Navratri 2022 day 4: ತಾಯಿ ಕೂಷ್ಮಾಂಡಾ ಪೂಜೆಯಿಂದ ವಯಸ್ಸು, ಕೀರ್ತಿ, ಆರೋಗ್ಯ ಪ್ರಾಪ್ತಿ

By Suvarna News  |  First Published Sep 29, 2022, 9:20 AM IST

ನವರಾತ್ರಿಯಲ್ಲಿ ಮಾ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಆರಾಧನೆ ನಡೆಯಲಿದೆ. ಈಕೆಯ ಪೂಜೆ ಹೇಗಿರಬೇಕು, ಆಕೆಯಿಂದ ಯಾವ ಫಲಸಿದ್ಧಿ ಸಾಧ್ಯ?


ನವರಾತ್ರಿಯ ಹಬ್ಬದ ನಾಲ್ಕನೇ ದಿನದಲ್ಲಿದ್ದೇವೆ. ನವರಾತ್ರಿಯ ಸಮಯದಲ್ಲಿ, ಮಾ ದುರ್ಗೆಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ, ತಾಯಿಯ ಕೂಷ್ಮಾಂಡ ರೂಪವನ್ನು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಬ್ರಹ್ಮಾಂಡವು ಸೃಷ್ಟಿಯಾಗದಿದ್ದಾಗ, ಸುತ್ತಲೂ ಕತ್ತಲೆ ಇತ್ತು. ಆಗ ದೇವಿಯ ಈ ರೂಪದ ಮೂಲಕ ಬ್ರಹ್ಮಾಂಡವು ಹುಟ್ಟಿತು. ಕೂಷ್ಮಾಂಡಾ ದೇವಿಯು ಅಷ್ಟಭುಜಾಕೃತಿಯಿಂದ ಆಶೀರ್ವದಿಸಲ್ಪಟ್ಟಿದ್ದಾಳೆ.

ಹಾಗಾಗಿ ಆಕೆಯನ್ನು ಅಷ್ಟಭುಜ ದೇವತೆ ಎಂದೂ ಕರೆಯುತ್ತಾರೆ. ಭಕ್ತರ ಕಷ್ಟಗಳನ್ನು, ರೋಗಗಳನ್ನು ಮತ್ತು ದುಃಖಗಳನ್ನು ನಾಶ ಮಾಡುವವಳು ಕೂಷ್ಮಾಂಡ. ಕೂಷ್ಮಾಂಡ ಮಾತೆಯ ಆರಾಧನೆಯು ಬುದ್ಧಿವಂತಿಕೆಯನ್ನು ಕರುಣಿಸುತ್ತದೆ ಮತ್ತು ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ಕೂಷ್ಮಾಂಡಾ ದೇವಿಯ ಪೂಜಾ ವಿಧಾನ, ಮಂತ್ರ ಮತ್ತು ಮಾ ಕೂಷ್ಮಾಂಡಳಿಗೆ ಏನು ಅರ್ಪಿಸಬೇಕು, ಆಕೆಯ ಸ್ವರೂಪವೇನು ಎಲ್ಲ ವಿವರ ಇಲ್ಲಿ ನೀಡಲಾಗಿದೆ.

Tap to resize

Latest Videos

ಮಾ ಕೂಷ್ಮಾಂಡ ಸ್ವರೂಪ(Kushmanda Swarup)
ಮಾ ಕೂಷ್ಮಾಂಡ ಎಂಟು ತೋಳುಗಳನ್ನು ಹೊಂದಿದ್ದಾಳೆ. ಇದರಲ್ಲಿ ಏಳು ಕೈಗಳು ಕಮಂಡಲ, ಬಿಲ್ಲು, ಬಾಣ, ಕಮಲದ ಹೂವು, ಮಕರಂದ ತುಂಬಿದ ಕಲಶ, ಚಕ್ರ ಮತ್ತು ಗದೆಗಳನ್ನು ಹಿಡಿದಿರುತ್ತವೆ. ಎಂಟನೇ ಕೈಯಲ್ಲಿ, ಎಲ್ಲಾ ಸಿದ್ಧಿಗಳನ್ನು ಮತ್ತು ನಿಧಿಗಳನ್ನು ನೀಡುವ ಜಪಮಾಲೆ ಇದೆ. ತಾಯಿಯ ಸಿಹಿ ನಗು ನಮ್ಮನ್ನು ನಗುತಾ ಬಾಳಲು ಉತ್ತೇಜಿಸುತ್ತದೆ ಮತ್ತು ಅತ್ಯಂತ ಕಷ್ಟಕರವಾದ ಹಾದಿಯಲ್ಲಿ ನಡೆದು ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತದೆ. ನಮ್ಮ ಜೀವನ ಶಕ್ತಿಯನ್ನು ಸಮೃದ್ಧಗೊಳಿಸುತ್ತದೆ. ಕೂಷ್ಮಾಂಡಾ ದೇವಿಯ ದರ್ಶನ ಮಾಡುವುದರಿಂದ ರೋಗ(disease), ದುಃಖ ದೂರವಾಗುವುದಲ್ಲದೆ ಕೀರ್ತಿ, ಶಕ್ತಿ, ಸಂಪತ್ತು ವೃದ್ಧಿಸುತ್ತದೆ.

