ಚಿತ್ರದುರ್ಗ: ಹಿಂದೂ ಗಣಪನ ಬಳಿ ಶಕ್ತಿ ದೇವತೆಗಳ ಆಗಮನ, ದೇವರ ದರ್ಶನ ಪಡೆದ ಭಕ್ತರು

By Girish Goudar  |  First Published Oct 3, 2023, 9:13 PM IST

ಪ್ರತೀ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಅದ್ದೂರಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದೇ ರೀತಿ ಪ್ರತೀ ವರ್ಷವೂ ಒಂದು ದಿನ ಇಡೀ ದುರ್ಗವನ್ನು ಕಾಪಾಡುವ ಶಕ್ತಿ ದೇವತೆಗಳನ್ನು ಕರೆತಂದು ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹವನ ಮಾಡಿಸುವುದು ಇಲ್ಲಿನ ಪ್ರತೀತಿ. 


ಚಿತ್ರದುರ್ಗ(ಅ.03):  ಆ ಒಂದು ಜಿಲ್ಲೆಯಲ್ಲಿ ನಡೆಯುವ ಗಣೇಶನ ಉತ್ಸವ ಇಡೀ ದೇಶದಲ್ಲಿಯೇ ಪ್ರಸಿದ್ಧಿ. ಇನ್ನು ಗಣೇಶನ ದರ್ಶನಕ್ಕೆ ಸಾಲಾಗಿ ಬರುವ ನಗರದ ದೇವತೆಗಳ ದೃಶ್ಯಗಳನ್ನು ನೋಡಲು ಎರಡು ಕಣ್ಣು ಸಾಲದು. ಒಂದೆಡೆ ಸೇರೋ ಶಕ್ತಿ ದೇವತೆಗಳ ದರ್ಶನ ಪಡೆಯಲು ಸಾಲಾಗಿ ಸಾಗರೋಪಾದಿಯಲ್ಲಿ ಬರ್ತಾರೆ ಅಲ್ಲಿನ ಜನರು. ಅಷ್ಟಕ್ಕೂ ಇಷ್ಟೊಂದು ಅದ್ಧೂರಿ ಆಚರಣೆ ನಡೆಯುತ್ತಿರೋದಾದ್ರು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ......,

ನಗರದ ಪ್ರಮುಖ ರಸ್ತೆಗಳಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ವಾದ್ಯ ವೃಂದಗಳ ಸದ್ದಿಗೆ ಅದ್ದೂರಿ ಮೆರವಣಿಗೆ ಮೂಲಕ ಆಗಮಿಸ್ತಿರುವ ಶಕ್ತಿ ದೇವತೆಗಳು. ಇನ್ನೂ ದಾರಿಯುದ್ದಕ್ಕೂ ಸಾಗಿದ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಾ ದೇವರನ್ನು ಒತ್ತು ಬರ್ತಿರೋ ಭಕ್ತರು. ಇಂತಹ ಅಪರೂಪದ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದಲ್ಲಿ. ಪ್ರತೀ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಅದ್ದೂರಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದೇ ರೀತಿ ಪ್ರತೀ ವರ್ಷವೂ ಒಂದು ದಿನ ಇಡೀ ದುರ್ಗವನ್ನು ಕಾಪಾಡುವ ಶಕ್ತಿ ದೇವತೆಗಳನ್ನು ಕರೆತಂದು ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹವನ ಮಾಡಿಸುವುದು ಇಲ್ಲಿನ ಪ್ರತೀತಿ. ನಗರದ ಪ್ರಮುಖ ಶಕ್ತಿ ದೇವತೆಗಳಾದ ಏಕನಾಥೇಶ್ವರಿ, ಬರಗೇರಮ್ಮ, ತಿಪ್ಪಿನಗಟ್ಟಮ್ಮ, ಕಣಿವೆ ಮಾರಮ್ಮ ಹೀಗೆ ಸುಮಾರು ೧೦ಕ್ಕೂ ಅಧಿಕ ಅಧಿದೇವತೆಗಳು ಇಂದು ಹಿಂದೂ ಗಣಪತಿ ದರ್ಶನಕ್ಕೆ ಆಗಮಿಸಿದ್ದು, ಕೋಟೆನಾಡಿನ ಜನರು ಸಹಸ್ರಾರು ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಹಾಗೂ ವಿಶೇಷ ಪೂಜೆಯನ್ನು ಕಣ್ತುಂಬಿಕೊಂಡು ಹೋಗ್ತಿದ್ದಾರೆ ಎನ್ನುತ್ತಾರೆ ಹಿಂದೂ ಮಹಾಗಣಪತಿ ಆಯೋಜಕರು ಪ್ರಭಂಜನ್.

