್ಯಮಹಾದಶಾದ ಅಡ್ಡಪರಿಣಾಮದಿಂದ ತಪ್ಪಿಸಿಕೊಳ್ಳಬೇಕು ಎನ್ನುವವರು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕು.
• ವಿಷ್ಣುವಿನ ಆರಾಧನೆಯನ್ನು ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ.
• ಹಸುವಿಗೆ ಬೆಲ್ಲ ಮತ್ತು ಗೋಧಿ ನೀಡುವ ಜೊತೆಗೆ ಸೂರ್ಯನ ಮಂತ್ರವನ್ನು 7000 ಬಾರಿ ಪಠಿಸಬೇಕು.
• ಸೂರ್ಯ ಯಂತ್ರ ಧರಿಸುವುದು ಕೂಡ ಪರಿಣಾಮ ಬೀರುತ್ತದೆ. 

ಶುಕ್ರವಾರ ಹೀಗೆಲ್ಲಾ ಮಾಡ್ಬೇಡಿ, ಲಕ್ಷ್ಮಿಗೆ ಸಿಟ್ಟು ಬರುತ್ತೆ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಮಹಾದಶಾ ಮತ್ತು ಇತರ ಗ್ರಹಗಳ ಅಂತರದಶಾ ಬಗ್ಗೆಯೂ ಹೇಳಲಾಗಿದೆ. ಸೂರ್ಯ ಮಹಾದಶಾ ಚಂದ್ರ, ಮಂಗಳ, ಗುರು ಮತ್ತು ಶುಕ್ರ ಗ್ರಹಗಳ ಅಂತರ ದಶದೊಂದಿಗೆ ಧನಾತ್ಮಕವಾಗಿರುತ್ತದೆ. ಆದ್ರೆ ಶನಿ ಮತ್ತು ರಾಹು ಜೊತೆ ನಕಾರಾತ್ಮಕವಾಗಿರುತ್ತದೆ. ಆಗ ಕೆಲ ತೊಂದರೆಯನ್ನು ಎದುರಿಸಬೇಕಾಗುತ್ತದೆ.
 

click me!