Astrology Tips : ಸೂರ್ಯ ಮಹಾದಶಾ ನಿಮ್ಮ ಮೇಲೆ ಬೀರೋ ಕೆಟ್ಟ ಪರಿಣಾಮವೇನು?

By Suvarna News  |  First Published May 19, 2023, 11:46 AM IST

ಎಲ್ಲ ಗ್ರಹಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಜಾತಕದಲ್ಲಿ ಗ್ರಹಗಳ ಸ್ಥಾನ ಸೂಕ್ತವಾಗಿದ್ದರೆ ಲಾಭ ಸಿಗುತ್ತದೆ. ಒಂದ್ವೇಳೆ ಅದು ದುರ್ಬಲವಾಗಿದ್ದರೆ ಕಷ್ಟಗಳು ಎದುರಾಗುತ್ತವೆ. ಜೀವನದಲ್ಲಿ ದೊಡ್ಡ ಪಾತ್ರ ನಿರ್ವಹಿಸುವ ಸೂರ್ಯ ದುರ್ಬಲನಾದ್ರೂ ಸಮಸ್ಯೆ ತಪ್ಪಿದ್ದಲ್ಲ.
 


ಸೂರ್ಯ ಎಲ್ಲ ಶಕ್ತಿಗಳ ಮೂಲ. ಸೂರ್ಯನನ್ನು ಅತಿದೊಡ್ಡ ಗ್ರಹವೆಂದು ಖಗೋಳ ಶಾಸ್ತ್ರದಲ್ಲಿ ಹೇಳಲಾಗಿದೆ. ವೈದಿಕ ಜ್ಯೋತಿಷ್ಯದಲ್ಲೂ ಸೂರ್ಯನನ್ನು ಶಕ್ತಿ, ಸ್ವಾಭಿಮಾನ, ಅಹಂಕಾರ ಮತ್ತು ತಂದೆಯ ಸೂಚಕ ಎಂದು ಹೇಳಲಾಗುತ್ತದೆ. ಸೂರ್ಯ ಪ್ರತಿಯೊಂದು ಜೀವಜಂತುವಿನ ಮೇಲೆ ಪ್ರಭಾವ ಬೀರುತ್ತಾನೆ. ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜಿಸಲಾಗುತ್ತದೆ. ಪ್ರತಿ ದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಭಾನುವಾರ ನೀರನ್ನು ಅರ್ಪಿಸುವ ಮೂಲಕ ಸೂರ್ಯನ ಕೃಪೆಗೆ ಪಾತ್ರರಾಗ್ತಾರೆ. ಸಂಪೂರ್ಣ ರಾಶಿ, ಸೂರ್ಯನ ಚಲನೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯ, ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿದ್ದರೆ ಅಧಿಕಾರ ಮತ್ತು ಖ್ಯಾತಿ ಪ್ರಾಪ್ತಿಯಾಗುತ್ತದೆ. ಸೂರ್ಯ ದುಷ್ಟ ಸ್ಥಾನದಲ್ಲಿದ್ದರೆ ಅಹಂಕಾರ, ಅನಾರೋಗ್ಯ ಸೇರಿದಂತೆ ನಾನಾ ಸಮಸ್ಯೆಗಳು ನಮ್ಮ ಬೆನ್ನು ಹತ್ತುತ್ತವೆ.

ಸೂರ್ಯ ಮಹಾದಶಾ ಹೇಗೆ ರೂಪಗೊಳ್ಳುತ್ತದೆ ?: ಎಲ್ಲಾ ಗ್ರಹಗಳ ಸಂಪೂರ್ಣ ಚಕ್ರ ಪೂರ್ಣಗೊಳ್ಳಲು ಸುಮಾರು 120 ವರ್ಷ ತೆಗೆದುಕೊಳ್ಳುತ್ತದೆ. ಈ ಚಕ್ರದ ಮೂರನೇ ಅವಧಿ ಸೂರ್ಯ ಮಹಾದಶಾ. ಇದು ಶುಕ್ರ ಮಹಾದಶಾದ ನಂತರ ಬರುತ್ತದೆ. ಸೂರ್ಯ ಮಹಾದಶಾ ಸುಮಾರು ಆರು ವರ್ಷಗಳ ಕಾಲ ಸಕ್ರಿಯವಾಗಿರುತ್ತದೆ. ಜಾತಕದಲ್ಲಿ ಸೂರ್ಯ ವ್ಯಕ್ತಿಯ ನಕ್ಷತ್ರಕ್ಕೆ ಹತ್ತಿರದಲ್ಲಿದ್ದಾಗ ಇದು ಸಂಭವಿಸುತ್ತದೆ. ಸೂರ್ಯ ತನ್ನ ಉತ್ಕೃಷ್ಟ ಚಿಹ್ನೆಯಾದ ಮೇಷದಲ್ಲಿ ಸ್ಥಿತಗೊಂಡಾಗ ಸೂರ್ಯ ಬಲಶಾಲಿಯಾಗುತ್ತಾನೆ. ಸೂರ್ಯ ತನ್ನ ದುರ್ಬಲ ಚಿಹ್ನೆಯಾದ ತುಲಾದಲ್ಲಿ ಸ್ಥಿತಗೊಂಡಾಗ ದುರ್ಬಲವಾಗುತ್ತಾನೆ. ಜನರ ಜೀವನದ ಮೇಲೆ ಸೂರ್ಯ ಮಹಾದಶಾ ಪರಿಣಾಮ ಬೀರುತ್ತದೆ.