Tap to resize

Latest Videos

undefined

NAVRATRI 2023: ನವರಾತ್ರಿ ದಿನಾಂಕ, ಕಲಶ ಸ್ಥಾಪನಾ ಮುಹೂರ್ತ ಇಲ್ಲಿದೆ..

ಚಿತ್ರದುರ್ಗದ ಹಿಂದೂ ಮಹಾಗಣಪತಿ ಇಡೀ ದೇಶದಲ್ಲಿಯೇ ಪ್ರಸಿದ್ದಿ ಪಡೆದಿದೆ. ಪ್ರತೀ ವರ್ಷವೂ ಹಿಂದೂ ಗಣಪತಿಯ ದರ್ಶನ ಪಡೆಯಲು ನಮ್ಮ ನಗರದ ಪ್ರಮುಖ ಅತಿ ದೇವತೆಗಳು ಆಗಮಿಸ್ತಾವೆ. ಅದನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಸೌಭಾಗ್ಯ. ಯಾಕಂದ್ರೆ ಯಾರೇ ಆದ್ರು ಒಂದು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದು ವಾಡಿಕೆ. ಆದ್ರೆ ಹತ್ತಾರು ನಗರದ ಶಕ್ತಿ ದೇವತೆಗಳು ಒಂದೆಡೆ ಸೇರುತ್ತವೆ ಅಂದ್ರೆ ಜನರಿಗೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ ಈ ದಿನ ಕ್ರಿಯೇಟ್ ಆಗಿದೆ. ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಹೀಗೆ ಅನೇಕ ವಿಶೇಷ ಪೂಜೆಯನ್ನು ಇಂದು ಮಾಡಲಾಗ್ತಿದೆ. ಪ್ರಸಿದ್ದ ಹಿಂದೂ ಮಹಾಗಣಪತಿ ನಮ್ಮ ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಆಗಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ರಾಜ್ಯದ ನಾನಾ ಭಾಗಗಳಿಂದಲೂ ಗಣಪತಿ ನೋಡಲು ಜನ ಆಗಮಿಸ್ತಾರೆ ಅಂತಾರೆ ಸ್ಥಳೀಯರು.

ಒಟ್ಟಾರೆ ಹಿಂದೂ ಮಹಾಗಣಪತಿ ಅಂದ್ರೇನೆ ಕೋಟೆನಾಡಿನ ಜನರಲ್ಲಿ ಹಬ್ಬದ ವಾತಾವರಣ ಮೂಡಿ ಬರುತ್ತೆ. ಅಂತದ್ರಲ್ಲಿ ನಗರದ ಶಕ್ತಿ ದೇವತೆಗಳು ಆಗಮಿಸಿ ಗಣಪನ ದರ್ಶನ ಪಡೆಯುವುದರ ಜೊತೆಗೆ ಭಕ್ತರಿಗೆ ಒಂದೆಡೆ ಕೂತು ಆಶೀರ್ವಾದ ಮಾಡುವುದೇ ನಮ್ಮೆಲ್ಲರಿಗೆ ಪುಣ್ಯದ ಸಂಗತಿ......

click me!