ಲೈಫಲ್ಲಿ ಏನೇ ಆದ್ರೂ ಅದು ರಾಶಿ ಚಕ್ರದ ಪ್ರಭಾವವೇ!

By Suvarna NewsFirst Published Oct 3, 2023, 4:23 PM IST
Highlights

ನಮ್ಮ ಸ್ವಭಾವ, ವರ್ತನೆ, ಜೀವನದ ಮೌಲ್ಯ ರೂಪುಗೊಳ್ಳಲು ಗ್ರಹ, ರಾಶಿಗಳ ಪ್ರಭಾವ ಅಗಾಧವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಮುಖವಾಗಿ ಎಂಟು ಅಂಶಗಳ ಮೇಲೆ ಇವು ಪ್ರಭಾವ ಹೊಂದಿರುತ್ತವೆ. ಈ ಎಂಟು ಅಂಶಗಳೇ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಜೀವನ ರೂಪಿಸುತ್ತವೆ. 

ಗ್ರಹ, ನಕ್ಷತ್ರ, ರಾಶಿಗಳ ಪ್ರಭಾವ ಮನುಷ್ಯರ ಮೇಲೆ ಉಂಟಾಗುತ್ತದೆ ಎನ್ನುವುದನ್ನು ಬಹಳ ಹಿಂದೆಯೇ ಖಚಿತ ಪಡಿಸಿರುವುದು ಭಾರತೀಯ ಜ್ಯೋತಿಷ್ಯ ಶಾಸ್ತ್ರ. ಪ್ರತಿಯೊಬ್ಬರೂ ಜನಿಸಿದ ಸಮಯದ ಆಧಾರದ ಮೇಲೆ ಗ್ರಹ, ನಕ್ಷತ್ರ, ರಾಶಿಗಳನ್ನು ಗುರುತಿಸಲಾಗುತ್ತಿದ್ದು, ಅವು ವ್ಯಕ್ತಿಯ ಜೀವನದ ಅಂತಿಮ ಕ್ಷಣದವರೆಗೂ ಪರಿಣಾಮ ಬೀರುತ್ತಲೇ ಇರುತ್ತವೆ. ಅಸಲಿಗೆ, ವ್ಯಕ್ತಿಯ ಇಷ್ಟಾನಿಷ್ಟಗಳು, ಸ್ವಭಾವ, ವರ್ತನೆಗಳು ರೂಪುಗೊಳ್ಳುವುದೇ ಇವುಗಳ ಆಧಾರದ ಮೇಲೆ. ವ್ಯಕ್ತಿ ಬೆಳೆದ ಪರಿಸರ, ವಾತಾವರಣದ ಕೊಡುಗೆ ಇರುವುದಾದರೂ ಇಂದ್ರಿಯಕ್ಕೆ ನಿಲುಕದ ಇವುಗಳ ಪ್ರಭಾವವೇ ಅಧಿಕ. ಜನ್ಮಕುಂಡಲಿ ನೋಡಿದಾಕ್ಷಣ ಅದುವರೆಗಿನ ನಮ್ಮ ಅನುಭವಗಳು, ಸ್ವಭಾವ, ಸಂಬಂಧ, ಹಾಲಿ ಎದುರಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ಜ್ಯೋತಿಷ್ಯ ತಜ್ಞರು ಹೇಗೆ ಮಾಹಿತಿ ನೀಡುತ್ತಾರೆ ಎನ್ನುವ ಕುರಿತು ಅಚ್ಚರಿಯಾಗುವುದು ಸಹಜ. ಅಷ್ಟು ಕರಾರುವಕ್ಕಾದ ಮಾಹಿತಿ ನೀಡುತ್ತಾರೆ. ಹಲವು ಅಂಶಗಳ ಮೇಲೆ ಗ್ರಹ, ತಾರೆಗಳ ಪ್ರಭಾವವನ್ನು ಕಾಣಬಹುದು. ಅವುಗಳ ಕುರಿತು ತಿಳಿದುಕೊಂಡರೆ ಜೀವನವನ್ನು ಅರ್ಥಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. 

