ಸಾಮಾನ್ಯವಾಗಿ ಶನಿವಾರದಂದು ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಆದರೆ, ಇಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇಂದಿನ ದಿನ ವಿಶೇಷತೆಯೇನು?
ಇಂದು ಶನಿವಾರ. ಸಾಮಾನ್ಯವಾಗಿ ಶನಿವಾರವನ್ನು ಯಾವುದೇ ಉತ್ತಮ ಕಾರ್ಯಗಳಿಗೆ ಪರಿಗಣಿಸುವುದಿಲ್ಲ. ಆದರೆ, ಇಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇಷ್ಟೊಂದು ಮಹತ್ವದ ಕಾರ್ಯಕ್ಕೆ ಶನಿವಾರವನ್ನು ಆರಿಸಿಕೊಂಡಿರುವುದಾದರೂ ಏಕೆ? ಈ ದಿನದ ಮಹತ್ವವೇನು? ಈ ಬಗ್ಗೆ ಶ್ರೀಕಂಠ ಶಾಸ್ತ್ರಿಗಳು ವಿವರಿಸಿದ್ದಾರೆ.
ಅದರಂತೆ, ಇಂದು ಶನಿವಾರ, ಜ್ಯೇಷ್ಠ ಮಾಸದ ಶುಕ್ಲ ಪಕ್ಷ ಈ ದಿನದಿಂದ ಪ್ರಾರಂಭ. ಬೆಳಗಿನ ಕಾಲದಲ್ಲಿ ಕೃತ್ತಿಕಾ ನಕ್ಷತ್ರವಿದ್ದರೂ, ಪ್ರಮಾಣವಚನ ಸ್ವೀಕಾರ ವೇಳೆಗೆ ರೋಹಿಣಿ ನಕ್ಷತ್ರ ಬರುತ್ತದೆ. ಶನಿವಾರದಲ್ಲಿ ರೋಹಿಣಿ ನಕ್ಷತ್ರ ಸೇರಿದರೆ ಅದು ಅಮೃತ ಸಿದ್ಧಿಫಲವನ್ನು ಸೂಚಿಸುತ್ತದೆ. ಈ ನಕ್ಷತ್ರ ಅತ್ಯಂತ ಉತ್ಕೃಷ್ಟ ನಕ್ಷತ್ರವಾಗಿದೆ. ಈ ಸಮಯ ಒಳ್ಳೆ ಕೆಲಸಕ್ಕೆ ಉತ್ತಮವಾಗಿದೆ. ಲಗ್ನಕ್ಕೆ ಗುರು ದೃಷ್ಟಿಯಿದ್ದರೇ ಇನ್ನೂ ತುಂಬಾ ಒಳ್ಳೆಯದು. ಒಟ್ಟಿನಲ್ಲಿ ಈ ದಿನ ಒಳ್ಳೆಯ ಕಾರ್ಯಕ್ಕೆ ತುಂಬಾ ಉತ್ತಮವಾಗಿದೆ. ಹಾಗಾಗಿ ಈ ದಿನ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಮುಹೂರ್ತ ವಿಶೇಷಗಳು
ರೋಹಿಣಿ ನಕ್ಷತ್ರ ಸ್ಥಿರ ನಕ್ಷತ್ರ
ಸ್ಥಿರತೆಯನ್ನು ಸೂಚಿಸುವ ನಕ್ಷತ್ರ
ಸಿಂಹ ಲಗ್ನದಲ್ಲಿ ಪ್ರಮಾಣವಚನ ಸ್ವೀಕಾರ
ಸಿಂಹ ಲಗ್ನವೂ ಸ್ಥಿರ ಲಗ್ನ
ಮಾಳಿಂಗರಾಯನ ಆಜ್ಞೆಯಂತೆ ಸಿದ್ದರಾಮಯ್ಯಗೆ ಸಿಎಂ ಹುದ್ದೆ: ವರ್ಷದ ಹಿಂದಿನ ಭವಿಷ್ಯ ನಿಜವಾಯ್ತು!
ಪಟ್ಟಾಭಿಷೇಕಕ್ಕೆ ಯೋಗ್ಯ ಲಗ್ನ
ಸ್ಥಿರ ಲಗ್ನದಲ್ಲಿ ಮಾಡುವ ಯಾವುದೇ ಕಾರ್ಯಗಳು ಸ್ಥಿರವಾಗಿರಲಿವೆ. ಹೀಗಾಗಿ, ಇಂದು ಅಧಿಕಾರ ಸ್ವೀಕರಿಸಿದರೆ, ಅದು ಕೂಡಾ ಸ್ಥಿರವಾಗಿರಲಿದೆ, ಯಾವುದೇ ಏರುಪೇರಿಲ್ಲದೆ ಮುಂದುವರಿದುಕೊಂಡು ಹೋಗುವುದು ಎಂಬ ನಂಬಿಕೆ ಇದಕ್ಕೆ ಕಾರಣ. ಲಗ್ನಕ್ಕೆ ಗುರು ದೃಷ್ಟಿಯಿರುವುದು ಶುಭ ಸೂಚಕ. ಲಗ್ನಾಧಿಪತಿ ದಿಗ್ಬಲದಿಂದ ಕೂಡಿದ್ದಾನೆ. ಕರ್ಮಾಧಿಪತಿ ಲಾಭದಲ್ಲಿರುವುದು ಶುಭ. ತ್ರಿಕೋಣ ಸ್ಥಾನದಲ್ಲಿ ಗುರುವಿದ್ದರೆ ಅದನ್ನು ಪಟ್ಟಾಭಿಷೇಕಕ್ಕೆ ಯೋಗ್ಯ ಲಗ್ನ ಎನ್ನಲಾಗುತ್ತದೆ. ಲಗ್ನದಿಂದ 9ನೇ ಮನೆಯಲ್ಲಿ ಗುರುವಿರುವುದು ಶುಭ.
ಉತ್ಕೃಷ್ಟ ನಕ್ಷತ್ರ
ರೋಹಿಣಿ ನಕ್ಷತ್ರ ಅತ್ಯಂತ ಉತ್ಕೃಷ್ಟ ನಕ್ಷತ್ರವಾಗಿದೆ. ಇದು ಮೇಲ್ಮುಖವಾಗಿ ಸಾಗುವ ನಕ್ಷತ್ರವಾಗಿದ್ದು, ಅಧಿಕಾರವೂ ಮೇಲ್ಮುಖವಾಗಿ ಸಾಗುವುದನ್ನು ಸೂಚಿಸುತ್ತದೆ. ಪ್ರತಿಪತ್ ತಿಥಿಯೊಂದು ಈ ದಿನದ ಕೊರತೆಯಾಗಿದೆ, ಅದಕ್ಕೆ ಅನಿವಾರ್ಯತೆಗಳಿರಬಹುದು. ಇದ್ದಿದ್ದರಲ್ಲಿ ಉತ್ತಮ ಮುಹೂರ್ತವನ್ನು ಆರಿಸಲಾಗುತ್ತದೆ ಎನ್ನುತ್ತಾರೆ ಶಾಸ್ತ್ರಿಗಳು.
Karnataka Election Results 2023: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿ ಪೀಠದಲ್ಲಿ ನಡೆದ ಆ ಹೋಮ ಕಾರಣನಾ