ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವ ದಿನದಿಂದ ದಿನ ಮೆರುಗು ಪಡೆದುಕೊಳ್ಳುತ್ತಿದೆ. ಪಟ್ಟಣ, ಶ್ರೀ ಮಠದ ಆವರಣ ಎಲ್ಲೆಲ್ಲೂ ಜನಸಾಗರ. ಮಹಾಭಿಷೇಕದ ನಂತರ ಶಾರದೆ ಜಗತ್ ಪ್ರಸೂತಿಕ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಿ, ಬುಧವಾರ ವೃಷಭವಾಹನರೂಡಳಾಗಿ ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ಶೃಂಗೇರಿ (ಸೆ.29) : ಇಲ್ಲಿನ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವ ದಿನದಿಂದ ದಿನ ಮೆರುಗು ಪಡೆದುಕೊಳ್ಳುತ್ತಿದೆ. ಪಟ್ಟಣ, ಶ್ರೀ ಮಠದ ಆವರಣ ಎಲ್ಲೆಲ್ಲೂ ಜನಸಾಗರ. ಮಹಾಭಿಷೇಕದ ನಂತರ ಶಾರದೆ ಜಗತ್ ಪ್ರಸೂತಿಕ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಿ, ನಂತರ ಹಂಸವಾಹಿನಿ, ಹಂಸವಾಹಿನಿ(ಬ್ರಾಹ್ಮಿ) ಅಲಂಕಾರದಲ್ಲಿ ಕಂಗೊಳಿಸಿ, ಬುಧವಾರ ವೃಷಭವಾಹನರೂಡಳಾಗಿ ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ
ಬುಧವಾರ ಪೀಠದ ಅಧಿದೇವತೆಗೆ ವಿಶೇಷ ಪೂಜೆ,ಮಹಾಮಂಗಳಾರತಿ ನೆರವೇರಿತು. ವೃಷ ಎಂದರೆ ಪುಣ್ಯ. ಆದಿಶಕ್ತಿಯಾದ ಪಾರ್ವತಿ ಈಶ್ವರನ ಅರ್ಧಾಂಗಿಯಾಗಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ ಚಂದ್ರಲೇಖ ವಿಭೂಷಿತಳಾಗಿ ವೃಷಭವಾಹನರೂಡಳಾಗಿ ಶರನ್ನವರಾತ್ರಿ ಮಹೋತ್ಲವದಲ್ಲಿ ಭಕ್ತರನ್ನು ಅನುಗ್ರಹಿಸುವ ದೃಶ್ಯ ನಯನಮನೋಹರವಾಗಿತ್ತು.
ಶರನ್ನವರಾತ್ರಿ ಆರಂಭದಿಂದ ಪ್ರತಿದಿನ ನಡೆಯುವ ರಾಜಬೀದಿ ಉತ್ಸವ ದಸರೆಗೆ ಇನ್ನಷ್ಟುಮೆರಗು ನೀಡುತ್ತಿದೆ. ಈ ಉತ್ಸವದಲ್ಲಿ ತಾಲೂಕಿನ 9 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಭಕ್ತಾದಿಗಳು ಪ್ರತಿದಿನ ಸರದಿಯಾಗಿ ನವರಾತ್ರಿಯ ಒಂಬತ್ತು ದಿನಗಳ ರಾಜಬೀದಿ ಉತ್ಸವದಲ್ಲಿ ಪಾಲ್ಗೊಳುವುದು ಮತ್ತೊಂದು ವಿಶೇಷ. ಶೃಂಗೇರಿ ಹಾಗೂ ಅಕ್ಕಪಕ್ಕದ ತಾಲೂಕುಗಳ ಊರಿನ ಜನರು, ಜನಪ್ರತಿನಿದಿಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ವಿವಿಧ ಭಜನಾ ತಂಡಗಳು, ಕಲಾ ತಂಡಗಳು, ಸ್ಥಬ್ದಚಿತ್ರಗಳು, ಸಾಂಸ್ಕ್ರತಿಕ ತಂಡಗಳು,ಶ್ರೀ ಮಠದ ಆನೆ, ಕುದುರೆ, ಹಸು, ಛತ್ರಿಚಾಮರ, ದೇವಿಯ ಉತ್ಸವ ಮೂರ್ತಿ ಉತ್ಸವಕ್ಕೆ ಮೆರಗು ನೀಡುತ್ತಿವೆ.