•    ಸಾಮರ್ಥ್ಯ, ದೌರ್ಬಲ್ಯ (Strength, Weakness)
ರಾಶಿಚಕ್ರದಲ್ಲಿರುವ ಪ್ರತಿಯೊಂದು ರಾಶಿಗಳೂ (Zodiac Sign) ತಮ್ಮದೇ ಆದ ಸಾಮರ್ಥ್ಯ, ದೌರ್ಬಲ್ಯ ಹೊಂದಿವೆ. ಕೆಲವರಿಗೆ ಜನ್ಮಜಾತವಾಗಿ ವಿಶಿಷ್ಟ ಗುಣಗಳು ಬಂದಿರುವುದು ಇದೇ ಕಾರಣಕ್ಕೆ. ನಿಮ್ಮ ರಾಶಿಗಳ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತುಕೊಳ್ಳುವ ಮೂಲಕ ಜೀವನದ ಪಥವನ್ನು ನಿರ್ಧರಿಸುವುದು ನೀವೇ ಆಗಿರುತ್ತೀರಿ. ಜ್ಯೋತಿಷ್ಯ ಶಾಸ್ತ್ರ ಸ್ವಯಂ ಅರಿವನ್ನು (Self Discovery) ಹೆಚ್ಚಿಸಿಕೊಳ್ಳುವ ಮಾರ್ಗದರ್ಶಿ (Guide). \

Latest Videos

ಪ್ರೀತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುವವರು ಈ ರಾಶಿಯವರು..!

•    ಸಂವಹನ (Communication) ವಿಧಾನ
ಕೆಲ ಜನರು ತಮ್ಮ ಭಾವನೆಗಳನ್ನು (Feelings) ವ್ಯಕ್ತಪಡಿಸುವಲ್ಲಿ ಸಾಕಷ್ಟು ಕಂಫರ್ಟ್ ಆಗಿರುತ್ತಾರೆ. ಕೆಲವರಿಗೆ ಹಿಂಜರಿಕೆ ಎನ್ನುವುದೇ ಇರುವುದಿಲ್ಲ. ಇದಕ್ಕೆ ಅವರ ರಾಶಿಗಳ ಪ್ರಭಾವವೇ ಕಾರಣವಾಗಿರುತ್ತದೆ. ಉದಾಹರಣೆಗೆ, ಸಿಂಹ (Leo) ರಾಶಿಯ ಜನ ತಮ್ಮ ವಿಚಾರಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವಷ್ಟು ಸುಲಭವಾಗಿ ವೃಷಭ ರಾಶಿಯ ಜನ ಹಂಚಿಕೊಳ್ಳಲಾರರು. ವೃಷಭ ರಾಶಿಯವರು ಶಬ್ದಕ್ಕಿಂತ ಹೆಚ್ಚಾಗಿ ಕೆಲಸಕ್ಕೆ ಆದ್ಯತೆ ನೀಡುತ್ತಾರೆ. 

•    ಪ್ರೀತಿ ಮತ್ತು ಸಂಬಂಧಗಳು (Love, Relationships)
ನಾವು ಪ್ರೀತಿಪಾತ್ರರೊಂದಿಗೆ ಹೇಗೆ ವರ್ತಿಸುತ್ತೇವೆ, ರೋಮ್ಯಾಂಟಿಕ್ ನಿಲುವು, ಸಂಬಂಧದ ಆದ್ಯತೆಗಳ ಮೇಲೆ ರಾಶಿಚಕ್ರದ ಪ್ರಭಾವ (Effect) ಅತ್ಯಧಿಕ. ಕರ್ಕಾಟಕ (Cancer) ರಾಶಿಯ ಜನ ಭಾವನಾತ್ಮಕ ಭದ್ರತೆ, ಆಳವಾದ ಸಂಬಂಧಕ್ಕೆ ಆದ್ಯತೆ ನೀಡಿದರೆ, ಧನು (Sagittarius) ರಾಶಿಯ ಜನ ಸದಾಕಾಲ ಎಕ್ಸೈಟ್ ಮೆಂಟ್ ನಿರೀಕ್ಷೆ ಮಾಡುತ್ತಾರೆ. ಸಂಬಂಧ ರೂಪಿಸುವಲ್ಲಿ ರಾಶಿಗಳು ಬೀರುವ ಪ್ರಭಾವ ಅರಿತುಕೊಂಡು ವ್ಯಕ್ತಿತ್ವನ್ನು (Personality) ಹದ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ.