Tap to resize

Latest Videos

ಜಾತಕದಲ್ಲಿ ಈ ಗ್ರಹ ದುರ್ಬಲವಾಗಿದ್ರೆ ಆ ಸಂಬಂಧ ಹೆಚ್ಚು ಸಮಯ ಉಳಿಯಲ್ಲ

ಸೂರ್ಯ (Sun) ನ ಮಹಾದಶಾ (Mahadasha) ದಿಂದಾಗುವ ಪರಿಣಾಮಗಳು : 
ಮಹಾದಶಾದಿಂದಾಗುವ ಧನಾತ್ಮಕ ಪ್ರಭಾವ :
ಮೇಷ (Aeris), ವೃಷಭ (Taurus), ಸಿಂಹ (Leo), ವೃಶ್ಚಿಕ (Scorpio) ಮತ್ತು ಧನು (Sagarittus) ರಾಶಿಗಳಲ್ಲಿ ಸೂರ್ಯನ ಮಹಾದಶಾ ಸ್ಥಾನವು ಧನಾತ್ಮಕ ಪರಿಣಾಮ (Positive Effect) ಬೀರುತ್ತದೆ. ಸೂರ್ಯ ಜಾತಕ (Horoscope) ದಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ಎಂಬುದರ ಮೇಲೆ ಪ್ರಭಾವವನ್ನು ಕಾಣಬಹುದು. ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನವು ಶುಭವಾಗಿದ್ದರೆ ಶುಭ ಫಲಗಳು ದೊರೆಯುತ್ತವೆ. ಪ್ರತಿಯೊಂದು ಆಸೆಯೂ ಈಡೇರುತ್ತದೆ.  ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಶುರುವಾಗಲಿದೆ. ಆಡಳಿತಾತ್ಮಕ ಹುದ್ದೆಗೆ ತಯಾರಿ ನಡೆಸುತ್ತಿರುವ ಜನರು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತಾರೆ. ಜನರಿಗೆ ಅಪಾರ ಸಂತೋಷ ಹಾಗೂ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಉನ್ನತ ಸ್ಥಾನ ತಲುಪಲು ನೆರವಾಗಲಿದೆ.  ಹೆಚ್ಚಿನ ಗೌರವ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಗುರಿಯನ್ನು ಸಾಧಿಸಲು ನೆರವಾಗಲಿದೆ. ಹಣ ಗಳಿಕೆ, ಆರ್ಥಿಕ ವೃದ್ಧಿಗೆ ಇದು ನೆರವಾಗಲಿದೆ. ಕುಟುಂಬಸ್ಥರೊಂದಿಗೆ ಆರೋಗ್ಯಕರ ಸಂಬಂಧ ಮುಂದುವರೆಯಲಿದೆ. ತಂದೆ-ಮಗನ ಸಂಬಂಧ ಗಟ್ಟಿಯಾಗಲಿದೆ. 

ಈ ಭಾಗಕ್ಕೆ ಕಾಡಿಗೆ ಹಚ್ಚಿದ್ರೆ ಮಗುವಿಗೆ ಯಾವ ದೃಷ್ಟಿಯೂ ತಾಗೋಲ್ಲ!

ಸೂರ್ಯನ ಮಹಾದಶಾದಿಂದಾಗುವ ನಕಾರಾತ್ಮಕ ಪ್ರಭಾವ :  ಜಾತಕದಲ್ಲಿ ಸೂರ್ಯನ ಸ್ಥಾನವು ಅಶುಭವಾಗಿದ್ದರೆ, ವ್ಯಕ್ತಿಯ ಸ್ವಭಾವ ಕೆಟ್ಟದಾಗಿ ಪರಿಣಾಮ ಬೀರಲಿದೆ. ಕೋಪ ಹೆಚ್ಚಾಗಲಿದೆ. ಅಹಂಕಾರದಿಂದ ಜೀವನ ಹಾಳಾಗಲಿದೆ. ತಂದೆಯೊಂದಿಗಿನ ಸಂಬಂಧ ಹಾಳಾಗಲಿದೆ.  ಸೂರ್ಯನ ಕೆಟ್ಟ ಸ್ಥಾನದಿಂದಾಗಿ ಹೃದಯ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾಗಲಿದೆ. ದರೋಡೆ ಅಥವಾ ಬೆಂಕಿ ಅಥವಾ ಚಂಡಮಾರುತದಂತಹ ವಿಪತ್ತುಗಳಿಂದ ಹಣವನ್ನು ಕಳೆದುಕೊಳ್ಳುವ ಭಯ ಜನರನ್ನು ಕಾಡಲಿದೆ. ಎಲ್ಲಾ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಜನರು ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಒಂದಾದ್ಮೇಲೆ ಒಂದರಂತೆ ಬೀಳುವ ಪೆಟ್ಟಿನಿಂದಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗ್ತಾನೆ. ಒತ್ತಡ ಹಾಗೂ ಆತಂಕದಿಂದ ಬಳಲುವ ಸಾಧ್ಯತೆಯಿರುತ್ತದೆ. ಹೊಟ್ಟೆ ಹಾಗೂ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಕಾಡಲಿದೆ. ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. 
 

click me!