ಪಟ್ಟಣದ ರಾಜಬೀದಿಯಲ್ಲಿ ಸಾಗಿ ನಂತರ ಮತ್ತೆ ಶಾರದಾಂಬಾ ದೇಗುಲಕ್ಕೆ ಉತ್ಸವ ಹಿಂತಿರುಗಿದ ನಂತರ ವ್ಯಾಖ್ಯಾನ ಪೀಠದಲ್ಲಿ ವಿರಾಜಮಾನವಾದ ಬಲಿ ಮೂರ್ತಿಗೆ ಪೂಜೆ ಸಲ್ಲುತ್ತದೆ. ನಂತರ ಉತ್ಸವ ಮೂರ್ತಿಜೊತೆ ಬಲಿ ಮೂರ್ತಿಯನ್ನು ಸ್ವರ್ಣಾ ರಥಾರೋಹಣ ಮಾಡಲಾಗುತ್ತದೆ. ಸ್ವರ್ಣಾರಥವನ್ನು ಶಾರದಾಂಬಾ ದೇಗುಲಕ್ಕೆ ಮೂರು ಪ್ರದಕ್ಷಿಣೆ ತರಲಾಗುತ್ತದೆ. ನಾದಸ್ವರದೊಂದಿಗೆ ನಡೆಯುವ ಈ ದಿಂಡಿ ಉತ್ಸವದ ವಿಶೇಷ ಆಚರಣೆಯಾಗಿದೆ.
ಈ ಸಂದರ್ಭದಲ್ಲಿ ದೇವಿಗೆ ಸಪ್ತಶತೀ ಪಾರಾಯಣ ಪಠಣ ನಡೆಯುತ್ತದೆ. ನಂತರ ಪೀಠದ ಅಧಿದೇವತೆ ಶಾರದೆಗೆ ಮಹಾಮಂಗಳಾರತಿ, ನಾಲ್ಕು ವೇದಪಾರಾಯಣ, ಪಂಚಾಂಗ ಪಠಣ, ಸಂಗೀತ ಸೇವೆ, ನಾದಸ್ವರವಾದನ ಮತ್ತು ಸರ್ವವಾದ್ಯ ಸಹಿತ ಅಷ್ಟಾವಧನ ಸೇವೆ, ದೇವಿಗೆ ಛತ್ರಚಾಮರ ಸೇವೆ ಸಲ್ಲುತ್ತದೆ. ಈ ಸೇವೆ ನಂತರ ಮತ್ತೆ ಶಾರದೆಗೆ ಮಂಗಳಾರತಿ ನಡೆಯುತ್ತದೆ.
Navratri 2022: ಇಂದಿನಿಂದ ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ: ಕೊಲ್ಲೂರು, ಶೃಂಗೇರಿಗಳಲ್ಲಿ ಶರನ್ನವರಾತ್ರಿ
ಶ್ರೀಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆದ ಸಾಂಸ್ಕ್ರತಿಕ ಮಹೋತ್ಸವದಲ್ಲಿ ಬೆಂಗಳೂರಿನ ವಿಧುಷಿ ಆರ್.ಲಲಿತಾ ಮತ್ತು ಸಂಂಗಡಿಗರಿಂದ ಹಾಡುಗಾರಿಕೆ ನಡೆಯಿತು. ರಾಜಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು ಗುರುವಾರ ಶಾರದೆಗೆ ಮಯೂರವಾಹನಲಂಕಾರ ನಡೆಯಲಿದೆ. ಸಾಂಸ್ಕ್ರತಿಕ ಮಹೋತ್ಸವದಲ್ಲಿ ಮಂಗಳೂರಿನ ವಿಧೂಷಿ ಶ್ರೇಯ ಕೊಳತ್ತಾಯ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.