•    ವೃತ್ತಿ (Profession)
ವಿಸ್ತೃತ ಮಾಹಿತಿ ಪರಿಗಣಿಸುವ ಕನ್ಯಾ (Virgo) ರಾಶಿಯ ಜನ ಉತ್ತಮ ಎಡಿಟರ್ ಅಥವಾ ಸಂಶೋಧನಾಕಾರರಾಗಬಹುದು. ಸಿಂಹ ರಾಶಿಯ ಜನ ಉನ್ನತ ಸ್ಥಾನದ ಮ್ಯಾನೇಜರ್ ಆಗಬಲ್ಲರು. ಅಧ್ಯಯನಗಳ ಪ್ರಕಾರ, ಕಾರ್ಪೋರೇಟ್ ಸಂಸ್ಥೆಗಳ ಬಹಳಷ್ಟು ಮುಖ್ಯಸ್ಥರು ಸಿಂಹ ರಾಶಿಗೆ ಸೇರಿದ್ದಾರೆ. ವೃಶ್ಚಿಕ (Scorpio) ರಾಶಿಯ ಜನ ವೈಜ್ಞಾನಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು.

•    ಕಲಿಕೆಯ ವಿಧಾನ (Learning Style)
ಪ್ರತಿಯೊಬ್ಬರೂ ಕಲಿಯುವ ವಿಧಾನ ಬೇರೆ. ಕೆಲವು ವಿಷಯಗಳು ನಮಗೆ ಆಗುವುದಿಲ್ಲ ಎಂದರೆ, ನಮ್ಮ ರಾಶಿಗೆ ಅವುಗಳೊಂದಿಗೆ ಸಂಬಂಧವಿಲ್ಲ ಎಂದರ್ಥ. ಮಿಥುನ (Gemini) ರಾಶಿಯ ಜನ ಕುತೂಹಲಿಗಳು, ಅವರಿಗೆ ಸೋಷಿಯಲ್ ಸೈನ್ಸ್, ಭಾಷೆ, ಸಂವಹನ ಹೆಚ್ಚು ಅನುಕೂಲವಾದರೆ, ಮೇಷ (Aries) ರಾಶಿಯ ವರಿಗೆ ಸ್ಪರ್ಧಾತ್ಮಕ ವಾತಾವರಣ ಬೇಕು. 

2024ರ ತನಕ ಈ ರಾಶಿಯವರ ಮೇಲೆ ಗುರು ಕೃಪೆ,ಹಣದ ಮಳೆ

•    ಕನಸು, ಗುರಿ
ವೃತ್ತಿಯಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಮಕರ (Capricorn) ರಾಶಿಯ ಜನರಿಗೂ, ಸಮಾಜದಲ್ಲಿ ಬದಲಾವಣೆ ಬಯಸುವ ಕುಂಭ (Aquarius) ರಾಶಿಯ ಜನರಿಗೂ ಭಾರೀ ವ್ಯತ್ಯಾಸವಿದೆ. ಇಲ್ಲಿ ಪ್ರಭಾವ ಬೀರುವುದೇ ರಾಶಿಗಳು.

•    ಹಣಕಾಸು ಅಭ್ಯಾಸ (Habit)
ದುಂದುವೆಚ್ಚ, ಹಣ (Money) ವೆಚ್ಚ ಮಾಡುವ ವಿಧಾನ, ಉಳಿತಾಯದ ಧೋರಣೆ, ತಾಳ್ಮೆ, ಹಣಕಾಸು ಭದ್ರತೆಗೆ ಸಂಬಂಧಿಸಿದ ಮನಸ್ಥಿತಿಗಳು ರಾಶಿಗಳ ಪ್ರಭಾವದಿಂದ ವರ್ತಿಸುತ್ತವೆ. 

•    ಸಾಮಾಜಿಕ ಜೀವನ (Social Life)
ಮಿಥುನ ರಾಶಿಯ ಜನ ಸಿಕ್ಕಾಪಟ್ಟೆ ಬಹಿರ್ಮುಖಿಗಳು, ಇವರಿಗೆ ಜನರ ಒಡನಾಟ ಬೇಕೇ ಬೇಕು. ಆದರೆ, ವೃಶ್ಚಿಕ ರಾಶಿಯ ಜನ ಅಂತರ್ಮುಖಿಗಳು. ಇವರಿಗೆ ಚಿಕ್ಕ-ಚೊಕ್ಕ ಮಾತುಕತೆ ಸಾಕು. ರಾಶಿಗಳ ವ್ಯತ್ಯಾಸದಿಂದಲೇ ಜನರೊಂದಿಗೆ ಸಂಕೋಚವಿಲ್ಲದೆ ಒಡನಾಡುವ, ಜನಜಂಗುಳಿಯಲ್ಲಿ ಮುಜುಗರ ಅನುಭವಿಸುವ ಭಿನ್ನ ವ್ಯಕ್ತಿತ್ವಗಳು ಕಂಡುಬರುತ್ತವೆ. 

click me!