Navratri 2022: ಬೆಂಗಳೂರಿನ ಈ ದೇವಿ ದೇವಾಲಯಗಳಿಗೆ ಭೇಟಿ ತಪ್ಪಿಸ್ಬೇಡಿ!

ಕೂಷ್ಮಾಂಡಾ ದೇವಿಯ ಪೂಜೆಯ ವಿಧಾನ(worshipping method)
ಈ ದಿನ ಬೆಳಿಗ್ಗೆ ಬೇಗ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಇದಾದ ನಂತರ ಮಾತಾ ಕೂಷ್ಮಾಂಡಳಿಗೆ ನಮಸ್ಕರಿಸಿ. ಇದರ ನಂತರ, ಉಪವಾಸದ ಸಂಕಲ್ಪವನ್ನು ತೆಗೆದುಕೊಳ್ಳಿ, ಪೂಜೆ ಮಾಡಿ ನಂತರ ತಾಯಿ ಕೂಷ್ಮಾಂಡಾ ಸೇರಿದಂತೆ ಎಲ್ಲಾ ಸ್ಥಾಪಿತ ದೇವತೆಗಳನ್ನು ಪೂಜಿಸಿ. ನಂತರ ತಾಯಿಯ ಕಥೆಯನ್ನು ಕೇಳಿ, ಆಕೆಯ ಮಂತ್ರಗಳನ್ನು ಪಠಿಸುತ್ತಾ ಧ್ಯಾನ ಮಾಡಿ. ದುರ್ಗಾ ಸಪ್ತಶತಿ ಅಥವಾ ಸಿದ್ಧ ಕುಂಜಿಕಾ ಸ್ತೋತ್ರವನ್ನು ಪಠಿಸಿ. ನಂತರ ಅಂತಿಮವಾಗಿ ಭಜನೆ ಮಾಡಿ. ಇಡೀ ದಿನ ಸಾತ್ವಿಕ ಆಹಾರ ಸೇವಿಸಿ, ಒಳ್ಳೆಯ ಯೋಚನೆಗಳನ್ನು ಮಾಡಿ.

ನೈವೇಧ್ಯ(Bhog)
ಮಾತೃದೇವತೆಗೆ ಮಲ್ಪುವಾವನ್ನು ಅರ್ಪಿಸಬೇಕು. ಇದಾದ ನಂತರ ಈ ಪ್ರಸಾದವನ್ನು ಎಲ್ಲ ಜನರಿಗೆ ಹಂಚಬೇಕು. ತಾಯಿಗೆ ಮಲ್ಪುವಾವನ್ನು ಅರ್ಪಿಸುವುದರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೆ ಎಲ್ಲ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

ನವರಾತ್ರಿಯ ನಾಲ್ಕನೇ ದಿನದ ಶುಭ ಬಣ್ಣ
ನವರಾತ್ರಿಯ ನಾಲ್ಕನೇ ದಿನದಂದು ಹಸಿರು ಬಣ್ಣ(Green color)ವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಾ ಕೂಷ್ಮಾಂಡಾಗೆ ಹಸಿರು ಬಣ್ಣವು ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ.  ಹೀಗಾಗಿ ಆಕೆಗೆ ಇಂದು ಹಸಿರು ಸೀರೆ ಉಡಿಸಿ ಅಲಂಕಾರ ಮಾಡಿ. ಅಂತೆಯೇ ಪೂಜಿಸುವವರು ಕೂಡಾ ಹಸಿರು ಉಡುಗೆಗಳನ್ನು ತೊಡುವುದು ಉತ್ತಮ.

Astrology Tips: ಈ ರಾಶಿಯವರು ವಜ್ರ ಧರಿಸಿದ್ರೆ ಅದೃಷ್ಟವೇ ಬದಲಾಗುತ್ತೆ !

ಕೂಷ್ಮಾಂಡ ದೇವಿ ಮಂತ್ರ
ಯಾ ದೇವಿ ಸರ್ವಭೂತೇಷು ಕೂಷ್ಮಾಂಡಾ ರೂಪೇಣ ಸಂಸ್ಥಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋನ್ನಮಃ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!